ನಾಯಿಗಳು ಎಷ್ಟು ನಿಯತ್ತಿನ ಪ್ರಾಣಿಗಳು ಅಂತ ಎಲ್ಲರಿಗೂ ಗೊತ್ತೇ ಇದೆ ಮುಖ್ಯವಾಗಿ ನಾಯಿಗಳು ತಮ್ಮ ಮಾಲೀಕರ ಪ್ರಾಣವನ್ನು ಕಾಪಾಡಲು ತಮ್ಮ ಪ್ರಾಣವನ್ನು ಬೇಕಾದರೂ ಕೊಡಲು ತಯಾರಾಗಿ ಇರುತ್ತವೆ ಇಲ್ಲಿ ಒಬ್ಬ ಗರ್ಭಿಣಿ ಮಹಿಳೆಯು ಒಂದು ನಾಯಿಯನ್ನು ಸಾಕಿರುತ್ತಾಳೆ ಆ ಮಹಿಳೆ ಮತ್ತು ನಾಯಿಯ ನಡುವೆ ನಡೆದ ಒಂದು ಘಟನೆಯನ ಬಗ್ಗೆ ತಿಳಿಯೋಣ.
ನೈತಾನ್ಯಾ ದೇಶದಲ್ಲಿ ವಾಸವಾಗಿದ್ದ ಟೀನಾ ಎಂಬ ಮಹಿಳೆಯು ಕೀಮಾ ಎಂಬ ಪುಟಾಣಿ ನಾಯಿ ಮರಿಯನ್ನು ತುಂಬಾ ಪ್ರೀತಿಯಿಂದ ಸಾಕುತ್ತಿರುತ್ತಾಳೆ. ಕೆಲವು ವರ್ಷಗಳ ನಂತರ ಟೀನಾ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಮದುವೆಯಾದ ಆರು ತಿಂಗಳ ನಂತರ ಟೀನ ಗರ್ಭಿಣಿಯಾಗಿರುತ್ತಾಳೆ. ಎಲ್ಲಾ ಗರ್ಭಿಣಿ ಮಹಿಳೆಯ ರೀತಿಯಲ್ಲಿ ಟೀನಾಳ ಹೊಟ್ಟೆಯು ದಿನೇ ದಿನೇ ದಪ್ಪ ಆಗುತ್ತಿರುತ್ತದೆ ಈ ಸಮಯದಲ್ಲಿ ಟೀನಾಳ ಹೊಟ್ಟೆಯನ್ನು ನೋಡಿ ಅವಳ ಸಾಕು ನಾಯಿ ಕಿಮ್ಮಿ ಪ್ರತಿದಿನ ಬೊಗಳುತ್ತಾ, ಕೆಲವು ವೇಳೆ ಟೀನ ಮಲಗಿರುವಾಗ ಅವಳ ಹೊಟ್ಟೆಯನ್ನು ನೆಕ್ಕುತ್ತ ವಿಚಿತ್ರವಾಗಿ ವರ್ತಿಸುತಿತ್ತು.
ದಿನೆ ದಿನೇ ಅದರ ವರ್ತನೆ ಇನ್ನು ವಿಚಿತ್ರವಾಗಿ ಇತ್ತು. ಇದನ್ನು ಗಮನಿಸಿದ ಆ ದಂಪತಿಗಳು ಕೀಮಾ ನಾಯಿಯು ನಮಗೆ ಏನನ್ನೋ ಹೇಳಲು ಪ್ರಯತ್ನಿಸುತ್ತಿದೆ ಎಂದು ಅರ್ಥ ಮಾಡಿಕೊಂಡು ಟೀನಾಳ ಗಂಡ ಯಾವುದಕ್ಕೂ ಒಂದು ಬಾರಿ ಆಸ್ಪತ್ರೆಗೆ ಹೋಗಿ ಹೊಟ್ಟೆ ಪರೀಕ್ಷೆ ಮಾಡಿಸಿಕೋ ಹೊಟ್ಟೆಯೊಳಗೆ ಇರುವ ಮಗುವಿನ ಆರೋಗ್ಯ ಹೇಗಿದೆ ಎಂದು ಪರೀಕ್ಷಿಸಿಕೋ ಎಂದು ಅವಳಿಗೆ ಹೇಳುತ್ತಾನೆ.
ಮಾರನೇ ದಿನವೇ ಡಾಕ್ಟರ್ ನ ಭೇಟಿ ಮಾಡಿ ನಡೆದ ಘಟನೆಯ ಬಗ್ಗೆ ಡಾಕ್ಟರ್ ಗೆ ತಿಳಿಸುತ್ತಾಳೆ. ಆದರೆ ಎಲ್ಲಾ ರಿಪೋರ್ಟ್ ಗಳನ್ನು ಪರಿಶೀಲಿಸಿ ನಿಮ್ಮ ಆರೋಗ್ಯ ಸ್ಥಿತಿಯು ಎಲ್ಲಾ ನಾರ್ಮಲ್ ಆಗಿ ಇದೆ ನಿಮ್ಮ ನಾಯಿ ವರ್ತಿಸುತ್ತಿರುವುದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿ ಅವಳನ್ನು ಮನೆಗೆ ಕಳುಹಿಸಿರುತ್ತಾರೆ. ಡಾಕ್ಟರ್ ಮಾತನ್ನು ಕೇಳಿ ದಂಪತಿಗಳು ನಿರಳರಾಗುತ್ತಾರೆ ಆದರೆ ತಮ್ಮ ನಾಯಿಯನ್ನು ನೋಡಿ ದಂಪತಿಗಳಿಗೆ ಬೇಸರವಾಗುತ್ತದೆ.
