ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳ ಮುಟ್ಟು, ಗರ್ಭಿಣಿಯಾದ ಸಮಯ ಹಾಗೂ ಬಾಣಂತನ ಬಹಳ ಸೂಕ್ಷ್ಮವಾದ ದಿನಗಳು. ಆ ಸಮಯದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅವರ ದೇಹದಲ್ಲಿ ಹಲವಾರು ವ್ಯತ್ಯಾಸಗಳು ಆಗುತ್ತಿರುತ್ತವೆ. ಈ ಸಮಯದಲ್ಲಿ ಕೆಲವು ಮನೆಮದ್ದುಗಳ ಮೂಲಕ ಅವರ ಆರೋಗ್ಯದ ವ್ಯತ್ಯಾಸಗಳನ್ನು ಸರಿಪಡಿಸಬಹುದು ಅದಕ್ಕೆ ಉಪಯುಕ್ತವಾಗುವ ಟಿಪ್ ಗಳು ಹೀಗಿವೆ…
* ಮುಟ್ಟಿನ ದಿನಗಳಲ್ಲಿ ದಿನಕ್ಕೆ ಮೂರು ಬಾರಿ ನಿಂಬೆಹಣ್ಣಿನ ರಸ ಸೇವಿಸಿದರೆ ಹೆಚ್ಚು ಋತುಸ್ತ್ರಾವವಾಗುವುದಿಲ್ಲ.
* ಗರ್ಭಿಣಿ ಹೆಂಗಸರು ಅತಿ ಹೆಚ್ಚು ಬಾಳೆಹಣ್ಣನ್ನು ಸೇವಿಸಿದರೆ ಒಳ್ಳೆಯದು ಇದರಿಂದ ರಕ್ತಪುಷ್ಟಿಯಾಗುತ್ತದೆ ಹಾಗೂ ಹೆರಿಗೆ ಸರಾಗವಾಗಿ ಆಗುತ್ತದೆ.
* ಗರ್ಭಿಣಿ ಸ್ತ್ರೀಯರಿಗೆ ಬರುವ ಅನೇಕ ಸಮಸ್ಯೆಗಳಲ್ಲಿ ಉರಿಮೂತ್ರ ಸಮಸ್ಯೆ ಕೂಡ ಒಂದು. ಬಾರ್ಲಿ ನೀರು ಹಾಗೂ ಎಳನೀರನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಇದು ಪರಿಹಾರವಾಗುತ್ತದೆ.
* ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಬೆನ್ನಿಗೆ ಚೆನ್ನಾಗಿ ಮಸಾಜ್ ಮಾಡಿ ಬಿಸಿನೀರು ಸ್ನಾನ ಮಾಡಿದರೆ ಬೆನ್ನು ನೋವು ಗುಣವಾಗುತ್ತದೆ.
* ಕಿತ್ತಳೆ ಹಣ್ಣಿನ ರಸವನ್ನು ಗರ್ಭಿಣಿಯರು ಸೇವಿಸುವುದರಿಂದ ಹೆರಿಗೆ ಸರಾಗವಾಗಿ ಆಗುತ್ತದೆ.
* ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ದಂಟಿನ ಸೊಪ್ಪಿನ ಆಹಾರ ಪದಾರ್ಥಗಳನ್ನು ಸೇವಿಸಿ ಇದರಿಂದ ಸಮಸ್ಯೆ ಪರಿಹಾರವಾಗುತ್ತದೆ.
* ಹಾಲು ತುಂಬಿದ ರಾಗಿ ತೆನೆಗಳನ್ನು ಬಿಸಿ ಮಾಡಿ ಉಜ್ಜಿ ಕಾಳುಗಳನ್ನು ಉದುರಿಸಿ ಕೊಬ್ಬರಿ ಹಾಗೂ ಬೆಲ್ಲದ ಜೊತೆ ಮಿಕ್ಸ್ ಮಾಡಿ ಸೇವಿಸುತ್ತಾ ಬಂದರೆ ಬಾಣಂತಿಯರಿಗೆ ಎದೆ ಹಾಲು ಹೆಚ್ಚುತ್ತದೆ.
* ಅವಿವಾಹಿತ ಹೆಣ್ಣು ಮಕ್ಕಳಿಗೆ ಹೆಚ್ಚು ಹೊಟ್ಟೆ ನೋವು ಮುಟ್ಟಿನ ಸಮಯದಲ್ಲಿ ಬರುತ್ತಿದ್ದರೆ ಕರಿ ಎಳ್ಳಿನ ಪುಡಿಯನ್ನು ಬಿಸಿ ನೀರಿನ ಜೊತೆ ಮಿಕ್ಸ್ ಮಾಡಿ ಕುಡಿಯಬೇಕು.
* ಹೆರಿಗೆ ನಂತರ ಸಬ್ಬಸಿಗೆ ಸೊಪ್ಪನ್ನು ಹೆಚ್ಚು ಸೇವಿಸುತ್ತಿದ್ದರೆ ಎದೆ ಹಾಲು ಉತ್ಪತ್ತಿ ಆಗುತ್ತದೆ.
* ಹಾಲು, ಜೇನುತುಪ್ಪ ಮತ್ತು ಪರಂಗಿ ಹಣ್ಣನ್ನು ಸೇವಿಸಿದರೆ ನರಗಳ ದುರ್ಬಲತೆ ಹೋಗುತ್ತದೆ. ಗರ್ಭಿಣಿಯರಿಗೆ ಇದು ಅತ್ಯುತ್ತಮ ಆಹಾರ.
* ಹುರುಳಿಕಾಳು ಮೊಳಕೆ ಕಟ್ಟಿ ಸಾರು ಮಾಡಿ ಕೊಡುವುದರಿಂದ ಬಾಣಂತಿಯರಿಗೆ ಗರ್ಭಾಶಯದ ನೋವು ಶಮನವಾಗುತ್ತದೆ.
* ಮುಟ್ಟಿನ ನಂತರ ಗರ್ಭಾಶಯದಲ್ಲಿ ವಿಪರೀತ ನೋವು ಕಾಣಿಸಿಕೊಂಡರೆ, ಬೆಳ್ಳುಳ್ಳಿಯನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಆ ನೀರನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿದರೆ ನೋವು ಶಮನವಾಗುತ್ತದೆ.
* ಒಂದು ಟೀ ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನುಣ್ಣಗೆ ಅರೆದು ಒಂದು ಬಟ್ಟಲು ಅಕ್ಕಿ ತೊಳೆದ ನೀರಿನಲ್ಲಿ ಕದಡಿ ಕಲ್ಲುಸಕ್ಕರೆ ಬೆರೆಸಿ ಸೇರಿಸುವುದರಿಂದ ಗರ್ಭಿಣಿಯರಿಗೆ ವಾಂತಿ ಕಡಿಮೆ ಆಗುತ್ತದೆ. ದಿನದಲ್ಲಿ ಎರಡರಿಂದ ಮೂರು ಬಾರಿ ಈ ನೀರನ್ನು ಸೇವಿಸಬೇಕು.
* ಮುಟ್ಟಿನ ನಂತರ ಹೊಟ್ಟೆ ನೋವಿದ್ದರೆ ಹಸಿ ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರು ಆರಿದ ಮೇಲೆ ಅದಕ್ಕೆ ಕಲ್ಲು ಸಕ್ಕರೆ ಅಥವಾ ಸಕ್ಕರೆ ಬೆರೆಸಿ ಪ್ರತಿ ಬಾರಿ ಊಟ ಆದನಂತರ ಮೂರು ಹೊತ್ತು ಕೂಡ ಕುಡಿಯಬೇಕು ಆಗ ಹೊಟ್ಟೆ ನೋವು ಕಡಿಮೆ ಆಗುತ್ತದೆ.
* ಹೊಟ್ಟೆ ನೋವಿಗೆ ಎಳ್ಳಿನ ಪುಡಿ ಸೇವಿಸುವುದು ಒಳ್ಳೆಯದು ಹಾಗೆ ಕೆಲವರಿಗೆ ಈ ಸಮಯದಲ್ಲಿ ಸೊಂಟ ನೋವು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ ಅವರು ಕೂಡ ಎಳ್ಳನ್ನು ನೀರಿನಲ್ಲಿ ಬಿಸಿ ಮಾಡಿ ಆ ನಿರಿನಿಂದ ಮಸಾಜ್ ಮಾಡಿಸಿಕೊಳ್ಳಬೇಕು.
* ಆ’ತಂ’ಕ, ಭ’ಯ ಇತ್ಯಾದಿ ಕಾರಣಗಳಿಂದ ಮುಟ್ಟು ನಿಂತು ಹೋಗಿದ್ದರೆ ಅಥವಾ ಅಸಹಜವಾಗಿದ್ದರೆ ಪರಂಗಿ ಹಣ್ಣಿನ ಸೇವನೆ ಉತ್ತಮ, ಇದು ಗರ್ಭಕೋಶವನ್ನು ಸಂಕೋಚನಗೊಳ್ಳುವಂತೆ ಮಾಡಿ ಮುಟ್ಟಿನ ಹರಿವು ಸರಿಯಾಗಿ ಆಗಲು ಸಹಾಯ ಮಾಡುತ್ತದೆ.
* ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬೆಚ್ಚಗಾದ ಮೇಲೆ ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಮುಟ್ಟಿನ ಸಮಯದಲ್ಲಿ ಆಗುವ ಅಧಿಕ ರಕ್ತಸ್ರಾವ ನಿಯಂತ್ರಣಕ್ಕೆ ಬರುತ್ತದೆ.