ಈ ರಾಶಿಯ, ಅದೃಷ್ಟದ ಸಂಖ್ಯೆ, ಅದೃಷ್ಟದ ದಿಕ್ಕು, ಅದೃಷ್ಟದ ದೇವರು ಯಾವುದು ಗೊತ್ತಾ? ಜೀವನದಲ್ಲಿ ಈ ಎರಡು ತಪ್ಪುಗಳನ್ನು ಮಾಡದೇ ಇರಿ ನಿಮ್ಮ ಯಶಸ್ಸನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಕುಂಭ ರಾಶಿಯವರು ಬಹಳ ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ. ಇವರ ಬಹಳ ಸಕಾರಾತ್ಮಕ ವ್ಯಕ್ತಿಗಳಾಗಿರುತ್ತಾರೆ.
ಒಂದೇ ವಿಷಯವನ್ನು ಹತ್ತಾರು ಆಯಾಮದಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ತಾಳ್ಮೆಯನ್ನು ಕೂಡ ಇವರು ಹೊಂದಿರುತ್ತಾರೆ. ಕೌಟುಂಬಿಕ ವಿಚಾರದಲ್ಲಿ ಬಹುತೇಕ ಎಲ್ಲರೂ ಸುಖಿಗಳೇ, ತಂದೆ ತಾಯಿಯ ಪ್ರೀತಿ ಆಶೀರ್ವಾದ ಹಾಗೂ ಬಯಸಿದ ಕನ್ಯೆಯನ್ನು ವಿವಾಹವಾಗುವಂತಹ ಯೋಗವು ಈ ರಾಶಿಯವರಿಗೆ ಇದ್ದೇ ಇರುತ್ತದೆ. ಕುಂಭ ರಾಶಿಯವರು ಬಹಳ ಯೋಚಿಸಿ ಜೀವನದಲ್ಲಿ ನಿರ್ಧಾರವನ್ನು ತೆಗೆದುಕೊಂಡು ಅದೇ ರೀತಿ ತಮ್ಮ ಗುರಿಯನ್ನು ಕೂಡ ಸಾಧಿಸುತ್ತಾರೆ.
ಕುಂಭ ರಾಶಿಯವರು ಹಣಕಾಸಿನ ವಿಚಾರದಲ್ಲಿ ಕೂಡ ಬಹಳ ಉತ್ತಮವಾಗಿರುತ್ತಾರೆ. ಇವರು ಉದ್ಯೋಗ ಮಾಡಿದರು ಕೂಡ ಉದ್ಯೋಗದ ಜೊತೆಗೆ ಯಾವುದಾದರೂ ಒಂದು ಸಣ್ಣ ವ್ಯಾಪಾರವನ್ನು ಆರಂಭಿಸಲು ಇಷ್ಟಪಡುತ್ತಾರೆ ಇವರು ಹೆಚ್ಚು ಆದಾಯದ ಮೂಲ ಹೊಂದಲು ಹಾಗೂ ಹೆಚ್ಚು ದುಡ್ಡು ಪಡೆದು ಐಷಾರಾಮಿ ಜೀವನ ನಡೆಸಲು ಬಯಸುತ್ತಾರೆ.
ಈ ಸುದ್ದಿ ಓದಿ:- ರೈತನನ್ನು ಮದುವೆಯಾದ ಯುವತಿಗೆ ಸಿಗಲಿದೆ 5 ಲಕ್ಷ ರೂಪಾಯಿ.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರ ನಿರ್ಧಾರ
ಇದಕ್ಕೆ ಬೇಕಾದ ಎಲ್ಲ ರೀತಿಯ ಶ್ರಮವನ್ನು ಕೂಡ ಪಡುತ್ತಾರೆ ಇವರಿಗೆ ಸಂಗೀತ ಸಾಹಿತ್ಯ ಕಲೆ ಓದು ಇವುಗಳ ಮೇಲು ಕೂಡ ಆಸಕ್ತಿ ಇರುತ್ತದೆ, ಕೆಲವರು ಇದನ್ನೇ ತಮ್ಮ ಕ್ಷೇತ್ರವಾಗಿರಿಸಿಕೊಂಡರೆ ಕೆಲವರು ಹವ್ಯಾಸದ ರೀತಿಯಲ್ಲಾದರೂ ರೂಢಿಸಿಕೊಂಡಿರುತ್ತಾರೆ. ಇವರ ಜೀವನದ 23, 24ನೇ ವಯಸ್ಸು 30 ಮತ್ತು 32ನೇ ವಯಸ್ಸು 45 ಹಾಗೂ 60ನೇ ವಯಸ್ಸು ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಗಿರುತ್ತದೆ.
