ಸೊಂಟದ ನೋವು ಎನ್ನುವುದೇ ಇತ್ತೀಚೆಗೆ ಎಲ್ಲ ವಯೋಮಾನದವರಲ್ಲೂ ಕೂಡ ಕಾಣಿಸಿಕೊಳ್ಳುವ ಸಾಮಾನ್ಯ ಖಾಯಿಲೆ ಆಗಿದೆ. ಹಲವಾರು ಕಾರಣಗಳಿಂದ ನಮಗೆ ಸೊಂಟದ ನೋವು ಬರುತ್ತದೆ. ಈ ನೋವು ಅತಿ ಆದಾಗ ಈಗ ನಾವು ಹೇಳುವ ವಿಧಾನಗಳಿಂದ ಅದನ್ನು ಸುಲಭವಾಗಿ ಗುಣ ಮಾಡಬಹುದು.
● ರೆಸ್ಟ್ ತೆಗೆದುಕೊಳ್ಳುವುದು:- ಕೆಲವರು ಅತಿಯಾಗಿ ಪ್ರಯಾಣ ಮಾಡಿದ ಕಾರಣದಿಂದಾಗಿ ಅಥವಾ ದಿನವಿಡೀ ಒಂದೇ ಕಡೆ ಕುಳಿತು ಕೆಲಸ ಮಾಡಿದಾಗ ಆ ಕಾರಣಗಳಿಂದ ಸೊಂಟದ ನೋವು ಬಂದಿದ್ದರೆ, ನೀವು ಮೂರ್ನಾಲ್ಕು ದಿನದವರೆಗೆ ಚೆನ್ನಾಗಿ ರೆಸ್ಟ್ ಮಾಡಬೇಕು, ಈ ರೀತಿ ರೆಸ್ಟ್ ಮಾಡಿದಾಗ ಸೊಂಟದ ನೋವು ಕಡಿಮೆ ಆಗುತ್ತದೆ.
ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಿಂದ ಅಧಿಕೃತ ಘೋಷಣೆ.!
● ಡಯಾಗ್ನೋಸ್ಟಿಕ್:- ಯಾವ ಕಾರಣದಿಂದಾಗಿ ಸೊಂಟ ನೋವು ಬಂದಿದೆ ಎನ್ನುವುದನ್ನು ತಿಳಿದುಕೊಳ್ಳದೆ ಅನೇಕ ಪ್ರಯೋಗಗಳನ್ನು ಮಾಡುತ್ತಿರುತ್ತೇವೆ. ಹಾಗಾಗಿ ತೆಗೆದುಕೊಂಡ ನಂತರ ಕೂಡ ಸೊಂಟದ ನೋವು ಗುಣವಾಗದೆ ಇದ್ದಾಗ ನಾವು ತಪ್ಪದೆ ವೈದ್ಯರ ಬಳಿ ಹೋಗಿ ಡಯಾಗ್ನೋಸಿಸ್ ಮಾಡಿಸಬೇಕು. ಹೀಗೆ ಮಾಡಿದಾಗ ವಿಟಮಿನ್ ಕೊರತೆಯೋ ಅಥವಾ ದೇಹದಲ್ಲಿ ಬೇರೆ ಏನಾದರೂ ಬದಲಾವಣೆ ಆಗಿ ನೋವು ಬಂದಿದೆಯೋ ಎನ್ನುವುದರ ಮಾಹಿತಿ ವೈದ್ಯರಿಂದ ತಿಳಿಯುತ್ತದೆ ಹಾಗೂ ಅವರು ಅದಕ್ಕೆ ತಕ್ಕ ಹಾಗೆ ಚಿಕಿತ್ಸೆ ಕೊಡುವುದರಿಂದ ಪರಿಣಾಮಕಾರಿಯಾಗಿ ಸೊಂಟದ ನೋವು ಗುಣವಾಗುತ್ತದೆ.
● ವ್ಯಾಯಮ ಮಾಡುವುದು:- ವ್ಯಾಯಾಮ ಮಾಡುವುದರಿಂದ ದೇಹದ ಮೂಳೆಗಳು ಗಟ್ಟಿಯಾಗುತ್ತವೆ, ಮಾಂಸಖಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸರಿ ಹೋಗುತ್ತವೆ. ಇದರಿಂದ ನೋವು ಕಡಿಮೆ ಆಗುತ್ತದೆ ಹಾಗಾಗಿ ನೀವು ರೆಸ್ಟ್ ಮಾಡಿದ ಬಳಿಕ ಕೆಲ ದಿನಗಳನ್ನು ಬಿಟ್ಟು ವ್ಯಾಯಾಮವನ್ನು ರೂಢಿ ಮಾಡಿಕೊಂಡು ಅದನ್ನು ನಿರಂತರವಾಗಿ ಪಾಲಿಸಿಕೊಂಡು ಹೋಗಬೇಕು.
ದೇಶದಾದ್ಯಂತ ಇರುವ ಎಲ್ಲ LIC ಏಜೆಂಟ್ ಮತ್ತು ನೌಕರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ.!
