ಆಧುನಿಕ ಜೀವನಶೈಲಿಗೆ ನಾವು ಮಾರು ಹೋಗಿದ್ದೇವೆ, ನಮ್ಮ ಹಿರಿಯರು ಮಾಡುತ್ತಿದ್ದ ಅನೇಕ ಕೆಲಸಗಳು ಹಾಗೂ ಅವರು ಬಳಸುತ್ತಿದ್ದ ವಸ್ತುಗಳು ಮತ್ತು ಬದುಕುತ್ತಿದ್ದ ರೀತಿಯನ್ನು ಬಿಟ್ಟು ಪಾಶ್ಚಿಮಾತ್ಯ ಶೈಲಿಗೆ ವಾಲಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಿದ್ದೇವೆ. ಅವುಗಳಲ್ಲಿ ಕೆಲವನ್ನಾದರೂ ಎಚ್ಚೆತ್ತುಕೊಂಡು ಬದಲಾಯಿಸಿಕೊಳ್ಳಿ, ಇದರಿಂದ ನಮ್ಮ ಎಷ್ಟೋ ಸಮಸ್ಯೆಗೆ ಪರಿಹಾರ ಸಿಗುತ್ತದೆ.
* ಟೂತ್ಪೇಸ್ಟ್ ನಲ್ಲಿ ಕೆಲವು ಕೆಮಿಕಲ್ ಗಳು ಇವೆ. ಇವು ಹಲ್ಲಿನ ಎನಾಮೆಲ್ ಹಾಳು ಮಾಡುತ್ತದೆ ಎನ್ನುವುದು ತಿಳಿದಿದ್ದರೂ ಕೂಡ ಇನ್ನು ಸಹ ಟೂಥ್ ಪೇಸ್ಟ್ ಅತಿಯಾದ ಬಳಕೆ ತಪ್ಪು. ಇವುಗಳನ್ನು ಬದಲಾಯಿಸಿ ಬೇವಿನಕಡ್ಡಿ, ಇದ್ದಿಲು ಪುಡಿ, ಶುದ್ಧವಾದ ಹಸುವಿನ ಬೆರಣಿ ಯಿಂದ ಮಾಡಿದ ಬೂದಿಯಲ್ಲಿ ಅಥವಾ ರಂಗೋಲಿ ಪುಡಿಯಲ್ಲಿ ಹಲ್ಲು ತಿಕ್ಕುವುದು ಒಳ್ಳೆಯದು.
* ಬೆಳಗ್ಗೆ ಬೆಡ್ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವನ್ನು ಮೊದಲು ಬದಲಾಯಿಸಿ, ಖಾಲಿ ಹೊಟ್ಟೆಯಲ್ಲಿ ಮೊದಲು ಎರಡು ಲೋಟ ಕುಡಿಯುವ ಹದಕ್ಕೆ ಇರುವ ಬಿಸಿ ನೀರನ್ನು ಕುಡಿಯಿರಿ.
* ಸಾಧ್ಯವಾದರೆ ಹಾಲಿನ ವಿಷಯದಲ್ಲೂ ಕೂಡ ದೇಸಿ ಹಸುವಿನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು, ಇಲ್ಲವಾದಲ್ಲಿ ತೆಂಗಿನ ಹಾಲನ್ನು ಕೂಡ ಇದಕ್ಕೆ ಪರ್ಯಾಯವಾಗಿ ಬಳಸಬಹುದು.
* ಸಕ್ಕರೆ ಒಂದು ವೈಟ್ ಪಾಯ್ಸನ್ ಈ ಸ್ಲೋ ಪಾಯಿಸನ್ ನಿಂದ ದೂರ ಇರಿ ಹಾಗೂ ಇದರ ಬದಲು ಸಾವಯವ ಬೆಲ್ಲ ಬಳಸಿ.
* RO Water ಅಥವಾ ಕ್ಯಾನ್ ವಾಟರ್ ಕುಡಿಯುವ ಬದಲು ತಾಮ್ರದ ಹಂಡೆಯಲ್ಲಿ ನೀರನ್ನು ಶೇಖರಿಸಿ ಕುಡಿಯಿರಿ. ಇದಕ್ಕೆ ಸ್ವಲ್ಪ ಚಕ್ಕೆ ಪುಡಿ ಹಾಗೂ ಜೀರಿಗೆ ಪುಡಿ ಹಾಕಿ ಕುಡಿದರೂ ಒಳ್ಳೆಯದು.
* ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ
* ರೀಫೈನ್ಡ್ ಎಣ್ಣೆಯಿಂದ ನಿಜವಾದ ಗಾಣದ ಎಣ್ಣೆಗೆ ಬದಲಾಗಿ
* ಅಡುಗೆ ಮನೆಯಲ್ಲಿರುವ ಪ್ಲಾಸ್ಟಿಕ್ ಡಬ್ಬಗಳನ್ನು ಬದಲಾಯಿಸಿ ಸಾಮಗ್ರಿಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಲು ಗಾಜಿನ ಕಂಟೇನರ್ ಗಳು ಅಥವಾ ಸಿಲ್ವರ್ ಬಾಕ್ಸ್ ಗಳನ್ನು ಬಳಸಿ
* ಕುಕ್ಕರ್ ನಲ್ಲಿ ಅನ್ನ ಮಾಡಲು ಬದಲು ಪಾತ್ರೆಯಲ್ಲಿ ಅನ್ನ ಮಾಡಿ, ಮಣ್ಣಿನ ಮಡಿಕೆಯನ್ನು ಬಳಸಿ.
