Home Entertainment ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

0
ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

ಡಾಕ್ಟರ್ ರಾಜಕುಮಾರ್ ಅವರು ಮಾಡಿರುವ ಅಷ್ಟು ಸಿನಿಮಾಗಳು ಕೂಡ ಕಡದಾಳದಿಂದ ಹುಡುಕಿ ತೆಗೆದ ಅಪರೂಪದ ಮುತ್ತುಗಳ ರೀತಿ ಇವೆ. ಆ ಸಿನಿಮಾದಲ್ಲಿ ಅಣ್ಣಾವ್ರ ಅಭಿನಯ ಹಾಗೂ ಅವರು ಆಯ್ಕೆ ಮಾಡಿಕೊಂಡ ಪಾತ್ರಗಳು ಮತ್ತು ಸಿನಿಮಾದ ಕಥೆ ಇವುಗಳಿಂದ ಇಂದು ಅವರು ಸಿನಿಮಾ ಲೋಕದ ದಂತಕಥೆ ಎನಿಸಿದ್ದಾರೆ ಕನ್ನಡ ಸಿನಿಮಾರಂಗದ ಅರಸ ಎಂದರು ಕೂಡ ತಪ್ಪಾಗಲಾರದು.

ಅಣ್ಣಾವ್ರ ರೀತಿ ಅಭಿನಯ ಮಾಡುವ ಹಾಗೂ ವ್ಯಕ್ತಿತ್ವ ಹೊಂದಿರುವ ಆ ರಾಜಕಳೆ ಇರುವ ಮತ್ತೊಬ್ಬ ಹೀರೋ ಹಿಂದೆಯೂ ಇರಲಿಲ್ಲ ಮುಂದೆಯೂ ಸಹ ಬರಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಆದರೆ ಅಣ್ಣಾವ್ರ ಕೆಲ ಸಿನಿಮಾಗಳನ್ನು ರಿಮೇಕ್ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಒಂದು ಸಿನಿಮಾವನ್ನು ಮಾತ್ರ ಯಾರಿಂದಲೂ ಮಾಡಲಾಗಲಿಲ್ಲ ಅದು ಯಾವುದು ಗೊತ್ತಾ.?

ಅಣ್ಣಾವ್ರ ಬೇಡರ ಕಣ್ಣಪ್ಪ ಸಿನಿಮಾವನ್ನು ಶಿವಣ್ಣ ಅವರಿಗಾಗಿ ಶಿವ ಮೆಚ್ಚಿದ ಕಣ್ಣಪ್ಪ ಎಂದು ಮತ್ತೊಮ್ಮೆ ರಿಮೇಕ್ ಮಾಡಿ ತೆರೆಗೆ ತರಲಾಗಿತ್ತು. ಹಾಗೆ ಅಣ್ಣಾವ್ರ ಸಂಪತ್ತಿಗೆ ಸವಾಲ್ ಎನ್ನುವ ಸಿನಿಮಾವನ್ನು ಕೂಡ ರಿಮೇಕ್ ಮಾಡಬೇಕು ಅದರಲ್ಲಿ ಶಿವಣ್ಣ ಅಭಿನಯಿಸಬೇಕು ಎನ್ನುವುದು ನಿರ್ಮಾಪಕ ಉದಯ ಶಂಕರ್ ಅವರ ಅಭಿಲಾಷೆ ಆಗಿತ್ತು.

ಅದನ್ನು ಅವರು ಅಣ್ಣಾವರ ಬಳಿ ಕೂಡ ವ್ಯಕ್ತಪಡಿಸಿದ್ದರು. ಶಿವಣ್ಣ ಹಲವಾರು ಸಿನಿಮಾಗಳಲ್ಲಿ ಹಳ್ಳಿ ಹೈದನ ಗೆಟಪ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಪಾತ್ರಕ್ಕೆ ಅವರ ಸಮಕ್ಕೆ ಅಲ್ಲದಿದ್ದರೂ ಬಹುಮಟ್ಟಿಗೆ ನ್ಯಾಯಾಧಕ್ಕಿಸಬಲ್ಲರು ಎನ್ನುವುದು ಅವರ ನಂಬಿಕೆ ಆಗಿತ್ತು. ಅದನ್ನೇ ಅಣ್ಣಾವ್ರ ಬಳಿ ಹೇಳಿದಾಗ ಅಣ್ಣಾವ್ರು ಕೊಟ್ಟ ಉತ್ತರ ಉದಯ ಶಂಕರ್ ಅವರಿಗೆ ಶಾ’ಕ್ ನೀಡಿತ್ತು.

