ಈಗ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆ ಆಗಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ UIDAI ದೇಶದ ನಾಗರಿಕ ಆಧಾರ್ ಕಾರ್ಡ್ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ಯೂನಿಕ್ ಆದ 12 ಅಂಕಿಗಳುಳ್ಳ ಆಧಾರ್ ಸಂಖ್ಯೆಯನ್ನು ನೀಡುತ್ತಿದೆ.
ಇದೀಗ ಆಧಾರ್ ಅವಶ್ಯಕತೆ ಎಷ್ಟಿದೆ ಎಂದರೆ ಮಕ್ಕಳಿಗೆ ಶಾಲೆಗೆ ದಾಖಲೆ ಮಾಡುವುದರಿಂದ ಹಿಡಿದು ವ್ಯಕ್ತಿಯೊಬ್ಬನ ಮರಣ ಪ್ರಮಾಣ ಪತ್ರ ಕೊಡುವವರೆಗೂ ಶಿಕ್ಷಣ, ಉದ್ಯೋಗ, ಬ್ಯಾಂಕಿಂಗ್ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಆಧಾರ್ ಕಾರ್ಡ್ ಅನಿವಾರ್ಯ. ಜೊತೆಗೆ ಈಗಂತೂ ಶಾಲಾ ಮಕ್ಕಳ ಅಂಕ ಪಟ್ಟಿ ಅಂತ ಹೇಳಿದ್ದು ನಮ್ಮ ಬ್ಯಾಂಕ್ ಖಾತೆಗೆ ನಮ್ಮ ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್ ಗೆ ಹೀಗೆ ಪ್ರತಿಯೊಂದು ದಾಖಲೆಗೂ ಆಧಾರ್ ಕಡ್ಡಾಯಗೊಳಿಸಲಾಗಿದೆ.
ಈಗ ಮುಂದುವರೆದು ರೈತರ ಪಹಣಿಗೂ ಕೂಡ ಆಧಾರ್ ಲಿಂಕ್ ಮಾಡುವಂತೆ ಸೂಚಿಸಲಾಗಿದೆ. ರೈತರು ತಮ್ಮ ಜಮೀನಿನ ಪಹಣಿ ಪತ್ರದೊಂದಿಗೆ ಆಧಾರ್ ಲಿಂಕ್ ಮಾಡಿಸಿದರೆ ಮಾತ್ರ ಅವರಿಗೆ ಸರ್ಕಾರದಿಂದ ಸಿಗುವ ಯೋಜನೆಗಳಾದ ಪರಿಹಾರ ನಿಧಿ ಹಣ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತಿತರ ಕೃಷಿ ಯೋಜನೆಗಳ ನೆರವು ಸಿಗುವುದು.
ಆದರೆ ಅನೇಕರಿಗೆ ಈ ಬಗ್ಗೆ ಗೊಂದಲಗಳಿದೆ. ನಾವು ನಮ್ಮ ಪೂರ್ವಿಕರ ಹೆಸರಿನಲ್ಲಿ ಇರುವ ಜಮೀನನ್ನು ಉಳುಮೆ ಮಾಡಿಕೊಂಡು ಬದುಕುತ್ತಿದ್ದೇವೆ ಅವರ ಹೆಸರಿನಲ್ಲಿರುವ ಜಮೀನಿಗೆ ನಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಬಹುದೇ ಎಂದು ಪ್ರಶ್ನೆ ಮಾಡುತ್ತಿರುತ್ತಾರೆ ಆದರೆ ಇದು ಸಾಧ್ಯವಿಲ್ಲ. ತಂದೆ ಅಥವಾ ತಾತನ ಹೆಸರಿನಲ್ಲಿರುವ ಜಮೀನಿಗೆ ಮಕ್ಕಳ ಆಧಾರ್ ಲಿಂಕ್ ಮಾಡಲಾಗುವುದಿಲ್ಲ, ಅದು ಮಾನ್ಯ ವಾಗುವುದಿಲ್ಲ ಹಾಗೂ ಈ ಪ್ರಕ್ರಿಯೆ ಸಾಧ್ಯವಾಗುವುದೂ ಇಲ್ಲ.
