ಮೇಷ ರಾಶಿ:- ಮೇಷ ರಾಶಿಯವರು 19, 28, 37 ಮತ್ತು 55 ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಶ್ರೀಮಂತರಾಗುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರಾಶಿಯವರು ಸ್ವಂತ ಬುದ್ಧಿಯಿಂದ ಸ್ವಂತ ದುಡಿಮೆಯಿಂದ ಹಣ ಸಂಪಾದಿಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೂಡ ಹಣಕ್ಕಾಗಿ ಶಾರ್ಟ್ ಕಟ್ ಹಿಡಿಯುವುದಿಲ್ಲ. ಮೇಷ ರಾಶಿಯವರ ಹಣಕಾಸಿನ ಪರಿಸ್ಥಿತಿ ಜೀವನಪೂರ್ತಿ ಉತ್ತಮವಾಗಿರಬೇಕು ಎಂದರೆ ಇವರು ಪ್ರತಿ ಶುಕ್ರವಾರ ಮಹಾಲಕ್ಷ್ಮಿಗೆ ಗುಲಾಬಿ ಹೂವನ್ನು ಅರ್ಪಿಸಬೇಕು.
ವೃಷಭ ರಾಶಿ:- ಈ ರಾಶಿಯವರು ಶ್ರಮಜೀವಿಗಳು ತಮ್ಮ ಕಠಿಣ ಪರಿಶ್ರಮದಿಂದ ಕಷ್ಟದ ಹಾದಿಯಿಂದ ಹಣವನ್ನು ಹೊಂದುತ್ತಾರೆ. ಇವರು ತಮ್ಮ 29, 38, 56ನೇ ವಯಸ್ಸಿನಲ್ಲಿ ಹಣವನ್ನು ಪಡೆಯುವ ಸಾಧ್ಯತೆಯೂ ಬಲವಾಗಿರುತ್ತದೆ. ಈ ರಾಶಿಯವರಿಗೆ ತಮ್ಮ ಸಂಗಾತಿಯ ಕಡೆದಿಂದ ಹಣಕಾಸಿನ ಬಲ ಸಿಗುತ್ತದೆ. ಅಂದರೆ ಹೆಂಡತಿಗೆ ತವರು ಮನೆ ಕಡೆಯಿಂದ ಆಸ್ತಿ ಅಥವಾ ಉಡುಗೊರೆ ದೊರೆತು ಅದರ ಮೂಲಕ ಅತಿ ದೊಡ್ಡ ಲಾಭ ಪಡೆಯುತ್ತಾರೆ. ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಬರಬಾರದು ಎಂದರೆ ನುರಿತ ಜ್ಯೋತಿಷ್ಯರ ಸಲಹೆ ಪಡೆದು ಯಾವಾಗಲೂ ಕುತ್ತಿಗೆಯಲ್ಲಿ ಬಿಳಿ ಧರಿಸಬೇಕು
ಮಿಥುನ ರಾಶಿ:- ಮಿಥುನ ರಾಶಿಯವರು 27, 36, 45, 57ನೇ ವರ್ಷಗಳಲ್ಲಿ ಆಕಸ್ಮಿಕ ಧನಲಾಭ ಪಡೆಯುತ್ತಾರೆ. ಮಿಥುನ ರಾಶಿಯವರು ತಂದೆ ಕಡೆಯಿಂದ ಆಸ್ತಿ ಹಾಗೂ ಹಣ ಪಡೆಯುತ್ತಾರೆ ಹಾಗೂ ಸ್ವಂತ ದುಡಿಮೆಯಿಂದ ಕೂಡ ಅಪಾರ ಹಣವನ್ನು ಸಂಪಾದನೆ ಮಾಡುತ್ತಾರೆ. ಆಂಜನೇಯನಿಗೆ ಮಂಗಳವಾರ ಹಾಗೂ ಶನಿವಾರದಂದು ಕೇಸರಿಯನ್ನು ಅರ್ಪಿಸಿದರೆ ಈ ರಾಶಿಯವರಿಗೆ ಒಳ್ಳೆಯದು.
