ಕೆಲವರಿಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಾಗೆ ತೊಂದರೆಗಳಿರುತ್ತವೆ. ಊಟ ಮಾಡಿದ ತಕ್ಷಣ ಹೊಟ್ಟೆ ನೋವು ಬರುವುದು, ಹೊಟ್ಟೆ ಊದಿಕೊಂಡ ಹಾಗಾಗಿ ಊಟ ಮಾಡಿದ ತಕ್ಷಣವೇ ಹೊಟ್ಟೆಯಲ್ಲಿ ಗುಳುಗುಳು ಆಗುತ್ತಾ ಶೌಚಕ್ಕೆ ಹೋಗಬೇಕು ಎನಿಸುವುದು, ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಾಡಿದರೆ ಇನ್ನು ಕೆಲವರಿಗೆ ತಿಂದ ಊಟವೆಲ್ಲ ಆಚೆ ಹೋಗುವುದು ಈ ರೀತಿ ಸಮಸ್ಯೆಗಳಾಗುತ್ತಿರುತ್ತದೆ.
ಜೀರ್ಣಕ್ರಿಯೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಮೆಡಿಕಲ್ ಭಾಷೆಯಲ್ಲಿ IBS ಎಂದರೆ ಇರಿಟೇಬಲ್ ಬೋವೆಲ್ ಸಿಂಟ್ರೋಲ್ Irritable Bowel Syndrome) ಎಂದು ಕರೆಯುತ್ತಾರೆ. ದೊಡ್ಡ ಕರುಳಿನಲ್ಲಿರುವ ಬ್ಯಾಕ್ಟೀರಿಯಗಳು ಸಣ್ಣ ಕರುಳಿಗೆ ಬಂದಾಗ SIBO ಸ್ಸ್ಮಾಲ್ ಇಂಟರೆಸ್ಟೇನಾ ಬ್ಯಾಕ್ಟೀರಿಯಲ್ ಓವರ್ ಗ್ರೋಥ್ (Small Interstane Bacterial Over Growth) ಆಗುತ್ತದೆ.
ಇದು ಬ್ಯಾಕ್ಟೀರಿಯಾದಿಂದ ಬರುವ ಸಮಸ್ಯೆಯಾಗಿದೆ. ನಮ್ಮ ದೇಹದಲ್ಲಿ ನಮ್ಮ ಆರೋಗ್ಯಕ್ಕೆ ಪೂರಕವಾಗಿರುವ ಅನೇಕ ಬ್ಯಾಕ್ಟೀರಿಯಗಳು ಇವೆ ಆದರೆ SIBO ನಿಂದ ಇಂತಹ ಜೀವನ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. SIBO ಸರಿ ಮಾಡಿದರೆ IBS ಕಂಟ್ರೋಲ್ ಗೆ ಬರುತ್ತದೆ.
ಆದರೆ ಇದು ನೋಡುವವರಿಗೆ ಬಹಳ ಸಣ್ಣ ಸಮಸ್ಯೆ ಎನಿಸಿದರೂ ಕೂಡ ಅನುಭವಿಸುವವರಿಗೆ ಮಾತ್ರ ಇದರ ಹಿಂಸೆ ಗೊತ್ತಿರುತ್ತದೆ. ಇದಕ್ಕೆ ಸುಮಾರು 25ಕ್ಕೂ ಹೆಚ್ಚು ಚಿಕಿತ್ಸೆಗಳು ಆಯುರ್ವೇದದಲ್ಲಿ ಇದೆ ಇದರೊಂದಿಗೆ ಮನೆಯಲ್ಲಿ ಕೂಡ ಈ ಸಮಸ್ಯೆಗೆ ಔಷಧಿ ಮಾಡಬಹುದು ಎನ್ನುವುದು ಬಹಳ ಸಮಾಧಾನಕರ ಸಂಗತಿ.
ಹಾಗಾಗಿ ಯಾವೆಲ್ಲ ಮನೆಮದ್ದುಗಳ ಮೂಲಕ ಈ ಸಮಸ್ಯೆಯನ್ನು ಪರಿಹಾರ ಮಾಡಬಹುದು ಈ ರೀತಿ ಸಮಸ್ಯೆ ಅನುಭವಿಸುತ್ತಿರುವವರಿಗೆ ಯಾವ ಔಷಧಿಯಿಂದ ಶೀಘ್ರ ಪರಿಹಾರ ಸಿಗುತ್ತದೆ ಎನ್ನುವ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇವುಗಳನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ.
1. SBO ಪ್ರೋ ಬಯೋಟೆಕ್ ಎನ್ನುವ ಮಾತ್ರೆಗಳನ್ನು ರಾತ್ರಿ ಹೊತ್ತು ಅನ್ನದಿಂದ ಗಂಜಿ ಅಥವಾ ರಾಗಿಯಿಂದ ಗಂಜಿ ಮಾಡಿ ಅದು ಆರಿದ ಮೇಲೆ ತಣ್ಣಗಿದ್ದಾಗ ಈ ಒಂದು ಪ್ರೊ ಬಯೋಟೆಕ್ ಮಾತ್ರೆಯನ್ನು ಹಾಕಿ ನೆನೆಸಿಟ್ಟು ಬೆಳಗ್ಗೆ ಅದನ್ನು ಮಜ್ಜಿಗೆಯ ಜೊತೆ ಸೇವಿಸುವುದರಿಂದ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯ ಉತ್ಪಾದನೆ ಹೆಚ್ಚಾಗುತ್ತದೆ SIBO ಕಂಟ್ರೋಲ್ ಆಗುತ್ತದೆ
2. ಮೆಡಿಕಲ್ ಶಾಪ್ ಗಳಲ್ಲಿ ಎನಿಮಾ ಕ್ಯಾನ್ ಸಿಗುತ್ತದೆ. ಅದರಲ್ಲಿ ಮಜ್ಜಿಗೆಯನ್ನು ಹಾಕಿ ವಾರದಲ್ಲಿ ಎರಡರಿಂದ ಮೂರು ಬಾರಿ ಮಜ್ಜಿಗೆ ಎನಿಮ ಸೇವಿಸುವುದರಿಂದ ಈ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ
3. ಕ್ಯಾಬೇಜ್ ಚೆನ್ನಾಗಿ ತುರಿದು ಒಂದು ಜಾರ್ ನಲ್ಲಿ ಮೊದಲು ಒಂದು ಲೇಯರ್ ಕ್ಯಾಬೇಜ್ ಅದರ ಮೇಲೆ ಉಪ್ಪು ನಂತರ ಅದರ ಮೇಲೆ ಮತ್ತೊಂದು ಲೇಯರ್ ಕ್ಯಾಬೇಜ್ ಅದರ ಮೇಲೆ ಉಪ್ಪು 2-3 ಚಮಚ ವಿನೆಗರ್ ಹಾಕಿ ಗಟ್ಟಿಯಾಗಿ ಮುಚ್ಚಿಟ್ಟು ಮೂರು ದಿನ ಹೊರಗೆ ಇಡಬೇಕು, ಅದು ಹುಳಿಯಾಗಿರುತ್ತದೆ. ಇದರಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಗಳು ತಯಾರಾಗಿರುತ್ತದೆ ಇದನ್ನು ಫ್ರಿಜ್ಜಿನಲ್ಲಿ ಇಟ್ಟು ಬೆಳಗ್ಗೆ ಎರಡು ಚಮಚ ಹಾಗೂ ಸಂಜೆ ಎರಡು ಚಮಚ ಸೇವಿಸುತ್ತಾ ಬರುವುದರಿಂದ ಇದು IBS ನಿಯಂತ್ರಣ ಮಾಡುವುದಕ್ಕೆ ತುಂಬಾ ಸಹಾಯಕವಾಗುತ್ತದೆ.
* ಆಯುರ್ವೇದಿಕ್ ಅಂಗಡಿಯಲ್ಲಿ ಸಿಗುವ IBS ಕಷಾಯ ಪುಡಿಯನ್ನು ತೆಗೆದುಕೊಂಡು ಎರಡು ಗ್ಲಾಸ್ ನೀರಿಗೆ ಎರಡು ಚಮಚ IBS ಕಷಾಯ ಪುಡಿಯನ್ನು ಸೇರಿಸಿ ಅದು ಒಂದು ಲೋಟ ಆಗುವವರೆಗೂ ಚೆನ್ನಾಗಿ ಕುದಿಸಿ ಬೆಳಗ್ಗೆ ಅರ್ಧ ಲೋಟ ಹಾಗೂ ಸಂಜೆ ಅರ್ಧ ಲೋಟ ತೆಗೆದುಕೊಳ್ಳುವುದರಿಂದ ಕಂಟ್ರೋಲ್ ಗೆ ಬರುತ್ತದೆ
* ಆಯುರ್ವೇದದ ಪ್ರಕೃತಿ ಚಿಕಿತ್ಸೆಯಲ್ಲಿ ನೀಡುವ ತಂಪು ಕಟ್ಟಿ ಸ್ನಾನ ಎನ್ನುವ ಚಿಕಿತ್ಸಾ ವಿಧಾನದಿಂದ ಕೂಡ ಈ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ.
*ನೀರಿನಲ್ಲಿ ಕರಗುವಂತಹ ನಾರಿನಂಶ ಹೊಂದಿರುವ ಮೆಂತೆಯನ್ನು ರಾತ್ರಿಯಲ್ಲಿ ನೆನೆಸಿಟ್ಟು ಅದನ್ನು ಮೊಳಕೆ ಕಟ್ಟಿ ಸೇವಿಸುವುದರಿಂದ ಇದು ಒಳ್ಳೆಯ ಬ್ಯಾಕ್ಟೀರಿಯಕ್ಕೆ ಆಹಾರವಾಗುತ್ತದೆ.