ಗೃಹಿಣಿಯರು ಮನೆಯಲ್ಲೇ ಇದ್ದರೂ ಅವರ ಕೆಲಸ ಮುಗಿಯದಷ್ಟು ಇರುತ್ತದೆ. ಅಡುಗೆ, ಕ್ಲೀನಿಂಗ್, ಶಾಪಿಂಗ್ ಇತ್ಯಾದಿ ಇತ್ಯಾದಿ ಜವಾಬ್ದಾರಿಗಳೆಲ್ಲ ಅವರದ್ದೇ ಆಗಿರುತ್ತದೆ. ಈ ಒತ್ತಡದಲ್ಲಿ ಅವರು ಕೆಲವು ಹೆಚ್ಚು ಕಡಿಮೆ ಮಾಡುವುದು ಉಂಟು. ಅವರ ಟೆನ್ಶನ್ ಕಡಿಮೆ ಮಾಡುವ ಸಲುವಾಗಿ ಮನೆಗೆ ಸಂಬಂಧಿಸಿದಂತೆ ಅವರಿಗೆ ಉಪಯುಕ್ತವಾಗುವ ಕೆಲವು ಟಿಪ್ಸ್ ಗಳನ್ನು ಹೇಳುತ್ತಿದ್ದೇವೆ.
* ಒಂದು ಚಮಚ ಎಣ್ಣೆಯಲ್ಲಿ ಕಡಲೆಕಾಯಿ ಬೀಜವನ್ನು ಹುರಿದರೆ ಸಿಪ್ಪೆ ಬೇಗ ಬಿಡುತ್ತದೆ ಮತ್ತು ಸೀದು ಹೋಗುವುದಿಲ್ಲ.
* ತಕ್ಷಣ ಅವಲಕ್ಕಿಯನ್ನು ಒಗ್ಗರಣೆ ಮಾಡಬೇಕಾದರೆ ಬೇಗ ಅವಲಕ್ಕಿ ನೆನೆಯಬೇಕು ಎಂದರೆ ಬೆಚ್ಚಗಿನ ನೀರಿನಲ್ಲಿ ತೊಳೆದು ನೆನೆ ಹಾಕಬೇಕು, ಆಗ ಬೇಗ ಅವಲಕ್ಕಿ ಮೆತ್ತಗಾಗುತ್ತದೆ.
* ಈರುಳ್ಳಿ ಸಿಪ್ಪೆಯನ್ನು ಸುಲಿಯಬೇಕಾದಾಗ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಇದ್ದರೆ ಈ ಕೆಲಸವನ್ನು ಬೇಗ ಮುಗಿಸಲು ಈರುಳ್ಳಿಯ ಮಧ್ಯದಲ್ಲಿ ರಂಧ್ರವನ್ನು ಮಾಡಿ ಸ್ವಲ್ಪ ಬೇಯಿಸಿ, ಅವುಗಳು ಚೂರಾಗದೇ ಇಡಿಯಾಗಿ ಉಳಿಯುತ್ತವೆ.
* ಒಗ್ಗರಣೆ ಹಾಕುವಾಗ ಸಾಸಿವೆ ಹೆಚ್ಚು ಸೀದು ಹೋಗುತ್ತದೆ ಅಥವಾ ಸಿಡಿದು ಅಕ್ಕಪಕ್ಕ ಹರಡಿ ಬಿಡುತ್ತದೆ. ಇದನ್ನು ತಪ್ಪಿಸಲು ಎಣ್ಣೆಯನ್ನು ಬಿಸಿ ಮಾಡಲು ಇಡಿ ಅದು ಬಿಸಿಯಾದ ಬಳಿಕ ಕೆಳಗಡೆಗೆ ಇಟ್ಟುಕೊಂಡು ಸಾಸಿವೆ ಹಾಕಿ ಸಿಡಿದ ಮೇಲೆ ಮತ್ತೆ ಒಲೆಯ ಮೇಲೆ ಇಡಿ.
* ಯಾವುದೇ ಅಡುಗೆಗೆ ಉಪ್ಪು ಹಾಕಲು ಮರೆತಿದ್ದರೆ ಪುಡಿ ಉಪ್ಪನ್ನು ಸ್ವಲ್ಪ ನೀರಿಗೆ ಹಾಕಿ ಕರಗಿಸಿ ನಂತರ ಆಹಾರಕ್ಕೆ ಹಾಕಿ ಮಿಕ್ಸ್ ಮಾಡಿ ಇದರಿಂದ ಎಲ್ಲಾ ಕಡೆ ಉಪ್ಪು ಒಂದೇ ರೀತಿ ಹರಡುತ್ತದೆ
* ಯಾವುದಾದರೂ ಅಡುಗೆ ಹೆಚ್ಚು ಹುಳಿ ಆಗಿದ್ದರೆ ಅದನ್ನು ಬ್ಯಾಲೆನ್ಸ್ ಮಾಡಲು ಚೂರು ಬೆಲ್ಲ ಹಾಕಿ ಆಗ ಸರಿಯಾಗುತ್ತದೆ.
* ಖಾರವಾದ ಅಡುಗೆ ಮಾಡುವಾಗ ಚೂರೇ ಚೂರು ಬೆಲ್ಲ ಅಥವಾ ಸಕ್ಕರೆ ಹಾಕಿದರೆ ರುಚಿ ಇನ್ನು ಹೆಚ್ಚಾಗುತ್ತದೆ
* ಬಿಸಿನೀರಿಗೆ ಯಾವುದೇ ಹಿಟ್ಟು ಹಾಕಿದರೂ ಅದು ಗಂಟಾಗುತ್ತದೆ ಹಾಗಾಗಿ ಹಿಟ್ಟನ್ನು ತಣ್ಣೀರಿನಲ್ಲಿ ಕಲಸಿಕೊಂಡು ಪೇಸ್ಟ್ ಮಾಡಿ ನಂತರ ಬಿಸಿ ದ್ರಾವಣಕ್ಕೆ ಹಾಕಿದರೆ ಗಂಟಾಗುವುದಿಲ್ಲ.