* ನಾನ್ ಸ್ಟಿಕ್ ಪಾತ್ರೆ ಹಾಗೂ ಇತರೆ ನಾನ್ ಸ್ಟಿಕ್ ವಸ್ತುಗಳನ್ನು ಬದಲಾಯಿಸಿ ಕಬ್ಬಿಣದ ಬಾಣಲಿ, ಕಬ್ಬಿಣದ ರೊಟ್ಟಿ ಹೆಂಚು, ಕಬ್ಬಿಣದ ಪಡ್ಡು ತವಾವನ್ನು ಬಳಸಿ.
* ಫ್ರಿಡ್ಜ್ ನಲ್ಲಿ ಇಟ್ಟು ವಸ್ತುಗಳನ್ನು ತಿನ್ನುವುದು, ಫ್ರೀಜರ್ ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವುದು ಇದು ಎರಡು ಕೂಡ ಆರೋಗ್ಯಕ್ಕೆ ಹಾನಿಕರ ಈ ಎರಡನ್ನು ತಪ್ಪಿಸಿ. ಇದರ ಬದಲು ಮಣ್ಣಿನ ಮಡಿಕೆಗಳಲ್ಲಿ ಸೊಪ್ಪು ತರಕಾರಿಯನ್ನು ಮುಚ್ಚಿಟ್ಟರೂ ಕೂಡ ಫ್ರೆಶ್ ಆಗಿ ಇರುತ್ತವೆ
* ಮನೆಯಲ್ಲಿ ರಾಸಾಯನಿಕ ಮುಕ್ತ ಹಣ್ಣು ತರಕಾರಿಗಳನ್ನು ಬೆಳೆದು ಬಳಸಿ. ಶುಂಠಿ, ತುಳಸಿ, ಅಲೋವೆರಾ, ದೊಡ್ಡಪತ್ರೆ ಮುಂತಾದ ಔಷಧೀಯ ಗುಣಗಳಿರುವ ಗಿಡಗಳನ್ನು ಮನೆಯಲ್ಲಿಯೇ ಬೆಳೆದು, ಮನೆ ಮದ್ದುಗಳಿಗೆ ಬಳಸಿ.
* ಅಡುಗೆಗೆ ಅರಿಶಿನ ಇಂಗು ಹಾಗೂ ಬೆಲ್ಲ ಬಳಸಿ.
* ಮನೆ ಮಂದಿ ಎಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿ. ಊಟ ಮಾಡುವಾಗ ನೆಲದ ಮೇಲೆ ಚಾಪೆ ಹಾಕಿಕೊಂಡು ಕುಳಿತು ಊಟ ಮಾಡುವುದು ಒಳ್ಳೆಯದು. ಊಟ ಆದ ಮೇಲೆ ತಾಂಬೂಲ ಸೇವಿಸಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
* ಪಾತ್ರೆಗಳನ್ನು ತೊಳೆಯಲು ಬೂದಿ ಅಥವಾ ಮಣ್ಣನ್ನು ಬಳಸಿ, ಕೆಮಿಕಲ್ ಯುಕ್ತ ಜೆಲ್ ಗಳ ಬದಲು ಸಬೀನ ಬಳಸಿದರೆ ಒಳ್ಳೆಯದು.
* ಸ್ನಾನ ಮಾಡಲು ಕಡಲೆ ಹಿಟ್ಟು ಹಾಗೂ ಸೀಗೆಕಾಯಿ ಬಳಕೆ ಮಾಡಿ
* ಪ್ರತಿದಿನವೂ ಯೋಗಾಸನ ಹಾಗೂ ಪ್ರಾಣಾಯಾಮ ಮಾಡಿ ಕನಿಷ್ಠ 20 ನಿಮಿಷಗಳಾದರು ವಾಕಿಂಗ್ ಮಾಡಿ.
* ಪ್ರತಿಯೊಬ್ಬರಿಗೂ ಸ್ನೇಹದ ಗುಂಪಿರಲಿ. ಸ್ನೇಹಿತರು ಬಂಧು ಬಾಂಧವರು ಹಾಗೂ ನೆರೆಹೊರೆಯವರೊಂದಿಗೆ ಸಂಬಂಧ ಉತ್ತಮವಾಗಿ ಇಟ್ಟುಕೊಳ್ಳಿ, ನಗುನಗುತ್ತಾ ಜೀವನ ಕಳೆಯಿರಿ.
* ದಿನದಲ್ಲಿ ಸ್ವಲ್ಪ ಹೊತ್ತಾದರೂ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಹಾಗೂ 50 ವರ್ಷ ಮೇಲ್ಪಟ್ಟ ಹಿರಿಯರೊಂದಿಗೆ ಸಮಯ ಕಳೆದರೆ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ.