ಪ್ಯಾನ್ ಕಾರ್ಡ್ (PAN Card) ಸದ್ಯದ ಮಟ್ಟಿಗೆ ಆಧಾರ್ ಕಾರ್ಡ್ ನಂತೆ ಒಂದು ಅತ್ಯಗತ್ಯ ದಾಖಲೆಯಾಗಿದೆ. ಯಾಕೆಂದರೆ ಸಾಮಾನ್ಯ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ನಮ್ಮ ಎಲ್ಲಾ ಆರ್ಥಿಕ ಚಟುವಟಿಕೆಗಳು ಕೂಡ ಪ್ಯಾನ್ ಕಾರ್ಡ್ ಆಧಾರಿತವಾಗಿವೆ ಹೀಗಾಗಿ. ಆದಾಯ ತೆರಿಗೆ ಇಲಾಖೆಯು (Income Tax Department) ನೀಡುವ ಈ 10 ಆಲ್ಫಾ ನ್ಯೂಮರಿಕ್ ಅಂಕೆಗಳ ದಾಖಲೆಯಾಗಿದೆ.
ಪ್ರತಿ ವ್ಯಕ್ತಿಗೂ ಕೂಡ ಯೂನಿಕ್ ಆದ ಪ್ಯಾನ್ ಸಂಖ್ಯೆಯನ್ನು ನೀಡಲಾಗಿರುತ್ತದೆ ಮತ್ತು ಇದು ಶಾಶ್ವತ ಸಂಖ್ಯೆಯಾಗಿದ್ದು, ಒಬ್ಬರಿಗೆ ಒಂದು ಮಾತ್ರ ಪಾನ್ ಕಾರ್ಡ್ ನೀಡಲಾಗಿರುತ್ತದೆ. ಈ ಪ್ಯಾನ್ ಕಾರ್ಡ್ ಮೂಲಕ ಪ್ರತಿಯೊಬ್ಬರ ಆರ್ಥಿಕ ವಹಿವಾಟಿನ ಲೆಕ್ಕಾಚಾರದ ಮೇಲೆ ಸರ್ಕಾರಕ್ಕೆ ಹಿಡಿತವಿರುತ್ತದೆ.
ಹೀಗಾಗಿ ಕೇಂದ್ರ ಸರ್ಕಾರವು ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ (Pan-Aadhar link) ಮಾಡಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿದೆ ಇದರ ಸಂಬಂಧಿತವಾಗಿ ಈಗ ಸರ್ಕಾರದಿಂದ ಮತ್ತೊಂದು ಮಹತ್ವದ ಸುದ್ದಿ ಹೊರಡಿಸಲಾಗಿದೆ.
ಈ ಸುದ್ದಿ ಓದಿ:- ಇಂದಿನಿಂದ 2096 ರ ವರೆಗೂ ಈ 6 ರಾಶಿಯವರಿಗೆ ವಿಪರೀತ ರಾಜಯೋಗ, ಮುಟ್ಟಿದ್ದೆಲ್ಲ ಚಿನ್ನ, ಯಾವ ರಾಶಿಗಳು ನೋಡಿ.!
ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಬೇಕು ಎನ್ನುವ ವಿಚಾರ ಇಂದು ನೆನೆಯದಲ್ಲ, ಕಳೆದ ವರ್ಷ ಮಾರ್ಚ್ ತಿಂಗಳ ಅಂತ್ಯದಲ್ಲಿ ಈ ಬಗ್ಗೆ ಮಾಧ್ಯಮಗಳಲ್ಲಿ ಅತಿ ಹೆಚ್ಚು ಸುದ್ದಿಯಾಗಿತ್ತು. ಅದೇನೆಂದರೆ 2023 ಮಾರ್ಚ್ 31ರವರೆಗೆ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಲು ಉಚಿತವಾಗಿ ಆದಾಯ ತೆರಿಗೆ ಇಲಾಖೆ ಕಾಲಾವಕಾಶ ನೀಡಿತ್ತು.
