ಪ್ರತಿಯೊಬ್ಬರಿಗೂ ಕೂಡ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿಯಾಗುತ್ತದೆ ಎನ್ನುವ ಆತಂಕ ಇದ್ದೇ ಇರುತ್ತದೆ ಆದ್ದರಿಂದ ಅದು ಎಷ್ಟೇ ಹಣವಾದರೂ ಸರಿ ಅದನ್ನು ಮುಂಚಿತವಾಗಿಯೇ ತಂದಿಟ್ಟುಕೊಂಡಿರುತ್ತಾರೆ. ಹೌದು ಗ್ಯಾಸ್ ಸಿಲಿಂಡರ್ ಇಲ್ಲ ಎಂದರೆ ಮನೆಯಲ್ಲಿ ಯಾವುದೇ ಕೆಲಸವು ಕೂಡ ಆಗುವುದಿಲ್ಲ ಎಂದೇ ಹೇಳಬಹುದು.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಗ್ಯಾಸ್ ಸಿಲಿಂಡರ್ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಅಂದರೆ ಅದು ಹೆಚ್ಚು ದಿನಗಳವರೆಗೆ ಬಾಳಿಕೆ ಬರುವ ಹಾಗೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬಹುದು ಅವೆಲ್ಲವನ್ನು ಸಹ ಅನುಸರಿಸುತ್ತಿರುತ್ತಾರೆ. ಆದರೂ ಕೂಡ ಕೆಲವೊಮ್ಮೆ ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದ ಅಥವಾ ಎಡವಟ್ಟಿನಿಂದ ಗ್ಯಾಸ್ ಸಿಲಿಂಡರ್ ಹೆಚ್ಚು ದಿನಕ್ಕೆ ಬರುವುದರ ಬದಲು ಸ್ವಲ್ಪ ದಿನದಲ್ಲಿಯೇ ಖಾಲಿಯಾಗುತ್ತಿರುತ್ತದೆ.
ಹೌದು ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಗ್ಯಾಸ್ ಸಿಲಿಂಡರ್ ಇಲ್ಲ ಎಂದರೆ ಯಾವುದೇ ಕೆಲಸ ನಡೆಯುವುದಿಲ್ಲ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಗ್ಯಾಸ್ ಸಿಲಿಂಡರ್ ಅತ್ಯಗತ್ಯವಾಗಿದೆ. ಹಾಗಾದರೆ ಈ ದಿನ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಯಾಗದ ಹಾಗೆ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಗ್ಯಾಸ್ ಸಿಲಿಂಡರ್ ಕಡಿಮೆ ಬಳಕೆಯಾಗುತ್ತದೆ.
ಹಾಗೂ ಅದನ್ನು ಹೇಗೆ ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು ಎನ್ನುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳೋಣ. ಅದಕ್ಕೂ ಮೊದಲು ಗ್ಯಾಸ್ ಸಿಲಿಂಡರ್ ಅತಿ ಬೇಗನೆ ಖಾಲಿಯಾಗಲು ಬಹಳ ಪ್ರಮುಖವಾದಂತಹ ಕಾರಣಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ.
• ಸ್ಟವ್ ಮೇಲೆ ಇರುವಂತಹ ಬರ್ನಲ್‌ಗಳನ್ನು ವಾರಕ್ಕೆ ಒಮ್ಮೆಯಾ ದರೂ ನಾವು ಸ್ವಚ್ಛ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ನಾವು ಪ್ರತಿನಿತ್ಯ ಗ್ಯಾಸ್ ಸಿಲಿಂಡರ್ ಬಳಸುವುದರಿಂದ ಆ ಒಂದು ಉರಿ ಬರುವಂತಹ ಬರ್ನಲ್ ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳು ವುದು ಒಳ್ಳೆಯದು. ಹಾಗೇನಾದರೂ ಆ ಒಂದು ಬರ್ನಲ್ ಗಳಲ್ಲಿ ಧೂಳು ಕಸ ಇದ್ದರೆ ಗ್ಯಾಸ್ ಅಧಿಕವಾಗಿ ಖರ್ಚಾಗುತ್ತಿರುತ್ತದೆ.
