ಯಾವುದೇ ರೋಗರುಜಿನ ಇಲ್ಲದೆ ನೂರು ವರ್ಷಗಳ ಕಾಲ ಬದುಕಬೇಕು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ನಾವು ಮಾತ್ರವಲ್ಲದೇ ನಾವು ಬಹಳ ಇಷ್ಟಪಡುವ ನಮ್ಮ ಕುಟುಂಬದವರು ಹಾಗೂ ನಮ್ಮ ಸ್ನೇಹಿತರು ಕೂಡ ಹೀಗೆ ನಮ್ಮೊಟ್ಟಿಗೆ ನೂರು ವರ್ಷಗಳ ಕಾಲ ಜೊತೆಯಾಗಿ ಸಂತೋಷವಾಗಿ ಇರಬೇಕು ಎಂದು ಬಯಸುತ್ತೇವೆ. ಹಿಂದೆಲ್ಲಾ ಋಷಿಮುನಿಗಳು 150 ವರ್ಷಗಳಿಗಿಂತ ಹೆಚ್ಚು ಕಾಲ ಕಾಡಿನಲ್ಲಿ ಆರೋಗ್ಯವಾಗಿ ಜೀವಿಸುತ್ತಿದ್ದರು.
ನಮ್ಮ ಹಿರಿಯ ತಲೆಗಯಳು ನೂರು ವರ್ಷ ದಾಟಿರುವುದಕ್ಕೆ ನಾವೇ ಸಾಕ್ಷಿಯಾಗಿದ್ದೇವೆ. ಆದರೆ ಇಂದು ಭಾರತದಲ್ಲಿ ಮನುಷ್ಯನ ಸರಾಸರಿ ಆಯಸ್ಸು 60ರ ಅಂಚಿಗೆ ಬಂದಿದೆ. ಇಷ್ಟು ಬೇಗ ಇಂತಹದೊಂದು ಬಿರುಗಾಳಿಯಂತಹ ಬದಲಾವಣೆ ಉಂಟಾಗಲು ಕಾರಣ ಏನಿರಬಹುದು ಎಂದು ಯಾವಾಗಲಾದರೂ ಯೋಚನೆ ಬಂದಿದೆಯಾ?
ನಮ್ಮ ದೇಶ ಮಾತ್ರವಲ್ಲದೆ ಹಲವು ದೇಶಗಳು ಈ ವಿಚಾರದ ಬಗ್ಗೆ ತಡೆದು ಕೆಡಿಸಿಕೊಂಡಿವೆ. ಇವುಗಳನ್ನು ಕಂಡುಹಿಡಿಯಲು ಹಲವಾರು ಪ್ರಯೋಗಗಳು ಕೂಡ ಆಗಿವೆ. ಆಗ ತಿಳಿದು ಬಂದ ಸತ್ಯಾಂವವೇನೆಂದರೆ, ಮನುಷ್ಯ ಆರೋಗ್ಯವಾಗಿರಲು ಆತನಿಗೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಆಹಾರದ ಮೂಲಕ ದೇಹ ಸೇರಬೇಕು ಎನ್ನುವುದು ಎಷ್ಟು ನಿಜವೋ ಇದೇ ಆಹಾರ ಅತಿಯಾದರೆ ಅನಾರೋಗ್ಯಕ್ಕೂ ಕೂಡ ಅದೇ ಕಾರಣವಾಗುತ್ತದೆ ಎನ್ನುವುದು ಅಷ್ಟೇ ಸತ್ಯಂ ನಿಜವಾಗಿದೆ.
ಹಾಗಾಗಿ ಅಂತಿಮವಾಗಿ ಕಡಿಮೆ ತಿನ್ನುವುದೇ ಆಹಾರ ಗುಟ್ಟು ಎಂದು ಕಂಡುಹಿಡಿಯಲಾಗಿದೆ. ಇದನ್ನೇ ಪರೋಕ್ಷವಾಗಿ ಹಿರಿಯರು ಒಂದು ತಮಾಷೆಯಾದ ಮಾತಿನ ಮೂಲಕ ಒಂದು ಹೊತ್ತು ಉಂಡವನು ಯೋಗಿ, ಎರಡು ಹೊತ್ತು ಉಂಡವನು ಭೋಗಿ ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನನ್ನು ಆಸ್ಪತ್ರೆಗೆ ಹೊತ್ತುಕೊಂಡು ಹೋಗಿ ಎಂದು ಲೇವಡಿ ಮಾಡಿದ್ದನ್ನು ನಾವು ಕೇಳಿದ್ದೇವೆ.
