Sunday, May 28, 2023
HomeEntertainmentಬ್ಯಾನ್ ಭಯಕ್ಕೆ ಹೆದರಿ ಈಗೀಗ ಕನ್ನಡಿಗರಿಗೆ ಮತ್ತು ಕನ್ನಡ ನಟರಿಗೆ ಗೌರವ ಕೊಡುತ್ತಿರುವ ನಟಿ ರಶ್ಮಿಕಾ,...

ಬ್ಯಾನ್ ಭಯಕ್ಕೆ ಹೆದರಿ ಈಗೀಗ ಕನ್ನಡಿಗರಿಗೆ ಮತ್ತು ಕನ್ನಡ ನಟರಿಗೆ ಗೌರವ ಕೊಡುತ್ತಿರುವ ನಟಿ ರಶ್ಮಿಕಾ, ಅಪ್ಪು ಜೊತೆ ಅಭಿನಯಿಸಿದ ಅಂಜನಿಪುತ್ರ ಸಿನಿಮಾ ಗೆ 5 ವರ್ಷ ಎಂದು ಟ್ವೀಟ್ ಮಾಡಿದ್ದಾರೆ.

ಅಂಜನಿಪುತ್ರ

ರಶ್ಮಿಕಾ ಮಂದಣ್ಣ ಸದಾ ಕಾಲವೂ ಕೂಡ ಯಾವುದಾದರೂ ಒಂದು ಕಾಂಟ್ರವರ್ಸಿಗೆ ಒಳಗಾಗುತ್ತಿದ್ದ ನಟಿ ಪ್ರತಿಬಾರಿಯೂ ಕೂಡ ಕನ್ನಡಿಗರನ್ನು ಕೆಣಕುವ ಮೂಲಕ ಅತಿ ಹೆಚ್ಚು ಟ್ರೋಲ್ ಆಗುತ್ತಿದ್ದರು. ಆದರೆ ಇದೀಗ ರಶ್ಮಿಕ ಅವರಿಗೆ ಭಯ ಶುರುವಾಗಿದೆ ಹೌದು ಕಳೆದ ಒಂದು ತಿಂಗಳಿನಿಂದ ರಶ್ಮಿಕ ಅವರನ್ನು ಸಂಪೂರ್ಣವಾಗಿ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಅಭಿನಯ ಪ್ರಾರಂಭವಾಗಿತ್ತು. ಈ ಒಂದು ಪ್ರಕರಣ ಯಾವ ಮಟ್ಟಕ್ಕೆ ತಲುಪಿತು ಅಂದರೆ ಫಿಲಂ ಚೇಂಬರ್ ನಲ್ಲಿಯೂ ಕೂಡ ಇದರ ಬಗ್ಗೆ ಪ್ರಸ್ತಾಪನೆ ಏರ್ಪಟ್ಟಿತ್ತು.

ದಿನದಿಂದ ದಿನಕ್ಕೆ ಈ ಪ್ರಕರಣ ಹೆಚ್ಚಾಗುತ್ತಿದ್ದ ಹಾಗೆ ರಶ್ಮಿಕಾ ಅವರ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಭಯ ಪ್ರಾರಂಭವಾಗಿದ್ದು ಹಾಗಾಗಿ ಇದೀಗ ಅವರ ವರ್ತನೆಯನ್ನು ಬದಲಾಯಿಸಿಕೊಂಡಿದ್ದರೆ. ಮೊದಲೆಲ್ಲ ಕನ್ನಡ ನಟರಿಗೆ ಹಾಗೂ ಕನ್ನಡಿಗರಿಗೆ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆ ನೀಡದೆ ಇದ್ದಂತಹ ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ಅಪ್ಪು ಅವರನ್ನು ಸ್ಮರಿಸಿಕೊಂಡಿದ್ದಾರೆ. ಹೌದು ಅಪ್ಪು ಅವರು ವಿ.ಧಿ.ವ.ಶ.ರಾಗಿ ಒಂದು ವರ್ಷವಾದರೂ ಕೂಡ ಅವರ ಬಗೆಗೆ ಯಾವುದೇ ರೀತಿಯಾದಂತಹ ಪೋಸ್ಟರ್ ಹಾಕಿಕೊಂಡಿರಲಿಲ್ಲ.

