Sunday, June 4, 2023
HomeEntertainmentನಟಿ ರಮ್ಯ ನಂತರ ದರ್ಶನ್ ವಿರುದ್ದ ಬ್ಯಾಟಿಂಗ್ ಬೀಸಿದ ದುನಿಯಾ ವಿಜಯ್, ನಿಮ್ಮ ಅಭಿಮಾನಿಗಳಿಗೆ ಬುದ್ಧಿ...

ನಟಿ ರಮ್ಯ ನಂತರ ದರ್ಶನ್ ವಿರುದ್ದ ಬ್ಯಾಟಿಂಗ್ ಬೀಸಿದ ದುನಿಯಾ ವಿಜಯ್, ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಆ ದೇವತ ಮನುಷ್ಯನ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ.

ದುನಿಯಾ ವಿಜಯ್ V/s ದರ್ಶನ್ ಫ್ಯಾನ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಕರಣ ಕಳೆದ ಒಂದು ವಾರದಿಂದಲೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಹೌದು ಹೊಸ ಪೇಟೆಯಲ್ಲಿ ದರ್ಶನ್ ಅವರ ಮೇಲೆ ಕಿಡಿಗೇಡಿ ಒಬ್ಬರು ಚಪ್ಪಲಿಯನ್ನು ಎಸೆಯುತ್ತಾರೆ. ಈ ಒಂದು ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಸಾಕಷ್ಟು ನಟ ನಟಿಯರು ದರ್ಶನ್ ಬೆಂಬಲವಾಗಿ ನಿಲ್ಲುತ್ತಾರೆ ದುನಿಯಾ ವಿಜಯ ಅವರು ಕೂಡ ಮೊದ ಮೊದಲು ದರ್ಶನ್ ಅವರಿಗೆ ಈ ರೀತಿ ಅವಮಾನ ಆಗಿದ್ದು ತಪ್ಪು ಯಾರೇ ಆಗಿದ್ದರೂ ಕೂಡ ಒಬ್ಬ ಕಲಾವಿದನಿಗೆ ಸಾರ್ವಜನಿಕ ವಲಯದಲ್ಲಿ ಈ ರೀತಿ ಚಪ್ಪಲಿ ಎಸೆಯ ಬಾರದಿತ್ತು ಇದು ನಿಜಕ್ಕೂ ಕೂಡ ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕೆ ಅಂತ ಹೇಳಿದ್ದರು.

ಆದರೆ ಇದೀಗ ನಟ ದುನಿಯಾ ವಿಜಯ ಅವರು ದರ್ಶನ್ ಅವರಿಗೆ ಮತ್ತೊಂದು ಮನವಿಯನ್ನು ಮಾಡಿಕೊಂಡಿದ್ದಾರೆ ಹೌದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರ ಚಪ್ಪಲಿ ಎಸೆತಕ್ಕೂ ಅಪ್ಪು ಅಭಿಮಾನಿಗಳಿಗೂ ಸಂಬಂಧವಿದೆ ಎಂದು ಕೆಲವು ಮೂಲಗಳು ಹೇಳುತ್ತಿದೆ. ಅಪ್ಪು ಅಭಿಮಾನಿಗಳು ಕಳೆದ ಒಂದು ವರ್ಷದಿಂದ ನಟ ದರ್ಶನ್ ಅವರನ್ನು ದ್ವೇಷ ಮಾಡುತ್ತಿದ್ದಾರೆ ಇದಕ್ಕೆ ಕಾರಣ ದರ್ಶನ್ ಅವರು ಕೊಟ್ಟಂತಹ ಸ್ಟೇಟ್ಮೆಂಟ್. ಈ ಸ್ಟೇಟ್ಮೆಂಟ್ ಇಂದ ಮನನೊಂದತಹ ಅಭಿಮಾನಿ ಒಬ್ಬರು ಈ ರೀತಿ ಮಾಡಿರಬಹುದು ಎಂದು ಕೆಲವರು ಹೇಳುತ್ತಿದ್ದಾರೆ.