ಆದರೆ ನಮಗೆ ಅದು ತಿಳಿಯುವುದಿಲ್ಲ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗು ತ್ತಿದೆ ಎನ್ನುವ ಮಾತನ್ನು ಹೇಳುತ್ತೇವೆ. ಆದ್ದರಿಂದ ಈ ಒಂದು ವಿಷಯದ ಕಡೆ ಹೆಚ್ಚಿನ ಗಮನವನ್ನು ವಹಿಸಿ ಅದನ್ನು ವಾರಕ್ಕೆ ಒಮ್ಮೆಯಾದರೂ ಅಥವಾ 15 ದಿನಕ್ಕೆ ಒಮ್ಮೆಯಾದರೂ ಸ್ವಚ್ಛ ಮಾಡಿಕೊಳ್ಳುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಹೆಚ್ಚು ಖರ್ಚಾಗುವುದಿಲ್ಲ ಹೆಚ್ಚು ದಿನದವರೆಗೆ ಬಾಳಿಕೆ ಬರುತ್ತದೆ.
• ನೀವು ಅಡುಗೆ ಮಾಡುವಂತಹ ಸಮಯದಲ್ಲಿ ಯಾವುದೇ ಪಾತ್ರೆ ಯನ್ನು ತೇವ ಇರುವ ಹಾಗೆ ಸ್ಟವ್ ಮೇಲೆ ಇಡಬೇಡಿ ಏಕೆ ಎಂದರೆ ತೇವ ಇರುವಂತಹ ಪಾತ್ರೆಯು ಬಿಸಿಯಾಗುವುದಕ್ಕೆ ಹೆಚ್ಚು ಗ್ಯಾಸ್ ಸಿಲಿಂಡರ್ ಉಪಯೋಗಿಸಿಕೊಳ್ಳುತ್ತದೆ. ಆದ್ದರಿಂದ ಯಾವುದೇ ಅಡುಗೆ ಮಾಡುವ ಸಮಯದಲ್ಲಿ ಪಾತ್ರೆಗಳನ್ನು ಸ್ವಚ್ಛವಾಗಿ ಒರೆಸಿ ಅದರಲ್ಲಿ ಇರುವಂತಹ ತೇವಾಂಶವನ್ನು ತೆಗೆದು ಆನಂತರ ಪಾತ್ರೆಯನ್ನು ಇಡುವುದರಿಂದ ಬೇಗನೆ ಬಿಸಿಯಾಗುತ್ತದೆ. ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಕಡಿಮೆ ಖರ್ಚಾಗುತ್ತದೆ.
• ಕೆಲವೊಬ್ಬರು ಅಡುಗೆ ಮಾಡುವಂತಹ ಸಮಯದಲ್ಲಿ ಬಿಸಿ ನೀರಿನ ಅಗತ್ಯ ಇದ್ದಾಗ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಬಿಸಿ ಮಾಡುತ್ತಾರೆ ಅದರ ಬದಲು ನಿಮ್ಮ ಬಳಿ ಯಾವುದಾದರೂ ಎಲೆಕ್ಟ್ರಿಕಲ್ ಕೆಟಲ್ ಇದ್ದರೆ ಅದನ್ನು ಉಪಯೋಗಿಸಿ ಅದರ ಮುಖಾಂತರ ಬಿಸಿ ನೀರನ್ನು ಕಾಯಿಸಿ ಅಡುಗೆಗೆ ಉಪಯೋಗಿಸುವುದರಿಂದಲೂ ಕೂಡ ಗ್ಯಾಸ್ ಸಿಲಿಂಡರ್ ಕಡಿಮೆ ಖರ್ಚಾಗುತ್ತದೆ. ಅದರಲ್ಲೂ ಈಗ 200 ಯೂನಿಟ್ ಕರೆಂಟ್ ಉಚಿತ ಇರುವುದರಿಂದ ಇಂತಹ ಕೆಲವು ಒಳ್ಳೆಯ ಉಪಾಯಗಳನ್ನು ಉಪಯೋಗಿಸಿಕೊಳ್ಳುವುದು ಒಳ್ಳೆಯದು.