ಇ- ಶ್ರಮ್ ಎನ್ನುವ ಅಫಿಷಿಯಲ್ ವೆಬ್ಸೈಟ್ ಗೆ ಭೇಟಿ ಕೊಟ್ಟರೆ ರಿಜಿಸ್ಟರ್ ಇ-ಶ್ರಮ್ ಎಂದು ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಯಾರು ಈ ಇ-ಶ್ರಮ್ ಕಾರ್ಡ್ ಮಾಡಿಸಲಾಗುವುದಿಲ್ಲ ಎನ್ನುವ ಮಾಹಿತಿ ಅದರಲ್ಲೇ ಕೊಟ್ಟಿರುತ್ತಾರೆ. ಅದರಲ್ಲಿ ಎರಡು ರೀತಿಯ ಆಪ್ಷನ್ಗಳಿರುವುದನ್ನು ಕೂಡ ನಾವು ಕಾಣುತ್ತೇವೆ. EPFO ಅಕೌಂಟ್ ಹಾಗೂ ESIC ಅಕೌಂಟ್ ಹೊಂದಿರುವವರಿಗೆ ಇ-ಶ್ರಮ್ ಕಾರ್ಡ್ ಮಾಡಿಸಲು ಆಗುವುದಿಲ್ಲ.
ಯಾಕೆಂದರೆ ಈ ಸೌಲಭ್ಯವನ್ನು ಸಂಘಟಿತ ವಲಯದಲ್ಲಿರುವ ಉದ್ಯೋಗಿಗಳು ಹೊಂದಿರುತ್ತಾರೆ. ಇ-ಶ್ರಮ್ ಕಾರ್ಡ್ ಯೋಜನೆ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರುಗಳಿಗೆ ಇರುವ ಕಾರಣದಿಂದ EPFO ಮತ್ತು ESIC ಸೌಲಭ್ಯ ಪಡೆದವರಿಗೆ ಇದು ಸಾಧ್ಯವಾಗುವುದಿಲ್ಲ. ಮತ್ತು ಆದಾಯ ತೆರಿಗೆ ಪಾವತಿ ಮಾಡುವವರೂ ಸಹ ಈ ಕಾರ್ಡ್ ಪಡೆಯಲು ಸಾಧ್ಯವಾಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಹ ಈ ಇ-ಶ್ರಮ್ ಮಾಡಿಸುವುದನ್ನು ನಾವು ನೋಡಿದ್ದೇವೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಈ ಇ-ಶ್ರಮ್ ಕಾರ್ಡ್ ಮಾಡಿಸಬಾರದು. ಈ ಶ್ರಮ ಕಾರ್ಡನ್ನು ಯಾರೆಲ್ಲ ಮಾಡಿಸಬಹುದು ಎಂದು ನೋಡುವುದಾದರೆ EPFO ಮತ್ತು ESIC ಸೌಲಭ್ಯ ಹೊಂದಿರದ ಸಂಘಟಿತ ವಲಯದ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರು.
ಅಂದರೆ ಬೀದಿ ಬಳಿ ವ್ಯಾಪಾರಿಗಳು, ಸಣ್ಣ ಕಿರಾಣಿ ಅಂಗಡಿಯವರು, ತಳ್ಳುಗಾಡಿ ವ್ಯಾಪಾರಿಗಳು, ಕಾಫಿ ಟೀ ವ್ಯಾಪಾರ ಮಾಡುವವರು, ದಿನಗೂಲಿ ಮಾಡುವವರು, ಮನೆ ಕೆಲಸ ಮಾಡುವವರು, ಸಣ್ಣ ಹೋಟೆಲ್ ನಡೆಸುವವರು ಸಣ್ಣ ಕಿರಾಣಿ ಅಂಗಡಿಯವರು ಹಾಗೂ ರೈತರುಗಳು ಸೇರಿದಂತೆ ಈ ರೀತಿ ದುಡಿಯುವ ವರ್ಗದ ಎಲ್ಲಾ ಕಾರ್ಮಿಕರು ಸಹ ಇ-ಶ್ರಮ್ ಕಾರ್ಡ್ ಮಾಡಿಸಬಹುದು.