ಗಂಧದಗುಡಿ ಸಿನಿಮಾ ಬಗ್ಗೆ ಆಗಲಿ, ಅಥವಾ ಅಪ್ಪು ಅವರ ಮೊದಲನೇ ವರ್ಷದ ಪುಣ್ಯಸ್ಮರಣೆಯ ಬಗ್ಗೆ ಆಗಲಿ, ಅಥವಾ ಅವರು ವಿ.ಧಿ.ವ.ಶ.ರಾಗಿದ್ದರ ಬಗ್ಗೆ ಆಗಲಿ ಎಲ್ಲಿಯೂ ಕೂಡ ಸಣ್ಣದೊಂದು ಪೋಸ್ಟ್ ಹಾಕಿಕೊಂಡಿರಲಿಲ್ಲ. ಆದರೆ ಇದೀಗ ಅಪ್ಪು ಅವರ ಜೊತೆ ಅಭಿನಯಿಸಿದಂತಹ ಅಂಜನಿಪುತ್ರ ಸಿನಿಮಾಗೆ ಐದು ವರ್ಷವಾಗಿದೆ ಎಂಬ ಪೋಸ್ಟರ್ ಮಾತ್ರ ಹಂಚಿಕೊಂಡಿದ್ದಾರೆ ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಆದರೆ ಇನ್ನೂ ಕೆಲವು ಅಭಿಮಾನಿಗಳು ಮಾತ್ರ ಇಷ್ಟು ದಿನ ಇಲ್ಲದ ಪ್ರೀತಿ ಇವತ್ತು ಅದೇಗೆ ಹರಿದು ಬಂತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಇದೆಲ್ಲವೂ ಗಿಮಿಕ್ ಬ್ಯಾನ್ ಆಗುತ್ತೇನೆ ಎಂಬ ಭಯಕೆ ಈಗ ಕನ್ನಡ ಸಿನಿಮಾದ ಬಗ್ಗೆ ಒಲವನ್ನು ತೋರುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅವರಿಗೆ ಬ್ಯಾನ್ ಬಗ್ಗೆ ಭಯ ಇಲ್ಲದೆ ಹೋಗಿದ್ದರೆ ಇಂದು ಅಪ್ಪು ಅವರನ್ನು ಸ್ಮರಿಸಿಕೊಳ್ಳುತ್ತಿರಲಿಲ್ಲ ಇವೆಲ್ಲವೂ ಕೂಡ ಮುಂದಿನ ಸಿನಿಮಾದ ಪ್ರಾಜೆಕ್ಟ್ ಗಾಗಿ ರಶ್ಮಿಕ ಮಾಡುತ್ತಿರುವ ನಾಟಕ ಅನ್ನುತ್ತಿದ್ದಾರೆ.

ಅದೇನೆ ಆಗಲಿ ಸದ್ಯಕ್ಕಾದರೂ ರಶ್ಮಿಕಾ ಅವರಿಗೆ ಬುದ್ಧಿ ಬಂತಲ್ಲ ಇನ್ನು ಮುಂದೆಯಾದರೂ ನಮ್ಮ ಕನ್ನಡಿಗರಿಗೆ ಮತ್ತು ಕನ್ನಡ ಸಿನಿಮಾದವರಿಗೆ ಗೌರವ ಕೊಟ್ಟು ತಾವು ನಡೆದು ಬಂದ ಹಾದಿಯನ್ನು ಮರೆಯದೆ ಇದ್ದರೆ ಸಾಕು ಅನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಅವರ ಬಗ್ಗೆ ಏನು ಬರೆದುಕೊಂಡಿದ್ದಾರೆ ಎಂಬುದನ್ನು ನೋಡುವುದಾದರೆ.

ಇಂದಿಗೆ ಅಂಜನಿಪುತ್ರ ಸಿನಿಮಾ ರಿಲೀಸ್ ಆಗಿ ಐದು ವರ್ಷವಾಗಿದೆ ಈ 5 ವರ್ಷ ನಾನು ಸಾಕಷ್ಟು ಕಲಿತಿದ್ದೇನೆ ಪುನೀತ್ ಸರ್ ಅವರ ಜೊತೆ ಕಳೆದ ಕ್ಷಣಗಳನ್ನು ನಾನು ಎಂದಿಗೂ ಕೂಡ ಸ್ಮರಿಸುತ್ತೇನೆ. ಅಪ್ಪು ಸರ್ ಹೃದಯವಂತರು ಅವರು ಸದಾ ಕಾಲ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ರಶ್ಮಿಕ ಮಂದಣ್ಣ ಅವರು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಅಂಜನಿಪುತ್ರ ಸಿನಿಮಾವನ್ನು ನಿರ್ಮಾಣ ಮಾಡಿದ ಹರ್ಷ ಮಾಸ್ಟರ್ ಗು ಕೂಡ ನಾನು ಧನ್ಯವಾದವನ್ನು ತಿಳಿಸುತ್ತೇನೆ ಎಂದು ರಶ್ಮಿಕ ಮದ್ದಣ್ಣ ಟ್ವೀಟ್ ಮಾಡಿದರೆ. ಸದ್ಯಕ್ಕೆ ರಶ್ಮಿಕ ಮಾಡಿರುವ ಈ ಕೆಲಸಕ್ಕೆ ಸಿಕ್ಕಾಪಟ್ಟೆ ಮೆಚ್ಚಿಗೆ ಲಭಿಸಿದೆ ಇನ್ನು ಮುಂದೆಯಾದರೂ ಕನ್ನಡಿಗರ ಕೋಪಕ್ಕೆ ಗುರಿಯಾಗದೆ ಇರಲಿ ಎಂಬುವುದೇ ನಮ್ಮ ಆಶಯ.