ರಾಜ್ಯ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಈಗಾಗಲೇ ಐದು ಕೆಜಿ ಅಕ್ಕಿ ಸಿಗುತ್ತಿದ್ದು. ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಐದು ಕೆಜಿ ಅಕ್ಕಿ ಸಿಗುತ್ತಿದ್ದು ಅದರ ಜೊತೆಗೆ ಮತ್ತೆ 5 ಕೆಜಿ ಅಕ್ಕಿಯನ್ನು ಕೊಡಬೇಕು ಎನ್ನುವಂತಹ ಆದೇಶ ವನ್ನು ಹೇಳಿತ್ತು. ಆದರೆ ಈ ಒಂದು ಯೋಜನೆಯನ್ನು ಜಾರಿಗೆ ತರುವಲ್ಲಿ ಅಂದರೆ ಐದು ಕೆಜಿ ಅಕ್ಕಿಯನ್ನು ಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು.
ಬದಲಿಗೆ ಕಾಂಗ್ರೆಸ್ ಸರ್ಕಾರ ಅದನ್ನು ಬಿಡಲಿಲ್ಲ ಬದಲಿಗೆ ಐದು ಕೆಜಿ ಅಕ್ಕಿಯನ್ನು ಕೊಡುವುದಕ್ಕೆ ಸಾಧ್ಯವಾಗದಿದ್ದರೂ ಅದಕ್ಕೆ ತಗಲುವಂತಹ ವೆಚ್ಚವನ್ನು ನಾವು ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ನೀಡಿದ್ದರು. ಹೌದು ಅದರಂತೆಯೇ ಪ್ರತಿ ಕೆಜಿಗೆ 34 ರೂಪಾಯಿ ಅಂತೆ. ಒಬ್ಬ ವ್ಯಕ್ತಿಗೆ 170 ಹಣವನ್ನು ನೀಡಲಾಗುತ್ತದೆ ಹೌದು ಪ್ರತಿ ತಿಂಗಳು ಇನ್ನು ಮುಂದೆ ತಲ ಐದು ಕೆಜಿ ಅಕ್ಕಿಯ ಹಣವನ್ನು ನೇರವಾಗಿ ಗ್ರಾಹಕರ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು.
ಅದರಂತೆಯೇ ಈಗಾಗಲೇ ಹಲವಾರು ಜನರಿಗೆ ಈ ಹಣ ತಲುಪಿದ್ದು ಪ್ರತಿಯೊಬ್ಬರೂ ಕೂಡ ಇದರಿಂದ ಸಂತೋಷಗೊಂಡಿದ್ದಾರೆ ಎಂದೇ ಹೇಳಬಹುದು. ಹೌದು ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್, ಹೀಗೆ ಇನ್ನು ಹಲವಾರು ರೀತಿಯ ಕಾರ್ಡ್ ಹೊಂದಿರುವಂತಹ ಜನರಿಗೆ ಈಗಾಗಲೇ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇವರೆಲ್ಲರೂ ಕಡುಬಡವರು ಎನ್ನುವಂತಹ ಉದ್ದೇಶದಿಂದ ಸರ್ಕಾರ ಈಗಾಗಲೇ 21 ಕೆಜಿ ಅಕ್ಕಿಯನ್ನು ಹಾಗೂ 14 ಕೆಜಿ ಜೋಳವನ್ನು ಉಚಿತವಾಗಿ ನೀಡುತ್ತಿದೆ.
ಅದೇ ರೀತಿಯಾಗಿ ಮನೆಯಲ್ಲಿ ಎಷ್ಟು ಸದಸ್ಯರು ಇರುತ್ತಾರೋ ಅಷ್ಟು ಸದಸ್ಯರಿಗೂ ಸಹ ತಲಾ 170 ರೂಪಾಯಿಯಂತೆ ಹಣ ಅವರ ಖಾತೆಗೆ ನೇರವಾಗಿ ಹೋಗುತ್ತದೆ ಎಂದು ಜಿಲ್ಲೆಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿಯಾಗಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರೆ ಕೆಲವೊಂದಷ್ಟು ಶರತ್ತುಗಳು ಅಂದರೆ ಕೆಲವೊಂದಷ್ಟು ನಿಯಮಗಳು ಇದೆ.
ಈ ರೀತಿಯ ನಿಯಮಗಳು ಇದ್ದವರು ಮಾತ್ರ ಈ ಒಂದು ಯೋಜ ನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಒಂದು ಶರತ್ತುಗಳು ಯಾವುವು ಅಂದರೆ ಯಾವುದೆಲ್ಲ ರೀತಿಯ ದಾಖಲಾತಿಗಳನ್ನು ಗ್ರಾಹಕರು ಹೊಂದಿರಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ಹಾಗೇನಾದರೂ ಅವರು ಈ ದಾಖಲಾತಿಗಳನ್ನು ಅಂದರೆ ಈ ನಿಯಮ ವನ್ನು ಹೊಂದಿಲ್ಲ ಎಂದರೆ ಅವರು ಈ ಯೋಜನೆಯ ಪ್ರಯೋಜನವನ್ನು ಅಂದರೆ 5 ಕೆಜಿ ಅಕ್ಕಿಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವು ದಿಲ್ಲ ಹಾಗಾದರೆ ಆ ಒಂದು ನಿಯಮಗಳು ಯಾವುದು ಎಂದು ನೋಡಬಹುದಾದರೆ.
• ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಇಲ್ಲ ಎಂದರೆ.
ಅಂದರೆ ಇ – ಕೆವೈಸಿ ಯನ್ನು ಮಾಡಿಸದೆ ಇರುವ ಪಡಿತರ ಚೀಟಿ ದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರಧಾನ್ಯ ಹಾಗೂ ನಗದು ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ.
• ಹಾಗೂ ಯಾವುದೇ ರೀತಿಯ ಬ್ಯಾಂಕ್ ಖಾತೆ ಹೊಂದಿಲ್ಲದೆ ಇದ್ದರೂ ಕೂಡ ಈ ಒಂದು ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಅಂದರೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣ ತೆಗೆದುಕೊಳ್ಳುವುದು ಪಡೆದುಕೊಳ್ಳುವುದು ಅಂದರೆ ನಿಮ್ಮ ಅಕೌಂಟ್ ಚಾಲ್ತಿಯಲ್ಲಿ ಇರು ವುದು ಒಳ್ಳೆಯದು ಚಾಲ್ತಿಯಲ್ಲಿ ಇಲ್ಲ ಎಂದರೆ ಇದನ್ನು ಸ್ಥಗಿತಗೊಳಿಸ ಲಾಗುವುದು ಎನ್ನುವಂತಹ ಮಾಹಿತಿಯನ್ನು ಹೇಳಿದ್ದಾರೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿಯಾದಂತಹ ದಾಖಲಾತಿಗಳನ್ನು ಸರಿಪಡಿಸಿಕೊಂಡು ಅದನ್ನು ತಿದ್ದುಪಡಿ ಮಾಡಿಸಿ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಒಳ್ಳೆಯದು.