ಬೈಕ್, ಕಾರ್, ಟ್ರ್ಯಾಕ್ಟರ್ ಯಾವುದೇ ಆಗಿರಲಿ, ಆ ವಾಹನಗಳಿಗೆ ನಂಬರ್ ಪ್ಲೇಟ್ ಇರ್ಲೇ ಬೇಕು. ಹೆಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಇಲ್ಲಂದಿದ್ದರೆ ಫೆಬ್ರವರಿ 17 ರಿಂದಲೇ ವಾಹನಗಳಿಗೆ ದಂಡ ಹಾಕುತ್ತೇವೆ ಎಂದು ಸಾರಿಗೆ ಇಲಾಖೆ ಹೇಳಿತ್ತು. ಆದರೆ, ಇದೀಗ ಈ ಗಡುವುವನ್ನು ಮೇ 31ರ ವರೆಗೆ ವಿಸ್ತರಣೆ ಮಾಡಿದೆ. ಆ ಮೂಲಕ ನಂಬರ್ ಪ್ಲೇಟ್ ಅಳವಡಿಕೆಗೆ ಪರದಾಡುತ್ತಿದ್ದ ವಾಹನ ಮಾಲೀಕರಿಗೆ ರಿಲೀಫ್ ಸಿಕ್ಕಿದೆ. ಸದ್ಯ ಇದು ಎಲ್ಲರಿಗೂ ನಿಟ್ಟುಸಿರು ಬಿಡುವ ವಿಷಯವಾಗಿದೆ.
ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ (HSRP) ನಂಬರ್ ಪ್ಲೇಟ್ ಅಳವಡಿಸುವ ಅವಧಿಯನ್ನು ನಾಳೆಯಿಂದ ಮೇ 31ರ ವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಕುರಿತಾಗಿ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಅಧಿಕೃತ ಆದೇಶವನ್ನು ಶುಕ್ರವಾರ ಹೊರಡಿಸಿದ್ದಾರೆ. ಇತ್ತೀಚೆಗೆ ಸದನದಲ್ಲಿ ಗಡುವು ವಿಸ್ತರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದರು. ಇಂದು ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ನೀಡಿದ್ದು, ಆ ಮೂಲಕ ನಾಲ್ಕನೇ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಗಡುವು ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಾಹನ ಸವಾರರು ಮನವಿ ಮಾಡಿದ್ದರು.
ಈ ಸುದ್ದಿ ಓದಿ:- ಎಷ್ಟೇ ಪೂಜೆ ಮಾಡಿದ್ರು ನಿಮ್ಮ ಕೋರಿಕೆಗಳು ನೆರವೇರುತ್ತಿಲ್ಲ ಎಂದರೆ ಈ ಮಂತ್ರವನ್ನು 11 ಬಾರಿ ಹೇಳಿ ಹಾಗೂ ಈ ಸ್ವಿಚ್ ವರ್ಡ್ ಬರೆದು ಪರ್ಸ್ ನಲ್ಲಿ ಇಟ್ಟುಕೊಳ್ಳಿ ಎಲ್ಲಾ ಕಾರ್ಯ ನೆರವೇರಿಸಿ ಕೊಡುತ್ತಾರೆ ಈ ಶಕ್ತಿಶಾಲಿ ತಾಯಿ.!
ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ. 2019ರ ಏಪ್ರಿಲ್ ಬಳಿಕ ಖರೀದಿ ಮಾಡಿರುವ ವಾಹನಗಳಿಗೆ ರಿಜಿಸ್ಟ್ರೇಷನ್ ವೇಳೆಯೇ HSRP ಪ್ಲೇಟ್ ಅಳವಡಿಸಲಾಗಿದೆ. ಹೀಗಾಗಿ 2019 ರ ಏಪ್ರಿಲ್‌ಗೂ ಮುನ್ನ ಖರೀದಿಸಿರುವ ಎಲ್ಲಾ ವಾಹನಗಳಿಗೂ ಅತೀ ಸುರಕ್ಷತಾ ನೋಂದಣಿ ಫಲಕ ಅಳವಡಿಕೆ ಕಡ್ಡಾಯವಾಗಿದೆ.
ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ 17 ರ ಡೆಡ್‌ಲೈನ್ ನೀಡಲಾಗಿತ್ತು. ಆದರೆ ಜಿಲ್ಲೆ ಜಿಲ್ಲೆಗಳಲ್ಲೂ ಈ ಪ್ಲೇಟ್ ಅಳವಡಿಕೆ ಆಗಿಲ್ಲ. ಇನ್ನೂ ಒಂದೂವರೆ ಕೋಟಿಗೂ ಹೆಚ್ಚು ವಾಹನಗಳಿಗೆ ಈ ಪ್ಲೇಟ್ ಅಳವಡಿಕೆ ಆಗಬೇಕಿದೆ ಎಂದು ಕಾಂಗ್ರೆಸ್‌ನ ಪರಿಷತ್ ಸದಸ್ಯ ಮಧು ಮಾದೇಗೌಡ ಸದನದಲ್ಲಿ ಪ್ರಸ್ತಾಪಿಸಿದ್ದರು.
