Friday, June 9, 2023
HomeEntertainmentಯಾರೋ ಮಾಡಿದ ತಪ್ಪನ್ನು ಅಪ್ಪು ಅಭಿಮಾನಿಗಳ ಮೇಲೆ ಹಾಕಿದ್ರೆ ಸುಳ್ಳು ಸತ್ಯವಾಗುವುದಿಲ್ಲ, ನನ್ನ ಚಿಕ್ಕಪ್ಪನ ಅಭಿಮಾನಿಗಳ...

ಯಾರೋ ಮಾಡಿದ ತಪ್ಪನ್ನು ಅಪ್ಪು ಅಭಿಮಾನಿಗಳ ಮೇಲೆ ಹಾಕಿದ್ರೆ ಸುಳ್ಳು ಸತ್ಯವಾಗುವುದಿಲ್ಲ, ನನ್ನ ಚಿಕ್ಕಪ್ಪನ ಅಭಿಮಾನಿಗಳ ಬಗ್ಗೆ ಮಾತನಾಡಿದ್ರೆ ಸುಮ್ಮನಗಲ್ಲ ಎಂದು ಗುಡುಗಿಡ ಯುವರಾಜ್.

ಅಪ್ಪು ಅಭಿಮಾನಿಗಳ ಪರ ನಿಂತ ಯುವರಾಜ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹೊಡೆದ ದೃಶ್ಯ ವೈರಲ್ ಆಗುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಇದನ್ನು ಖಂಡಿಸಿದರು. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗಕ್ಕೆ ಸೇರಿದ ಪ್ರತಿಯೊಬ್ಬರು ಕೂಡ ಈ ಒಂದು ಸಂಬಂಧಿಸಿದಂತೆ ಮಾತನಾಡಿದರು. ಅದರಲ್ಲಿಯೂ ಕೂಡ ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್, ಸುಮಲತಾ ಅಂಬರೀಶ್, ಶ್ರೀಮುರಳಿ, ವಿಜಯ ರಾಘವೇಂದ್ರ, ನಟಿ ರಚಿತಾ ರಾಮ್, ದುನಿಯಾ ವಿಜಯ್, ಚಿತ್ರರಂಗದ ಸಾಕಷ್ಟು ನಟ ನಟಿಯರು ಎಲ್ಲರೂ ಕೂಡ ದರ್ಶನ್ ಅವರ ಬೆನ್ನೆಲುಬಾಗಿ ನಿಂತರು.

ದರ್ಶನ್ ಅವರಿಗೆ ಈ ರೀತಿ ಅಪಮಾನ ಮಾಡಿದ್ದು ತಪ್ಪು ಎಂದು ಹೇಳಿದರು ಆದರೆ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಈ ರೀತಿ ಘಟನೆ ಆಗುವುದಕ್ಕೆ ಅಪ್ಪು ಅಭಿಮಾನಿಗಳೇ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರು ಹೊಸಪೇಟೆಗೂ ಬರುವ ಮುನ್ನವೇ ಕೆಲವು ಪ್ರಚೋದನಾತ್ಮಕ ಪೋಸ್ಟರ್ಗಳು ಹರಿದಾಡುತ್ತಿದ್ದವು. ಹೊಸಪೇಟೆ ಅಪ್ಪು ಅಡ್ಡ ಇಲ್ಲಿಗೆ ಬಂದು ನೀವು ಹಾಡನ್ನು ಹೇಗೆ ಬಿಡುಗಡೆ ಮಾಡುತ್ತಿರ ನಾವು ನೋಡೇ ಬಿಡುತ್ತೇವೆ ಎಂದು ಪೋಸ್ಟರ್ ಗಳು ಹಾಕಿದ್ದರು.

