
ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಧರಿಸುವ ವಸ್ತ್ರ ವಿನ್ಯಾಸ ಇದೇ ರೀತಿ ಇರಬೇಕು ಮತ್ತು ಅವರು ಕೆಲವು ವಸ್ತುಗಳನ್ನು ಧರಿಸಲೇಬೇಕು ಎನ್ನುವ ನಿಯಮಗಳು ಇವೆ. ಇದೆಲ್ಲದರ ಹಿಂದೆ ಒಂದು ವೈಜ್ಞಾನಿಕ ಕಾರಣವಿತ್ತು ಎನ್ನುವುದು ಇತ್ತೀಚಿಗೆ ವಿಜ್ಞಾನ ಶಾಸ್ತ್ರದ ಮೂಲಕ ಬೆಳಕಿಗೆ ಬಂದಿದೆ.
ನಮ್ಮ ಹಿರಿಯರು ಈ ರೀತಿ ಯಾವುದೇ ಪದ್ಧತಿ ಮಾಡಿದ್ದರೂ ಕೂಡ ಅದರ ಹಿಂದೆ ಧರಿಸುವವರ ದೇಹದ ಅಥವಾ ಮಾನಸಿಕ ಆರೋಗ್ಯದ ಕುರಿತು ಕಾಳಜಿ ಇತ್ತು. ಹಾಗಾಗಿ ಹೆಣ್ಣು ಮಕ್ಕಳಿಗೆ ಬಳೆ, ಕುಂಕುಮ, ತಾಳಿ, ಕಾಲುಂಗುರ, ಹೂವು ಇವುಗಳನ್ನು ಪದ್ದತಿ ಎಂದು ಹೇಳಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಿದರು. ಅದೇ ರೀತಿ ಗಂಡು ಮಕ್ಕಳಿಗೂ ಕೂಡ ಅವರು ಧರಿಸಬೇಕಾದ ಕೆಲವು ವಸ್ತುಗಳಿವೆ.
ಆದರೆ ಇತ್ತೀಚಿಗೆ ಫ್ಯಾಷನ್ ಎನ್ನುವ ಹೆಸರಿನಲ್ಲಿ ಇವುಗಳನ್ನು ಧರಿಸುವುದರಿಂದ ಕಂಫರ್ಟೆಬಲ್ ಇಲ್ಲ ಎಂದು ಯುವ ಜನತೆ ಇದರತ್ತ ನಿರ್ಲಕ್ಷ ತೋರುತ್ತಿದ್ದಾರೆ. ಪ್ರತಿಯೊಂದು ನಿಯಮದ ಹಿಂದೆ ಇದ್ದ ಕಾರಣಗಳಲ್ಲಿ ಕೆಲವುಗಳನ್ನು ಈ ಅಂಕಣದಲ್ಲಿ ತಿಳಿಸಲು ಪ್ರಯತ್ನಿಸುತ್ತಿದ್ದೇವೆ.
ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!
● ಕಿವಿ ಚುಚ್ಚುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಮತ್ತು ಜಾಗೃತಿಯ ಭಾವ ಮೂಡುತ್ತದೆ.
● ತಲೆಗೆ ಹೂವು ಮುಡಿದುಕೊಳ್ಳುವುದರಿಂದ ತಲೆ ಕೂದಲು ವಾಸನೆ ಬರುವುದಿಲ್ಲ, ಹಾಗೆ ತಲೆಯಲ್ಲಿ ಕ್ರಿಮಿಗಳು ಇರುವುದಿಲ್ಲ.
● ಚಿನ್ನವನ್ನು ಮೈ ಮೇಲೆ ಧರಿಸುವುದರಿಂದ ರಕ್ತ ಪರಿಚಲನೆ ಕಾರ್ಯ ಸರಾಗವಾಗಿ ಆಗುತ್ತದೆ. ಹಾಗಾಗಿ ಮಾಂಗಲ್ಯ ಹಾಗೂ ಚಿನ್ನದ ಕೆಲವು ಒಡವೆಗಳನ್ನು ಧರಿಸಲು ಹೇಳಿದ್ದರು.
● ಹೆಣ್ಣುಮಕ್ಕಳು ಕೈ ತುಂಬಾ ಬಳೆ ಹಾಕಿಕೊಳ್ಳುವುದರಿಂದ ಅವಳು ಎಲ್ಲಿದ್ದರೂ ಸುಲಭವಾಗಿ ಗುರುತಿಸಬಹುದು, ಇದು ಮಾತ್ರ ಅಲ್ಲದೆ ಇದೊಂದು ಸಂಪ್ರದಾಯ ಕೂಡ ಜೊತೆಗೆ ಲಕ್ಷಣವಾಗಿ ಅವರು ಕಾಣುತ್ತಾರೆ. ದೇಹದ ವಾತ ಪಿತ್ತ ಕಫ ಸಮತೋಲನದಲ್ಲಿ ಇರುತ್ತದೆ. ಕೈ ತುಂಬಾ ಬಳೆಗಳನ್ನು ಧರಿಸುವ ಹೆಣ್ಣುಮಕ್ಕಳು ಎಮೋಷನಲಿ ಬಹಳ ಸ್ಟ್ರಾಂಗ್ ಆಗಿ ಇರುತ್ತಾರೆ.
