Friday, June 9, 2023
HomeEntertainmentಚಪ್ಪಲಿ ಏಟು ತಿಂದ ನಟ ದರ್ಶನ್ ಮಾತ್ರ ಅಲ್ಲ, ಈ ಹಿಂದೆ ವಿಷ್ಣು ದಾದಾ ಮೇಲೆಯೂ...

ಚಪ್ಪಲಿ ಏಟು ತಿಂದ ನಟ ದರ್ಶನ್ ಮಾತ್ರ ಅಲ್ಲ, ಈ ಹಿಂದೆ ವಿಷ್ಣು ದಾದಾ ಮೇಲೆಯೂ ಕೂಡ ಇಂಥದ್ದೇ ದಾಳಿಯಾಗಿತ್ತು ಆಗ ಅಣ್ಣಾವ್ರು ಹೇಳಿದ್ದೇನು ಗೊತ್ತಾ.?

ಅಂದು ವಿಷ್ಣುವರ್ಧನ್ ಇಂದು ನಟ ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರಿಗೆ ಹೊಸಪೇಟೆಯಲ್ಲಿ ಕಿಡಿಗೇಡಿ ಒಬ್ಬರು ಚಪ್ಪಲಿ ಎಸೆದ ಪ್ರಕರಣ ನಿಮಗೆ ತಿಳಿದೇ ಇದೆ ಆದರೆ ಚಿತ್ರರಂಗದಲ್ಲಿ ಚಪ್ಪಲಿ ಏಟು ತಿಂದ ವ್ಯಕ್ತಿ ದರ್ಶನ್ ಮಾತ್ರವಲ್ಲ. ಹೌದು ಈ ಹಿಂದೆ ವಿಷ್ಣು(Vishnuvardhan) ದಾದಾ ಅವರ ಮೇಲೆಯೂ ಕೂಡ ಇಂಥದ್ದೇ ದಾಳಿಯಾಗಿತ್ತು. ಈ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ ಆದರೂ ಕೂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ವಿಷ್ಣು ದಾದಾ ಅವರಿಗೂ ಕೂಡ ಚಪ್ಪಲಿ ಎಸೆತವನ್ನು ಎಸೆಯಲಾಗಿತ್ತು ಎಂಬ ವಿಚಾರ ವೈರಲ್ ಆಗಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಈಗ ಅಪ್ಪು ಹಾಗೂ ದರ್ಶನ್ ಅವರ ಅಭಿಮಾನಿಗಳ ನಡುವೆ ಯಾವ ರೀತಿ ಫ್ಯಾನ್ ವಾರ್ ಕ್ರಿಯೇಟ್ ಆಗಿದಿಯೋ ಅದೇ ರೀತಿ ಆ ಕಾಲದಲ್ಲಿ ಅಣ್ಣಾವ್ರ(Rajkumar) ಅಭಿಮಾನಿಗಳು ಹಾಗೂ ವಿಷ್ಣು ದಾದಾ ಅವರ ಅಭಿಮಾನಿಗಳ ನಡುವೆಯೂ ಕೂಡ ಫ್ಯಾನ್ ವಾರ್ ಎಂಬುದು ಕ್ರಿಯೇಟ್ ಆಗಿತ್ತು.

ಅಣ್ಣಾವ್ರು ಅಂದಿನ ಕಾಲದಲ್ಲಿ ಅತಿ ಹೆಚ್ಚು ಜನರನ್ನು ಸಂಪಾದನೆ ಮಾಡಿದ ಏಕೈಕ ವ್ಯಕ್ತಿಯಾಗಿದ್ದರು ಇನ್ನು ವಿಷ್ಣು ದಾದಾ ಅವರು ಕೂಡ ಆ ಕಾಲ ಘಟ್ಟದಲ್ಲಿ ಹೆಚ್ಚು ಹೆಸರು ಮಾಡಿದ ನಾಯಕ ನಟರಾಗಿದ್ದರು. ಒಂದು ರೀತಿಯಲ್ಲಿ ಹೇಳಬೇಕಾದರೆ ಅಣ್ಣಾವ್ರ ಸರಿ ಸಮಾನಕ್ಕೆ ನಿಲ್ಲುವಂತಹ ಚಾಕು ಚಕ್ಯತೆಯನ್ನು ಒಳಗೊಂಡಿದ್ದರು. ಅಷ್ಟೇ ಅಭಿಮಾನಿ ಬಳಗವನ್ನು ಕೂಡ ಗಿಟ್ಟಿಸಿಕೊಂಡಿದ್ದರು ಅಣ್ಣಾವ್ರು ಹಾಗೂ ವಿಷ್ಣುದಾದಾ ಇವರಿಬ್ಬರ ನಡುವೆ ಯಾವುದೇ ರೀತಿಯಾದಂತಹ ವೈ ಮನಸು ಮತ್ತು ಮನಸ್ಥ ಇರಲಿಲ್ಲ.

ಇಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು ಒಬ್ಬರ ಮನೆಗೆ ಮತ್ತೊಬ್ಬರು ಬರುತ್ತಿದ್ದರು ಹೋಗುತ್ತಿದ್ದರು ಆದರೆ ಇವರ ಅಭಿಮಾನಿಗಳಲ್ಲಿ ಮಾತ್ರ ಚಿಕ್ಕದೊಂದು ವೈಮನಸ್ಸು ಇತ್ತು. ವಿಷ್ಣು ಅಭಿಮಾನಿಗಳು ಅಣ್ಣಾವ್ರ ಅಭಿಮಾನಿಗಳ ಮೇಲೆ ಹಾಗೂ ಅಣ್ಣಾವ್ರ ಅಭಿಮಾನಿಗಳು ವಿಷ್ಣು ಅಭಿಮಾನಿಗಳ ಮೇಲೆ ಆಗಿಂದ ಹಾಗೆ ಕಿಡಿ ಕಾರುತಲೆ ಇದ್ದರು. ಇದರ ತೀವ್ರತೆ ಯಾವ ಮಟ್ಟಕ್ಕೆ ಹೋಯಿತು ಅಂದರೆ ಒಮ್ಮೆ ಅಣ್ಣಾವ್ರು ಹಾಗೂ ವಿಷ್ಣುವರ್ಧನ್ ಅವರು ಇಬ್ಬರೂ ಕೂಡ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡುತ್ತಿರುತ್ತಾರೆ ಆ ಸಮಯದಲ್ಲಿ ಕಿಡಿಗೇಡಿ ಒಬ್ಬರು ವಿಷ್ಣು ದಾದಾ ಅವರಿಗೆ ಚಪ್ಪಲಿಯನ್ನು ಎಸೆಯುತ್ತಾರೆ.

ಇದನ್ನು ನೋಡಿದಂತಹ ಅಣ್ಣಾವ್ರು ಎದ್ದು ನಿಂತು ದಯವಿಟ್ಟು ಹೀಗೆ ಮಾಡಬೇಡಿ ನಾವು ಕಲಾವಿದರು ಎಲ್ಲರಿಗೂ ಕೂಡ ಅವರದ್ದೇ ಆದ ಗೌರವವಿದೆ. ಈ ರೀತಿಯ ಕೃತ್ಯ ಮಾಡಿ ಕಲಾವಿದರಿಗೆ ಅವಮಾನ ಮಾಡಬೇಡಿ ವಿಷ್ಣು ನಮ್ಮ ಹುಡುಗ ನಮ್ಮ ಮನೆಯವನು ಇದ್ದ ಹಾಗೆ ಆತನ ಮೇಲೆ ಇಷ್ಟೊಂದು ಆ.ಕ್ರೋ.ಶ ಬೇಡ ಎಲ್ಲರನ್ನೂ ಕೂಡ ಸಮಾನರಾಗಿ ಕಾಣಿ ಈತನೆ ಮೇಲೆ ಕರುಣೆ ತೋರಿ ದಯವಿಟ್ಟು ಯಾವುದೇ ಕಾರಣಕ್ಕೂ ಇಂತಹ ಕೃತ್ಯ ಮರುಕಳಿಸದಂತೆ ಅಭಿಮಾನಿಗಳು ನೀವು ನೋಡಿಕೊಳ್ಳಬೇಕು ಎಂದು ಅಣ್ಣಾವ್ರು ತಿಳಿ ಹೇಳುತ್ತಾರೆ ಆದರೂ ಕೂಡ ಈ ಘಟನೆಯಿಂದ ಮನನೊಂದು ವಿಷ್ಣು ಅವರು ಆ ಕಾರ್ಯಕ್ರಮದಿಂದ ಹೊರ ನೆಡೆಯುತ್ತಾರೆ.

ಆದರೆ ಅಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಎಂಬುದು ಇರಲಿಲ್ಲ ಕೇವಲ ಪತ್ರಿಕೆ ಅದನ್ನು ಬಿಟ್ಟರೆ ಟಿವಿ ಮಾಧ್ಯಮ ಮಾತ್ರ ಇತ್ತು ಹಾಗಾಗಿ ಈ ವಿಚಾರ ಹೆಚ್ಚು ಪ್ರಚಲಿತಕ್ಕೆ ಬರಲಿಲ್ಲ. ಒಂದು ವೇಳೆ ಅಂತಹ ಘಟನೆ ಈ ಕಾಲದಲ್ಲಿ ನಡೆದಿದ್ದರೆ ಅದರ ಕಥೆಯೇ ಬೇರೆ ಆಗುತ್ತಿತ್ತು. ಆದರೂ ಕೂಡ ವಿಷ್ಣು ದಾದಾ ಹಾಗೂ ದರ್ಶನ್ ಈ ಇಬ್ಬರು ನಾಯಕನಟರಿಗೆ ಆದಂತಹ ಅವಮಾನ ಮತ್ಯಾರಿಗೂ ಆಗಿಲ್ಲ ಏನಾದರೂ ಅಭಿಮಾನಿಗಳು ತಮ್ಮ ಹಿತಿ ಮಿತಿಯಲ್ಲಿ ಇದ್ದರೆ ಉತ್ತಮ ಎಲ್ಲರಿಗೂ ಅವರದ್ದೇ ಆದ ಗೌರವವಿರುತ್ತದೆ ಹಾಗಾಗಿ ಕಲಾವಿದರಿಗೆ ಇಂಥ ಹೀನ ಕೃತ್ಯ ಮಾಡದೇ ಇರಲಿ ಎಂಬುವುದೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.