ಜನಸಾಮಾನ್ಯರಿಗೆ ಇದರ ಕುರಿತು ಮಾಹಿತಿ ಇರದ ಮತ್ತು ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಅನೇಕರು ಇದರ ಬಗ್ಗೆ ನಿರ್ಲಕ್ಷ್ಯ ಮಾಡಿದ್ದರು. ಕೊನೆಗೆ ಮಾರ್ಚ್ 2023ರಲ್ಲಿ ಆದಾಯ ತೆರಿಗೆ ಇಲಾಖೆಯು ಈ ಸಮಯಾವಕಾಶವನ್ನು ಸ್ಥಗಿತಗೊಳಿಸಿ ಮೇ 31, 2024ರೂ.1000 ದಂಡದೊಡನೆ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲೇಬೇಕು ಎನ್ನುವ ನಿಯಮವನ್ನು ಹೊರಡಿಸಿತು.
ಆ ಪ್ರಕಾರವಾಗಿ ನೀಡಿದ್ದ ಸಮಯ ಕೂಡ ಮುಗಿಯುತ್ತಾ ಬಂದಿದೆ. ರೂ.1000 ದಂಡದೊಡನೆ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಸರ್ಕಾರದ ಆರ್ಥಿಕ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ರೂ.1000 ದಂಡ ಕಟ್ಟಿ ಆಧಾರ್ ಲಿಂಕ್ ಮಾಡಿಸಿದವರ ಸಂಖ್ಯೆ 600 ಕೋಟಿ ಮೀರಿದೆ.
ಈ ಸುದ್ದಿ ಓದಿ:- ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ಎಲ್ಲಾ ರೈತರಿಗೂ ಗುಡ್ ನ್ಯೂಸ್, ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ರೈತರು ತಪ್ಪದೇ ಈ ಮಾಹಿತಿ ಓದಿ!
ಹೀಗಿದ್ದು ಕೂಡ ಇನ್ನು 11 ಕೋಟಿ ಪಾನ್ ಕಾರ್ಡ್ ಗಳು ಆಧಾರ್ ಲಿಂಕ್ ಆಗದೆ ಉಳಿದಿವೆ. ಇವರಿಗೆಲ್ಲ ಇನ್ನೊಂದು ಎಚ್ಚರಿಕೆಯನ್ನು ಆದಾಯ ತೆರಿಗೆ ಇಲಾಖೆಯ ನೀಡಿದೆ ಯಾರೆಲ್ಲಾ ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಿಲ್ಲ ಅವರ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯವಾಗಲಿದೆ ಈ ಬಾರಿ ರೂ.10,000 ದಂಡ ಕಟ್ಟಿ ರಿನಿವಲ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಹಾಗಾಗಿ ಕೂಡಲೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ.
ಒಂದು ವೇಳೆ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ, ಆ ವ್ಯಕ್ತಿಯು ಅತಿ ಹೆಚ್ಚು TDS ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ, ರೂ. 1 ಲಕ್ಷ ಆತ ವಹಿವಾಟು ಮಾಡಿದರೆ ರೂ.20,000 ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅಲ್ಲದೆ ಆತನ IT ರಿಟರ್ನ್ಸ್ ಸಲ್ಲಿಕೆ ತಿರಸ್ಕೃತವಾಗುತ್ತದೆ ಮತ್ತು ತನ್ನ ಪ್ಯಾನ್ ಕಾರ್ಡ್ ರಿನಿವಲ್ ಮಾಡಿಕೊಳ್ಳುವುದಕ್ಕೆ ಮೇಲೆ ತಿಳಿಸಿದಂತೆ ಹೆಚ್ಚಿನ ದಂಡ ಪಾವತಿ ಮಾಡಬೇಕಾಗುತ್ತದೆ ಹಾಗಾಗಿ ಇದಕ್ಕೆ ಅವಕಾಶ ಕೊಡದೆ ಕೂಡಲೇ ಪ್ರಕ್ರಿಯೆ ಪೂರ್ತಿಗೊಳಿಸಿ.