ಪ್ರತಿದಿನ ಬೆಳಿಗ್ಗೆ ಮಾಯವಾಗುತ್ತದೆ ಮತ್ತೆ ಬೆಳಗಿನ ಜಾವ ಪ್ರತ್ಯಕ್ಷವಾಗು ತ್ತದೆ ಈ ಶಿವಲಿಂಗ. ಈ ಶಿವಲಿಂಗವನ್ನು ನೋಡಿದರೆ ಭಾರತ ದೇಶದ ಎಲ್ಲಾ ಪುಣ್ಯಕ್ಷೇತ್ರವನ್ನು ನೋಡಿದ ಹಾಗೆ ಎಂದು ಹೇಳುತ್ತಾರೆ. ತುಂಬಾ ವಿಸ್ಮಯವಾಗಿದೆ ಈ ಅಪರೂಪದ ಶಿವಲಿಂಗ ನಿಮ್ಮ ಕಣ್ಣ ಮುಂದೆ ಮಾಯವಾಗುತ್ತದೆ ಮತ್ತೆ ನಿಮ್ಮ ಕಣ್ಣಮುಂದೆಯೇ ಪ್ರತ್ಯಕ್ಷವಾಗುತ್ತದೆ.
ಒಂದಲ್ಲ ಎರಡಲ್ಲ ಈ ದೇವಸ್ಥಾನದಲ್ಲಿ ನೆಲೆಸಿರುವುದು 5 ಪವಾಡ ಶಿವಲಿಂಗಗಳು ಇಲ್ಲಿ ನೆಲೆಸಿರುವoತಹ ಐದು ಶಿವಲಿಂಗಗಳು ನೇರವಾಗಿ ಕೈಲಾಸ ಪರ್ವತಕ್ಕೆ ಸಂಪರ್ಕ ಇದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ದಿನ ಇಷ್ಟೆಲ್ಲಾ ವಿಸ್ಮಯವನ್ನು ಹೊಂದಿರುವಂತಹ ಈ ದೇವಸ್ಥಾನ ಯಾವುದು?
ಈ ದೇವಸ್ಥಾನದಲ್ಲಿ ಇನ್ನು ಏನೆಲ್ಲ ವಿಶೇಷತೆ ಇದೆ ಈ ದೇವಸ್ಥಾನ ಇರುವುದಾದರೂ ಎಲ್ಲಿ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಶಿವಲಿಂಗವನ್ನು ನೋಡ ಬೇಕು ಎಂದರೆ ಸ್ವತಹ ಶಿವ ದೇವರೇ ಭಕ್ತರಿಗೆ ದೇವಸ್ಥಾನಕ್ಕೆ ಬರುವ ದಾರಿಯನ್ನು ಮಾಡಿಕೊಡುತ್ತಾರೆ.
ಈ ಸುದ್ದಿ ಓದಿ:- ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!
ಈ ಶಿವಲಿಂಗವನ್ನು ದರ್ಶನ ಮಾಡ ಬೇಕು ಎಂದರೆ ಅಷ್ಟು ಸುಲಭದ ಮಾತಲ್ಲ. ದಿನದಲ್ಲಿ ಕೇವಲ ನಾಲ್ಕು ಗಂಟೆಗಳು ಮಾತ್ರ ದರ್ಶನ ಕೊಡುವಂತಹ ಅಪರೂಪದ ಶಿವಲಿಂಗ. ಕೇವಲ ನಾಲ್ಕು ಗಂಟೆ ಸಮಯದಲ್ಲಿ ಇಲ್ಲಿಗೆ ಬರುವಂತಹ ಭಕ್ತಾದಿಗಳು ಶಿವಲಿಂಗದ ದರ್ಶನವನ್ನು ಪಡೆಯಬೇಕು.
ಹಾಗಾದರೆ ಈ ದೇವಸ್ಥಾನದ ಸಂಪೂರ್ಣವಾದ ವಿಳಾಸ ಯಾವುದು ಎಂದು ನೋಡುವುದಾದರೆ. ಗುಜರಾತ್ ರಾಜ್ಯದಲ್ಲಿರುವ ಭಾವನಗರ ಎಂಬ ನಗರಕ್ಕೆ ಹೋಗಬೇಕು ಬಾವನಗರದಿಂದ 25 ಕಿಲೋಮೀಟರ್ ಪ್ರಯಾಣ ಮಾಡಿದರೆ ಅರಭಿ ಸಮುದ್ರ ಸಿಗುತ್ತೆ ಇದೇ ಅರಭಿ ಸಮುದ್ರದಲ್ಲಿ 2 ಕಿಲೋಮೀಟರ್ ದೂರ ಹೋದರೆ ಸಮುದ್ರದ ಮಧ್ಯಭಾಗದಲ್ಲಿ ನೆಲೆಸಿರುವ ನಿಷ್ಕಳಂಕ ಶಿವ ಮಂದಿರ.
