Sunday, May 28, 2023
HomeEntertainmentಕಡಲ ತೀರದಲ್ಲಿ ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ ನಟಿ ಹರಿಪ್ರಿಯ ಹಾಗೂ ನಟ ವಸಿಷ್ಠ ಸಿಂಹ...

ಕಡಲ ತೀರದಲ್ಲಿ ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ ನಟಿ ಹರಿಪ್ರಿಯ ಹಾಗೂ ನಟ ವಸಿಷ್ಠ ಸಿಂಹ ಈ ಕ್ಯೂಟ್ ವಿಡಿಯೋ ನೋಡಿ.

ಹರಿಪ್ರಿಯಾ(Haripriya) ವಶಿಷ್ಠ ಸಿಂಹ(Vasista Simha)

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಕನ್ನಡದ ಹೆಸರಾಂತ ಕಲಾವಿದರುಗಳು. ಇತ್ತೀಚೆಗೆ ಹರಿಪ್ರಿಯಾ ಅವರು ಕನ್ನಡದ ಸ್ಟಾರ್ ನಟಿ ಪಟ್ಟದಲ್ಲಿದ್ದಾರೆ. ವಸಿಷ್ಟ ಸಿಂಹ ಅವರು ಸಹ ತಮ್ಮ ವಿಶೇಷ ಕಂಠ ಹಾಗೂ ಅಭಿನಯದಿಂದ ಖಳನಾಯಕನಾಗಿ ಮಲ್ಟಿ ಸ್ಟಾರ್ ಹೀರೋ ಆಗಿ ಕನ್ನಡ ಚಲನಚಿತ್ರ ರಂಗದಲ್ಲಿ ಬಹಳ ಬಿಝಿ ಆಗಿದ್ದಾರೆ. ಇವರಿಬ್ಬರು ಈ ವರ್ಷ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡು ಕರ್ನಾಟಕದ ಕಲಾಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಿದ್ದಾರೆ.

ಯಾರು ಸಹ ಇವರಿಬ್ಬರೂ ಮದುವೆ ಆಗುತ್ತಾರೆ ಎಂದು ಊಹಿಸಿಯೇ ಇರಲಿಲ್ಲ. ಇವರ ಎಂಗೇಜ್ಮೆಂಟ್ ಆಗುವ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರು ಒಟ್ಟೊಟ್ಟಿಗೆ ಓಡಾಡುತ್ತಿರುವ ವಿಡಿಯೋಗಳು ಒಟ್ಟೊಟ್ಟಿಗೆ ತೆಗೆಸಿಕೊಂಡಿರುವ ಫೋಟೋಗಳು ಎಲ್ಲವೂ ಸಹ ವೈರಲ್ ಆಗಿದ್ದವು, ಆಗ ಎಲ್ಲರೂ ಇದು ಯಾವುದು ಸಿನಿಮಾ ಚಿತ್ರೀಕರಣದ ಸಮಯ ಇರಬೇಕು ಅಥವಾ ಸಿನಿಮಾ ಪ್ರಚರದ ಸ್ಟಾಟರ್ಜಿ ಇರಬೇಕು ಎಂದೇ ಊಹಿಸಿದ್ದರು.

ಆದರೆ ದಿಢೀರ್ ಎಂದು ಧನುರ್ಮಾಸ ಆರಂಭವಾಗುವ ಕೆಲ ದಿನಗಳ ಮುಂದೆ ಹರಿಪ್ರಿಯ ಅವರ ಮನೆಯಲ್ಲಿಯೇ ಎಂಗೇಜ್ಮೆಂಟ್ ಮಾಡಿಕೊಂಡು ಅಧಿಕೃತವಾಗಿ ಇಬ್ಬರು ಮುಂದಿನ ವರ್ಷ ಹಸಮಣೆ ಏರುವುದನ್ನು ದೃಢಪಡಿಸಿದ್ದಾರೆ. ಅಂದಿನಿಂದ ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಾಗಿದೆ. ದಿನಕ್ಕೊಂದು ವಿಷಯವನ್ನು ವಿಶೇಷವಾಗಿ ಹಂಚಿಕೊಳ್ಳುತ್ತಿರುವ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಅವರು ತಮ್ಮಿಬ್ಬರದ ಲವ್ ಸ್ಟೋರಿ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.

