ನಟಿ ಶ್ರುತಿ ಅವರು ಕರ್ನಾಟಕದಲ್ಲಿ ಕಣ್ಣೀರಿನ ನಟಿ ಎಂದು ಫೇಮಸ್ ಆಗಿದ್ದಾರೆ. ಇವರಿಗೆ ಮಿನುಗುತಾರೆ ಎನ್ನುವ ಇನ್ನೊಂದು ಟೈಟಲ್ ಕೂಡ ಇದೆ. 90 ದಶಕದ ಸ್ಟಾರ್ ಹೀರೋಯಿನ್ ಆಗಿದ್ದ ಶ್ರುತಿ ಅವರು ಇಂದಿಗೂ ಸಹ ಪೋಷಕ ಪಾತ್ರದಲ್ಲಿ ಬಾರಿ ಬೇಡಿಕೆ ಇರುವ ನಟಿ. ಜೊತೆಗೆ ಇವರ ಸಹೋದರನಾದ ಶರಣ್ ಬಗ್ಗೆ ಕೂಡ ಎಲ್ಲರಿಗೂ ಗೊತ್ತೇ ಇದೆ. ಕಳೆದ ದಶಕದವರಿಗೂ ಹಾಸ್ಯ ಕಲಾವಿದನಾಗಿ, ಸಹ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಇವರ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಓಪನ್ ಆಗಿದೆ.
ಈಗ ಕರುನಾಡಿನಲ್ಲಿ ಕಾಮಿಡಿ ಕಿಂಗ್ ಆಗಿ ಅಧ್ಯಕ್ಷನಾಗಿ ಇವರು ಸ್ಯಾಂಡಲ್ವುಡ್ ನಲ್ಲಿ ಕಮಲ್ ಮಾಡುತ್ತಿದ್ದಾರೆ. ನಟಿ ಶ್ರುತಿ ಹಾಗೂ ಶರಣ್ ಅಣ್ಣ ತಂಗಿ ಆಗಿದ್ದರೂ ಕೂಡ ಇವರು ಒಂದೇ ತಾಯಿಯ ಮಕ್ಕಳಲ್ಲ. ಜೊತೆಗೆ ಇನ್ನೂ ಸಹ ಅವರಿಗೆ ಅವರ ತಾಯಿ ಯಾರು ಎಂದು ಗೊತ್ತಿಲ್ಲ. ಈ ವಿಷಯ ಎಲ್ಲರಿಗೂ ಆಶ್ಚರ್ಯ ತರಬಹುದು. ಇದು ನಿಮಗೆ ಜಮೀನ್ದಾರು ಚಿತ್ರದ ಸನ್ನಿವೇಶವನ್ನು ಕೂಡ ನೆನಪಿಸಬಹುದು. ಆದರೆ ಇದು ನಿಜ ಜೀವನದ ಕಥೆ ಆಗಿದೆ. ಈ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ಶ್ರುತಿ ಹಾಗೂ ಶರಣ್ ತಾಯಿ ಬೇರೆ ಬೇರೆ, ಇವರಿಬ್ಬರ ತಂದೆ ಕೃಷ್ಣ.
ಕೃಷ್ಣ ಅವರು ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅದೇ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರುಕ್ಮಿಣಿ ಅವರ ಜೊತೆ ಇವರಿಗೆ ಪ್ರೀತಿಯಾಗುತ್ತದೆ. ಈ ವಿಷಯವನ್ನು ರುಕ್ಮಿಣಿ ಅವರು ಮನೆಯಲ್ಲಿ ತಿಳಿಸಿದಾಗ ಅವರ ಅಣ್ಣ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ಇವರು ಕೃಷ್ಣನನ್ನು ಮದುವೆಯಾಗುವುದು ಎಂದು ಹೇಳಿದಾಗ ಕೋಪಗೊಂಡ ಅಣ್ಣ ಮನೆ ಬಿಟ್ಟು ಹೋಗುತ್ತಾರೆ. ಮದುವೆಗೆ ಸಕಲ ಸಿದ್ಧತೆಯು ಆದಮೇಲೆ ದಿಢೀರ್ ಎಂದು ರುಕ್ಮಿಣಿ ಅವರು ಕೃಷ್ಣ ಅವರಿಗೆ ಒಂದು ಶಾ’ಕ್ ನೀಡುತ್ತಾರೆ.