ಏಕೆಂದರೆ ಈಗಲೂ ಕೂಡ ನಾಯಿ ಹಾಗೆ ವಿಚಿತ್ರವಾಗಿ ವರ್ತಿಸುತ್ತಾ ಇರುತ್ತದೆ ಟೀನಾ ನಾಯಿ ವರ್ತಿಸುತ್ತಿರುವುದನ್ನು ಗಮನಿಸಿ ತನಗೆ ಎಲ್ಲಿ ಏನೋ ಸಮಸ್ಯೆ ಇರಬಹುದು ಎಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘಟನೆಯನ್ನು ಹಂಚಿಕೊಂಡು ಯಾರಾದರೂ ಇದಕ್ಕೆ ಪರಿಹಾರ ತಿಳಿಸಿ ಎಂದು ಕೇಳಿರುತ್ತಾರೆ ಇದಕ್ಕೆ ಕೆಲವರು ಕೀಮಾಗೆ ಹೊಟ್ಟೆಕಿಚ್ಚು ಇರಬಹುದು ಎಂತಲೂ ಇನ್ನು ಕೆಲವರು ಕೆಲವು ವೇಳೆ ಸಾಮಾನ್ಯ ಪರೀಕ್ಷೆಗಳಲ್ಲಿ ತಿಳಿಯದಿರಬಹುದು ಅದಕ್ಕೆ ಇನ್ನು ಹೆಚ್ಚಿನ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ.
ಆಗ ಟೀನಾ ಇದರ ಬಗ್ಗೆ ಹೆಚ್ಚಾಗಿ ಯೋಚಿಸಿ ಮಾರನೇ ದಿನವೇ ದಂಪತಿಗಳಿಬ್ಬರು ದೊಡ್ಡ ಆಸ್ಪತ್ರೆಗೆ ಹೋಗಿ ಮತ್ತೊಮ್ಮೆ ಪರೀಕ್ಷಿಸಿಕೊಂಡಿದ್ದಾರೆ ಆಗ ಶಾಕಿಂಗ್ ನ್ಯೂಸ್ ಒಂದು ಹೊರಬರುತ್ತದೆ ಟೀನಾಗೆ ಸ್ಕ್ಯಾನಿಂಗ್ ಮಾಡಿಸಿದಾಗ ಅವಳು ಒಂದು ಭಯಾನಕವಾದ ಕಾಯಿಲೆಯಿಂದ ನರಳುತ್ತಿದ್ದಾಳೆ ಎಂದು ತಿಳಿಯುತ್ತದೆ. ಆ ಕಾಯಿಲೆ ಟೀನಾ ಮತ್ತು ಅವಳ ಹೊಟ್ಟೆಯಲ್ಲಿದ್ದಂತಹ ಮಗುವಿಗೆ ಸಾವು ತಂದು ಒಡ್ಡುವಂತಹ ಭಯಾನಕವಾದ ಕಾಯಿಲೆಯಾಗಿತ್ತು.
ಅಸಲಿ ವಿಷಯವೇನೆಂದರೆ ಟೀನಾ ಹೊಟ್ಟೆಯಲ್ಲಿ ಭಯಾನಕ ಕ್ಯಾನ್ಸರ್ ಗೆಡ್ಡೆ ಒಂದು ಬೆಳೆಯುತ್ತಾ ಇತ್ತು ಇದನ್ನು ನಾಯಿಯು ಮೊದಲೇ ಗ್ರಹಿಸಿದ್ದು ಅದಕ್ಕಾಗಿ ಟೀನಾ ಹೊಟ್ಟೆಯನ್ನು ನೋಡಿ ಆ ನಾಯಿಯು ಯಾವಾಗಲೂ ಬೊಗಳುತ್ತಾ ಇತ್ತು. ನಾಯಿಯ ಈ ವಿಚಿತ್ರ ವರ್ತನೆಯಿಂದ ತನಗಿರುವ ಕಾಯಿಲೆ ಬಗ್ಗೆ ತಿಳಿದು ಇದನ್ನು ಇನ್ನು ಸ್ವಲ್ಪ ದಿನ ಹಾಗೆ ಬಿಟ್ಟಿದ್ದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಿ ಇರುತ್ತಿತ್ತು.
ಹಾಗೂ ತಾಯಿ ಜೊತೆ ಮಗುವಿನ ಪ್ರಾಣಕ್ಕೂ ಅ.ಪಾ.ಯ.ವಿರುತ್ತಿತ್ತು ಎಂದು ವೈದ್ಯರು ಹೇಳಿದಾಗ ತಕ್ಷಣ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಆ ಗೆಡ್ಡೆಯನ್ನು ತೆಗೆಸಿ ತನಗೆ ಮತ್ತೆ ಮಗುಗೆ ಏನು ತೊಂದರೆ ಆಗದಂತೆ ಎಚ್ಚರಿಕೆ ವಹಿಸುತ್ತಾರೆ. ಹೀಗೆ ಕೆಲವು ದಿನ ಟ್ರೀಟ್ಮೆಂಟ್ ತೆಗೆದುಕೊಂಡು ಟೀನಾ ಆರೋಗ್ಯವಾದ ಮಗುವಿಗೆ ಜನ್ಮ ನೀಡಿದ್ದಾಳೆ ಹಾಗೆ ಅವಳಿಗೆ ಕ್ಯಾನ್ಸರ್ ಕೂಡ ವಾಸಿಯಾಗಿದ್ದು ಮಗು ಕೂಡ ತುಂಬಾ ಆರೋಗ್ಯವಾಗಿ ಇದೆ.