
ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಯರು ನಿತ್ಯ ಎದುರಿಸುವ ಸವಾಲುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ರೂ. 2,000 ಧನಸಹಾಯ ನೀಡಲಾಗುತ್ತಿದೆ.
ರಾಜ್ಯದ 1.08 ಕೋಟಿ ಮಹಿಳೆಯರಿಗೆ ಈಗಾಗಲೇ ಎರಡು ತಿಂಗಳ ಹಣ ಜಮೆಯಾಗಿದ್ದು, ಈ ಉದ್ದೇಶಕ್ಕಾಗಿ ಸರ್ಕಾರವು ರೂ. 4,449 ಕೋಟಿ ಅನುದಾನ ಬಳಕೆ ಮಾಡಿದೆ. ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀ ಸಬಲೀಕರಣಕ್ಕೆ ಬದ್ಧವಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳ ಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಹೌದು ಈ ನವರಾತ್ರಿ ಹಬ್ಬ ಮಹಿಳೆಯರಿಗೆ ಬಹಳ ವಿಶೇಷವಾಗಿದ್ದು ಈ ಸಂದರ್ಭದಲ್ಲಿ ಅವರು ಯಾವುದೇ ರೀತಿಯ ವಿಚಾರವಾಗಿ ಅಂದರೆ ಕಾಂಗ್ರೆಸ್ ಸರ್ಕಾರ ನೀಡಿದಂತಹ ಗ್ಯಾರಂಟಿ ಯೋಜನೆ ಅವರಿಗೆ ಸಿಗದೇ ಅವರು ಬೇಜಾರಾಗಬಾರದು ಎನ್ನುವ ಉದ್ದೇಶದಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ.
ಹೌದು ಸಿಎಂ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಅನುಕೂಲವಾಗುವಂತೆ ನವರಾತ್ರಿ ಹಬ್ಬ ಬಹಳ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಇರುವುದರಿಂದ ಈ ಸಂದರ್ಭದಲ್ಲಿ ಅವರು ಕೂಡ ಎಲ್ಲರಂತೆ ಖುಷಿಯಾಗಿರಬೇಕು ಎನ್ನುವ ಉದ್ದೇಶದಿಂದ ಅವರು ಈ ಬಾರಿ ಅಂದರೆ ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಈ ಹಣವನ್ನು ಹಾಕುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು ಈಗಾಗಲೇ ಹಲವಾರು ಜನ ಮಹಿಳೆಯರಿಗೆ ಮೊದಲ ಕಂತಿನ ಹಣ ಬಿಡುಗಡೆಯಾಗಿತ್ತು. ಆದರೆ ಕೆಲವೊಂದಷ್ಟು ಜನರಿಗೆ ಮೊದಲ ಕಂತಿನ ಹಣವು ಕೂಡ ಬಿಡುಗಡೆಯಾಗಿರಲಿಲ್ಲ ಆದರೆ ಈ ತಿಂಗಳು ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದು.
ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಹೌದು ಮಹಿಳೆಯರ ಸಬಲೀಕರಣಕ್ಕಾಗಿ ಅಂದರೆ ಅವರು ಪ್ರತಿನಿತ್ಯ ಎದುರಿಸುವಂತಹ ಕೆಲವೊಂದು ಪರಿಸ್ಥಿತಿಗಳಲ್ಲಿ ಅವರು ಚೇತರಿಕೆಯನ್ನು ಕಾಣಬೇಕು ಎನ್ನುವ ಉದ್ದೇಶದಿಂದ ಈ ಒಂದು ಯೋಜನೆಯ ಜಾರಿಗೆ ತರುವಲ್ಲಿ ಬಹಳ ಮಹತ್ವವಾದ ನಿರ್ಧಾರವನ್ನು ಕೈಗೊಂಡಿದ್ದರು.
ಅದೇ ರೀತಿಯಾಗಿ ಈ ಒಂದು ಯೋಜನೆ ಈಗಾಗಲೇ ಚಾಲ್ತಿಯಲ್ಲಿ ಇದ್ದು ಕೆಲವೊಂದಷ್ಟು ಜನ ಮೊದಲ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ. ಹೌದು ಮೇಲೆ ಹೇಳಿದಂತೆ ನವರಾತ್ರಿ ಹಬ್ಬ ಪ್ರಾರಂಭವಾಗಿದ್ದು ಈ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಈ ಒಂದು ನವರಾತ್ರಿ ಸಂಭ್ರಮ ಅನುಕೂಲವಾಗಬೇಕು.
ಹಾಗೂ ಅವರಿಗೆ ಈ ಸಮಯದಲ್ಲಿ ತುಂಬಾ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದ ಅವರ ಏಳಿಗೆಯನ್ನು ಬಯಸುವಂತಹ ಸರ್ಕಾರ ಈ ಬಾರಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಬರುವಂತಹ ಹಣ ಯಾರಿಗೆಲ್ಲ ಬಂದಿಲ್ಲವೋ ಅವರಿಗೆ ಈ ಒಂದು ಸಂದರ್ಭದಲ್ಲಿ ಎರಡು ತಿಂಗಳ ಒಟ್ಟು ಹಣವನ್ನು ಅಂದರೆ 4000 ಹಣವನ್ನು ಜಮಾ ಮಾಡುವುದಾಗಿ ಹಾಗೂ ಮಾಡುತ್ತೇವೆ ಎನ್ನುವಂತಹ ಮಾತನ್ನು ಹೇಳಿದ್ದರು.
ಅದೇ ರೀತಿಯಾಗಿ ಪ್ರತಿಯೊಬ್ಬರಿಗೂ ಕೂಡ ಈ 4000 ಹಣ ಬಂದು ಸೇರಬೇಕು ಎಂದರೆ ಈ ಒಂದು ಕೆಲಸವನ್ನು ಮಾಡಲೇಬೇಕು ಅದೇನೆಂದರೆ. ನಿಮ್ಮ ರೇಷನ್ ಕಾರ್ಡ್ ಗೆ ಕೆ ವೈ ಸಿ ಆಗದಿದ್ದರೆ ಅದನ್ನು ಈಗಲೇ ಅಪ್ಡೇಟ್ ಮಾಡಿಸಿ ಕೊಳ್ಳುವುದು ಮುಖ್ಯ. ಹೀಗೆ ಮಾಡಿಲ್ಲ ಎಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.