ಮನುಷ್ಯನ ವಾಸಸ್ಥಳ ಮನೆ, ಮಾನವನಾದ ಪ್ರತಿಯೊಬ್ಬರಿಗೂ ಮನೆ ಅವಶ್ಯಕತೆ ಇದ್ದೇ ಇದೆ. ಬಾಡಿಗೆ ಮನೆಯೋ, ಸ್ವಂತ ಮನೆಯೋ, ಹುಲ್ಲಿನ ಮನೆಯೋ, ಅರಮನೆ ಅಂತಹ ಮನೆಯೋ ಮನೆ ಬೇಕೇ ಬೇಕು. ಮನೆ ಎನ್ನುವುದು ಮೂಲಭೂತ ಅವಶ್ಯಕತೆ ಮಾತ್ರವಲ್ಲದೆ ನಮ್ಮ ಪ್ರತಿಷ್ಠೆಯ ವಿಚಾರವೂ ಹೌದು.
ನಮ್ಮ ಜೀವನದಲ್ಲಿ ಒಮ್ಮೆ ಒಂದು ಸುಂದರವಾದ ಮನೆ ಕಟ್ಟಿಸಿ ನಾವು ಹಾಗೂ ನಮ್ಮ ಕುಟುಂಬ ನೂರಾರು ವರ್ಷ ಆ ಮನೆಯೊಳಗೆ ಯಾವುದೇ ಕೊರತೆ ಇಲ್ಲದಂತೆ ನಮ್ಮಿಚ್ಛೆಯಂತೆ ಬದುಕಬೇಕು ಎನ್ನುವ ಮಹದಾಸೆ ಇದ್ದೇ ಇರುತ್ತದೆ.
ಆದರೆ ಮನೆ ಕಟ್ಟುವುದು ಅಷ್ಟು ಸುಲಭದ ವಿಚಾರವೇ ಅಲ್ಲ. ನೂರೆಂಟು ವಿಘ್ನಗಳು, ನೂರಾರು ಸಮಸ್ಯೆಗಳು ಇದನ್ನೆಲ್ಲಾ ಮೀರಿ ಹಣಕಾಸು ಹೊಂದಿಸಿಕೊಂಡು ಮನೆ ಮಾಡುವ ಯೋಗ ಎಲ್ಲರಿಗೂ ಇರುವುದಿಲ್ಲ. ಹಾಗಾಗಿ ಜಾತಕವನ್ನು ನೋಡಿ ಇದರ ಬಗ್ಗೆ ತಿಳಿದುಕೊಂಡು ಪ್ರಯತ್ನ ಮಾಡುವವರು ಇದ್ದಾರೆ. ಜಾತಕ ಪರಮರ್ಷೆ ಮಾಡಿ ನೋಡಿದಾಗ ಇದರ ಬಗ್ಗೆ ಹೇಗೆ ತಿಳಿಯುತ್ತದೆ. ಹೇಗೆಂದರೆ ಲಗ್ನದಿಂದ 4ನೇ ಮನೆಯನ್ನು ಗೃಹಸ್ಥಾನ ಎಂದು ಕರೆಯುತ್ತಾರೆ.
ಈ ಸುದ್ದಿ ಓದಿ:- ಬೆಳ್ಳಂ ಬೆಳಗ್ಗೆ ಮಹಿಳೆಯರಿಗೆ ಗುಡ್ ನ್ಯೂಸ್, ಎಲ್ಲಾ ಮಹಿಳೆಯರಿಗೂ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ಕೊಡುವುದಾಗಿ ಸರ್ಕಾರದ ಭರವಸೆ…
4ನೇ ಮನೆಯಲ್ಲಿ ಯಾವ ಗ್ರಹವಿದೆ ಎನ್ನುವುದರ ಆಧಾರದ ಮೇಲೆ ಅವರಿಗೆ ಮನೆ ಕಟ್ಟಲು ಸಾಧ್ಯವಿದೆಯೇ, ನಿಧಾನವಾಗುತ್ತದೆಯೇ ಅಥವಾ ಕಟ್ಟಿದ ಮನೆಯನ್ನು ಕೊಂಡುಕೊಳ್ಳುತ್ತಾರೆಯೇ ಅಥವಾ ಮನೆ ಮಾರಿಕೊಳ್ಳುತ್ತಾರೆಯೇ ಅಥವಾ ಹತ್ತಾರು ಮನೆ ಬಾಡಿಗೆ ಕೊಡುವ ಯೋಗ ಇದೆಯೇ ಇತ್ಯಾದಿ ಎಲ್ಲಾ ವಿಷಯಗಳು ತಿಳಿಯುತ್ತವೆ. ಯಾವ ಗ್ರಹ ಇದ್ದರೆ ಏನು ಫಲ ದೋಷಗಳಿದ್ದರೆ ಪರಿಹಾರ ಏನು ಎನ್ನುವುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
* ಸೂರ್ಯನಿದ್ದರೆ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುವ ಯೋಗ ಇದೆ ಎಂದು ಅರ್ಥ
* ಚಂದ್ರನಿದ್ದರೆ ಹಣ ಎಷ್ಟು ಬಂದರೂ ಸ್ವಂತ ಮನೆ ಕಟ್ಟಲು ಆಗುವುದಿಲ್ಲ ಕೊನೆತನಕ ಬಾಡಿಗೆ ಮನೆಯಲ್ಲಿಯೇ ಇರಬೇಕಾಗುತ್ತದೆ ಎಂದರ್ಥ
* ಕುಜ ಅಥವಾ ಶನಿ ಗ್ರಹಗಳಿದ್ದರೆ ಸ್ವಂತ ಮನೆಯಲ್ಲಿ ಇದ್ದರೂ ನೆಮ್ಮದಿ ಇರುವುದಿಲ್ಲ. ಬಹಳ ಹಳೆಯದಾದ ಅಥವಾ ಪಾಳು ಬಿದ್ದ ಮನೆಯಲ್ಲಿ ಇರಬೇಕಾಗುತ್ತದೆ. ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ, ಕೋರ್ಟು ಕಚೇರಿ ವಿಚಾರವಾಗಿ ಅಲೆಯ ಬೇಕಾಗುತ್ತದೆ ಎಂದರ್ಥ
* ಬುಧ ಇದ್ದರೆ ನಿಮ್ಮ ಇಚ್ಛೆಯಂತೆ ಒಂದು ಒಳ್ಳೆಯ ಮನೆ ಕಟ್ಟಿಸಿ ವಾಸಿಸುವ ಯೋಗ ಇದೆ.