ಈ ಹಿಂದೆ 2023ರ ಆ.18ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆಯು ರಾಜ್ಯದಲ್ಲಿ 2019 ರ ಏ.1ಕ್ಕೂ ಮುನ್ನ ನೋಂದಣಿಯಾದ ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ನ.17 ರವರೆಗೆ ಕಾಲಾವಕಾಶ ನೀಡಿತ್ತು. ರಾಜ್ಯದಲ್ಲಿ ಅಂತಹ ಸುಮಾರು 2 ಕೋಟಿ ವಾಹನಗಳಿದ್ದು, ನ.17ರ ಗಡುವಿನೊಳಗೆ ಬಹುತೇಕ ಹಳೆ ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬಹುದೆಂದು ಇಲಾಖೆ ನಿರೀಕ್ಷಿಸಿತ್ತು. ಆದರೆ, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ.ಹೀಗಾಗಿ, ಸಾರಿಗೆ ಇಲಾಖೆಯು ಫೆ.17ರವರೆಗೆ ಗಡುವು ವಿಸ್ತರಿಸಿತ್ತು.ಈ ಗಡುವು ಶನಿವಾರಕ್ಕೆ ಅಂತ್ಯಗೊಳ್ಳಲಿದ್ದು, ಈವರೆಗೆ 2 ಕೋಟಿ ಹಳೆ ವಾಹನಗಳ ಪೈಕಿ 18 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ ಎನ್ನಲಾಗಿದೆ.
ಈ ಸುದ್ದಿ ಓದಿ:- ಫ್ರಿಜ್ ನಲ್ಲಿ ಇಟ್ಟ ಈ ಆಹಾರ ಪದಾರ್ಥಗಳು ವಿಷವಾಗುತ್ತವೆ, ಅಪ್ಪಿತಪ್ಪಿಯು ಹೀಗೆ ಮಾಡಬೇಡಿ.!
ಮತ್ತೊಂದೆಡೆ ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಕೋರಿಕೆ ಸಲ್ಲಿಸುವ ವೆಬ್ ಪೋರ್ಟಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಈ ಕಾರಣಕ್ಕೆ ಮತ್ತೊಮ್ಮೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಗಡುವು ವಿಸ್ತರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಈ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಸಾರಿಗೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಗಡುವು ವಿಸ್ತರಿಸಿದೆ.
ರಾಜ್ಯದಲ್ಲಿ 18 ಲಕ್ಷ ವಾಹನಗಳಿಗೆ ಮಾತ್ರ ಪ್ಲೇಟ್ ಅಳವಡಿಕೆ
ಮಧು ಮಾದೇಗೌಡ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ಸದ್ಯ 18 ಲಕ್ಷ ವಾಹನಗಳಿಗೆ ಮಾತ್ರ ಈ ಪ್ಲೇಟ್ ಅಳವಡಿಕೆ ಆಗಿದೆ. ಇನ್ನೂ ಒಂದು ಕೋಟಿ 82 ಲಕ್ಷ ವಾಹನಗಳಿಗೆ ಈ ಪ್ಲೇಟ್ ಅಳವಡಿಸಬೇಕಿದೆ. ಹೀಗಾಗಿ 3 ತಿಂಗಳ ವರೆಗೆ ಗಡುವು ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದರು.
ಈ ಪ್ಲೇಟ್‌ಗಳನ್ನ ಅಳವಡಿಸಲು ಎಲ್ಲರಿಗೂ ಅವಕಾಶ ನೀಡಲಾಗಿಲ್ಲ. ಸರ್ಕಾರವೇ ಕೆಲ ಏಜೆನ್ಸಿಗಳನ್ನ ನೇಮಕ ಮಾಡಿದೆ. ಅದರಲ್ಲೂ ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಂಡು ನಂಬರ್ ಪ್ಲೇಟ್‌ಗೆ ಆರ್ಡರ್ ಕೊಡಬೇಕು. ಬೆಂಗಳೂರು ಸೇರಿ ಮಹಾನಗರಗಳಲ್ಲಿ ಪ್ಲೇಟ್ ಅಳವಡಿಕೆ ವೇಗ ಪಡೆದುಕೊಂಡಿದೆ. ಆದರೆ ಹಳ್ಳಿಗಳಲ್ಲಿ ಜಾಗೃತಿಯೇ ಆಗಿಲ್ಲ. ಇದರ ನಡುವೆ ಕೆಲ ಫೇಕ್ ವೆಬ್‌ಸೈಟ್‌ಗಳು ಹುಟ್ಟಿಕೊಂಡಿದ್ದು, ಈ ಬಗ್ಗೆಯೂ ಗಮನ ಹರಿಸುತ್ತೇವೆ ಎಂದಿದ್ದರು.