● ವಾಕಿಂಗ್ ಮಾಡುವುದು:- ವಾಕಿಂಗ್ ಮಾಡುವುದರ ಅತಿಮುಖ್ಯ ಉಪಯೋಗ ಏನೆಂದರೆ, ಕಾಲಿನ ಸ್ನಾಯುಗಳ ಮೇಲೆ ಪ್ರೆಶರ್ ಬಿಡುವುದರಿಂದ ಇದು ದೇಹದಲ್ಲಿನ ರಕ್ತ ಸಂಚಾರ ಚೆನ್ನಾಗಿ ಆಗುವುದಕ್ಕೆ ಅನುಕೂಲವಾಗುತ್ತದೆ ಆದ್ದರಿಂದ ಇದು ಉತ್ತಮ ಪರಿಹಾರ.
● ನೋವಿನ ಬಗ್ಗೆ ಗಮನ ಇರಬೇಕು:- ನಾವು ಯಾವುದೇ ಚಟುವಟಿಕೆ ಮಾಡುವಾಗ ಅಥವಾ ವ್ಯಾಯಾಮ ಮಾಡುವಾಗ ವಾಕಿಂಗ್ ಮಾಡುವಾಗ ಸೊಂಟ ನೋವು ಬಂದರೆ ಅದನ್ನು ನಿಲ್ಲಿಸಬೇಕು. ಮತ್ತೆ ರೆಸ್ಟ್ ಮಾಡಿ ನೋವು ಕಡಿಮೆ ಆದಮೇಲೆ ಶುರು ಮಾಡಬೇಕು.
ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್.!
● ಮಲಗುವ ಭಂಗಿ:- ನಾವು ನೇರವಾಗಿ ಅಥವಾ ಒಂದು ಸೈಡ್ ಆಗಿ ಮಲಗುವುದರಿಂದ ಬೆನ್ನು ನೋವು ಕಡಿಮೆ ಆಗುತ್ತದೆ ಯಾವುದೇ ಕಾರಣಕ್ಕೂ ಬೋರಲು ಮಲಗಬಾರದು ಯಾಕೆಂದರೆ ಈ ರೀತಿ ಮಲಗುವಾಗ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುವುದರಿಂದ ನೋವು ಉಂಟಾಗುತ್ತದೆ.
● ಕುಳಿತುಕೊಳ್ಳುವುದು:- ಕುಳಿತುಕೊಳ್ಳುವಾಗ ಕೂಡ ನಮ್ಮ ಸ್ಪೈನಲ್ ಕಾರ್ಡ್ ಪೋಸಿಷನ್ ಸರಿ ಇರುವ ಹಾಗೆ ಕುಳಿತುಕೊಳ್ಳಬೇಕು, ನೇರವಾಗಿ ಕುಳಿತುಕೊಳ್ಳಬೇಕು. ಅತಿಯಾಗಿ ಸೊಂಟ ನೋವು ಇದ್ದರೆ ಕುಳಿತುಕೊಳ್ಳಲು ಸಮಸ್ಯೆ ಆಗುತ್ತಿದ್ದರೆ ಪ್ರತಿ ಹದಿನೈದು ನಿಮಿಷಕೊಮ್ಮೆ ಎದ್ದು ನಡೆದಾಡಿ, ಆಗ ಇದು ಕಡಿಮೆ ಆಗುತ್ತದೆ.
ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!
● ಅತಿಯಾಗಿ ನೀರು ಕುಡಿಯಿರಿ:- ಒಂದು ಗಂಟೆಗೆ ಒಂದು ಲೋಟ ನೀರನ್ನು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ ಹಾಗೂ ನೀರಿನ ಅಂಶ ಹೆಚ್ಚಿಗೆ ಇರುವ ಹಣ್ಣು ತರಕಾರಿಗಳನ್ನು ಸೇವಿಸಬೇಕು ಯಾಕೆಂದರೆ ದೇಹದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ನೀರು ಇದೆ ಇವುಗಳ ಪ್ರಮಾಣ ಕಡಿಮೆ ಆದಾಗ ಮಸಲ್ಸ್ ಮತ್ತೆ ಇರುವ ನೀರಿನ ಅಂಶವನ್ನು ಬಾಡಿ ಅಬ್ಸರ್ವ್ ಮಾಡುವುದರಿಂದ ಸವೆತ ಉಂಟಾಗಿ ನೋವು ಉಂಟಾಗುತ್ತದೆ ಹಾಗಾಗಿ ಯಾಕೆ ನೀರು ಸೇವಿಸಿ
● ಆಲ್ಕೋಹಾಲ್ ಮತ್ತು ತಂಬಾಕು ಮುಂತಾದ ದುಷ್ಟಗಳಿಂದ ದೂರ ಇರಿ:-
ದುಶ್ಚಟಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಅವು ಎಲ್ಲ ರೀತಿಯ ಕಾಯಿಲೆಗಳನ್ನು ತರುತ್ತವೆ. ಇದರಿಂದ ದೇಹದ ಸುಸ್ಥಿತಿ ಹಾಳಾಗುವುದರಿಂದ ಈ ರೀತಿಯ ನೋವುಗಳು ಉಂಟಾಗುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಆರೋಗ್ಯ ಚೆನ್ನಾಗಿರಬೇಕು ಎಂದರೆ ಈ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಿ.