ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಬರುವ ಮುಟ್ಟಿನ ಚಕ್ರವು ಅದು ಆರಂಭವಾಗುವ ದಿನದ 3-4 ಹಿಂದಿನ ದಿನದಿಂದಲೇ ಅನೇಕ ರೀತಿಯ ದೇಹದಲ್ಲಿ ಆರೋಗ್ಯ ವ್ಯತ್ಯಾಸವನ್ನು ಉಂಟು ಮಾಡುತ್ತದೆ ಇದು ಹಾರ್ಮೋನ್ ವೇರಿಯೇಷನ್ ನಿಂದ ಉಂಟಾಗುವ ಸಮಸ್ಯೆ ಆಗಿರುತ್ತದೆ.
ಆ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಎದೆ ನೋವು, ಹೊಟ್ಟೆ ನೋವು, ಕೈ ಕಾಲು ಸೆಳೆತ, ಕೈ ಕಾಲು ಊದಿಕೊಳ್ಳುವುದು, ಬೇಸರ , ಡಿಪ್ರೆಶನ್ ಇನ್ನು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಇದನ್ನು PMS (Pre Mensteual Syndrome) ಎನ್ನುತ್ತಾರೆ. ಹದಿಹರೆಯದವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಇದರಿಂದ ಆ ಮಕ್ಕಳಿಗೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಕೆಲಸಕ್ಕೆ ಹೋಗಲು ಆಗುವುದಿಲ್ಲ ಇದಕ್ಕೆ ಸುಲಭ ಪರಿಹಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಮನೆಯಲ್ಲಿ ಸಿಕ್ಕುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಮನೆ ಮದ್ದು ಮಾಡಿಕೊಂಡು ಮುಂದಿನ ತಿಂಗಳಿಂದ ಈ PMS ಸಮಸ್ಯೆ ಕಂಟ್ರೋಲ್ ಆಗುವ ರೀತಿ ಮಾಡಬಹುದು. ನಿಯಮಿತವಾಗಿ ಅವುಗಳನ್ನು ರೂಢಿ ಮಾಡಿಕೊಂಡು ಬರುವುದರಿಂದ ಒಂದು ದಿನ ಸಂಪೂರ್ಣವಾಗಿ ಸಮಸ್ಯೆಯಿಂದ ಹೊರ ಬರುತ್ತೀರಿ. ಈ ಮನೆಮದ್ದುಗಳನ್ನು ನೀವು ಸಹ ನೋಡಿ ಮಾಡಿಕೊಳ್ಳಿ ಮತ್ತು ನಿಮ್ಮ ಗೆಳತಿಯರಿಗೂ ಹಾಗೂ ಕುಟುಂಬದವರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.
ಮನೆಮದ್ದುಗಳು:-
* ದೇಹದಲ್ಲಿ ಈ ಸಮಯದಲ್ಲಿ ನೀರಿನಾಂಶ ಹೆಚ್ಚಾಗುತ್ತದೆ. ಆದ್ದರಿಂದ ಉಪ್ಪು, ಉಪ್ಪಿನಕಾಯಿ, ಕರಿದ ಆಹಾರ ಪದಾರ್ಥಗಳು, ಮಸಾಲೆ ಪದಾರ್ಥಗಳು ಇವುಗಳ ಸೇವನೆ ಕಡಿಮೆ ಮಾಡಬೇಕು.
* ಒಂದು ಲೋಟ ಮಜ್ಜಿಗೆಗೆ ಒಂದು ಚಿಟಿಕೆ ಇಂಗು ಹಾಗೂ ಒಂದು ಚಮಚ ಮೆಂತೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಆ ಮಜ್ಜಿಗೆಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಮುಂದಿನ ತಿಂಗಳು PMS ಕಂಟ್ರೋಲ್ ಗೆ ಬರುತ್ತದೆ.
* ನಾಲ್ಕು ಕೆಂಪು ದಾಸವಾಳ ಹೂವು, ಒಂದು ಗುಲಾಬಿ ಹೂವು, ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ಸಕ್ಕರೆ ಸೇರಿಸಿ, ಒಂದು ಚಮಚ ಶತಾವರಿ ಪುಡಿ ಹಾಗೂ ಚಿಟಿಕೆ ಏಲಕ್ಕಿ ಪುಡಿ ಹಾಕಿ ಜ್ಯೂಸ್ ಮಾಡಿಕೊಂಡು ಕುಡಿಯಬೇಕು ಈ ರೀತಿ ಆಗಾಗ ಕುಡಿಯುವುದರಿಂದ PMS ಮುಂದಿನ ತಿಂಗಳಲ್ಲಿ ಉಂಟಾಗುವುದಿಲ್ಲ
* ಒಂದು ಚಮಚ ಅಮೃತಬಳ್ಳಿ ಪುಡಿ, ಚಿಟಿಕೆ ಅರಿಶಿಣ ಹಾಗೂ ಒಂದು ಏಲಕ್ಕಿಯನ್ನು ಹಾಕಿ ಒಂದುವರೆ ಲೋಟದಷ್ಟು ನೀರನ್ನು ಹಾಕಿ ಅದು ಮುಕ್ಕಾಲು ಲೋಟ ಆಗುವಷ್ಟು 6-7 ನಿಮಿಷ ಚೆನ್ನಾಗಿ ಕುದಿಸಿ ಅದನ್ನು ಶೋಧಿಸಿ ಬೆಲ್ಲ ಸೇರಿಸಿ ಕುಡಿಯುವುದರಿಂದ PMS ಕಂಟ್ರೋಲ್ ಗೆ ಬರುತ್ತದೆ
* ಒಂದು ಚಮಚ ಸೋಂಪು ಕಾಳು, ಕಾಲು ಚಮಚ ಕಪ್ಪು ಜೀರಿಗೆ, ಕಾಲು ಚಮಚ ಒಣ ಶುಂಠಿ ಇವುಗಳನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅರ್ಧ ಲೋಟ ಆದ ಬಳಿಕ ಶೋಧಿಸಿ ಆರಿಸಿ ಕುಡಿಯುವುದರಿಂದ ಕೂಡ ಈ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ
* ಬಾರ್ಲಿ ನೀರನ್ನು ಕುಡಿಯುವುದರಿಂದ ಇದು ಮೂತ್ರ ವರ್ಧತಕವಾಗಿ ಕೆಲಸ ಮಾಡಿ ದೇಹದಲ್ಲಿರುವ ಈ ಸಮಯದಲ್ಲಿ ತುಂಬುವ ನೀರನ್ನು ಹೊರ ಹಾಕುತ್ತದೆ. 2-3 ಲೀಟರ್ ನೀರನ್ನು ಕುದಿಯಲು ಇಟ್ಟು ಅದಕ್ಕೆ ಎರಡು ಚಮಚ ಬಾರ್ಲಿ ಪೌಡರ್ ಹಾಕಬೇಕು ನಂತರ ಕುಡಿಯುತ್ತಾ ಬರಬೇಕು ಇದರೊಂದಿಗೆ ಮೂತ್ರ ವರ್ಧಕ ಹಣ್ಣುಗಳಾದ ಕಲ್ಲಂಗಡಿ ಹಣ್ಣು, ದಾಳಿಂಬೆ ಹಣ್ಣು ಇವುಗಳ ಸೇವನೆ ಮಾಡಬೇಕು.