ಆದರೆ ಯಾರೋ ಒಬ್ಬ ಮಾಡಿದ ತಪ್ಪಿನಿಂದಾಗಿ ಇದೀಗ ಅಪ್ಪು ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು ತಪ್ಪು ಹಾಗೂ ಅಪ್ಪು ಅವರ ಬಗ್ಗೆ ತಪ್ಪು ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ. ದರ್ಶನ್ ಅವರ ಮೇಲೆ ಚಪ್ಪಲಿ ಎಸೆದದ್ದು ನೋಡಿದಂತಹ ದರ್ಶನ್ ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೆಲವು ಸ್ಟೇಟ್ಮೆಂಟ್ ಮತ್ತು ಪೋಸ್ಟರ್ಗಳನ್ನು ಹಾಕುತ್ತಿದ್ದಾರೆ. ಇನ್ನು ಮುಂದೆ ರಾಜ ವಂಶದವರು ಅದೇಗೆ ಸಭೆ ಸಮಾರಂಭಗಳನ್ನು ಮಾಡುತ್ತಾರೋ ನಾವು ನೋಡುತ್ತೇವೆ. ನೀವು ಒಂದು ಚಪ್ಪಲಿಯನ್ನು ಎಸೆದಿದ್ದೀರಿ ನಾವು ನಿಮಗೆ ಎಣಿಸಲು ಸಾಧ್ಯವಾಗದಷ್ಟು ಚಪ್ಪಲಿಯನ್ನು ಎಚ್ಚಬೇಕಾಗುತ್ತದೆ ಎಂಬ ಪೋಸ್ಟರ್ ಗಳನ್ನು ಹಾಕುತ್ತಿದ್ದಾರೆ.

ಕೆಲವು ದರ್ಶನ ಅಭಿಮಾನಿಗಳಂತೂ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ ಇವನ್ನೆಲ್ಲವನ್ನು ಗಮನಿಸಿದಂತಹ ದುನಿಯಾ ವಿಜಯ ಅವರು ದರ್ಶನ್ ಅವರಿಗೆ ಮನವಿ ಮಾಡಿದ್ದಾರೆ. ದಯವಿಟ್ಟು ಈ ಫ್ಯಾನ್ ವಾರನ್ನು ಇಲ್ಲಿಗೆ ನಿಲ್ಲಿಸಿ ಇದು ನಿಮ್ಮಿಂದ ಸಾಧ್ಯ ಅಂತ ಹೇಳುತ್ತಿದ್ದಾರೆ ಅಷ್ಟಕ್ಕೂ ದುನಿಯಾ ವಿಜಯ್ ದರ್ಶನ್ ಅವರಿಗೆ ಹೇಳಿದ್ದವರು ಏನು ಎಂಬುದನ್ನು ನೋಡುವುದಾದರೆ.

“ಇವತ್ತು ಕನ್ನಡವಾಗಲಿ ಕನ್ನಡ ಚಿತ್ರರಂಗವಾಗಲಿ ಉತ್ತುಂಗ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಹಲವಾರು ಮಹಾನುಭಾವರು. ಅಂತಹವರ ಸಾಲಿನಲ್ಲಿ ಮಂಚೂಣಿಯಲ್ಲಿ ನಿಲ್ಲುವವರು ಅಂದ್ರೆ ನಮ್ಮ ಅಣ್ಣಾವ್ರು ಮತ್ತೆ ಅಣ್ಣಾವ್ರ ಕುಟುಂಬದವರು. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ವಿಧ್ಯಮಾನಗಳನ್ನು ಗಮನಿಸಿದರೆ ಒಬ್ಬನ ಅಚಾತುರ್ಯವನ್ನು ನೇರವಾಗಿ ಅಣ್ಣಾವ್ರ ಪುತ್ರ ಮತ್ತು ನಮ್ಮ ಕರುನಾಡಿನ ಹೆಮ್ಮೆಯ ಕುಡಿ ದಿವಂಗತ ಅಪ್ಪು ಅವರನ್ನು ಗುರಿಯಾಗಿಸುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಇಲ್ಲಿಗೇ ನಿಲ್ಲಿಸದೇ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಟ್ಟ ಭಾಷೆಯ ಪದಪ್ರಯೋಗಿಸುತ್ತಿದ್ದಾರೆ. ಇದಂತೂ ಯಾರೂ ಕ್ಷಮಿಸಲಾರದಂತಹ ಕೆಟ್ಟ ನಡೆ.