ಈ ಸುದ್ದಿ ಓದಿ:- ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.
* ಗುರು ಇದ್ದರೆ ಒಂದು ಮನೆಗಿಂತ ಹೆಚ್ಚು ಮನೆಗಳನ್ನು ಕಟ್ಟಿಸಿ ಬಾಡಿಗೆಗೆ ನೀಡುವ ಯೋಗ ಹೊಂದಿದ್ದಾರೆ ಎನ್ನುವುದನ್ನು ತಿಳಿಸುತ್ತದೆ
* ಶುಕ್ರನಿದ್ದರೆ ಐಷಾರಾಮಿಯಾದ ಬಂಗಲೆಯನ್ನು ಕಟ್ಟಿಸಿಕೊಂಡು ವಾಸಿಸುತ್ತಾರೆ ಎನ್ನುವ ಅರ್ಥ.
* ಒಂದು ವೇಳೆ ರಾಹು ಕೇತುಗಳು ಲಗ್ನದಿಂದ ನಾಲ್ಕನೇ ಮನೆಯಲ್ಲಿ ಇದ್ದರೆ ಅವರ ಜೀವನದಲ್ಲಿ ಮನೆ ಕಟ್ಟುವ ಕನಸು ಕನಸಾಗೇ ಉಳಿದುಬಿಡುತ್ತದೆ, ಒಂದು ವೇಳೆ ಕಷ್ಟಪಟ್ಟು ಕಟ್ಟಿದರು ಅದನ್ನು ಮಾರಿಕೊಳ್ಳುತ್ತಾರೆ ಎನ್ನುವ ಫಲ.
ಗುರು ಪುಷ್ಯಮಿ ಅಂದರೆ ಗುರುವಾರ ಪುಷ್ಯ ನಕ್ಷತ್ರ ಬಂದ ದಿನ ಅಥವಾ ರವಿ ಪುಷ್ಯಮಿ ಅಂದರೆ ಭಾನುವಾರ ಪುಷ್ಯ ನಕ್ಷತ್ರ ಬಂದ ದಿನ ಅಥವಾ ಗುರುವಾರ ಪುನರ್ವಸು ನಕ್ಷತ್ರ ಬಂದ ದಿನ ಅಥವಾ ಶುಕ್ರವಾರ ಪೂರ್ವಾಷಾಡ ನಕ್ಷತ್ರ ಬಂದ ದಿನ ಅಥವಾ ಭಾನುವಾರ ರೋಹಿಣಿ ನಕ್ಷತ್ರ ಬಂದ ದಿನ ಯಾರಿಗೆ ಈ ರೀತಿ ಮನೆ ಕಟ್ಟುವ ಮಹದಾಸೆ ಇದೆಯೋ ಜಾತಕದಲ್ಲಿ ಯೋಗ ಇದ್ದರೂ ದೋಷಗಳಿದ್ದು ವಿಳಂಬಾಗುತ್ತಿದೆ.
ಅವರು ಶೀಘ್ರವಾಗಿ ಕನಸು ನೆರವೇರಲು ಈ ಮೇಲೆ ತಿಳಿಸಿದ ದಿನಗಳಂದು 11 ಔದುಂಬರ (ಹತ್ತಿ ಗಿಡ) ಅಥವಾ 11 ಅರಳಿ ಸಸಿಯನ್ನು ನೆಟ್ಟು ಪೋಷಿಸಬೇಕು. ಈ ರೀತಿ ಮಾಡಿದರೆ ಅವು ಹೇಗೆ ಬೆಳೆಯುತ್ತವೆಯೋ ಹಾಗೆಯೇ ನಿಮ್ಮ ಹಾದಿ ಸುಗಮವಾಗಿ ಆದಷ್ಟು ಬೇಗ ಮನೆ ಕಟ್ಟಿಸಿಕೊಂಡು ಆ ಮನೆಯಲ್ಲಿ ಸಕುಟುಂಬ ಸಮೇತ ಸಂತೋಷವಾಗಿ ಬದುಕುತ್ತೀರಿ.