ಸಮುದ್ರದ ಮಧ್ಯಭಾಗದಲ್ಲಿ ನೆಲೆಸಿರುವಂತಹ ಏಕೈಕ ಶಿವಲಿಂಗ. ನಮ್ಮ ಭಾರತ ದೇಶದಲ್ಲಿ ಸಮುದ್ರದ ದಡದಲ್ಲಿ ಸಾಕಷ್ಟು ಶಿವ ಮಂದಿರಗಳು ಇದೆ. ಆದರೆ ಸಮುದ್ರದ ಮಧ್ಯ ಭಾಗದಲ್ಲಿ ನೆಲೆಸಿರುವಂತಹ ಪ್ರಪಂಚದ ಏಕೈಕ ನಿಷ್ಕಳಂಕ ಶಿವ ಮಂದಿರ ಇದು.
ಈ ಸುದ್ದಿ ಓದಿ:- ಬೆಳಿಗ್ಗೆ ಎದ್ದತಕ್ಷಣ ಇವರನ್ನು ನೋಡಬೇಡಿ ಅಂದುಕೊಂಡ ಕೆಲಸ ಆಗದೆ ಕಿರಿಕಿರಿ ಒತ್ತಡ ನಷ್ಟ ಅನುಭವಿಸಬೇಕಾಗುತ್ತದೆ.!
ಪ್ರತಿ ದಿನ ಮಧ್ಯಾಹ್ನ 2 ಗಂಟೆಗೆ ಭಕ್ತಾದಿಗಳ ದರ್ಶನಕ್ಕೆ ದಾರಿ ಮಾಡಿ ಕೊಡುವ ಸಮುದ್ರ. ಸುಮಾರು 2 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಈ ದೇವಸ್ಥಾನದಲ್ಲಿ ನೆಲೆಸಿರುವ 5 ಶಿವಲಿಂಗದ ದರ್ಶನವನ್ನು ಮಾಡಿಕೊಂಡು ಮತ್ತೆ 2 ಕಿ.ಮೀ ನಡೆದುಕೊಂಡು ಹಿಂದಿರುಗಬೇಕು.
ಪ್ರಪಂಚದಲ್ಲಿ ಇಂತಹ ಒಂದು ವಿಸ್ಮಯವನ್ನು ನೀವು ಎಲ್ಲಿಯೂ ಕೂಡ ನೋಡಲು ಸಿಗುವುದಿಲ್ಲ ಏಕೆಂದರೆ ಪ್ರಪಂಚದಲ್ಲಿರುವಂತಹ ಯಾವುದೇ ಸಮುದ್ರವೂ 2 ಕಿಲೋ ಮೀಟರ್ ವರೆಗೆ ದಾರಿ ಮಾಡಿ ಕೊಡುವುದಿಲ್ಲ. ಅಂದಾಜು ನೂರು ಮೀಟರ್ ನಷ್ಟು ಸಮುದ್ರ ಹಿಂದಕ್ಕೆ ಹೋಗುತ್ತದೆ ಅಷ್ಟೇ.
ಆದರೆ ಈ ಸಮುದ್ರ 2 ಕಿಲೋ ಮೀಟರ್ ಭಕ್ತರಿಗೆ ದಾರಿ ಮಾಡಿಕೊಡುತ್ತದೆ ಎಂದರೆ ಎಲ್ಲವೂ ಶಿವ ಪರಮಾತ್ಮನ ಲೀಲೆ ಎಂದೇ ಹೇಳಬಹುದು. ಸಂಜೆ 5 ಗಂಟೆಯ ಸಮಯಕ್ಕೆ ಮತ್ತೆ ಸಮುದ್ರದ ಅಲೆಗಳು ದೇವಸ್ಥಾನ ವನ್ನು ಸುತ್ತುವರಿಯುತ್ತದೆ.
ಈ ಸುದ್ದಿ ಓದಿ:- ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿಸಾಕು.!
ಈ ಸಮಯದಲ್ಲಿ ಈ ದೇವಸ್ಥಾನದಲ್ಲಿ ಇರುವ ಎಲ್ಲ ಭಕ್ತಾದಿಗಳು ಬೇಗನೆ ಸಮುದ್ರದ ದಡವನ್ನು ಸೇರಿಕೊಳ್ಳಬೇಕು. ಈ ಸಮುದ್ರದ ಮಧ್ಯಭಾಗದಲ್ಲಿ ಐದು ಶಿವಲಿಂಗಗಳು ಇದ್ದು ಐದು ಶಿವಲಿಂಗದ ಮುಂಭಾಗದಲ್ಲಿ 5 ನಂದಿಗಳು ಕಂಡು ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.