ಅಷ್ಟೇ ಅಲ್ಲದೆ ಕ್ರಾಂತಿ ಸಿನಿಮಾದ ಬ್ಯಾನರ್ ಗಳನ್ನು ಹರಿದು ಹಾಕಿ ರಾತ್ರೋರಾತ್ರಿ ಅಲ್ಲಿ ಅಪ್ಪು ಅವರ ಬ್ಯಾನರ್ ಗಳನ್ನು ಕೂಡ ಅಳವಡಿಸಿದ್ದರು. ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ದರ್ಶನ್ ಅವರಿಗೆ ಚಪ್ಪಲಿ ಎಸೆದ ವ್ಯಕ್ತಿಯು ಕೂಡ ಅಪ್ಪು ಅಭಿಮಾನಿ ಆಗಿರಬಹುದು ಎಂದು ಊಹಿಸಿದರು. ಏಕೆಂದರೆ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಎಂಬ ಹಾಡನ್ನು ರಿಲೀಸ್ ಮಾಡುವ ಸಮಯದಲ್ಲಿಯೂ ಕೂಡ ಕೆಲವೊಂದಷ್ಟು ಗುಂಪುಗಳು ಅಪ್ಪು ಅಪ್ಪು ಎಂದು ಕೂಗುತ್ತಿದ್ದರು ಅಷ್ಟೇ ಅಲ್ಲದೆ ಅಪ್ಪು ಅವರ ಭಾವಚಿತ್ರವನ್ನು ಹಿಡಿದು ಹಾರಾಡಿಸುತ್ತಿದ್ದರು.

ಇದಾದ ಕೆಲವೇ ಗಂಟೆಯಲ್ಲಿ ದರ್ಶನ್ ಅವರಿಗೆ ವ್ಯಕ್ತಿಯೋರ್ವ ಚಪ್ಪಲಿಯಿಂದ ಹೊಡೆಯುತ್ತಾನೆ ಇದೆಲ್ಲವನ್ನು ಗಮನಿಸಿದಂತಹ ಕೆಲವು ಸಿನಿ ಪ್ರೇಕ್ಷಕರು ಈ ಕೆಲಸ ಅಪ್ಪು ಅಭಿಮಾನಿಗಳದ್ದೇ ಇರಬಹುದು ಎಂದು ಹೇಳುತ್ತಿದ್ದಾರೆ. ಆದರೆ ಅಪ್ಪು ಅಭಿಮಾನಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ ನಾವು ಎಂದಿಗೂ ಕೂಡ ಇಂತಹ ಕೃತ್ಯಕ್ಕೆ ಕೈ ಹಾಕುವುದಿಲ್ಲ ನಾವು ನಮ್ಮ ನೆಚ್ಚಿನ ದೇವರನ್ನು ಆರಾಧಿಸುತ್ತೇವೆ, ಅವರ ದಾರಿಯನ್ನು ಅನುಸರಿಸುತ್ತೇವೆ, ಅವರ ಸನ್ಮಾರ್ಗದಲ್ಲಿ ನಡೆಯುತ್ತೇವೆ ಅಂತಹ ಒಳ್ಳೆಯ ವ್ಯಕ್ತಿಗೆ ಕೆಟ್ಟ ಹೆಸರು ನಾವು ತರುವುದಿಲ್ಲ ಅಂತ ಹೇಳಿದ್ದಾರೆ.

ಇಷ್ಟೆಲ್ಲ ಘಟನೆಗಳಾದರೂ ಕೂಡ ದೊಡ್ಮನೆ ಅವರು ಮಾತ್ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ಕೂಡ ಮಾತನಾಡಿರಲಿಲ್ಲ ಇದೆಲ್ಲವನ್ನು ನೋಡಿದಂತಹ ಕೆಲವು ಸಿನಿ ರಸಿಕರು ಈ ಕೆಲಸ ಅಪ್ಪು ಅಭಿಮಾನಿಯೇ ಮಾಡಿರಬಹುದು ಎಂದುಕೊಂಡಿದ್ದರು. ಆದರೆ ಇದೀಗ ಅದರ ವಿರುದ್ಧ ಯುವರಾಜ್ ಕುಮಾರ್ ಅವರು ಮಾತನಾಡಿದ್ದರೆ ಹೌದು ಸುದೀರ್ಘ ಪತ್ರ ಬರೆಯುವುದರ ಮೂಲಕ ಅಪ್ಪು ಅಭಿಮಾನಿಗಳಿಗೆ ಬೆಂಬಲವನ್ನು ಸೂಚಿಸಿದ್ದಾರೆ ಹಾಗೂ ತಪ್ಪಾಗಿ ಅರ್ಥ ಮಾಡಿಕೊಂಡಿರುವವರಿಗೂ ಕೂಡ ಸ್ಪಷ್ಟನೆ ನೀಡಿದ್ದಾರೆ ಯುವರಾಜ್ ಕುಮಾರ್ ಹೇಳಿದ್ದಾದರೂ ಏನು ಎಂಬುದು ನೋಡುವುದಾದರೆ.

“ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಲು ನಾನು ತುಂಬ ಚಿಕ್ಕವನು. ಆದ್ರೆ, ತುಂಬ ಹೆಮ್ಮೆಯಿಂದ ಒಂದು ವಿಷಯ ಹೇಳೇಕಂದ್ರೆ.. ನಮ್ಮ ಕುಟುಂಬದ ಅಭಿಮಾನಿಗಳು ನಮ್ಮ ತಾತನವರ ಕಾಲದಿಂದ, ಇವತ್ತಿನವರಿಗೂ ಕನ್ನಡ ಚಿತ್ರರಂಗದ ಪ್ರತಿ ಕಲಾವಿದರಿಗೂ ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸಭ್ಯತೆ ಮತ್ತು ಘನತೆಯಿಂದಲೇ ನಡೆದುಕೊಂಡಿದ್ದಾರೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ, ಪ್ರೀತಿ ವಿಶ್ವಾಸವನ್ನು ಹಂಚುವ ಸಂಸ್ಕೃತಿಯುಳ್ಳ ಅಭಿಮಾನಿಗಳೇ ದೇವರು.

ಆದರೆ, ಗೌರವ ಯಾವಾಗಲೂ ಪರಸ್ಪರ ಅಲ್ವಾ? ಅಪ್ಪು ಚಿಕ್ಕಪ್ಪನ ನಡವಳಿಕೆ, ಸಾಮಾಜಿಕ ಪ್ರಜ್ಞೆ, ಮಹಿಳೆಯರನ್ನು ಗೌರವಿಸುವುದು, ಎಲ್ಲರನ್ನೂ ಪ್ರೀತಿಸುವ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ಚೆನ್ನಾಗಿಯೇ ತಿಳಿದಿದೆ, ಅವರ ವ್ಯಕ್ತಿತ್ವ ಎಂದೆಂದಿಗೂ ಎಲ್ಲರಿಗೂ ಮಾದರಿಯಾಗಿ ಇರುತ್ತದೆ . ಅವರ ಬಗ್ಗೆ ಅಗೌರವದಿಂದ ಅವಹೇಳನಕಾರಿಯಾಗಿ ಮಾತನಾಡಿ ಅವರ ಅಭಿಮಾನಿಗಳನ್ನು ಕೆಣಕಿದರೆ, ಅವರ ಭಾವನೆಗಳನ್ನು ನೋಯಿಸಿದರೆ, ಅಭಿಮಾನಿಗಳು ನಿರ್ದಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸುವುದು ‘ಬಹಿರಂಗವಾಗಿಯೇ’ ವಿನಃ ನಡೆಯುವ ಪ್ರತಿಯೊಂದು ಘಟನೆಗೂ ಅವರೇ ಕಾರಣಕರ್ತರು ಆಗೋದಿಲ್ಲ.

ನಡೆದಿರುವ ಕೃತ್ಯ ಖಂಡನೀಯ. ಯಾರೋ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದರಿಂದ “ಸುಳ್ಳು ಸತ್ಯವಾಗುವುದಿಲ್ಲ”. ಪೊಲೀಸ್ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಖಂಡಿತ ಆಗುತ್ತದೆ. ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ ಕಾಣುವ ಬುದ್ಧಿ ನಮ್ಮದಾಗಿರಲಿ. ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರವೇ, ಅವರ ಧ್ವನಿ ನಮ್ಮೆಲ್ಲರ ಶಕ್ತಿ. ಗುರುರಾಯರ ಆಶೀರ್ವಾದ ಎಲ್ಲರ ಮೇಲೆ ಸದಾ ಸಂಪೂರ್ಣವಾಗಿ ಇರಲಿ ಜೈ ಹಿಂದ್ ಜೈ ಕರ್ನಾಟಕ ಮಾತೆ – ಯುವ ರಾಜ್‌ಕುಮಾರ್ ಬರೆದುಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.