ಸಾಮನ್ಯವಾಗಿ ರೈತರಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ರೈತರು ಹೆಚ್ಚಾಗಿ ಕೃಷಿ ಮಾಡುವಲ್ಲಿ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಇದೀಗ ರೈತರಿಗೆ ಕೃಷಿಯಲ್ಲಿನ ಸಮಸ್ಯೆಯ ಜೊತೆಗೆ ಹೊಸ ರೀತಿಯ ಸಮಸ್ಯೆ ಹುಟ್ಟಿಕೊಂಡಿದೆ. ಅದೇನೆಂದರೆ, ರೈತರ ಮದುವೆಯ ವಿಚಾರವಾಗಿದೆ. ಹೌದು, ರೈತ ಯುವಕರ ಹೆಣ್ಣು ಹುಡುಕುವುದು ತುಂಬಾ ಕಷ್ಟವಾಗುತ್ತಿದೆ ಎಂದು ಸಾಕಷ್ಟು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ.! ಸಾರಿಗೆ ಇಲಾಖೆಯ ಅಧಿಕೃತ ಆದೇಶಲ್ಲೇನಿದೆ ಗೊತ್ತಾ.? ಇಲ್ಲಿದೆ ಮಾಹಿತಿ
ಹೌದು, ರೈತನನ್ನು ಮದುವೆಯಾಗುವ ಯುವತಿಗೆ 5 ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಬೇಕು ಎಂದು ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ರಾಜ್ಯ ಬಜೆಟ್ನಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಲಾಗಿದ್ದು, ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಈ ಹಿಂದಿನಿಂದಲೂ ಹಲವು ಬಾರಿ ರೈತಾಪಿ ವರ್ಗದ ಯುವಕರನ್ನು ವರಿಸುವ ಯುವತಿಯರಿಗೆ ಪ್ರೋತ್ಸಾಹಧನ ಅಥವಾ ಇತರೆ ಯೋಜನೆ ಘೋಷಿಸಿ ಎಂದು ಅನೇಕ ರೈತ ಸಂಘಟನೆಗಳು ಆಗ್ರಹಿಸಿತ್ತು. ಇದೀಗ ಈ ವಿಷಯ ಮತ್ತೊಮ್ಮೆ ಪ್ರಸ್ತಾಪಗೊಂಡಿದ್ದು, ರಾಜ್ಯದ ರೈತ ಹುಡುಗನನ್ನು ಮದುವೆಯಾಗುವ ಯುವತಿಗೆ ಐದು ಲಕ್ಷ ರೂ. ಅನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಕೋರಲಾಗಿದೆ.
ಈ ಸುದ್ದಿ ಓದಿ:- Bank Transaction: ಇನ್ಮುಂದೆ ಬ್ಯಾಂಕ್ ಅಕೌಂಟ್ ನಿಂದ ಇದಕ್ಕಿಂತ ಹೆಚ್ಚು ಡ್ರಾ ಮಾಡಿದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತೆ.! ಹೊಸ ರೂಲ್ಸ್
ರೈತರ (farmers) ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿರುವ ಸರ್ಕಾರ ಈಗ ಈ ಸಮಸ್ಯೆಗೆ ಉತ್ತರ ಕೊಡಲಿದೆಯಾ ಎಂದು ನಿಜಕ್ಕೂ ಕಾದು ನೋಡಲೇಬೇಕು. ರೈತರು ದೇಶದ ಜೀವಾಳ. ಬೆಳೆ ಬೆಳೆಯುವ ವಿಚಾರದಲ್ಲಿ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಸರ್ಕಾರ ಅದಕ್ಕೆ ಪರಿಹಾರವನ್ನು ಒದಗಿಸಲು ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತದೆ. ಆದರೆ ಈಗ ರೈತರಿಗೆ ಇರುವುದು ಜೀವನದ ಸಮಸ್ಯೆ.
