Home Entertainment ದರ್ಶನ್ ಗೆ ಸಪೋರ್ಟ್ ಮಾಡಿದ್ರು ಎಂಬ ಒಂದೇ ಕಾರಣಕ್ಕೆ ಪತ್ರಕರ್ತ ಬಿ.ಗಣಪತಿ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರ ಆಗುತ್ತೆ.

ದರ್ಶನ್ ಗೆ ಸಪೋರ್ಟ್ ಮಾಡಿದ್ರು ಎಂಬ ಒಂದೇ ಕಾರಣಕ್ಕೆ ಪತ್ರಕರ್ತ ಬಿ.ಗಣಪತಿ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರ ಆಗುತ್ತೆ.

0
ದರ್ಶನ್ ಗೆ ಸಪೋರ್ಟ್ ಮಾಡಿದ್ರು ಎಂಬ ಒಂದೇ ಕಾರಣಕ್ಕೆ ಪತ್ರಕರ್ತ ಬಿ.ಗಣಪತಿ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರ ಆಗುತ್ತೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರನ್ನು ಕಳೆದ ಒಂದು ವರ್ಷದಿಂದಲೂ ಕೂಡ ಮಾಧ್ಯಮದಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ದರ್ಶನ್ ಅವರನ್ನು ಬ್ಯಾನ್ ಮಾಡುತ್ತಿರುವುದು ಇದು ಮೊದಲನೇ ನಲ್ಲ ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಒಂದು ಬಾರಿ ದರ್ಶನ್ ಅವರನ್ನು ಬ್ಯಾನ್ ಮಾಡಲಾಗಿತ್ತು. ಆದರೂ ಕೂಡ ಕಾಲ ಕಳೆದಂತೆ ಪತ್ರಕರ್ತರಿಗೆ ಮತ್ತು ಮಾಧ್ಯಮದವರಿಗೆ ತಮ್ಮ ತಪ್ಪಿನ ಅರಿವಾಗಿ ತದನಂತರ ದರ್ಶನ್ ಅವರಿಗೆ ಮೊದಲಿನ ಆದ್ಯತೆ ಸ್ಥಾನಮಾನ ಗೌರವವನ್ನು ನೀಡಿದರು. ಎಲ್ಲಾ ಸುಗಮವಾಗಿಯೇ ನಡೆಯುತ್ತಿತ್ತು ಆದರೆ ಕಳೆದ ವರ್ಷವಷ್ಟೇ ನಿರ್ಮಾಪಕ ಉಮಾಪತಿ ಹಾಗೂ ಅರುಣದೇವಿ ಕೇಸ್ ವಿಚಾರವಾಗಿ ದರ್ಶನವರು ಮತ್ತೊಮ್ಮೆ ಮಾಧ್ಯಮದವರ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕಾಗಿ ಇಡೀ ಮಾಧ್ಯಮ ಮಿತ್ರನು ಹಾಗೂ ಪತ್ರಕರ್ತರ ಎಲ್ಲರೂ ಕೂಡ ದರ್ಶನ್ ಅವರನ್ನು ಬ್ಯಾನ್ ಮಾಡಿದರು.

ಅಂದ ಹಾಗೆ ಪತ್ರಕರ್ತರು ಮತ್ತು ಮಾಧ್ಯಮದವರು ಅಂದರೆ ಎಲ್ಲರೂ ಕೂಡ ಒಂದೇ ರೀತಿಯಲ್ಲಿ ಇರುವುದಿಲ್ಲ ಒಬ್ಬೊಬ್ಬರು ಒಂದೊಂದು ಸ್ವಭಾವವನ್ನು ಒಳಗೊಂಡಿರುತ್ತಾರೆ ಅಷ್ಟೇ ಅಲ್ಲದೆ ಒಂದೊಂದು ಸಿದ್ಧಾಂತವನ್ನು ಇಟ್ಟುಕೊಂಡಿರುತ್ತಾರೆ ಅದರಂತೆ ನಡೆದುಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ಬಿ.ಗಣಪತಿ ಅವರು ಕೂಡ ತಮ್ಮ ಕರ್ತವ್ಯಕ್ಕೆ ಯಾವುದೇ ರೀತಿಯಾದಂತಹ ಚ್ಯೂತಿ ಬರಬಾರದು ಹಾಗೂ ನಾನು ಮಾಡುವಂತಹ ಕೆಲಸ ನನ್ನ ಮನಸ್ಸಾಕ್ಷಿ ಒಪ್ಪುವ ರೀತಿ ಇರಬೇಕು ಎಂಬ ಸಿದ್ದಾಂತವನ್ನು ಅಳವಡಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಇಡೀ ಮಾಧ್ಯಮ ಮಿತ್ರರೆಲ್ಲರೂ ದರ್ಶನ್ ಅವರನ್ನು ಬ್ಯಾನ್ ಮಾಡಿದರು ಕೂಡ ದರ್ಶನ್ ಪರವಾಗಿ ನಿಂತ ಏಕೈಕ ವ್ಯಕ್ತಿ ಅಂದರೆ ಅದು ಬಿ.ಗಣಪತಿಯವರು ಮಾತ್ರ.

ಅಂದ ಹಾಗೆ ದರ್ಶನ್ ಗೆ ಇವರು ಸಪೋರ್ಟ್ ಮಾಡಿದ್ದಾರೆ ಎಂಬ ಮಾತ್ರಕ್ಕೆ ಇವರಿಬ್ಬರೂ ಆತ್ಮೀಯ ಸ್ನೇಹಿತರು ಅಥವಾ ಇವರಿಬ್ಬರಿಗೂ ನಂಟು ಇದೆ ಎಂಬ ಅರ್ಥವಲ್ಲ. ಬದಲಿಗೆ ಗಣಪತಿಯವರು ಇದ್ದ ವಿಚಾರವನ್ನು ಇದ್ದ ಹಾಗೆಯೇ ಹೇಳುತ್ತಾರೆ ಸುಳ್ಳು ಮೋಸ ಮಾಡಿ ಜನರ ದಾರಿ ತಪ್ಪಿಸುವ ದಿಕ್ಕನ್ನು ಇವರು ಮಾಡುವುದಿಲ್ಲ. ಈ ಕಾರಣಕ್ಕಾಗಿ ದರ್ಶನ್ ಅವರ ನಿಜ ಸ್ವಭಾವವನ್ನು ಜನರಿಗೆ ತಿಳಿಸಿ ದರ್ಶನ್ ಅವರದು ಏನು ತಪ್ಪು ಇಲ್ಲ ಎಂಬ ಮಾಹಿತಿಯನ್ನು ಅವರದ್ದೇ ಆದಂತಹ ಒಂದು ಯುಟ್ಯೂಬ್ ಚಾನೆಲ್ ನಲ್ಲಿ ಹಾಕುತ್ತಾರೆ. ಈ ವಿಡಿಯೋ ನೋಡಿದಂತಹ ಮಾಧ್ಯಮ ಮಿತ್ರರು ಹಾಗೂ ಗಣಪತಿ ಅವರ ಆತ್ಮೀಯ ಸ್ನೇಹಿತರು ಹಾಗೂ ಪತ್ರಕರ್ತರ ಎಲ್ಲರೂ ಕೂಡ ಇದೀಗ ದರ್ಶನ್ ಗೆ ಸಪೋರ್ಟ್ ಮಾಡಿದ್ರು ಎಂಬ ಕಾರಣಕ್ಕಾಗಿ ಗಣಪತಿ ವಿರುದ್ಧವೂ ಕೂಡ ಗುಡುಗಿದ್ದಾರೆ.

ಅಷ್ಟೇ ಅಲ್ಲದೆ ಮಾಧ್ಯಮದಿಂದಲೂ ಕೂಡ ಬಿ ಗಣಪತಿ ಅವರನ್ನು ಬ್ಯಾನ್ ಮಾಡಲಾಗಿದೆ ನಿಜಕ್ಕೂ ಕೂಡ ಇದು ಒಂದು ವಿಷಾದಕರವಾದ ವಿಚಾರವೇ. ಏಕೆಂದರೆ ನಟನನ್ನು ಬ್ಯಾನ್ ಮಾಡುವುದರಲ್ಲಿ ಒಂದು ಅರ್ಥವಿದೆ ಆದರೆ ತಮ್ಮ ಜೊತೆಗೆ ಕೆಲಸ ಮಾಡುತ್ತಿದ್ದಂತಹ ಸಹೋದ್ಯೋಗಿಯನ್ನೇ ಬ್ಯಾನ್ ಮಾಡಿದ್ದಾರೆ ಅಂದರೆ ಇಂದಿನ ಮಾಧ್ಯಮ ಯಾವ ಮಟ್ಟಕ್ಕೆ ಹೋಗಿ ತಲುಪಿದೆ ಎಂಬುದನ್ನು ನೀವೇ ಊಹೆ ಮಾಡಿ. ಅಷ್ಟಕ್ಕೂ ಗಣಪತಿ ಅವರು ಯಾವ ವಿಚಾರಕ್ಕಾಗಿ ದರ್ಶನ್ ಅವರಿಗೆ ಸಪೋರ್ಟ್ ಮಾಡಿದರು ಇದರಿಂದ ಗಣಪತಿ ಅವರು ಏನೆಲ್ಲಾ ಸಂಕಷ್ಟವನ್ನು ಅನುಭವಿಸಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಗಣಪತಿಯವರೇ ತಮ್ಮ ಯುಟ್ಯೂಬ್ ಚಾನೆಲ್ ಒಂದರಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಕೆಳಗೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here