ಯಾಕೆಂದರೆ ಸರಿ ನನ್ನ ಮಗ ನಾನು ನಟಿಸಿದ ಪಾತ್ರದಲ್ಲಿ ಅಭಿನಯಿಸುತ್ತಾನೆ ಆದರೆ ಅದರಲ್ಲಿ ನನ್ನ ಪಾತ್ರದಷ್ಟೇ ಮುಖ್ಯ ಪಾತ್ರ ವಜ್ರಮುನಿ ಅವರದ್ದು ಸಹಾ. ಆ ಸಾಹುಕಾರನ ಪಾತ್ರದಲ್ಲಿ ಈಗ ಅಭಿನಯ ಮಾಡುವಂತಹ ನಟ ಯಾರಿದ್ದಾರೆ ಅವರಿಂದ ಅಷ್ಟು ಜೀವಂತಿಗೆ ಮತ್ತೆ ತುಂಬಲು ಸಾಧ್ಯ ಇದೆಯಾ ಎಂದು ಅಣ್ಣಾವ್ರು ಕೇಳಿದ್ದರಂತೆ.

ಅದನ್ನು ಯೋಚಿಸಿದ ಉದಯಶಂಕರ್ ಅವರು ಮರು ಮಾತನಾಡದೆ ಸುಮ್ಮನಾಗಿ ಹೋಗಿದ್ದರು. ನಂತರ ಇದೇ ಆಸೆ ಪುನಿತ್ ರಾಜಕುಮಾರ್ ಅವರಲ್ಲೂ ಕೂಡ ಮೂಡಿತ್ತು. ಅಣ್ಣಾವ್ರು ಹಲವಾರು ಲವ್ ಸ್ಟೋರಿಗಳಲ್ಲಿ ಕೂಡ ಅಭಿನಯಿಸಿದ್ದರು. ಅದರಲ್ಲಿ ನಾ ನಿನ್ನ ಮರೆಯಲಾರೆ ಒಂದು. ಕ ಪ್ರೇಮ ಕಥಾ ಹಂದರವುಳ್ಳ ಚಿತ್ರದಲ್ಲಿ ಲಕ್ಷ್ಮಿ ಹಾಗೂ ರಾಜಕುಮಾರ ಅವರು ಯುವ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದರು. ಈ ನಾ ನಿನ್ನ ಮರೆಯಲಾರೆ ಸಿನಿಮಾವನ್ನು ಮತ್ತೆ ರಿಮೇಕ್ ಮಾಡಬೇಕು ಎನ್ನುವುದು ಅಪ್ಪು ಅವರ ಕನಸಾಗಿತ್ತು.

ಕೆಲ ಮೂಲಗಳ ಪ್ರಕಾರ ಅಪ್ಪು ಅವರೇ ಅದರಲ್ಲಿ ಅಭಿನಯಿಸಬೇಕು ಎಂದು ಕೂಡ ಅಂದುಕೊಂಡಿದ್ದರಂತೆ. ಆದರೆ ಅದು ಕನಸಾಗಿಯೇ ಉಳಿದು ಹೋಯಿತು. ಕನ್ನಡಿಗರಿಗೂ ಅದನ್ನು ಅಪ್ಪು ವರ್ಷನ್ ಲಿ ನೋಡುವ ಭಾಗ್ಯ ಸಿಗಲೇ ಇಲ್ಲ. ಮುಂದೆಯೂ ಅಣ್ಣಾವ್ರ ಯಾವುದಾದರೂ ಸಿನಿಮಾ ರಿಮೇಕ್ ಆಗುತ್ತದೆಯಾ ಎಂದು ಕಾದು ನೋಡೋಣ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ನೀವು ನೋಡಿರುವ ಅಣ್ಣಾವ್ರ ಚಿತ್ರಗಳಲ್ಲಿ ಯಾವ ಸಿನಿಮಾವನ್ನು ಈಗಿನ ಯಾವ ನಟ ರಿಮೇಕ್ ಮಾಡಿ ಅಭಿನಯಿಸಬೇಕು ಎನ್ನುವ ಆಸೆ ನಿಮಗಿದೆ ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

LEAVE A REPLY

Please enter your comment!
Please enter your name here