ಈ ಅದ್ಭುತವಾದ ಪವಾಡಮುಖಿ ಗಣಪತಿಯ ವಿಗ್ರಹ ಇರುವುದು ಭಾರತ ದೇಶದ ಪುರಾತನ ರಾಜ್ಯ ಎಂದೇ ಹೆಸರುವಾಸಿಯಾಗಿರುವ ಛತ್ತಿಸ್ಗರ್ ರಾಜ್ಯದಲ್ಲಿ. ಛತ್ತೀಸ್ಗರ್ ರಾಜ್ಯದಲ್ಲಿರುವ ಬರಸೂರು ನಗರ ದಿಂದ 42 ಕಿ.ಮೀ ದೂರ ಸಾಗಿದರೆ ನಿಮಗೆ ಡೊಲ್ ಕರ್ ಎಂಬ ಬೆಟ್ಟ ಸಿಗುತ್ತದೆ.
ಇದೇ ಬೆಟ್ಟದ ತುತ್ತ ತುದಿಯಲ್ಲಿ ನೆಲೆಸಿರುವ ನಾಗ ಡೊಲ್ ಕರ್ ಗಣೇಶ ದೇವಸ್ಥಾನ ಎರಡನೇ ಶತಮಾನದಲ್ಲಿ ಇಡಿ ಭಾರತ ದೇಶವನ್ನು ಆಳ್ವಿಕೆ ಮಾಡುತ್ತಿದ್ದ ನಾಗ ಸಾಮ್ರಾಜ್ಯ ಈ ಬೆಟ್ಟದ ಮೇಲೆ ಅತ್ಯಂತ ಶಕ್ತಿಶಾಲಿಯಾದ ನಾಗ ಗಣಪತಿಯನ್ನು ನಿರ್ಮಾಣ ಮಾಡು ತ್ತಾರೆ. ಇದೇ ಭಾರತ ದೇಶದ ಮೊದಲ ಮತ್ತು ಏಕೈಕ ನಾಗ ಗಣಪತಿ.
ಈ ನಾಗ ಗಣಪತಿ ಸಾವಿರಾರು ಕೆಜಿ ತೂಕವಿದೆ ಹಾಗೂ ನಾಲ್ಕು ಅಡಿ ಎತ್ತರವಿದೆ. ಈ ನಾಗ ಗಣಪತಿ ಕಲ್ಲು ಖಂಡಿತವಾಗಿಯೂ ಕೂಡ ಸಾಮಾನ್ಯ ಕಲ್ಲಲ್ಲ. ಇಂದಿಗೂ ಕೂಡ ಈ ಕಲ್ಲು ಪ್ರಪಂಚದಲ್ಲಿ ಎಲ್ಲಿ ಹುಡುಕಿದರೂ ಕೂಡ ಸಿಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ನಾಗ ಗಣಪತಿಯ ವಿಗ್ರಹ ಸಿಕ್ಕಿದ್ದು 1924 ರಲ್ಲಿ.
ಸುಮಾರು ವರ್ಷಗ ಳಿಂದ ಈ ಗಣಪತಿಗೋಸ್ಕರ ರಾಜರು ಬ್ರಿಟಿಷರು ಸಾಮಾನ್ಯ ಜನರು ಕೂಡ ಹುಡುಕಾಟವನ್ನು ನಡೆಸುತ್ತಾರೆ. ಆದರೆ ಯಾರಿಗೂ ಕೂಡ ಸಿಕ್ಕಿರುವುದಿಲ್ಲ. 1924ರಲ್ಲಿ ಛತ್ತೀಸ್ಗಡ್ ರಾಜ್ಯದಲ್ಲಿ ಅತಿ ದೊಡ್ಡ ಭೂ ಕಂಪ ಸಂಭವಿಸುತ್ತದೆ. ಸುಮಾರು ನೂರಾರು ಜನ ತಮ್ಮ ಪ್ರಾಣವನ್ನು ಸಹ ಕಳೆದುಕೊಳ್ಳುತ್ತಾರೆ. ಭೂಕಂಪಕ್ಕೆ ಒಳಗಾದ ಡೊಲ್ ಕರ್ ಬೆಟ್ಟ ನಾಲ್ಕು ಭಾಗವಾಗಿ ಹೊಡೆದು ಕೆಳಗೆ ಬೀಳುತ್ತದೆ.