● ಉಂಗುರವನ್ನು ಧರಿಸುವುದರಿಂದ ಉಂಗುರದ ಬೆರಳು ಹೃದಯಕ್ಕೆ ನೇರ ಸಂಪರ್ಕವನ್ನು ಹೊಂದಿರುತ್ತದೆ. ಇದರಿಂದಾಗಿ ಹೃದಯ ದೌರ್ಬಲ್ಯ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗಲು ಸಹಾಯಕವಾಗುತ್ತದೆ.
● ಬೆಳ್ಳಿ ಕಾಲುಂಗುರಗಳನ್ನು ಕಾಲು ಬೆರಳಿಗೆ ಧರಿಸುವುದರಿಂದ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಕ್ರಮೇಣ ನಿವಾರಣೆಯಾಗುತ್ತವೆ.
ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!
● ಮನೆಯ ಮುಂದೆ ಬಿಲ್ವಪತ್ರೆ ಮರ, ತುಳಸಿ ಗಿಡಗಳನ್ನು ಬೆಳೆಸುವುದರಿಂದ ಮಲೇರಿಯ ರೋಗ ದೂರವಾಗುತ್ತದೆ. ಮತ್ತು ಉಸಿರಾಡಲು ನಮಗೆ ಶುದ್ಧವಾದ ಆಮ್ಲಜನಕ ನಮಗೆ ಸಿಗುತ್ತದೆ.
● ಊಟದ ಎಲೆಯ ಸುತ್ತ ನೀರನ್ನು ಹಾಕಿಕೊಳ್ಳುವುದರಿಂದ ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಸ’ತ್ತು ಹೋಗುತ್ತವೆ ಅವು ನಮ್ಮ ಊಟಕ್ಕೆ ಪ್ರವೇಶಿಸಲು ಅಸಾಧ್ಯವಾಗುತ್ತದೆ.
● ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಕೆಲವು ವಿಶೇಷ ದಿನಗಳಾದರೂ ಉಪವಾಸ ಮಾಡುವುದರಿಂದ ಜೀರ್ಣವಾಗದೆ ಉಳಿದ ಆಹಾರವು ಜೀರ್ಣವಾಗಿ, ಕರುಳಿಗೆ ವಿಶ್ರಾಂತಿ ದೊರೆಯುತ್ತದೆ ಮತ್ತು ದೇಹದಲ್ಲಿರುವ ಅನಾವಶ್ಯಕ ಕೊಬ್ಬಿನಂಶ ಕರಗಲು ಸಹಾಯಕವಾಗುತ್ತದೆ.
● ಮನೆಯಲ್ಲಿ ಶಂಖನಾದ ಮಾಡುವುದರಿಂದ ಅದರ ಕಂಪನ ಮೆದುಳಿಗೆ ಪ್ರಚೋದನೆಯಾಗಿ ಶ್ವಾಸಕೋಶಕ್ಕೆ ವ್ಯಾಯಾಮ ಸಿಗುತ್ತದೆ.
● ದೇವರಿಗೆ ಕರ್ಪೂರ ಬೆಳಗುವುದರಿಂದ ವಾತಾವರಣದಲ್ಲಿ ಇರುವ ಕ್ರಿಮಿಗಳು ಕರ್ಪೂರದಲ್ಲಿರುವ ಅಂಶದಿಂದ ನಾಶವಾಗುತ್ತವೆ.
● ಕುಂಕುಮ ಧರಿಸುವುದರಿಂದ ಮಾನಸಿಕ ದೌರ್ಬಲ್ಯ ಕಡಿಮೆಯಾಗಿ ಶಾಂತ ಚಿತ್ತತೆ ಬರುತ್ತದೆ ಎಂದು ಹೇಳಲಾಗುತ್ತದೆ.
● ಕಾಲಿಗೆ ಧರಿಸುವ ಕಾಲ್ಗೆಜ್ಜೆಯು ದೇಹದ ಸುತ್ತ ಜೀವಶಕ್ತಿಯನ್ನು ಪ್ರವಹಿಸುತ್ತದೆ ಮತ್ತು ಬುದ್ಧಿಶಕ್ತಿ ಹೆಚ್ಚಾಗುವುದಕ್ಕೆ ಕಾರಣವಾಗಿದೆ.