ಇ-ಶ್ರಮ್ ಕಾರ್ಡ್ ಮಾಡಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನೋಡುವುದಾದರೆ ಎಲ್ಲರಿಗೂ ತಿಳಿದಿರುವಂತೆ ಎರಡು ವರ್ಷಗಳ ಹಿಂದೆ ದೇಶವನ್ನು ಕರೋನ ಮಹಾಮಾರಿ ಕಾಡಿತ್ತು. ಎರಡು ಲಾಕ್ಡೌನ್ ಆದ ಸಂದರ್ಭದಲ್ಲಿ ಬಡವರು ಬಹಳ ಕಷ್ಟ ಪಟ್ಟಿದ್ದರು. ಆ ಸಮಯದಲ್ಲಿ ಸರ್ಕಾರ ಬಡವರಿಗಾಗಿ ಸಹಾಯಧನವನ್ನು ನೀಡುತ್ತಿತ್ತು.
ಆಗ ದುಡಿಯುವ ಕಾರ್ಮಿಕ ವರ್ಗ ಕೂಡ ಕೆಲಸ ಕಳೆದುಕೊಂಡಿತ್ತು ಅವರನ್ನು ಗುರುತಿಸಿ ಸಹಾಯಧನ ನೀಡಲು ನಿರ್ಧರಿಸಿದ ಸರ್ಕಾರವು ಇ- ಶ್ರಮ್ ಕಾರ್ಡ್ ಹೊಂದಿದವರ ಖಾತೆಗೆ 3,000 ರೂಗಳ ಸಹಾಯಧನವನ್ನು ಎರಡು ಲಾಕ್ಡೌನ್ ವೇಳೆ ನೀಡಿತ್ತು. ಸರ್ಕಾರಕ್ಕೆ ಬಡವರ ಹಾಗೂ ಬಡ ಕಾರ್ಮಿಕರ ಅಂಕಿ ಅಂಶ ಸರಿಯಾಗಿ ಸಿಗಲಿ ಎನ್ನುವ ಕಾರಣಕ್ಕಾಗಿ ಇ-ಶ್ರಮ್ ಕಾರ್ಡ್ ಮೂಲಕ ಕಾರ್ಮಿಕರನ್ನು ನೋಂದಾಯಿಸಲಾಗುತ್ತದೆ.
ಸರ್ಕಾರದಿಂದ ಅವರಿಗೆ ಕಷ್ಟದ ಕಾಲದಲ್ಲಿ ಸಹಾಯ ಮಾಡಲಾಗುತ್ತದೆ. ಸರ್ಕಾರವು ಕಾರ್ಮಿಕರಿಗಾಗಿ ತರುವ ಯೋಜನೆಗಳ ಫಲಾನುಭವಿಗಳಾಗಲು ಈ ಕಾರ್ಡ್ ಬೇಕು. ಇ-ಶ್ರಮ್ ಕಾರ್ಡ್ ಹೊಂದಿರುವವರಿಗೆ ಹೊಸದಾಗಿ ಎರಡು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅದೇನೆಂದರೆ, ಪ್ರಧಾನ ಮಂತ್ರಿ ಮನ್ ಧನ್ ಯೋಜನೆ. ಈ ಯೋಜನೆ ಮೂಲಕ 60 ವರ್ಷಗಳಾದ ಬಳಿಕ ನೀವು 3,000 ದವರೆಗೆ ಪೆನ್ಷನ್ ಪಡೆಯಬಹುದು.
ಮನಧನ್ ಡಾಟ್ ವೆಬ್ ಸೈಟ್ ಗೆ ಭೇಟಿ ಕೊಡುವುದರಿಂದ ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿರಿ ಹಾಗೂ ಯೋಜನೆಯನ್ನು ಕೂಡ ಖರೀದಿಸಬಹುದು. ಜೀವನ ಜ್ಯೋತಿ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾಭೀಮ ಯೋಜನೆಯನ್ನು ಸಹ ಇಯ-ಶ್ರಮ್ ಕಾರ್ಡ್ ಹೊಂದಿರುವಂತಹ ಕಾರ್ಮಿಕರುಗಳು ಮಾಡಿಸಬಹುದು. ಈ ಎಲ್ಲ ಯೋಜನೆಗಳ ಪೂರ್ತಿ ವಿವರ ಮತ್ತು ಅದರಿಂದ ಸಿಗುವ ಬೆನಿಫಿಟ್ ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.