ಹರಿಪ್ರಿಯಾ ಅವರು ತಮ್ಮ instagram ಖಾತೆಯಲ್ಲಿ ವಸಿಷ್ಠ ಸಿಂಹ ಅವರು ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ಮಾಡಿದ್ದ ಕ್ರಿಸ್ಟಲ್ ಎನ್ನುವ ನಾಯಿಮರಿ ಕುರಿತಾದ ವಿಡಿಯೋ ಶೇರ್ ಮಾಡಿ ಅದರಲ್ಲಿರುವ ಹಾರ್ಟ್ ಸಿಂಬಲ್ ಅನ್ನು ತೋರಿಸಿ ನಾಯಿ ಪುಟ್ಟ ಮರಿ ಆಗಿದ್ದಾಗ ಗಿಫ್ಟ್ ಕೊಟ್ಟಾಗ ಎಷ್ಟು ಚಿಕ್ಕದಾಗಿ ಹಾರ್ಟ್ ಸಿಂಬಲ್ ಇತ್ತು ಅದೇ ಪ್ರೀತಿಯ ಸೂಚನೆಯಾಗಿತ್ತು. ಅದೀಗ ಮಚ್ಚೆ ದೊಡ್ಡದಾಗಿ ಕಾಣುವಂತೆ ಪ್ರೀತಿಯು ದೊಡ್ಡದಾಗಿ ಬೆಳೆದಿದೆ ಎನ್ನುವ ಕುರಿತು ಭಾವನಾತ್ಮಕವಾಗಿ ಹೇಳಿಕೊಂಡಿದ್ದರು.

ಟ್ರೋಲಿಗರು ಸಹ ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಜೋಡಿ ಹಲವಾರು ಬಗೆಯ ಮೀಮ್ಸ್ ಮತ್ತು ಟ್ರೋಲ್ ಗಳನ್ನು ಪಾಸಿಟಿವ್ ರೀತಿಯಾಗಿ ಮಾಡುತ್ತಿದ್ದಾರೆ. ಇದೀಗ ಅವರ ಮತ್ತೊಂದು ವಿಡಿಯೋ ಹೊರ ಬಿದ್ದಿದೆ. ಈ ವಿಡಿಯೋ ದಲ್ಲಿ ಯಾವುದೋ ಬೀಚ್ ಅಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಏಕಾಂತದಲ್ಲಿ ಸಮಯ ಕಳೆದಿರುವ ಕ್ಷಣಗಳು ಸೆರೆ ಆಗಿವೆ.

ಅಂದರೆ ಇಬ್ಬರು ಸಹ ಕೈ ಕೈ ಹಿಡಿದು ಬೀಚ್ ಮೇಲೆ ಓಡಾಡುತ್ತಿರುವುದು ಒಬ್ಬರು ಕಣ್ಣನ್ನು ಒಬ್ಬರು ನೋಡುತ್ತಾ ಕಳೆದೋಗಿರುವುದು ಈ ರೀತಿ ಕ್ಷಣಗಳ ವಿಡಿಯೋ ಸೆರೆ ಹಾಕಿದೆ. ಇದು ಪ್ರಿ ವೆಡ್ಡಿಂಗ್ ಶೂಟ್ ಗಾಗಿ ಮಾಡಿಸಿರುವುದಾ ಅಥವಾ ಇವರೇ ನೆನಪಾಗಿ ಮಾಡಿಟ್ಟುಕೊಂಡಿರುವುದಾ ಗೊತ್ತಿಲ್ಲ. ಆದರೆ ಯಾವುದೇ ಸಿನಿಮಾದ ರೋಮ್ಯಾಂಟಿಕ್ ಗೀತೆಗೂ ಇಲ್ಲದಂತೆ ವಿಡಿಯೋ ಹೊರ ಬಿದ್ದಿದ್ದೆ , ಅದೇ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಅಲ್ಲಿ ಇದೆ.

ಈ ಹಾಡಿಗೆ ಹಲವರು ಹಲವು ಬಗೆಯ ಶೀರ್ಷಿಕೆ ಕೊಟ್ಟು ವೈರಲ್ ಕೂಡ ಮಾಡುತ್ತಿದ್ದಾರೆ. ಸಿಂಹಕ್ಕೆ ಕೂಡ ಲವ್ ಸಾಂಗ್ ಬರ್ತಾ ಇದೆ ಎಂದು ಕೆಲವರು ಬರೆದುಕೊಂಡಿದ್ದರೆ ಇನ್ನು ಅನೇಕ ಅಭಿಮಾನಿಗಳು ಸ್ಟೋರಿಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಇದೀಗ ಮದುವೆ ಆದ ಬಳಿಕ ಇವರಿಬ್ಬರು ಒಟ್ಟಿಗೆ ಹೀರೋ ಆಗಿ ಸಿನಿಮಾ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಗಲಿ ಎಂದು ಸಹ ಹಲವರು ಹೇಳುತ್ತಿದ್ದಾರೆ. ಈ ಮುದ್ದಾದ ವಿಡಿಯೋವನ್ನು ನೀವು ಸಹ ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.