ಇದು ಬರಿ ಮಾತಲ್ಲ ನೂರಕ್ಕೆ ನೂರರಷ್ಟು ಸತ್ಯ. ಇಲಿಗಳ ಮೇಲೆ ನಡೆದ ಸಂಶೋಧನೆಯ ಪ್ರಕಾರವಾಗಿ ಅವುಗಳಿಗೆ ಅಗತ್ಯ ಇರುವುದಕ್ಕಿಂತ 75% ಕಡಿಮೆ ಆಹಾರ ನೀಡಿದಾಗ ಅವುಗಳು ತಮ್ಮ ಆಯುಷ್ಯ ಆಯುಷ್ಯಕ್ಕಿಂತ ದುಪ್ಪಟ್ಟು ಹೆಚ್ಚು ಬದುಕಿದ್ದ ಉಲ್ಲೇಖಗಳಿವೆ. ಇದನ್ನು ಹೊರತುಪಡಿಸಿ ಮಾನವರ ಮೇಲೆ ದೇಶದ ಹಲವು ಭಾಗಗಳಲ್ಲಿ ಈ ರೀತಿ ಸಂಶೋಧನೆ ನಡೆಸಲಾಗಿದೆ.
ಇದರಲ್ಲಿ ಒಂದು ದ್ವೀಪದಲ್ಲಿ ಈಗಲೂ ಕೂಡ ಅಲ್ಲಿನ ಜನರು ನೂರು ವರ್ಷವನ್ನು ದಾಟಿ ಆರೋಗ್ಯವಂತರಾಗಿ ಸಂತೋಷದಿಂದ ಬದುಕುತ್ತಿದ್ದಾರೆ ಇದಕ್ಕೆ ಕಾರಣ ಏನು ಎಂದು ಹುಡುಕ ಹೊರಟವರಿಗೆ ಅವರ ಆಹಾರ ಪದ್ಧತಿಯೇ ಕಾರಣ ಎಂದು ತಿಳಿದು ಬಂದಿದೆ. ಮಿತಿಯಾದ ಆಹಾರ ಅದರಲ್ಲೂ ಆಹಾರದಲ್ಲಿ ಬಾದಾಮಿ, ಗೋಡಂಬಿ, ಸೂರ್ಯಕಾಂತಿ ಬೀಜ, ಅಗಸೆ ಬೀಜ, ಕೊಬ್ಬರಿ ಕಡಲೆಕಾಯಿ ಬೀಜ ಈ ರೀತಿಯ ನಟ್ಸ್ ಗಳನ್ನು ಹೆಚ್ಚಾಗಿ ಬಳಸುವುದು.
ಹಣ್ಣು ತರಕಾರಿ ಇವುಗಳ ಸೇವನೆಯನ್ನು ಹೆಚ್ಚು ಮಾಡುವುದು ಅವರು ಆರೋಗ್ಯವಂತರಾಗಿರಲು ಕಾರಣ ಆಗಿದೆ. ಇದಿಷ್ಟೇ ಅಲ್ಲದೆ ಅವರು ಹಣದ ಹಿಂದೆ ಓಡುವುದರ ಬದಲು ಸಂತೋಷದ ವಾತಾವರಣ ಸೃಷ್ಟಿಸುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ ಹಾಗಾಗಿ ಅವರು ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ.
ಅಕ್ಕ ಪಕ್ಕದವರ ಜೊತೆ ಸ್ನೇಹಿತರ ಜೊತೆ ಸಂಬಂಧ ಉತ್ತಮವಾಗಿಟ್ಟುಕೊಂಡು ಯಾವಾಗಲೂ ನಗುನಗುತ್ತಾ ಇರುತ್ತಾರೆ. ಯಾರಿಗೆ ಕ’ಷ್ಟ ಬಂದರೂ ಹೇಗಲಾಗುತ್ತಾರೆ. ಧರ್ಮ ಮಾರ್ಗದಲ್ಲಿ ಸಾಗುತ್ತಿರುವುದರಿಂದ ಅವರಿಗೆ ಮಾನಸಿಕ ಒತ್ತಡಗಳಿಲ್ಲ ಮತ್ತು ಅತಿಯಾದ ವ್ಯಾಯಾಮ ಏನು ಇಲ್ಲದೆ.
ನಿತ್ಯ ಮನೆ ಕೆಲಸಗಳನ್ನು ಜೀವನಕ್ಕೆ ಅವಶ್ಯಕತೆ ಇರುವ ಕೆಲಸಗಳನ್ನು ಮಾಡಿಕೊಂಡು ಯಾವುದೇ ಟೆನ್ಶನ್ ಇಲ್ಲದೆ ಬದುಕುತ್ತಿರುವುದು ಅವರ ದೀರ್ಘಾಯುಷ್ಯದ ಗುಟ್ಟು ಎಂದು ತಿಳಿದು ಬಂದಿದೆ. ಹೀಗಾಗಿ ನಿಮಗೂ ಕೂಡ ಈ ರೀತಿ ಆಯಸ್ಸು ಹೆಚ್ಚು ಹೊಂದುವ ಬಯಕೆ ಇದ್ದರೆ ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಿ ಹಾಗೂ ಮಾನಸಿಕ ಆರೋಗ್ಯವನ್ನು ಕೂಡ ಸರಿಪಡಿಸಿಕೊಳ್ಳಿ.