2024 ಆರಂಭವಾಗಿ ಒಂದೂವರೆ ತಿಂಗಳಾಗಿದೆ. ಈ ಹಣಕಾಸು ವರ್ಷದಲ್ಲಿ ಹಣಕಾಸು ವ್ಯವಹಾರ (Financial transaction) ಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳ ಬದಲಾವಣೆ ಮಾಡಲಾಗಿದೆ. ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಖಾತೆ (bank account) ಯಿಂದ ಎಷ್ಟು ಹಣವನ್ನು ಹಿಂಪಡೆಯಬಹುದು ಎನ್ನುವುದಕ್ಕೂ ಕೂಡ ತೆರಿಗೆ ನಿಯಮಗಳು ಅನ್ವಯವಾಗುತ್ತವೆ. ಜನರು ಉಳಿತಾಯ ಖಾತೆ (savings account) ಯನ್ನು ಹೊಂದಿರುವುದು ಸರ್ವೇಸಾಮಾನ್ಯ. ನಾವು ಬ್ಯಾಂಕ್ ಮೂಲಕ ಯಾವುದೇ ಹಣಕಾಸಿನ ವ್ಯವಹಾರ ಮಾಡುದಿದ್ದರೆ ಬ್ಯಾಂಕ್ ನಲ್ಲಿ ಕನಿಷ್ಠ ಒಂದು ಖಾತೆಯನ್ನಾದರೂ ಹೊಂದಿರಲೇಬೇಕು.
ಆದಾಯ ತೆರಿಗೆ ಇಲಾಖೆಯ ಹೊಸ ನಿಯಮ! (Income Tax department new rules)
ಹೌದು, ಜನರು ತಮ್ಮ ಉಳಿತಾಯದ ಹಣವನ್ನು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಲು ಬಯಸುತ್ತಾರೆ. ಗ್ರಾಹಕರು ತಮ್ಮ ಅನಿವಾರ್ಯ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುವ ಕಾರಣ ಬ್ಯಾಂಕ್ ನಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ನಿಮಗೆ ಗೊತ್ತೇ…? ನೀವು ಬ್ಯಾಂಕ್ ನಲ್ಲಿ ಹಣವನ್ನು ಹಿಂಪಡೆದರೆ ಅದಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಆದರೆ, ಈ ತೆರಿಗೆ ಪಾವತಿಗೆ ಆದಾಯ ಇಲಾಖೆಯು ಮಿತಿಯನ್ನು ಅಳವಡಿಸಿದೆ. ನೀವು ಮಿತಿಗಿಂತ ಹೆಚ್ಚಿನ ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಹಿಂಪಡೆಯಲು ಬಯಸಿದರೆ ಆ ಸಮಯದಲ್ಲಿ ನೀವು TDS ಪಾವತಿಸಬೇಕಾಗುತ್ತದೆ. ಹಣ ಹಿಂಪಡೆಯುವಿಕೆಗೆ ATM ನಲ್ಲಿ ಮಾತ್ರವಳದೆ ಬಾಂಕ್ ಖಾತೆಯ ಹಣ ಹಿಂಪಡೆಯುವಿಕೆಗೂ ನಿಯಮ ರೂಪಿಸಲಾಗಿದೆ. ಇದೀಗ ನಾವು ಈ ಬಗ್ಗೆ ವಿವರವನ್ನು ತಿಳಿದುಕೊಳ್ಳೋಣ.
ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!
ಬ್ಯಾಂಕ್ ಖಾತೆಯಲ್ಲಿ ಅದರಲ್ಲೂ ಉಳಿತಾಯ ಖಾತೆಯಲ್ಲಿ ಸಾಕಷ್ಟು ಜನ ತಮ್ಮ ಬಳಿ ಇರುವಷ್ಟು ಹಣವನ್ನು ಡಿಪೋಸಿಟ್ (deposit)ಇಡುತ್ತಾರೆ. ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡುತ್ತಾರೆ. ಆದ್ರೆ, ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಆ ಹಣವನ್ನು ಹಿಂಪಡೆಯುವ ಅಗತ್ಯ ಬರಬಹುದು. ಆದರೆ, ನೀವು ಬ್ಯಾಂಕ್ ನಲ್ಲಿ ಎಷ್ಟು ಹಣವನ್ನು ಒಂದು ಆರ್ಥಿಕ ವರ್ಷದಲ್ಲಿ ಹಿಂಪಡೆಯಬಹುದು ಎನ್ನುವುದಕ್ಕೂ ತೆರಿಗೆ ನಿಯಮಗಳು ಅನ್ವಯವಾಗುತ್ತವೆ.