ಆ ಸಮಯದಲ್ಲಿ ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮಕ್ಕಳು ಅಥವಾ ವ್ಯಾಪಾರ, ವ್ಯವಹಾರ, ಸಂಸಾರ ಜೀವನ, ಹಣಕಾಸು ಇವುಗಳಲ್ಲಿ ಯಾವುದಾದರೂ ಬಲವಾದ ಬದಲಾವಣೆಯಾಗಿ ಅದು ಅವರ ಜೀವನದ ಮೇಲೆ ಗಂಭೀರ ಪರಿಣಾಮಗಳು ಉಂಟುಮಾಡುವಂತಹ ಘಟನೆಗಳು ಸಂಭವಿಸುವ ಸಮಯ ಆಗಿರುತ್ತದೆ. ಕೆಲವರಿಗೆ ಇದು ಉತ್ತಮ ರೀತಿಯಲ್ಲಿ ನಡೆದು ಜೀವನ ಬದಲಾಗುವಂತಹ ಅವಕಾಶ ಆಗಿದ್ದರೆ ಕೆಲವೊಬ್ಬರು ವಿಪರೀತ ನೋ’ವು ಪಡೆದು ಅದನ್ನೇ ಛಲವಾಗಿ ತೆಗೆದುಕೊಂಡು ಬದುಕು ಬದಲಾಯಿಸಿಕೊಳ್ಳುವಂತಹ ಸಂದರ್ಭ ಸೃಷ್ಟಿಯಾಗಿರುತ್ತದೆ.
ಕುಂಭ ರಾಶಿ ಅವರಿಗೆ ಸ್ನೇಹಿತರು ಹೆಚ್ಚು ಹಾಗೂ ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡುವಂತಹ ಸ್ವಭಾವ ಇವರದ್ದು. ಆದರೆ ಇದೇ ಅವರ ಜೀವನದಲ್ಲಿ ಅವರ ಗೌರವ ಘನತೆಗೆ ಧಕ್ಕೆ ತರುತ್ತದೆ. ಇದೇ ರೀತಿ ಇವರು ಕೆಲವೊಂದು ಸಂದರ್ಭಗಳಲ್ಲಿ ಸುಳ್ಳು ಹೇಳುವ ಪರಿಸ್ಥಿತಿ ಇರುತ್ತದೆ ಈ ತಪ್ಪು ಮಾಡುವುದರಿಂದ ಕೂಡ ಮುಂದೆ ಇವರಿಗೆ ಸಮಸ್ಯೆಗಳು ಹಾಗೂ ಇವರ ಗೌರವ ಕಡಿಮೆ ಆಗುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಈ ಎರಡು ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸಿ.
ಈ ಸುದ್ದಿ ಓದಿ:- Bank Transaction: ಇನ್ಮುಂದೆ ಬ್ಯಾಂಕ್ ಅಕೌಂಟ್ ನಿಂದ ಇದಕ್ಕಿಂತ ಹೆಚ್ಚು ಡ್ರಾ ಮಾಡಿದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತೆ.! ಹೊಸ ರೂಲ್ಸ್
ಅದೃಷ್ಟದ ದಿಕ್ಕು:- ಇವರು ವಾಸಿಸುವ ಮನೆ ಅಥವಾ ಕಟ್ಟಿಸುವ ಮನೆ ಅಥವಾ ಇವರ ಕಚೇರಿ ವ್ಯಾಪಾರಸ್ಥಳ ಇನ್ಯಾವುದೇ ಶುಭ ಸಂದರ್ಭಗಳಲ್ಲಿ ಪ್ರಯಾಣ ಮಾಡುವ ದಿಕ್ಕು ಪಶ್ಚಿಮ ಅಥವಾ ಉತ್ತರ ಆಗಿದ್ದರೆ ಇವರು ನಿರೀಕ್ಷಿಸಿದ ಫಲಗಳನ್ನು ಪಡೆಯುತ್ತಾರೆ
ಅದೃಷ್ಟದ ದೇವರು:- ಕುಂಭ ರಾಶಿಯವರಿಗೆ ಶಿವ ಹಾಗೂ ಪಾರ್ವತಿಯ ಆಶೀರ್ವಾದ ಸದಾ ಇರುತ್ತದೆ. ಇವರು ಶಿವನ ರೂಪ ಹಾಗೂ ಆದಿಶಕ್ತಿಯ ಅವತಾರಗಳನ್ನು ಆರಾಧಿಸುವುದರಿಂದ ಇವರಿಗೆ ಬಹಳ ಒಳ್ಳೆಯದಾಗುತ್ತದೆ.
ಶುಭದಿನ:- ಕುಂಭ ರಾಶಿಯವರಿಗೆ ಯಾವಾಗಲೂ ಸೋಮವಾರ ಬಹಳ ಶುಭವಾಗಿರುತ್ತದೆ ಮತ್ತು ಇದೇ ಅವರ ಇಷ್ಟವಾದ ವಾರ ಕೂಡ. ಸೋಮವಾರದ ದಿನ ಹೆಚ್ಚು ಸಂತೋಷ ನೆಮ್ಮದಿಯಿಂದ ಇರುವ ಇರುವ ದಿನವಾಗಿದೆ, ಈ ದಿನವೇ ನೀವು ಒಳ್ಳೆ ಕಾರ್ಯಗಳನ್ನು ಆರಂಭಿಸಿದರೆ ಒಳ್ಳೆಯದೇ ಆಗುತ್ತದೆ.