Sunday, June 4, 2023
HomeEntertainmentನಾನು ಸೀಗರೇಟ್ ಸೇದೋದು ಅಭಿಮಾನಿಗಳು ನೋಡ್ಬಿಟ್ರೆ ಏನ್ ಮಾಡೋದು ಅಂತ ಅಣ್ಣಾವ್ರು ಎದುರುತ್ತಿದ್ರು. ಸತ್ಯ ಬಾಯ್ಬಿಟ್ಟ...

ನಾನು ಸೀಗರೇಟ್ ಸೇದೋದು ಅಭಿಮಾನಿಗಳು ನೋಡ್ಬಿಟ್ರೆ ಏನ್ ಮಾಡೋದು ಅಂತ ಅಣ್ಣಾವ್ರು ಎದುರುತ್ತಿದ್ರು. ಸತ್ಯ ಬಾಯ್ಬಿಟ್ಟ ಅಣ್ಣಾವ್ರ ಸಂಗಡಿಗ

ಕನ್ನಡದ ಹೆಸರಾಂತ ನಿರ್ಮಾಪಕ ಹಾಗೂ ಮಾಜಿ ಕನ್ನಡ ಚಲನಚಿತ್ರ ಮಂಡಳಿ ಅಧ್ಯಕ್ಷ ಹಾಗೂ ಮೂರು ಬಾರಿ ದಕ್ಷಿಣ ಚಲನಚಿತ್ರ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆಸಿಎನ್ ಚಂದ್ರು ಅವರು ಒಂದು ಖಾಸಗಿ ಯುಟ್ಯೂಬ್ ಚಾನೆಲ್ ಅಲ್ಲಿ ಅಣ್ಣಾವ್ರು ಹಾಗೂ ಅಣ್ಣಾವ್ರ ಜೊತೆಗಿದ್ದ ಒಡನಾಟ ಅನುಬಂಧದ ಬಗ್ಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಸಂದರ್ಶನದಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಹಾಗೂ ಅವರ ಕುಟುಂಬ ಅವರ ನಿತ್ಯ ಜೀವನ ಹೇಗಿರುತ್ತಿತ್ತು ಎಂಬಿತ್ಯಾದಿ ಹಲವು ವಿಷಯಗಳನ್ನು ಹೇಳಿದ್ದಾರೆ.

ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಇತರರಿಗೆ ತಿಳಿಯದ ಅನೇಕ ವಿಷಯಗಳನ್ನು ಇದರಲ್ಲಿ ಹೇಳಿದ್ದಾರೆ. ಯಾಕೆಂದರೆ ಕೆಸಿಎನ್ ಚಂದ್ರು ಅವರು ಡಾಕ್ಟರ್ ರಾಜಕುಮಾರ್ ಅವರ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದವರು. ತೀರ ಹತ್ತಿರದಿಂದ ಅವರನ್ನು ಬಲ್ಲ ಇವರು ಒಂದು ಹಳೆ ನೆನಪಿನೊಂದಿಗೆ ಅಣ್ಣಾವ್ರ ಸರಳತೆಯನ್ನು ಈ ರೀತಿ ತಿಳಿಸಿದ್ದಾರೆ.

ರಾಜ್ ಕುಮಾರ್ ಅವರು ಕನ್ನಡದ ಮೇರು ನಟ ಕುಲಕಂಠೀರವ ಅಭಿನಯದಲ್ಲಿ ಸರ್ವ ಶ್ರೇಷ್ಠ ಪರಿಪೂರ್ಣ ವ್ಯಕ್ತಿ. ಡಾಕ್ಟರ್ ರಾಜಕುಮಾರ್ ಅವರು ಮೊದಲು ಹೊಟ್ಟೆಪಾಡಿಗಾಗಿ ಬಣ್ಣ ಹಚ್ಚಲು ಶುರು ಮಾಡಿದವರು. ನಂತರ ವೃತ್ತಿಯನ್ನೇ ದೇವರಂತೆ ಪರಿಗಣಿಸಿ ನಟನೆಯನ್ನೇ ಜೀವಾಳ ಮಾಡಿಕೊಂಡರು. ಡಾ.ರಾಜ್‌ಕುಮಾರ್ ಅವರಿಗೆ ಡಾಕ್ಟರ್ ರಾಜಕುಮಾರ್ ಅವರೇ ಸಾಟಿ.

ಭಾರತ ಚಿತ್ರರಂಗದಲ್ಲಿ ಮಾತ್ರ ಅಲ್ಲದೆ ಇಡೀ ವಿಶ್ವದಲ್ಲೇ ಎಲ್ಲಾ ಪಾತ್ರಗಳಿಗೂ ಹೊಂದಬಲ್ಲ ಏಕೈಕ ನಟ ಎಂದರೆ ರಾಜಕುಮಾರ್ ಅವರು. ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ನಟಿಸದ ಪಾತ್ರವೇ ಇಲ್ಲ. ಈ ರೀತಿ ಕಲೆಯಲ್ಲಿ ಮೇರು ಪರ್ವತ ಆಗಿದ್ದ ಡಾಕ್ಟರ್ ರಾಜಕುಮಾರ್ ಅವರು ಸರಳತೆಯಲ್ಲಿ ಅದಕ್ಕೂ ಮಿಗಿಲಾಗಿದ್ದರು.

