2024ರ ವರ್ಷವು ಈ ಹೊಸ ವರ್ಷದಲ್ಲಿ ಬಹಳ ಅದೃಷ್ಟದಾಯಕವಾಗಿದೆ. 95% ಲಕ್ಕಿ ಆಗಿದ್ದು ಅವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಸಮಯವಾಗಿದೆ. ರಾಶಿ ಕುಂಡಲಿ ಪ್ರಕಾರ ರಾಶಿಯಾಧಿಪತಿ ಶುಕ್ರನು 7ನೇ ಮನೆಯಲ್ಲಿದ್ದು, ಧನಾಧಿಪತಿ ಹಾಗೂ ವಾಗ್ ಸ್ಥಾನಾಧಿಪತಿ ಮತ್ತು ಧನ ಸ್ಥಾನಾಧಿಪತಿ ಬುಧನು 7ನೇ ಮನೆಯಲ್ಲಿದ್ದಾರೆ.
ಇಬ್ಬರು ಒಟ್ಟಿಗೆ ಸೇರಿರುವುದರಿಂದ ಇದನ್ನು ಲಕ್ಷ್ಮಿ ನಾರಾಯಣ ಯೋಗ ಎಂದು ಕೂಡ ಕರೆಯುತ್ತಾರೆ 9ನೆ ಮನೆಯಾಧಿಪತಿ ಶನಿಯು 10ನೇ ಮನೆಯಲ್ಲಿದ್ದಾರೆ ಇವರು ಭಾಗ್ಯಾಧಿಪತಿಯಾಗಿರುತ್ತಾರೆ ಮತ್ತು ಉಳಿದ ಗ್ರಹಗಳಾದ ಸೂರ್ಯ, ಚಂದ್ರ, ಗುರು ಎಲ್ಲರೂ ಕೂಡ ಉತ್ತಮ ಸ್ಥಾನದಲ್ಲಿದ್ದು ಒಳ್ಳೆಯ ಪ್ರತಿಫಲಗಳನ್ನು ನೀಡುತ್ತಿರುತ್ತಾರೆ.
ವೃಷಭ ರಾಶಿಯವರು ಈ ಹಿಂದಿನ ಎಲ್ಲಾ ವರ್ಷಗಳಿಗಿಂತ ಹೆಚ್ಚಿನ ಹಣವನ್ನು ಕಡಿಮೆ ಶ್ರಮದಲ್ಲಿ ಸಂಪಾದನೆ ಮಾಡುತ್ತಾರೆ ಎಂದರೂ ತಪ್ಪಾಗುವುದಿಲ್ಲ. ಯಾಕೆಂದರೆ ಹಣಕಾಸು ವಿಷಯದಲ್ಲಿ ಈ ವರ್ಷ ಈ ಮೊದಲೇ ಹೇಳಿದಂತೆ ಲಕ್ಷ್ಮಿ ಹಾಗೂ ಶ್ರೀ ನಾರಾಯಣನ ಆಶೀರ್ವಾದದಿಂದ ಕೈತುಂಬ ಸಂಪಾದನೆ ಮಾಡುತ್ತಾರೆ.
ಅವರು ಬೇಡ ಎಂದರು ಅದೃಷ್ಟ ಅವರ ಪಾಲಿಗೆ ಹುಡುಕೊಂಡು ಬರುವಂತಹ ಯೋಗಗಳನ್ನು ಈ ವರ್ಷ ಹೊಂದಿದ್ದಾರೆ 12 ರಾಶಿಗಳಲ್ಲಿ ವೃಷಭ ರಾಶಿಯವರು ಈ ವರ್ಷ ಹಣಕಾಸಿನ ವಿಚಾರದಲ್ಲಿ ಹೆಚ್ಚು ಉತ್ತಮ ಸ್ಥಾನದಲ್ಲಿದ್ದಾರೆ. ವೃಷಭ ರಾಶಿಯವರ ಅದೃಷ್ಟ ಹೇಗಿದೆ ಎಂದರೆ ನೂರು ರೂಪಾಯಿ ಹಾಕಿ ಅವರು ಸಾವಿರ ರೂಪಾಯಿ ತೆಗೆಯುವಂತಹ ಲಕ್ 2024ನೇ ಇಸವಿಯಲ್ಲಿ ಪಡೆದಿದ್ದಾರೆ.
ಮನೆ ಕಟ್ಟುವ ಯೋಜನೆ ಇದ್ದವರು, ಆಸ್ತಿ ಖರೀದಿಸುವ ಪ್ಲಾನ್ ಮಾಡಿದ್ದವರು ಸರಾಗವಾಗಿ ಈ ಕಾರ್ಯಗಳನ್ನು ಮಾಡುತ್ತಾರೆ. ಕಂಕಣ ಭಾಗ್ಯ ಕೂಡ ಕೂಡಿಬರುತ್ತದೆ. ಒಳ್ಳೆ ಸಂಬಂಧಗಳನ್ನು ಹೊಂದುತ್ತಾರೆ ಹಾಗೆ ಮಕ್ಕಳ ನಿರೀಕ್ಷೆಯಲ್ಲಿರುವವರೆಗೂ ಶುಭ ಸುದ್ದಿ ಸಿಗಲಿದೆ.
ವಿದ್ಯಾಭ್ಯಾಸದ ವಿಚಾರದಲ್ಲಿ ಕೂಡ ವೃಷಭ ರಾಶಿಯವರಿಗೆ ಈ ವರ್ಷ ತಾವೊಂದುಕೊಂಡ ವಿಷಯಗಳನ್ನು ಓದುವ ತಾವಂದು ಕೊಂಡ ಕಾಲೇಜುಗಳಲ್ಲಿ ಸೀಟ್ ಗಿಟ್ಟಿಸಿಕೊಳ್ಳುವ, ತಾವು ಬಯಸಿದ ಪ್ರದೇಶದಲ್ಲಿಯೇ ಉಳಿದುಕೊಂಡು ವಿದ್ಯಾಭ್ಯಾಸ ಮಾಡುವಂತಹ ಯೋಗಗಳು ಲಭಿಸಲಿವೆ.
ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುವವರಿಗೆ ಕೂಡ ಬಡ್ತಿ ಹೊಂದುವ ಅವಕಾಶ ಇದೆ, ವ್ಯಾಪಾರ ವಹಿವಾಟು ಮಾಡುವವರಿಗಂತೂ ಹೇಳುವಂತೆಯೇ ಇಲ್ಲ ಈ ಮೊದಲೇ ಹೇಳಿದಂತೆ ಲಾಭ ಹೆಚ್ಚಾಗಲಿದೆ. ವೃಷಭ ರಾಶಿಯವರು ಅಡ್ವೋಕೇಟ್, ಡಾಕ್ಟರ್, ಜ್ಯೋತಿಷಿ, ಆರ್ಟಿಸ್ಟ್ ಈ ರೀತಿ ಬಂಡವಾಳ ಇಲ್ಲದೆ ದುಡಿಯುವ ಕೆಲಸಗಳನ್ನು ಬಯಸುತ್ತಾರೆ.
ಈಗ ಅದೇ ಕ್ಷೇತ್ರವು ಅವರಿಗೆ ಅದೃಷ್ಟವನ್ನು ತಂದು ಅತಿ ಹೆಚ್ಚು ಲಾಭ ಮಾಡಿ ಕೊಡುತ್ತದೆ 5% ನಲ್ಲಿ ಅನಾರೋಗ್ಯದ ಕಾರಣದಿಂದಾಗಿ ಸ್ವಲ್ಪ ವಿಚಲಿತರಾಗುತ್ತಾರೆ. ಈ ರಾಶಿಯವರು ಸ್ವಭಾವತಃ ದಪ್ಪವಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಈ ವರ್ಷ ಅವರಿಗೆ ವಿದೇಶ ಪ್ರಯಾಣದ ಯೋಗ ಇರುವುದರಿಂದ ಇನ್ಫೆಕ್ಷನ್ ಗಳು ಅಥವಾ ಮಕ್ಕಳು ಹಾಗೂ ಕುಟುಂಬ ಸದಸ್ಯರ ಅನಾರೋಗ್ಯದ ಕಾರಣದಿಂದಾಗಿ ಸ್ವಲ್ಪ ಬೇಜಾರು ಮಾಡಿಕೊಳ್ಳುತ್ತಾರೆ ಅಷ್ಟೇ.
ಉಳಿದಂತೆ ಇನ್ನೆಲ್ಲಾ ವಿಷಯದಲ್ಲೂ ಕೂಡ ವೃಷಭ ರಾಶಿಯವರಿಗೆ 2024 ಬಹಳ ಲಕ್ಕಿ ವರ್ಷವಾಗಿದೆ. ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಬೇಕು ಎಂದು ಬಯಸುವವರು ಈ ವರ್ಷವನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ದುಡಿದ ಹಣವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ, ಕೈಲಾದಷ್ಟು ಅಸಹಾಯಕರಿಗೆ ಸಹಾಯ ಮಾಡಿ.