ಒಂಟಿಯಾಗಿರುವ ರೈತರು ಜಂಟಿಯಾಗಿ ಜೀವನ ನಡೆಸಬೇಕು ಅಂದರೆ ಯಾರು ಹೆಣ್ಣು ಕೊಡುವವರೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಇದು ನಿಜಕ್ಕೂ ರೈತರು ಚಿಂತೆ ಮಾಡಬೇಕಾದ ವಿಷಯ. 45 ಕಳೆದರೂ ಕೂಡ ರೈತ ಮಕ್ಕಳಿಗೆ ಮಾತ್ರ ಮದುವೆ (Marriage) ಆಗುತ್ತಿಲ್ಲ. ಅವರು ಎಷ್ಟೇ ದುಡಿಯುತ್ತಾರೆ ಎಂದರು, ಎಷ್ಟೇ ಸಿರಿವಂತರಾಗಿದ್ದರು ಕೂಡ ರೈತರ ಮಕ್ಕಳನ್ನು ಮದುವೆ ಆಗುವವರು ಮಾತ್ರ ಯಾರು ಇಲ್ಲ. ಇದೇ ಕಾರಣಕ್ಕೆ ರಾಜ್ಯ ರೈತ ಸಂಘಟನೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಮನವಿ ಒಂದನ್ನು ಸಲ್ಲಿಸಿದ್ದಾರೆ ಇದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎನ್ನುವ ಕುತೂಹಲ ಜನರಲ್ಲಿ ಮಾಡಿದೆ.
ರೈತ ಯುವಕರನ್ನು ಮದುವೆಯಾದ ಯುವತಿಗೆ ಸಿಗಲಿದೆ 5 ಲಕ್ಷ!
ಸಾಮಾನ್ಯವಾಗಿ ಮದುವೆ ಎನ್ನುವುದು ದೊಡ್ಡ ಜವಾಬ್ದಾರಿಯಾಗಿರುತ್ತದೆ. ಎಲ್ಲರು ಕೂಡ ಮದುವೆಯಾಗಲೇ ಬೇಕಾಗುತ್ತದೆ. ಒಂಟಿ ಜೀವನದಿಂದ ಜಂಟಿಯಾಗಲು ಸಂಗಾತಿಯ ಅವಶ್ಯಕತೆ ಇರುತ್ತದೆ. ಸದ್ಯ ಮದುವೆಗೆ ವಧು ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ರೈತರಿಗೆ ಮದುವೆ ಮಾಡುವುದು ಕಷ್ಟವಾಗುತ್ತಿದೆ. ಯಾವುದೇ ಹುಡುಗಿಯು ರೈತರು ಮದುವೆಯಾಗಲು ಮುಂದೆ ಬರುತ್ತಿಲ್ಲ.
ಹೀಗಾಗಿ, ರೈತರು ಈ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರದ ಮೊರೆ ಹೋಗಿದ್ದಾರೆ. ರೈತನನ್ನು ಮದುವೆಯಾಗುವ ಯುವತಿಗೆ ಸರ್ಕಾರದಿಂದ 5 ಲಕ್ಷ ರೂ. ಪ್ರೋತ್ಸಾಹಧನ ನೀಡುವಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ರೈತರ ಮನವಿ ಏನು?
ರೈತರಿಗೆ ಎಷ್ಟೇ ಮಾಡಿದರೂ ಹುಡುಗಿಯನ್ನು ಮದುವೆ ಮಾಡಿ ಕೊಡುವವರೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ, ರೈತರು ಶ್ರೀಮಂತರಾಗಿದ್ದರು ಕೂಡ ಹುಡುಗಿಯ ತಂದೆ ತಾಯಿ ತಮ್ಮ ಮಕ್ಕಳನ್ನು ರೈತನಿಗೆ ಕೊಟ್ಟು ಮದುವೆ ಮಾಡಲು ಮಾತ್ರ ಹಿಂದೆಟು ಹಾಕುತ್ತಿದ್ದಾರೆ.