“ಒಂದಂತು ಸತ್ಯ ನಾವು ಮನುಷ್ಯರಾಗಿ ಎಷ್ಟೇ ಜನುಮವೆತ್ತಿದರೂ ಆ ದೇವತಾಮನುಷ್ಯನ ಬಗ್ಗೆಯಾಗಲಿ ಅವರ ಕುಟುಂಬದವರ ಬಗ್ಗೆಯಾಗಲಿ ಮಾತಾಡೋ ಯೋಗ್ಯತೇನೂ ಇಲ್ಲದವರು. ಇಂತಹ ಪರಿಸ್ಥಿತಿಯಲ್ಲಿ ಕಲಾವಿದರಾಗಿ ನಾವು ನಿಲ್ಲದೇ ಇದ್ದರೆ ಇದು ನಿಲ್ಲದೇ ಇನ್ನೊಂದು ಮಜಲನ್ನು ತಲುಪುವ ಅಪಾಯವಿದೆ ನಾನು ದರ್ಶನ್ ಅವರಲ್ಲಿ ಕೇಳಿಕೊಳ್ಳುವುದು ಒಂದೇ ಮಾತು ಅಂತಹ ಪರಿಸ್ಥಿತಿಯಲ್ಲೂ “ಪರ್ವಾಗಿಲ್ಲ ಬಿಡು ಚಿನ್ನ” ಎಂಬ ಸಹನೆಯ ಮಾತಾಡಿ ಹೃದಯವನ್ನೇ ಗೆದ್ದಿದ್ದೀರಿ ಇನ್ನೊಂದು ಮಾತು ನಿಮ್ಮನ್ನು ಇಷ್ಟಪಡುವ ಮತ್ತು ನಿಮ್ಮ ಮಾತನ್ನು ಎಂದೂ ದಾಟದ ನಿಮ್ಮ ಅಭಿಮಾನಿಗಳಿಗೆ ಹೇಳಿದರೆ ಎಲ್ಲವೂ ಸರಿ ಹೋಗುತ್ತದೆ. ದುನಿಯಾ ವಿಜಯ್ ಅವರು ದರ್ಶನ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ

ಇನ್ನು ದರ್ಶನ್ ಅವರಿಗೆ ಮನವಿ ಮಾಡಿಕೊಂಡ ವ್ಯಕ್ತಿ ಇವರೇ ಮೊದಲೇ ನಲ್ಲ ಮೊನ್ನೆಯಷ್ಟೇ ನಟಿ ರಮ್ಯಾ ಅವರು ಕೂಡ ನಂಬರ್ ಒನ್ ಸ್ಟಾರ್ ನಟ ಎಂಬ ಅಹಂಕಾರವನ್ನು ಬಿಟ್ಟು ದಯವಿಟ್ಟು ನಿಮ್ಮ ಫ್ಯಾನ್ಸ್ ಗಳಿಗೆ ಬುದ್ಧಿವಾದವನ್ನು ಹೇಳಿ, ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಹಾಕುವುದನ್ನು ತಡೆಯಿರಿ ಎಂದು ನಟಿ ರಮ್ಯಾ ಅವರು ಕೂಡ ಹೇಳಿಕೊಂಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವಂತಹ ಈ ಸ್ಟಾರ್ ವಾರ್ ಅನ್ನು ತಡೆಗಟ್ಟುವುದಕ್ಕೆ ದರ್ಶನ್ ಅವರಿಂದ ಮಾತ್ರ ಸಾಧ್ಯ. ಹಾಗಾಗಿ ನೀವೇ ನಿಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿ ಎಂದು ಎಲ್ಲಾ ನಟ ನಟಿಯರು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರದ ಬಗ್ಗೆ ದರ್ಶನ್ ಯಾವ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.