ತನ್ನ ಹೆಸರಿನಲ್ಲಿ ರೈತ ಪಹಣಿ ಪತ್ರ ಹೊಂದಿದ್ದರೆ ಅಂತಹ ಜಮೀನಿನ ಪಹಣಿಗೆ ಆ ರೈತನ ಆಧಾರ್ ಲಿಂಕ್ ಆಗುತ್ತದೆ. ಇದುವರೆಗೂ ನೀವು ಪಹಣಿಗೆ ಆಧಾರ್ ಲಿಂಕ್ ಮಾಡಿಸಿಲ್ಲ ಎಂದರೆ ಕೂಡಲೇ ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರದ ಪ್ರತಿಯೊಂದು ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ ಈ ಪ್ರಕ್ರಿಯೆ ಪೂರ್ತಿಗೊಳಿಸಿ.
ಸರ್ಕಾರ ಈ ಕಾನೂನು ಜಾರಿಗೊಳಿಸಲು ಅನೇಕ ಕಾರಣಗಳಿವೆ ರೈತನು ಯಾವುದೇ ಸರ್ಕಾರಿ ಸೌಲಭ್ಯ ಪಡೆಯಬೇಕು ಎಂದರೆ ಈ ರೀತಿ ಆಧಾರ್ ಲಿಂಕ್ ಆಗಿದ್ದರೆ ನೇರವಾಗಿ, ಸುಲಭವಾಗಿ ಅರ್ಜಿ ಸಲ್ಲಿಸಬಹುದು ಮತ್ತು ನಕಲಿ ಫಲಾನುಭವಿಗಳು ಸರ್ಕಾರದ ಯೋಜನೆಗಳಿಗೆ ವಂಚಿಸಿ ಅರ್ಜಿ ಸಲ್ಲಿಸುವುದು ಕಡಿಮೆ ಆಗುತ್ತದೆ. ಮತ್ತು ರೈತನ ಎಲ್ಲ ಭೂ ದಾಖಲೆಗಳಿಗೂ ಕೂಡ ಆಧಾರ್ ಲಿಂಕ್ ಆಗುವುದರಿಂದ ರೈತನ ನಂತರ ದಿನಗಳಲ್ಲಿ ಆನ್ಲೈನ್ ಮೂಲಕ ಇವುಗಳನ್ನು ಪರಿಶೀಲಿಸಲು ಮತ್ತು ಪಡೆದುಕೊಳ್ಳಲು ಅನುಕೂಲವಾಗುತ್ತದೆ.
ಇನ್ನು ರೈತನು ಜಮೀನು ಪರಭಾರೆ ಮಾಡುವ ಸಮಯದಲ್ಲಿ ಕೂಡ ರೈತನ ಪಹಣಿ ಪತ್ರ ಅಥವಾ ಆಸ್ತಿಗಳಿಗೆ ಆಧಾರ್ ಲಿಂಕ್ ಆಗಿದ್ದರೆ ಆ ರೈತನ ಹೆಸರಿನಲ್ಲಿ ಜಮೀನು ಇದೆ ಎನ್ನುವುದಕ್ಕೆ ಇನ್ನು ಹೆಚ್ಚಿನ ಸ್ಪಷ್ಟತೆ ಸಿಗುತ್ತದೆ. ಹೀಗೆ ಹಲವಾರು ಅನುಕೂಲತೆಗಳು ಇರುವುದರಿಂದ ಸರ್ಕಾರ ಇಂತಹದೊಂದು ಕಟ್ಟ ನಿಟ್ಟಿನ ಆದೇಶವನ್ನು ಹೊರಡಿಸಿದೆ. ಶೀಘ್ರವಾಗಿ ಎಲ್ಲಾ ರೈತರುಗಳು ಕೂಡ ಸರ್ಕಾರದ ನಿಯಮವನ್ನು ಪಾಲಿಸಿ ಹಾಗೂ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ ಶೇರ್ ಮಾಡಿ.