ಇನ್ಮುಂದೆ ಬ್ಯಾಂಕ್ ಖಾತೆಯಿಂದ ವರ್ಷಕ್ಕೆ ಎಷ್ಟು ಹಣ ಮಾತ್ರ ಹಿಂಪಡೆಯಬಹುದು?
ಜನರು ತಮ್ಮ ಬ್ಯಾಂಕ್ ಖಾತೆಯಿಂದ ಉಚಿತವಾಗಿ ಹಣವನ್ನು ಹಿಂಪಡೆದುಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ, ನಿಯಮಗಳ ಪ್ರಕಾರ ಬ್ಯಾಂಕ್ ಖಾತೆಯ್ಲಲಿನ ಹಾನ್ ಹಿಂಪಡೆಯುವಿಕೆಗೆ ಮಿತಿಯನ್ನು ನಿಗದಿಪಡಿಸಲಾಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194N ಅಡಿಯಲ್ಲಿ ಒಬ್ಬ ವ್ಯಕ್ತಿ ಆರ್ಥಿಕ ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ TDS ಅನ್ನು ಪಾವತಿಸಬೇಕಾಗುತ್ತದೆ.
ಈ ನಿಯಮ ಸತತ ಮೂರೂ ವರ್ಷದಿಂದ Income Tax Return ಸಲ್ಲಿಸದ ಜನರಿಗೆ ಅನ್ವಯವಾಗುತ್ತದೆ. ITR ಅನ್ನು ಸಲ್ಲಿಸುವವರಿಗೆ ಈ ನಿಯಮದ ಅಡಿಯಲ್ಲಿ ಹೆಚ್ಚಿನ ಪರಿಹಾರ ಸಿಗುತ್ತದೆ. ಅಂತಹ ಗ್ರಾಹಕರು TDS ಪಾವತಿಸದೆಯೇ ಬ್ಯಾಂಕ್, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್ ಖಾತೆಯಿಂದ ಆರ್ಥಿಕ ವರ್ಷದಲ್ಲಿ 1 ಕೋಟಿ ರೂಪಾಯಿಗಳನ್ನ ಹಿಂಪಡೆಯಬಹುದಾಗಿದೆ.
ಹಣವನ್ನು ಹಿಂತೆಗೆದುಕೊಂಡಾಗ ಎಷ್ಟು TDS ಪಾವತಿಸಬೇಕಾಗುತ್ತದೆ…?
ನೀವು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ITR ಅನ್ನು ಸಲ್ಲಿಸದಿದ್ದರೆ, ಆಗ ನೀವು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಾಗ 2 ಪ್ರತಿಶತ TDS ಮತ್ತು 1 ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಾಗ 5 ಪ್ರತಿಶತ TDS ಅನ್ನು ಪಾವತಿಸಬೇಕಾಗುತ್ತದೆ.
TDS ಎಂದರೇನು?
ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್ (ಟಿಡಿಎಸ್) ತೆರಿಗೆ ಸಂಗ್ರಹದ ಉದ್ದೇಶ ಹೊಂದಿದ್ದು, ಹೆಸರೇ ಸೂಚಿಸುವಂತೆ ಇದು ಮೂಲದಲ್ಲಿಯೇ ತೆರಿಗೆ ಕಡಿತ ಮಾಡುವ ವ್ಯವಸ್ಥೆಯಾಗಿದೆ. ಉದ್ಯೋಗದಾತ ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ಪಾವತಿಸುವ ಸಂದರ್ಭ ಆದಾಯ ತೆರಿಗೆಯನ್ನು ಕಡಿತಗೊಳಿಸುವುದು ಕಡ್ಡಾಯವಾಗಿದ್ದು, ನೇರವಾಗಿ ಕೇಂದ್ರ ಸರ್ಕಾರದ ಆದಾಯ ಇಲಾಖೆಗೆ ಪಾವತಿಸುತ್ತಾರೆ.
ಆದಾಯ ತೆರಿಗೆ ಕಾಯಿದೆ 1961ರ ಅನ್ವಯ ವೇತನಗಳು ಟಿಡಿಎಸ್ ಅಡಿಯಲ್ಲಿ ಬರುತ್ತವೆ. ಹಾಗೆಯೇ ಬ್ಯಾಂಕ್ ಠೇವಣಿಗಳು ಮತ್ತು ಇತರ ಹೂಡಿಕೆಗಳ ಮೇಲಿನ ಬಡ್ಡಿ, ವಿಮಾ ಕಂಪನಿಗಳ ಏಜೆಂಟರ ಕಮಿಷನ್ ಇತ್ಯಾದಿಗಳೂ ಟಿಡಿಎಸ್ ವ್ಯಾಪ್ತಿಗೆ ಒಳಪಟ್ಟಿವೆ. ಈ ಆದಾಯಗಳ ಮೇಲೆ ಟಿಡಿಎಸ್ ಕಡಿತವಾಗುತ್ತದೆ..