ಅದೇನೆಂದರೆ ರುಕ್ಮಿಣಿ ಅವರಿಗೆ ರಾಧೆ ಎನ್ನುವ ಅಕ್ಕ ಸಹ ಇರುತ್ತಾರೆ. ಇವರಿಬ್ಬರು ಅವಳಿ ಸಹೋದರಿಯರು ಆಗಿದ್ದು, ರಾಧೆಯನ್ನು ಬಿಟ್ಟು ಇರಲು ಸಾಧ್ಯವಿಲ್ಲ ನೀವು ಇಬ್ಬರನ್ನು ಮದುವೆ ಆಗಬೇಕು ಎಂದು ಹೇಳುತ್ತಾರೆ. ಅದಕ್ಕಾಗಿ ಶ್ರುತಿ ಅವರ ತಂದೆ ರಾಧೆ ಮತ್ತು ರುಕ್ಮಿಣಿ ಇಬ್ಬರನ್ನು ಮದುವೆ ಆಗಿದ್ದಾರೆ. ಈಗ ಇವರಿಬ್ಬರಿಗೆ ಮೂರು ಜನ ಮಕ್ಕಳಿದ್ದಾರೆ. ಶ್ರುತಿ, ಶರಣ್ ಹಾಗೂ ಇನ್ನೊಬ್ಬಳು ಸಹೋದರಿ ಉಷಾ. ಆದರೆ ಈ ಮೂರು ಜನರಿಗೂ ಇನ್ನೂ ಸಹ ಅವರ ತಾಯಿ ಯಾರು ಎಂದು ಗೊತ್ತೇ ಇಲ್ಲ ಆ ರೀತಿ ಮಕ್ಕಳನ್ನು ಬೆಳೆಸಿದ್ದಾರೆ ರಾಧೆ ಮತ್ತು ರುಕ್ಮಿಣಿ. ರಾಧೆ ಮತ್ತು ರುಕ್ಮಿಣಿ ಅವರು ಸಿನಿಮಾ ಹಾಗೂ ಧಾರವಾಹಿಗಳಲ್ಲೂ ನಟನೆ ಮಾಡುತ್ತಾರೆ.
ಹಲವು ಕಾರ್ಯಕ್ರಮಗಳಲ್ಲಿ ಮೂರು ಜನ ಕೂಡ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ವಿಶೇಷತೆ ಏನೆಂದರೆ ರಾಧೆ ಮತ್ತು ರುಕ್ಮಿಣಿ ಎಲ್ಲೇ ಹೋದರು ಕೂಡ ಒಂದೇ ರೀತಿಯ ಬಟ್ಟೆ ತೊಡುತ್ತಾರೆ. ಇದರಿಂದ ರಾಧೆ ಯಾರು ಹಾಗೂ ರುಕ್ಮಿಣಿ ಯಾರು ಎಂದು ಕಂಡುಹಿಡಿಯುವುದು ಕಷ್ಟ, ಆ ರೀತಿ ಇವರಿಬ್ಬರ ಮುಖಚಹರೆ ಹೋಲುತ್ತದೆ. ಇಷ್ಟು ವರ್ಷಗಳಲ್ಲಿ ಒಮ್ಮೆ ಸಹ ಇವರಿಬ್ಬರ ಮಧ್ಯೆ ಮನಸ್ತಾಪ ಕೂಡ ಬಂದಿಲ್ಲವಂತೆ. ಆ ರೀತಿ ಸಹೋದರಿಯೊಬ್ಬರು ಅನ್ಯೋನ್ಯವಾಗಿ ಜೀವನ ನಡೆಸಿದ್ದಾರೆ. ಇವರ ಕುಟುಂಬದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.