* ಮಾಡಿರುವ ಅಡುಗೆಗೆ ಖಾರ ಜಾಸ್ತಿಯಾಗಿದ್ದರೆ ಸ್ವಲ್ಪ ಎಣ್ಣೆ ಟೊಮೆಟೊ ರಸ ಅಥವಾ ಹುಣಸೆ ರಸ ಅಥವಾ ನಿಂಬೆ ರಸ ಸೇರಿಸಿ ಆಗ ಸರಿ ಹೋಗುತ್ತದೆ.
* ಒಂದು ಬಟ್ಟಲು ಗುಲಾಬಿ ದಳಕ್ಕೆ, ಒಂದು ಬಟ್ಟಲು ಜೇನುತುಪ್ಪ ಹಾಗೂ ಒಂದು ಬಟ್ಟಲು ಸಕ್ಕರೆ ಹಾಕಿ ಇಟ್ಟರೆ ಒಂದು ವಾರದಲ್ಲಿ ಗುಲ್ಕನ್ ತಯಾರಾಗುತ್ತದೆ.
* ಸಕ್ಕರೆ ಪಾಕವು ಗಟ್ಟಿಯಾಗಿ ಮತ್ತೆ ಸಕ್ಕರೆ ಹರಳು ಹರಳಂತೆ ಆಗಬಾರದು ಎಂದರೆ ಸಕ್ಕರೆ ಪಾಕ ಮಾಡುವಾಗ ಸ್ವಲ್ಪ ನಿಂಬೆರಸ ಹಾಕಬೇಕು.
* ಪಲ್ಯ, ಹುಳಿ ಅಥವಾ ಸಾರು ತುಂಬಾ ತೆಳುವಾಗಿದ್ದರೆ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹುರಿದು ಪುಡಿ ಮಾಡಿ ಅದನ್ನು ನೀರಿನ ಜೊತೆ ಪೇಸ್ಟ್ ರೀತಿ ಮಾಡಿ ಸೇರಿಸಬಹುದು ಅಥವಾ ಉರಿಗಡಲೆಯನ್ನು ಪುಡಿ ಮಾಡಿ ನೀರಿನ ಜೊತೆ ಮಿಕ್ಸ್ ಮಾಡಿ ಸೇರಿಸಬಹುದು ಅಥವಾ ಕಡಲೆ ಹಿಟ್ಟನ್ನು ನೀರಿನ ಜೊತೆ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಹಾಕಬಹುದು ಆಗ ಗಟ್ಟಿಯಾಗುತ್ತದೆ ಹಾಗೂ ರುಚಿ ಕೂಡ ಚೆನ್ನಾಗಿರುತ್ತದೆ.
* ನೆಲದ ಮೇಲೆ ಎಣ್ಣೆ ಅಥವಾ ಎಣ್ಣೆ ಜಿಡ್ಡು ಆಗಿದ್ದರೆ ಅದನ್ನು ತೆಗೆಯಲು ಹಿಟ್ಟು ಅಥವಾ ಹೊಟ್ಟನ್ನು ಹಾಕಿ ಉಜ್ಜಬೇಕು ಆಗ ನೀಟಾಗಿ ಕ್ಲೀನ್ ಆಗುತ್ತದೆ.
* ಶಾವಿಗೆಯನ್ನು ಬೇಯಿಸುವಾಗ ನೀರಿಗೆ ಸ್ವಲ್ಪ ಎಣ್ಣೆ ಹಾಗೂ ಉಪ್ಪು ಹಾಕುವುದರಿಂದ ಅವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ ಮತ್ತು ಶಾವಿಗೆ ಹೊಳಪಿನಿಂದ ಕೂಡಿರುತ್ತದೆ
* ಕರ್ಪೂರದ ಭರಣಿಯಲ್ಲಿ ನಾಲ್ಕೈದು ಕರಿ ಮೆಣಸಿನಕಾಳು ಇಡುವುದರಿಂದ ಕರ್ಪೂರ ಕರಗುವುದಿಲ್ಲ
* ನಿಂಬೆಹಣ್ಣಿನ ಪಾನಕ ಮಾಡುವಾಗ ಸಕ್ಕರೆ ಇಲ್ಲದಿದ್ದರೆ ಬೆಲ್ಲವನ್ನೇ ಹಾಕಿ ರುಚಿ ಚೆನ್ನಾಗಿರುತ್ತದೆ. ಕಬ್ಬಿನ ಹಾಲಿನ ಟೇಸ್ಟ್ ಬರುತ್ತದೆ.
* ಓವೆನ್ ನಲ್ಲಿ ಇಡ್ಲಿ ಹಿಟ್ಟು, ದೋಸೆ ಹಿಟ್ಟು ಈ ರೀತಿ ಉಕಾಕುವ ಪದಾರ್ಥಗಳನ್ನು ಇಡುವ ಮೊದಲು ಅದರ ಕೆಳಗಡೆ ಒಂದು ಪೇಪರ್ ಇಡಿ, ಅದು ಉಕ್ಕಿದರೆ ಕ್ಲೀನ್ ಮಾಡಲು ಸುಲಭವಾಗುತ್ತದೆ.