ಎಷ್ಟು ದಿನ ಒಂಟಿಯಾಗಿ ಜೀವನ ನಡೆಸಲು ಸಾಧ್ಯವಿದೆ ರೈತರ ಮಕ್ಕಳು ಕೂಡ ಜಂಟಿಯಾಗಿ ಜೀವನ ನಡೆಸಬೇಕು ಅಲ್ಲವೇ ಇದೇ ಕಾರಣಕ್ಕೆ ರೈತ ಸಂಘಟನೆಯ ಮುಖ್ಯಸ್ಥರು ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ಯಾ ಭಾಗ್ಯ ನೀಡುವಂತೆ ಮನವಿ ಮಾಡಿದ್ದಾರೆ. ಹೆಣ್ಣು ಮಗಳು ರೈತನನ್ನು ಮದುವೆ ಆದರೆ ಆಕೆಗೆ 5 ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ರಾಜ್ಯ ಸರ್ಕಾರದ ನಿರ್ಧಾರ ಏನು?
ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. 45 ವರ್ಷವಾದರೂ ರೈತರ ಮಕ್ಕಳಿಗೆ ಮದುವೆ ಆಗುತ್ತಿಲ್ಲ. ಕೃಷಿಗೆ ಆದ್ಯತೆ ಇಲ್ಲದಂತಾಗಿದೆ. ರೈತನನ್ನು ಮದುವೆಯಾಗುವ ಹುಡುಗಿಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 200ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ರೈತ ಸಂಘಟನೆಗಳ ಮುಖಂಡರೊಂದಿಗೆ ಬಜೆಟ್ ಸಿದ್ಧತೆ ಕುರಿತು ಸಭೆ ನಡೆಸಿದ್ದಾರೆ. ಈ ವೇಳೆ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ.
ರಾಜ್ಯ ಸರ್ಕಾರ ಸದ್ಯ ಬಜೆಟ್ (budget) ಮಂಡಿಸಲಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಕೂಡ ನಡೆದಿದೆ. ಈ ಬಾರಿಯ ಬಜೆಟ್ ನಲ್ಲಿ ರಾಜ್ಯ ಸರ್ಕಾರ ರೈತರ ಈ ಮದುವೆಯ ಮನವಿಯನ್ನು ಒಪ್ಪಿ ರೈತರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನ ನೀಡುವುದಕ್ಕೆ ಅಸ್ತು ಎನ್ನಬಹುದೇ? ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಏನು ಎಂಬ ಕುತೂಹಲ ಪ್ರತಿಯೊಬ್ಬರಲ್ಲಿಯೂ ಇದೆ. ಕೊನೆ ಪಕ್ಷ ರೈತರ ಈ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಲಿದೆಯೇ ಎನ್ನುವುದನ್ನು ಕಾದು ನೋಡಬೇಕು.
ರೈತರ ಇತರೆ ಬೇಡಿಕೆಗಳು
– ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು.
– ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್ ತೆಗೆದುಕೊಳ್ಳಬೇಕು.
– ಹೊಸದಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯಲು ಎಲ್ಲಾ ಪರಿಕರಗಳ ವೆಚ್ಚವನ್ನು ಸರ್ಕಾರವೇ ಸಂಪೂರ್ಣ ಭರಿಸಬೇಕು.
– ಕರ ನಿರಾಕರಣ ಚಳವಳಿಯ ಭಾಗವಾಗಿ ಬಾಕಿ ಉಳಿದಿರುವ ರೈತರ ಗೃಹ ವಿದ್ಯುತ್ ಬಿಲ್ಅನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
– ಎಲ್ಲ ರೈತರಿಗೂ 10 ಹೆಚ್ಪಿ ತನಕ ಉಚಿತ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಿ, ಹಳೇ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು.