ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಕಾಲ್ಗೆಜ್ಜೆ ಧರಿಸುವ ಅಭ್ಯಾಸವನ್ನೇ ರೂಡಿ ಮಾಡಿಕೊಂಡಿಲ್ಲ ಆದರೆ ಅದೇ ರೀತಿ ಇನ್ನೂ ಕೆಲವು ಹೆಣ್ಣು ಮಕ್ಕಳಿಗೆ ಕಾಲು ಗೆಜ್ಜೆ ಧರಿಸುವುದೆಂದರೆ ಒಂದು ರೀತಿಯ ಸಂಭ್ರಮವೋ ಸಂಭ್ರಮ ಇದು ಪಾದಗಳಿಗೆ ಮೆರುಗು ನೀಡುತ್ತದೆ. ಜೊತೆಗೆ ಹಬ್ಬ ಹರಿ ದಿನಗಳಲ್ಲಿ ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ಮನೆಯ ಸಂಭ್ರಮ ಕೂಡ ಹೆಚ್ಚುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಚಂದ್ರನ ಸಂಕೇತವಾಗಿರುತ್ತದೆ. ಅಷ್ಟೇ ಅಲ್ಲದೆ ಬೆಳ್ಳಿಯು ಈಶ್ವರನ ಕಣ್ಣುಗಳಿಂದ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ. ಈ ಎಲ್ಲಾ ಕಾರಣಗಳಿಂದ ಬೆಳ್ಳಿಯನ್ನು ಸಮೃದ್ಧಿಯ ಸಂಕೇತ ಎಂದು ಹಿರಿಯರು ನಂಬುತ್ತಾರೆ. ಮತ್ತು ಕಾಲ್ಗೆಜ್ಜೆಗಳಿಂದ ಆರೋಗ್ಯ ಸಮೃದ್ಧಿಸುವ ಸಾಮರ್ಥ್ಯ ಕೂಡ ಅಡಗಿದೆ ಎಂದು ನಿಮಗೆ ತಿಳಿದಿದೆ.
ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ನಿಮ್ಮ ದೇಹದಿಂದ ಅನವಶ್ಯಕವಾಗಿ
ಹೊರ ಹೋಗುವ ಶಕ್ತಿಯು ದೇಹದಲ್ಲಿ ಉಳಿದು ಕೊಳ್ಳುತ್ತದೆ. ಎನರ್ಜಿ ಕಾಪಾಡಿಕೊಳ್ಳಲು ಬೆಳ್ಳಿಯ ಕಾಲ್ಗೆಜ್ಜೆಗಳು ಸಹಕಾರಿ. ಬೆಳ್ಳಿಯಲ್ಲಿ ಬ್ಯಾಕ್ಟಿರಿಯಗಳನ್ನು ನಾಶಪಡಿಸುವ ಗುಣವಿದೆ ಇದಕ್ಕೆ ಐತಿಹಾಸಿಕ ಉದಾಹರಣೆಗಳಿವೆ ಇನ್ನು ಮಹಿಳೆಯರು ತಮ್ಮ ಪ್ರತಿದಿನವನ್ನು ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲಿ ಕಳೆಯುತ್ತಾರೆ.
ಬೆಳಗ್ಗೆನಿಂದ ಸಂಜೆಯ ತನಕ ನಿಂತುಕೊತು ನಿರಂತರವಾಗಿ ಕೆಲಸ ಮಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ ಹಾಗೂ ಸೊಂಟಗಳಿಗೆ ಹಬ್ಬಿಕೊಳ್ಳುವ ಸಂಭವ ಇರುತ್ತದೆ. ಆದರೆ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಆ ನೋವುಗಳು ಸಂಭವಿಸುವುದಿಲ್ಲ. 40 ವರ್ಷ ಮೇಲ್ಪಟ್ಟವರು ಕಾಲ್ಗೆಜ್ಜೆಯನ್ನು ಧರಿಸಿದರೆ ಉತ್ತಮ ಪದೇ ಪದೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇಂದೇ ಕಾಲ್ಗೆಜ್ಜೆಯನ್ನು ಧರಿಸಿ.
ಮತ್ತು ಹಾರ್ಮೋನ್ ಬ್ಯಾಲೆನ್ಸ್ ಮಾಡುತ್ತದೆ. ಮಹಿಳೆಯರು ಮುಟ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗುತ್ತದೆ. ಮದುವೆಯ ನಂತರ ಹೆಣ್ಣು ಮಕ್ಕಳು ಬೆಳ್ಳಿಯ ಕಾಲುಂಗುರವನ್ನು ಕೂಡ ಇದೇ ಕಾರಣಕ್ಕೆ ಧರಿಸುತ್ತಾರೆ. ಕಾಲ್ಗೆಜ್ಜೆಯನ್ನು ಧರಿಸುವುದರಿಂದ ನಿಮ್ಮ ಕಾಲಿನ ಸೌಂದರ್ಯವಲ್ಲದೆ ಆರೋಗ್ಯ ಕೂಡ ಅಭಿವೃದ್ಧಿಯಾಗುತ್ತದೆ.
ಬೆಳ್ಳಿಯು ನಿಮ್ಮ ದೇಹವನ್ನು ರೋಗಗಳಿಂದ ದೂರ ಇರುವಂತೆ ನೋಡಿಕೊಳ್ಳುತ್ತದೆ. ಇದೇ ವೈಜ್ಞಾನಿಕ ಕಾರಣಗಳಿಂದ ಹಿರಿಯರು ಬೆಳ್ಳಿ
ಆಭರಣಗಳನ್ನು ಧರಿಸುವ ಸೂಚನೆಯನ್ನು ನೀಡುತ್ತಿದ್ದರು. ಹೀಗೆ ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವಂತಹ ಕಾಲ್ಗೆಜ್ಜೆಯನ್ನು ಪ್ರತಿಯೊಬ್ಬರೂ ಕೂಡ ಧರಿಸುವುದು ಒಳ್ಳೆಯದು.
ಅದರಲ್ಲಂತೂ ಹೆಣ್ಣು ಮಕ್ಕಳು ವಯಸ್ಸಿಗೆ ಬರುವ ಮುಂಚೆ ಹಾಗೂ ಬಂದ ನಂತರ ಇದನ್ನು ಧರಿಸುವುದು ಕಡ್ಡಾಯ ಎಂದು ಹೇಳಿದರು ತಪ್ಪಾಗುವುದಿಲ್ಲ. ಅದು ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಮೇಲೆ ಹೇಳಿದಂತೆ ನಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.
ಹಾಗಾಗಿ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸುವುದು ಒಳ್ಳೆಯದು. ಹಾಗೂ ಈ ರೀತಿಯ ಕಾಲ್ಗೆಜ್ಜೆ ಶಬ್ದ ಮನೆಯಲ್ಲಿ ಕೇಳುವುದರಿಂದ ಮನೆಯಲ್ಲಿ ಒಂದು ರೀತಿಯ ಧನಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ. ಹಾಗೂ ಮನೆಯಲ್ಲಿ ಉತ್ತಮವಾದಂತಹ ವಾತಾವರಣ ಕೂಡ ಸೃಷ್ಟಿಯಾಗುತ್ತದೆ ಎಂದೇ ಹೇಳಬಹುದು.
ಅದರಲ್ಲೂ ಲಕ್ಷ್ಮೀದೇವಿಗೆ ಕಾಲ್ಗೆಜ್ಜೆ ಎಂದರೆ ತುಂಬಾ ಇಷ್ಟ ಹಾಗಾಗಿ ಮನೆಯಲ್ಲಿ ಪ್ರತಿ ಬಾರಿ ಕಾಲ್ಗೆಜ್ಜೆ ಶಬ್ದ ಆಗುತ್ತಿದ್ದಂತೆ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಇರುತ್ತದೆ ಹಾಗೂ ಆ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ಸದಾ ಕಾಲ ಬರುತ್ತಾಳೆ, ನೆಲೆಗೊಳ್ಳುತ್ತಾಳೆ ಎಂದೇ ಹೇಳಬಹುದು. ಹಾಗಾಗಿ ಇದು ನಮ್ಮ ಸಂಪ್ರದಾಯವು ಕೂಡ ಆಗಿದೆ.