ನಾವು ಕೆಲವೊಮ್ಮೆ ಯಾವುದಾದರು ಒಂದು ಮುಖ್ಯವಾದ ಕೆಲಸಕ್ಕೆ ಹೋಗಿರುತ್ತೇವೆ ಆದರೆ ಇನ್ನೇನು ಆ ಕೆಲಸ ಆಯಿತು ಎನ್ನುವಷ್ಟರಲ್ಲಿ ಆ ಕೆಲಸ ಅರ್ಧಕ್ಕೆ ನಿಂತು ಹೋಗುವ ಸಂದರ್ಭಗಳನ್ನು ನಾವು ನೋಡಿರುತ್ತೇವೆ. ಆಗ ನಮ್ಮ ಮನಸ್ಸಿನಲ್ಲಿ ಬರುವಂತಹ ವಿಷಯ ಏನು ಎಂದರೆ ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ ಈ ಕೆಲಸ ಆಗಲೇ ಇಲ್ಲ ಎಂದು ಮನಸ್ಸಿನಲ್ಲಿಯೇ ಮಾತನಾಡಿಕೊಳ್ಳುತ್ತೇವೆ.
ಆದರೆ ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಹಾಗೂ ಏನನ್ನು ನೋಡಬಾರದು ಏನು ನೋಡಿದರೆ ನಮಗೆ ಅದೃಷ್ಟ ಹೆಚ್ಚಾಗುತ್ತದೆ ನಾವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಬಹುದು. ಹಾಗೆ ಯಾವುದನ್ನು ನೋಡಿದರೆ ನಾವು ಅಂದುಕೊಂಡಂತಹ ಯಾವುದೇ ಕೆಲಸ ನೆರವೇರುವುದಿಲ್ಲ ಎನ್ನುವಂತಹ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಏಳಿಗೆ ಆಗೋದಿಲ್ಲ.! ರಾತ್ರಿ ಮಲಗುವ ಮುನ್ನ ಎಚ್ಚರ.!
ಬಹಳ ಹಿಂದಿನ ದಿನದಿಂದಲೂ ಕೂಡ ನಮ್ಮ ಮನೆಯಲ್ಲಿ ಇರುವಂತಹ ಹಿರಿಯರು ನಮಗೆ ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡು, ಆ ಕೆಲಸ ಮಾಡು ಹೋಗುವಾಗ ಈ ವಿಧಾನ ಈ ನಿಯಮಗಳನ್ನು ಅನುಸರಿಸುಎನ್ನು ವಂತಹ ಮಾತುಗಳನ್ನು ಹೇಳುತ್ತಿದ್ದರು ಹಾಗೂ ಅದನ್ನು ನಾವು ಕೆಲ ವೊಂದಷ್ಟು ಜನರ ಬಾಯಲ್ಲಿ ಕೇಳಿರುತ್ತೇವೆ.
ಆದರೂ ಕೂಡ ಕೆಲವೊಂದಷ್ಟು ಜನ ಅಂತಹ ಯಾವುದೇ ನಿಯಮಗಳನ್ನು ಅನುಸರಿಸುವುದಿಲ್ಲ. ಬದಲಿಗೆ ತಮಗೆ ಇಷ್ಟ ಬಂದ ಹಾಗೆ ನಡೆದುಕೊಳ್ಳುತ್ತಿರುತ್ತಾರೆ ಆದ್ದರಿಂದಲೇ ಅವರು ಆ ಒಂದು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾದರೆ ಈ ದಿನ ಬೆಳಗ್ಗೆ ಎದ್ದ ತಕ್ಷಣ ನಾವು ಏನನ್ನು ನೋಡಬೇಕು ಹಾಗೂ ಏನನ್ನು ನೋಡಬಾರದು ಹಾಗೂ ಏನನ್ನು ನೋಡಿದರೆ ಏನೆಲ್ಲಾ ಲಾಭಗಳನ್ನು ಪಡೆಯಬಹುದು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.!