ಒಂದು ಭಾಗ ಮಾತ್ರ ಹಾಗೆ ಉಳಿಯುತ್ತದೆ ಏನು ಆಗುವುದಿಲ್ಲ. ಇದೆ ನಾಗ ಗಣೇಶ ದೇವರ ವಿಗ್ರಹ ಇರುವ ಡೋಲ್ ಕರ್ ಬೆಟ್ಟ. ಈ ನಾಗ ಗಣೇಶ ದೇವರ ದರ್ಶನವನ್ನು ಮಾಡುವುದು ಅಷ್ಟು ಸುಲಭವಲ್ಲ. ಬೆಟ್ಟ ಹತ್ತಬೇಕು ಎಂದರೆ ಜೀವವನ್ನೇ ಕೈಯಲ್ಲಿ ಹಿಡಿದುಕೊಳ್ಳಬೇಕು ಇಲ್ಲ ಎಂದರೆ ಬದುಕಿನ ಆಸೆಯನ್ನು ಬಿಟ್ಟು ಬೆಟ್ಟವನ್ನು ಹತ್ತಬೇಕು.
ಇಂದಿಗೂ ಕೂಡ ಯಾರು ಕೂಡ ಈ ಬೆಟ್ಟವನ್ನು ಹತ್ತಿಲ್ಲ ಹತ್ತುವುದಕ್ಕೂ ಕೂಡ ಸಾಧ್ಯವಿಲ್ಲ ಎಂದೇ ಹೇಳಲಾಗಿದೆ. ಈ ಬೆಟ್ಟ ಸಮುದ್ರ ಮಟ್ಟಕ್ಕಿಂತ 3000 ಅಡಿಗಳಷ್ಟು ಎತ್ತರ ಇದೆ. ಇಷ್ಟೊಂದು ಎತ್ತರ ಮತ್ತು ನೇರವಾಗಿ ಮೇಲಕ್ಕೆ ಹೋಗಿರುವ ಬೆಟ್ಟವನ್ನು ಹತ್ತುವುದು ಅಸಾಧ್ಯದ ಮಾತು. ಪ್ರತಿದಿನ ಸಾಕಷ್ಟು ಜನ ಈ ಬೆಟ್ಟವನ್ನು ಹತ್ತಲು ಪ್ರಯತ್ನ ಪಡುತ್ತಾರೆ.
ಆದರೆ ಇಲ್ಲಿಯವರೆಗೆ ಯಾರು ಕೂಡ ಯಶಸ್ವಿಯಾಗಿ ಬೆಟ್ಟವನ್ನು ಹತ್ತುವುದಕ್ಕೆ ಸಾಧ್ಯವಾಗಿಲ್ಲ. ನಾಗ ಗಣಪತಿ ನೆಲೆಸಿರುವಂತಹ ಡೊಲ್ ಕರ್ ಬೆಟ್ಟದಿಂದ ನೂರು ಮೀಟರ್ ದೂರದಲ್ಲಿ ಮತ್ತೊಂದು ಬೆಟ್ಟ ಕಂಡುಬರುತ್ತದೆ. ಈ ಬೆಟ್ಟದ ಹೆಸರು ಬಸ್ತಾರ್ ಬೆಟ್ಟ ಈ ಬೆಟ್ಟವನ್ನು ಯಾರು ಬೇಕಾದರೂ ಸಹ ಸುಲಭವಾಗಿ ಹತ್ತಬಹುದು.
ಡೊಲ್ ಕರ್ ಬೆಟ್ಟದಲ್ಲಿ ನೆಲೆಸಿರುವಂತಹ ನಾಗ ಗಣೇಶನ ವಿಗ್ರಹವನ್ನು ನಾವು ನೋಡಬೇಕು ಎಂದರೆ ಮೊದಲು ಬಸ್ತಾರ್ ಬೆಟ್ಟವನ್ನು ಹತ್ತಿ ಅದರ ತುದಿಯಲ್ಲಿ ನಿಂತುಕೊಂಡರೆ ನಿಮಗೆ ಅಲ್ಲಿಂದ ಡೊಲ್ ಕರ್ ಬೆಟ್ಟದಲ್ಲಿ ನೆಲೆಸಿರುವಂತಹ ನಾಗ ಗಣೇಶನ ಮೂರ್ತಿ ಕಾಣಿಸುತ್ತದೆ. ಜನ ಸಾಮಾನ್ಯರು ಡೊಲ್ ಕರ್ ಬೆಟ್ಟವನ್ನು ಹತ್ತುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.