ಒಮ್ಮೆ ಕೆಸಿಎನ್ ಚಂದ್ರು ಅವರು ಪಾರ್ವತಮ್ಮ ಅವರ ಸಹೋದರಿಯ ಪತಿ ಆಗಿದ್ದ ಶೇಖರ್ ಎನ್ನುವ ನಿರ್ಮಾಪಕರನ್ನು ಕಾಣಲು ಹೋಗಿದ್ದರಂತೆ. ಪಾರ್ವತಮ್ಮ ಅವರು ಕೂಡ ಅಲ್ಲೇ ಸಿಕ್ಕಿ ಒಳಗೆ ಇದ್ದಾರೆ ಹೋಗಿ ಎಂದು ರೂಮಿನ ದಾರಿ ತೋರಿಸಿದ್ದರಂತೆ. ಅವರನ್ನು ಕಾಣಲು ಹೋಗುತ್ತಿದ್ದ ಕೆಸಿಎನ್ ಚಂದ್ರು ಅವರು ಹಾಲಿನಲ್ಲಿ ಯಾರೋ ಚಾಪೆ ದಿಂಬು ಹಾಕಿಕೊಂಡು ಮಲಗಿರುವುದನ್ನು ನೋಡಿ ಅವರನ್ನು ದಾಟಿಕೊಂಡೆ ಹೋಗಿಬಿಟ್ಟಿದ್ದರಂತೆ.

ನಂತರ ರೂಮ್ ನಿಂದ ಆಚೆ ಬಂದಾಗ ತಿಳಿಯಿತು ಅಲ್ಲಿ ಮಲಗಿರುವುದು ಬೇರೆ ಯಾರು ಅಲ್ಲ ಕರ್ನಾಟಕ ರತ್ನ ಅಣ್ಣಾವ್ರು ಎಂದು ತಕ್ಷಣ ಮನಸ್ಸಿನಲ್ಲಿ ಈ ವ್ಯಕ್ತಿ ಆಚೆ ಬಂದರೆ ಇವರನ್ನು ನೋಡಲು ಲಕ್ಷ ಜನ ಸೇರುತ್ತಾರೆ. ಇವರೇನು ಇಷ್ಟು ಸಲೀಸಾಗಿ ನೆಲದ ಮೇಲೆ ಚಾಪೆ ದಿಂಬು ಹಾಕಿಕೊಂಡು ರಂಗನಾಥನ ರೀತಿ ಮಲಗಿದ್ದಾರಲ್ಲ ಎಂದುಕೊಂಡು ಅವರ ಸರಳತೆಯ ಆಳ ತಿಳಿದು ಕೈಮುಗಿದು ನಿಂತು ಬಿಟ್ಟರಂತೆ.

ಅದೇ ರೀತಿ ಅಣ್ಣಾವ್ರು ಅಭಿಮಾನಿಗಳೆ ಆಗಲಿ ಯಾರೇ ಆಗಲಿ ಎದುರಿಗಿದ್ದಾಗ ಅಥವಾ ಜೊತೆಗೆ ಯಾರಾದರೂ ಇದ್ದಾಗ ಧೂಮಪಾನ ಮಾಡುತ್ತಾ ಇರಲಿಲ್ಲವಂತೆ. ಯಾಕೆಂದರೆ ಅಭಿಮಾನಿಗಳನ್ನು ಕಂಡರೆ ಅಷ್ಟು ಗೌರವ ಕೊಡುತ್ತಿದ್ದರಂತೆ. ನನ್ನನ್ನು ಅವರೆಲ್ಲರೂ ಆಸ್ಥಾನದಲ್ಲಿ ಇಟ್ಟಿದ್ದಾರೆ ಅವರು ನನ್ನನ್ನು ಆದರ್ಶವಾಗಿ ತೆಗೆದುಕೊಂಡಿದ್ದಾರೆ ಅವರ ಎದುರಿಗೆ ನಾನು ಈ ರೀತಿ ನಡೆದುಕೊಳ್ಳಬಾರದು ಎನ್ನುತ್ತಿದ್ದರಂತೆ.

ಕೊನೆ ಕೊನೆಗೆ ಅವರು ಧೂಮಪಾನ ಚಟವನ್ನೇ ತ್ಯಜಿಸಿಬಿಟ್ಟರಂತೆ. ಈ ರೀತಿ ಅವರು ಎಲ್ಲೇ ಸ್ಟೇ ಆದರೂ ಹೋಟೆಲ್ ರೂಮ್ ಹಾಗೂ ಊಟದ ರೇಟ್ ತಿಳಿದಾಗ ಅಷ್ಟು ದುಬಾರಿಯಾದ ಸ್ಥಳ ನನಗೆ ಬೇಡ ನಾನು ಎಲ್ಲರಂತೆ ಸಾಮಾನ್ಯ ಸ್ಥಳದಲ್ಲೇ ಇರುತ್ತೇನೆ ಎಂದು ಹೇಳಿ ತಕ್ಷಣವೇ ಖಾಲಿ ಮಾಡಿ ಬಿಡುತ್ತಿದ್ದರಂತೆ. ಈ ರೀತಿ ಅನೇಕ ಘಟನೆಗಳು ಇವೆ ಎನ್ನುವುದನ್ನು ಈ ಇಂಟರ್ವ್ಯೂ ಅಲ್ಲಿ ಕೆಸಿಎನ್ ಚಂದ್ರು ಅವರು ಹೇಳಿಕೊಂಡಿದ್ದಾರೆ.