ಕರ್ಕಾಟಕ ರಾಶಿ:- ಕರ್ಕಾಟಕ ರಾಶಿಯವರಿಗೆ 23, 27, 32, 48, 58 ನೇ ವಯಸ್ಸಿನಲ್ಲಿ ಅನಿರೀಕ್ಷಿತ ಆದಾಯದಿಂದ ಧನಲಾಭವಾಗುವ ಸಾಧ್ಯತೆಗಳಿವೆ. ಅತ್ತೆ ಮನೆ ಕಡೆಯಿಂದ ಇವರಿಗೆ ಹಣಕಾಸಿನ ಬೆಂಬಲ ಸಿಗುತ್ತದೆ ಈ ರಾಶಿಯವರು ನಿಯಮಿತವಾಗಿ ಲಕ್ಷ್ಮಿ ದೇವಿಗೆ ಸುಗಂಧವನ್ನು ಅರ್ಪಿಸಬೇಕು.
ಸಿಂಹ ರಾಶಿ:- ಸಿಂಹ ರಾಶಿಯವರಿಗೆ 28, 32, 50, 60 ನೇ ವಯಸ್ಸಿನಲ್ಲಿ ಧನ ಯೋಗ ಕೂಡಿಬರುತ್ತದೆ. ಸ್ವಂತ ಪರಿಶ್ರಮದಿಂದ ಇವರು ಹಣವನ್ನು ಪಡೆಯುತ್ತಾರೆ. ಈ ರಾಶಿಯವರು ನಿಯಮಿತವಾಗಿ ಲಕ್ಷ್ಮಿ ದೇವಿಗೆ ಹಸಿರು ಏಲಕ್ಕಿಯನ್ನು ಅರ್ಪಿಸಿ ಅದನ್ನೇ ಪ್ರಸಾದವಾಗಿ ತೆಗೆದುಕೊಳ್ಳಬೇಕು.
ನಿಮ್ಮ ಮನೆಗಳಲ್ಲೂ ಕೂಡ ಕಡಜ ಗೂಡು ಕಟ್ಟುತ್ತಿದೆಯಾ ಹಾಗಾದರೆ ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು.!
ಕನ್ಯಾ ರಾಶಿ:- ಕನ್ಯಾ ರಾಶಿಯವರು ಅವರ ವ್ಯಾಪಾರ ವಿದ್ಯಾಭ್ಯಾಸ ಹಾಗೂ ಸಂಗಾತಿಯ ಮೂಲಕ ಹಣವನ್ನು ಪಡೆಯುತ್ತಾರೆ. 15,24,35 42ನೇ ವಯಸ್ಸಿನಲ್ಲಿ ಅಪಾರ ಸಂಪತ್ತನ್ನು ಪಡೆಯುವ ಯೋಗ ಹೊಂದಿದ್ದಾರೆ. ಬೆಳ್ಳಿಯನ್ನು ಧರಿಸಿ ಶಿವನನ್ನು ಪೂಜಿಸುವುದರಿಂದ ಇವರಿಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ.
ತುಲಾ ರಾಶಿ:- ಈ ರಾಶಿಯವರಿಗೆ 16, 34, 42, 51ನೇ ವಯಸ್ಸಿನಲ್ಲಿ ಸ್ತ್ರೀ ಕಡೆಯಿಂದ ಹಣ ಬರುವ ಸಾಧ್ಯತೆ ಇರುತ್ತದೆ. ಪ್ರತಿದಿನವೂ ಅವರು ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಹಣವು ನಿರಂತವಾಗಿ ಇವರತ್ತ ಹರಿದು ಬರುತ್ತದೆ.
ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯವರು ತಂದೆ ಅಥವಾ ತಂದೆಯ ಸಂಬಂಧಿಕರ ಕಡೆಯಿಂದ ಹಣವನ್ನು ಪಡೆಯುತ್ತಾರೆ. 35,44,53,62 ನೇ ವರ್ಷಗಳಲ್ಲಿ ಹಣವನ್ನು ಪಡೆಯುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ. ಈ ರಾಶಿಯವರು ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರತಿದಿನವೂ ಗಣೇಶನಿಗೆ ಗರಿಕೆಯನ್ನು ಅರ್ಪಿಸಿ ಪೂಜಿಸಬೇಕು.
ಧನಸ್ಸು ರಾಶಿ:- ಧನಸ್ಸು ರಾಶಿಯವರಿಗೆ 36,45,54,63 ನೇ ವರ್ಷಗಳಲ್ಲಿ ನಂತರ ಶ್ರೀಮಂತರಾಗುತ್ತಾರೆ. ತಾಯಿ ಹಾಗೂ ತಾಯಿ ಸಂಬಂಧಿಕರ ಕಡೆಯಿಂದ ಹಣಕಾಸಿನ ಸಹಾಯ ಸಿಗುತ್ತದೆ ನಿಯಮಿತವಾಗಿ ಇವರು ಲಕ್ಷ್ಮಿ ದೇವಿಗೆ ಕಮಲದ ಹೂಗಳನ್ನು ಅರ್ಪಿಸುವುದರಿಂದ ಹಣಕಾಸಿನ ತೊಡಕುಗಳು ಬರುವುದಿಲ್ಲ.
ಮಕರ ರಾಶಿಯವರು:- ಮಕರ ರಾಶಿಯವರು ನಮ್ಮ ಸ್ವಂತ ವ್ಯಾಪಾರ ನೌಕರಿ ಇವುಗಳ ಕಾರಣದಿಂದ ಹಣ ಮಾಡಿ ಶ್ರೀಮಂತರಾಗುತ್ತಾರೆ. 28,37,46,55 ನೇ ವರ್ಷಗಳಲ್ಲಿ ಧನವಂತರಾಗುವ ಸಾಧ್ಯತೆಗಳಿವೆ. ಈ ರಾಶಿಯವರು ಇದೇ ರೀತಿ ಮುಂದುವರಿಯಲು ಮಂಗಳವಾರ ಒಂದು ಹೊತ್ತು ಉಪವಾಸ ಇದ್ದು ಆಂಜನೇಯನನ್ನು ದರ್ಶನ ಮಾಡಬೇಕು.
ಕುಂಭ ರಾಶಿ:- ಕುಂಭ ರಾಶಿಯವರು ಅದೃಷ್ಟ ಹಾಗೂ ದೇವರ ಆಶೀರ್ವಾದದಿಂದ ಶ್ರೀಮಂತರಾಗುತ್ತಾರೆ. 29,38,47,57ನೇ ವಯಸ್ಸಿನಲ್ಲಿ ಹಣವನ್ನು ಗಳಿಸುವ ಅವಕಾಶವನ್ನು ಹೊಂದಿರುತ್ತಾರೆ. ಇವರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲು ನಿಯಮಿತವಾಗಿ ದೇವಸ್ಥಾನಗಳಿಗೆ ಬಾಳೆಹಣ್ಣು ಅರ್ಪಿಸಬೇಕು.
ಮೀನಾ ರಾಶಿ:- ಮೀನಾ ರಾಶಿಯವರು 39,48,57 ನೇ ವರ್ಷಗಳಲ್ಲಿ ಬಹಳ ಅದೃಷ್ಟವನ್ನು ಹೊಂದುತ್ತಾರೆ. ಮಕ್ಕಳನ್ನು ಪಡೆದ ನಂತರ ಇವರ ಅದೃಷ್ಟ ಬದಲಾಗುತ್ತದೆ. ಅಶ್ವತ್ಥರಳೀಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪ ಬೆಳಗಿದರೆ ಇವರ ಅದೃಷ್ಟ ಇಮ್ಮಡಿಕೊಳ್ಳುತ್ತದೆ.