* ಮೊದಲನೆಯದಾಗಿ ಯಾವುದೇ ಒಬ್ಬ ವ್ಯಕ್ತಿ ಬೆಳಗೆ ಎದ್ದ ತಕ್ಷಣ ಅವನ ಮುಖವನ್ನು ಅವನು ಕನ್ನಡಿಯಲ್ಲಿ ನೋಡಿಕೊಳ್ಳಬಾರದು ಅದರಲ್ಲೂ ಮುಖ ತೊಳೆಯದೆ ಹಾಗೆ ಕನ್ನಡಿಯಲ್ಲಿ ನೋಡಿಕೊಳ್ಳಬಾರದು ಇದು ಅವನಿಗೆ ದುರದೃಷ್ಟವಾಗಿ ಪರಿಣಮಿಸುತ್ತದೆ. ನಾವು ಯಾವುದಾದರೂ ಕೆಲಸ ಅಂದುಕೊಂಡಿದ್ದರೆ ಆ ಕೆಲಸವು ಕೂಡ ನೆರವೇರುವುದಿಲ್ಲ.
ಅಂಥವರ ಮನೆಯಲ್ಲಿ ಸದಾ ಕಾಲ ಆಶಾಂತಿ ಮನಸ್ತಾಪಗಳು ಜಗಳ ಕಿರಿಕಿರಿ ಹೀಗೆ ಇಂತಹ ಕೆಲವೊಂದಷ್ಟು ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ಕೂಡ ಇದಕ್ಕೆ ಬಹಳ ಪ್ರಮುಖವಾದಂಥ ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳುವುದನ್ನು ತಪ್ಪಿಸಬೇಕು.
ಈ ಸುದ್ದಿ ಓದಿ:- ಈ ವಸ್ತುಗಳನ್ನು ಯಾರೇ ಕೊಟ್ಟರೂ ನಿರಾಕರಿಸದೆ ತಗೊಳ್ಳಿ ಒಳ್ಳೆಯದಾಗುತ್ತೆ.!
* ಹಾಗೂ ಬೆಳಗ್ಗೆ ಎದ್ದ ತಕ್ಷಣವೇ ಅಡುಗೆ ಮನೆಗೆ ನೇರವಾಗಿ ನುಗ್ಗ ಬಾರದು ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಪಾತ್ರೆಗಳನ್ನು ತೊಳೆಯಲು ಹೋಗಬಾರದು. ಬೆಳಗ್ಗೆ ಎದ್ದ ತಕ್ಷಣ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ ಆನಂತರ ನಿಮ್ಮ ಮುಖವನ್ನು ಸ್ವಚ್ಛ ಮಾಡಿಕೊಂಡು ಆನಂತರ ಮಿಕ್ಕ ಕೆಲಸಗಳನ್ನು ಮಾಡುವುದು ಒಳ್ಳೆಯದು.
ಹಾಗೇನಾದರೂ ನೀವು ಎದ್ದ ತಕ್ಷಣ ಕೈಕಾಲು ಮುಖ ತೊಳೆಯದೆ ಕಸಗುಡಿಸುವುದು ಮಾಡಿದ್ದೆ ಆದರೆ ಆ ದಿನ ನಿಮಗೆ ತುಂಬಾ ಪ್ರತಿಕೂಲವನ್ನು ಉಂಟುಮಾಡುವಂತಹ ದಿನವಾಗಿರುತ್ತದೆ ಎಂದೇ ಹೇಳಬಹುದು ಜೊತೆಗೆ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಮನೆಯನ್ನು ಗಲೀಜಾಗಿ ಇಟ್ಟುಕೊಳ್ಳಬೇಡಿ.
ಬೆಳಗ್ಗೆ ಎದ್ದ ತಕ್ಷಣ ನೋಡುವುದಕ್ಕೆ ಸ್ವಚ್ಛವಾಗಿ ಇರುವಂತೆ ಮನೆಯನ್ನು ಚೆನ್ನಾಗಿ ಇಟ್ಟು ಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಹೀಗೆಲ್ಲ ಇದ್ದರೆ ಮಾತ್ರ ನಮ್ಮ ಮನೆಯ ಮೇಲೆ ಲಕ್ಷ್ಮಿ ದೇವಿ ಕೃಪೆ ತೋರಿಸುತ್ತಾಳೆ ಅಂದರೆ ಲಕ್ಷ್ಮಿ ದೇವಿಯನ್ನು ನಾವು ಒಲಿಸಿಕೊಳ್ಳಬಹುದು ಇಲ್ಲವಾದರೆ ನಾವು ದುರಾದೃಷ್ಟವನ್ನೇ ಅನುಭವಿಸಬೇಕಾಗುತ್ತದೆ.