ಈ ನಿಯಮ ಯಾರಿಗೆ ಅನ್ವಯವಾಗುತ್ತದೆ?
ಆದಾಯ ತೆರಿಗೆ ಇಲಾಖೆಯ ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ ಸತತವಾಗಿ ಮೂರು ವರ್ಷಗಳಿಂದ ಯಾರು ಇನ್ಕಮ್ ಟ್ಯಾಕ್ಸ್ ರಿಟರ್ನ್ (ITR) ಸಲ್ಲಿಸಿಲ್ಲವೋ ಅಂತವರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ, ಐಟಿಆರ್ ಅನ್ನ ಪ್ರತಿ ವರ್ಷ ಸರಿಯಾಗಿ ಪಾವತಿ ಮಾಡುವವರಿಗೆ ಹೆಚ್ಚಿನ ಬೆನಿಫಿಟ್ ಇದೆ. ಸರಿಯಾಗಿ ಐಟಿಆರ್ ರಿಟರ್ನ್ ಸಲ್ಲಿಸುವವರು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿ ಹಾಗೂ ಸಹಕಾರಿ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ ಒಂದು ವರ್ಷದಲ್ಲಿ ಒಂದು ಕೋಟಿ ರೂಪಾಯಿಗಳ ವರೆಗೆ ಹಣವನ್ನು ಹಿಂಪಡೆಯಬಹುದು.
ATM ವಹಿವಾಟಿನ ಮಿತಿಯ ಬಗ್ಗೆ ತಿಳಿಯಿರಿ
ATM ನಲ್ಲಿ ಹಣವನ್ನು ಡ್ರಾ ಮಾಡಲು ಮಿತಿಯನ್ನು ವಿಧಿಸಲಾಗಿದೆ. RBI ಜನವರಿ 1, 2022 ರಿಂದ ATM ನಿಂದ ನಗದು ಹಿಂಪಡೆಯಲು ಸೇವಾ ಶುಲ್ಕವನ್ನು ಹೆಚ್ಚಿಸಿದೆ. ಈಗ ಬ್ಯಾಂಕ್‌ಗಳು ನಿಗದಿತ ಮಿತಿಯನ್ನು ಮೀರಿದ ವಹಿವಾಟುಗಳಿಗೆ 21 ರೂಪಾಯಿಗಳನ್ನು ವಿಧಿಸುತ್ತಿವೆ. ನಿಮ್ಮ ಬ್ಯಾಂಕ್ ATM ನಿಂದ ನೀವು ಪ್ರತಿ ತಿಂಗಳು 5 ಬಾರಿ ಉಚಿತವಾಗಿ ಹಣವನ್ನ ಡ್ರಾ ಮಾಡಬಹುದು ಹಾಗೆ ಇತರ ಬ್ಯಾಂಕ್ ATM ನಿಂದ 3 ಬಾರಿ ಉಚಿತವಾಗಿ ಹಣವನ್ನ ಡ್ರಾ ಮಾಡಬಹುದಾಗಿದೆ.
ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ.! ಸಾರಿಗೆ ಇಲಾಖೆಯ ಅಧಿಕೃತ ಆದೇಶಲ್ಲೇನಿದೆ ಗೊತ್ತಾ.? ಇಲ್ಲಿದೆ ಮಾಹಿತಿ
ಗ್ರಾಹಕರು ಪಡೆಯುವ ಉಚಿತ ಎಟಿಎಂ ವಹಿವಾಟುಗಳ ಸಂಖ್ಯೆಯು ಖಾತೆಯ ಪ್ರಕಾರ ಮತ್ತು ಡೆಬಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಂದು ತಿಂಗಳಲ್ಲಿ ಎಟಿಎಂಗಳಲ್ಲಿ ಕನಿಷ್ಠ ಸಂಖ್ಯೆಯ ಉಚಿತ ವಹಿವಾಟುಗಳನ್ನು ಕಡ್ಡಾಯಗೊಳಿಸಿದೆ. ಆದಾಗ್ಯೂ, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಉಚಿತ ವಹಿವಾಟುಗಳನ್ನು ನೀಡಬಹುದು.