ಈಗಿನ ಕಾಲದಲ್ಲಿ ಅನೇಕ ಹೆಣ್ಣು ಮಕ್ಕಳಿಗೆ ಸಂತಾನದ ಸಮಸ್ಯೆ ಎದುರಾಗಿದೆ ಆಧುನಿಕ ಜೀವನ ಶೈಲಿ ಅಥವಾ ಕಳಪೆ ಆಗಿರುವ ಆಹಾರ ಪದ್ಧತಿ ಯಾವುದು ಕಾರಣ ಆಗಿದೆಯೋ ತಿಳಿದಿಲ್ಲ. ಪ್ರತಿ ಮನೆಗಳಲ್ಲೂ, ಕಚೇರಿಯಲ್ಲೂ ಮತ್ತು ಸ್ನೇಹಿತರ ಬಳಗದಲ್ಲೂ ಈ ರೀತಿ ಕಣ್ಣೀರಿಡುವ ಹೆಣ್ಣು ಮಕ್ಕಳು ಇದ್ದಾರೆ. ಆ ಹೆಣ್ಣು ಮಕ್ಕಳಿಗಾಗಿ ಒಂದು ವಿಶೇಷ ವ್ರತದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಸಂತಾನ ಗೋಪಾಲ ವ್ರತ ಮಾಡಿದರೆ ನೂರಕ್ಕೆ ನೂರರಷ್ಟು ನಿಮಗೆ ಸಂತಾನ ಯೋಗ ಬರುವುದು ಖಂಡಿತ. ಇದರ ಆಚರಣೆ ಹೇಗೆ ಎನ್ನುವ ಮಾಹಿತಿ ಹೀಗಿದೆ.
* ಶುಕ್ಲ ಪಕ್ಷದ ಬುಧವಾರ ಅಥವಾ ಗುರುವಾರ ಈ ವ್ರತದ ಆಚರಣೆ ಆರಂಭ ಮಾಡಿ, ಅಂದರೆ ಅಮಾವಾಸ್ಯೆ ನಂತರ ಬರುವ ಮೊದಲ ಬುಧವಾರ ಅಥವಾ ಗುರುವಾರದಂದು ಆರಂಭ ಮಾಡಿ.
* ವೃತ ಸಂಕಲ್ಪವನ್ನು ನಿರ್ದಿಷ್ಟ ಸಮಯದಲ್ಲಿ ಇಷ್ಟು ದಿನ ಆಚರಿಸುತ್ತೇನೆಂದು ಸಂಕಲ್ಪ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಈ ವ್ರತವನ್ನು 45 ದಿನಗಳ ಕಾಲ ಆಚರಣೆ ಮಾಡುತ್ತಾರೆ, ಇದು ಒಂದು ಮಂಡಲಾಗುತ್ತದೆ. ಈ ಸಮಯದಲ್ಲಿ ಮೂರು ಪಕ್ಷಗಳು ಬರುತ್ತದೆ.
ಈ ಸುದ್ದಿ ಓದಿ:- ರಾಹು ಸಂಚಾರದಿಂದ ಈ ರಾಶಿಗಳಿಗೆ ಏಟಿನ ಮೇಲೆ ಏಟು, ನಿಮ್ಮ ರಾಶಿಯು ಇದರಲ್ಲಿ ಇದೆಯೇ ತಿಳಿದುಕೊಳ್ಳಿ…
* ಈ ವ್ರತದ ಮಹತ್ವವೇ ಮಂತ್ರ ಪಠಣೆಯಾಗಿದೆ. ಮಂತ್ರಗಳಿಗೆ ಎಷ್ಟು ಶಕ್ತಿ ಇದೆ ಎಂದರೆ ಅಸಾಧ್ಯವಾದನ್ನು ಸಾಧಿಸುವಂತಹ ಸಾಮರ್ಥ್ಯ ಇರುವುದು ಮಂತ್ರ ಗಳಿಗೆ ಮಾತ್ರ. ಅನಾಧಿಕಾರದಿಂದಲೂ ಕೂಡ ಮಂತ್ರ ಪ್ರಯೋಗದಿಂದ ಸಂತಾನದಿಂದ ಹಿಡಿದು ಯುದ್ಧಗಳವರೆಗೂ ಕೂಡ ಅನೇಕ ಕಾರ್ಯಗಳು ನಡೆದಿದೆ. ಹಾಗಾಗಿ ಸರಿಯಾದ ವಿಧಾನದಲ್ಲಿ ನೀವು ಮಂತ್ರ ಉಚ್ಚಾರಣೆ ಮಾಡುವುದರಿಂದ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
* ವ್ರತ ಮುಗಿವವರೆಗೂ ಕೂಡ ನೀವು ಪ್ರತಿದಿನ 108 ಬಾರಿ ಮಂತ್ರ ಪಠಣೆ ಮಾಡುವುದಾಗಿ ಸಂಕಲ್ಪ ಮಾಡಿ
* ಯಾವುದೇ ವ್ರತ ಆಚರಿಸಿದರೂ ವ್ರತ ನಡೆಯುವ ಸಮಯದಲ್ಲಿ ಧೂಮಪಾನ, ಮದ್ಯಪಾನ ಮುಂತಾದ ದುಷ್ಚಟಗಳು ನಿಷಿದ್ಧ ಹಾಗೂ ಈ ಸಮಯದಲ್ಲಿ ಮಾಂಸಹಾರ ಸೇವನೆ ಮಾಡದೆ ಸಾತ್ವಿಕ ಆಹಾರ ಸೇವನೆ ಮಾಡಬೇಕು.
* ಪೂಜೆ ಮಾಡುವುದಕ್ಕೆ ಕೆಲ ಪೂಜಾ ಸಾಮಗ್ರಿಗಳ ಅವಶ್ಯಕತೆ ಇರುತ್ತದೆ. ಒಂದು ಚಿಕ್ಕ ಅಂಬೆಗಾಲು ಬಾಲಕೃಷ್ಣ ವಿಗ್ರಹ ಒಂದು ಅಗಲವಾದ ಬಟ್ಟಲು ಹಾಗೂ ಜೇನುತುಪ್ಪವನ್ನು ತೆಗೆದುಕೊಳ್ಳಿ
* ಈ ಮೇಲೆ ತಿಳಿಸಿದಂತೆ ನಾವು ಹೇಳಿದ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಉಟ್ಟುಕೊಳ್ಳಿ ಬೆಳಗ್ಗೆ 7ರ ಒಳಗೆ ಪೂಜೆ ಮುಗಿಸುವುದು ಬಹಳ ಒಳ್ಳೆಯದು.
ಈ ಸುದ್ದಿ ಓದಿ:- ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!
* ಯಾವುದೇ ಪೂಜೆ ಮಾಡುವ ಮುನ್ನ ಮೊದಲು ಗಣಪತಿಗೆ ಪೂಜೆ ಮಾಡಬೇಕು, ಅಂತೆಯೇ ಗಣಪತಿಗೆ ಸಂಕಲ್ಪ ಮಾಡಿ. ನೀವು ಇಷ್ಟಪಡುವ ಇಷ್ಟ ದೇವರು, ನಿಮ್ಮ ಕುಲದೇವರು, ಗ್ರಾಮದೇವರ ಹೆಸರನ್ನು ನೆನೆದು ಪ್ರಾರ್ಥಿಸಿಕೊಳ್ಳಿ ತಂದೆ ತಾಯಿಯರ ಆಶೀರ್ವಾದವನ್ನು ಪಡೆದುಕೊಳ್ಳಿ
* ಒಂದು ಮಣೆ ಅಥವಾ ಬಟ್ಟಲಿನೊಳಗೆ ಶ್ರೀ ಬಾಲಕೃಷ್ಣ ಮೂರ್ತಿ ಇಟ್ಟು ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ. ತುಳಸಿ ಹೂವು ಏರಿಸಿ, ಬೆಣ್ಣೆ ಸಕ್ಕರೆ ನೈವೇದ್ಯ ಮಾಡಿ ಧೂಪದೀಪದಿಂದ ಕೃಷ್ಣನ ವಿಗ್ರಹವನ್ನು ಬೆಳಗಿ ನಿಮ್ಮ ಕಷ್ಟವನ್ನು ಹೇಳಿಕೊಂಡು ಸಂತಾನ ಫಲ ಕೊಡುವಂತೆ ಪ್ರಾರ್ಥಿಸಿ. ಬಳಿಕ ನೀವು 108 ಬಾರಿ ಈ ಮಂತ್ರವನ್ನು ಪಠಿಸಬೇಕು
ಮಂತ್ರ:- ಓಂಶ್ರೀಂಹ್ರೀಂಕ್ಲೀಂಗ್ಲೌಂ ದೇವಕಿಸುತ ಗೋವಿಂದ ವಾಸುದೇವ
ಜಗತ್ಪತೇದೇಹಿ ಮೇ ತನಯಂ ಕೃಷ್ಣ ತ್ಮಾಮಹಂ ಶರಣಂ ಗತಃ
* ದಂಪತಿ ಸಮೇತವಾಗಿ ಈ ಆಚರಣೆ ಮಾಡಿದರೆ ಬಹಳ ಬೇಗ ಶುಭ ಫಲಗಳನ್ನು ಕಾಣುತ್ತೀರಿ.
* ನೀವೇನಾದರೂ ಈಗಾಗಲೇ ಸಂತಾನವನ್ನು ಹೊಂದಿದ್ದು ಪುತ್ರ ಸಂತಾನ ಬಯಸುತ್ತಿದ್ದರು ಕೂಡ ಈ ಆಚರಣೆ ಮಾಡಬಹುದು. ಸಂತಾನ ಗೋಪಾಲ ಮಂತ್ರವನ್ನು ಪಠಿಸುವುದರಿಂದ ದೀರ್ಘಾಯುಷ್ಯವುಳ್ಳ ಬುದ್ಧಿವಂತ ಸದ್ಗುಣಶೀಲ ಪುತ್ರನನ್ನು ಪಡೆಯುತ್ತೀರಿ.