HSRP ನಂಬರ್ ಪ್ಲೇಟ್ ಅಳವಡಿಕೆಗೆ ಸರ್ವರ್ ಪ್ರಾಬ್ಲಂ, ಎರರ್ ಸಂದೇಶದಿಂದಾಗಿ ಜನ ಪರದಾಡುತ್ತಿದ್ದರು. ಹೀಗಾಗಿ ಸರ್ಕಾರ 3 ತಿಂಗಳು ವಿಸ್ತರಣೆ ಮಾಡಿದೆ.
HSRP ನಂಬರ್ ಪ್ಲೇಟ್ ಅಳವಡಿಕೆಯ ಪ್ರಯೋಜನ
– ಹೆಚ್ಚಿನ ಭದ್ರತೆಯ ನೋಂದಣಿ ಫಲಕಗಳು (ಎಚ್‌ಎಸ್‌ಆರ್‌ಪಿ) ವಾಹನಗಳಿಗೆ ಒಂದು ಕಡ್ಡಾಯ ಭದ್ರತಾ ವೈಶಿಷ್ಟ್ಯವಾಗಿದ್ದು ಹಲವು ಪ್ರಯೋಜನಗಳನ್ನು ಒದಗಿಸುತ್ತದೆ.
– ಆಧಾರ ಚಕ್ರ ಸಂಕೇತ: ಎಚ್‌ಎಸ್‌ಆರ್‌ಪಿ ಪ್ಲೇಟ್ ಮೇಲೆ ಬರುವ ಅಶೋಕ ಚಕ್ರ ಸಂಕೇತ ನೀಲಿ ಬಣ್ಣದ ಹೊಲೋಗ್ರಾಮ್‌ನಲ್ಲಿಅಳವಡಿಸಲಾಗಿದೆ. ಇದು ರಾಷ್ಟ್ರೀಯ ಗೌರವವನ್ನು ಸೂಚಿಸುತ್ತದೆ. ಫಲಕ ಸ್ಪಷ್ಟ ಮತ್ತು ಓದಲು ಸುಲಭವಾಗಿದ್ದು ಅಂತಾರಾಷ್ಟ್ರೀಯ ನೋಂದಣಿ ಗುರುತು ಒಳಗೊಂಡಿರುತ್ತದೆ.
– ಹಾಟ್-ಸ್ಟ್ಯಾಂಪ್‌ಡ್ ಅಕ್ಷರಗಳು ಮತ್ತು ಸಂಖ್ಯೆಗಳು: ಎಚ್‌ಎಸ್‌ಆರ್‌ಪಿ ಪ್ಲೇಟ್‌ಗೆ ರಾಜ್ಯ ಕೋಡ್, ಜಿಲ್ಲಾಕೋಡ್ ಮತ್ತು ಏಕಮಾತ್ರ ಆಲ್ಫಾ ನ್ಯೂಮರಿಕ್ ಗುರುತಿನ ಸಂಖ್ಯೆ ವಿಐಎನ್ (ವಾಹನ ಗುರುತಿಸುವಿಕೆ ಸಂಖ್ಯೆ) ನೀಡಲಾಗುವುದು. ಟ್ಯಾಂಪರ್-ಪ್ರೂಫ್ ವೈಶಿಷ್ಟ್ಯಗಳು ಫಲಕಗಳನ್ನು ಕಾನೂನುಬಾಹಿರ ಬದಲಾವಣೆಗಳಿಂದ ರಕ್ಷಿಸುತ್ತವೆ.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರು ನೋಡಿ.!
– ಕಾನೂನು ಜಾರಿಗೆ ಸಹಾಯ: ವಾಹನ ಉಲ್ಲಂಘನೆಗಳನ್ನು ಪತ್ತೆ ಹಚ್ಚಲು ಮತ್ತು ದಂಡ ವಿಧಿಸಲು ಎಚ್‌ಎಸ್‌ಆರ್‌ಪಿಘ್ಕಿ ಫಲಕಗಳು ಕಾನೂನು ಜಾರಿ ಸಂಸ್ಥೆಗಳಿಗೆ ಸಹಾಯ ಮಾಡುತ್ತವೆ. ವಾಹನ ಅಪಘಾತಗಳ ಸಂದರ್ಭದಲ್ಲಿತನಿಖೆಗೆ ಫಲಕಗಳಲ್ಲಿನ ಮಾಹಿತಿಯನ್ನು ಬಳಸಬಹುದು.
– ಪರಿಸರ ಸ್ನೇಹಿ: ಎಚ್‌ಎಸ್‌ಆರ್‌ಪಿ ಫಲಕಗಳನ್ನು ಉತ್ಪಾದಿಸಲು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗುತ್ತದೆ.