Home Useful Information ಅತ್ತೆ ಸೊಸೆ ತಿಳಿದುಕೊಳ್ಳಲೇ ಬೇಕಾದ ಮಾಹಿತಿ.!

ಅತ್ತೆ ಸೊಸೆ ತಿಳಿದುಕೊಳ್ಳಲೇ ಬೇಕಾದ ಮಾಹಿತಿ.!

0
ಅತ್ತೆ ಸೊಸೆ ತಿಳಿದುಕೊಳ್ಳಲೇ ಬೇಕಾದ ಮಾಹಿತಿ.!

 

ಒಂದು ಸಣ್ಣ ಕುಟುಂಬ ಗಂಡ ಹೆಂಡತಿ ಮತ್ತು ಅವಳ ಅತ್ತೆ. ಯಜಮಾನ ಬೆಳಗ್ಗೆ ಆರಕ್ಕೆ ಹೋದರೆ ಮನೆಗೆ ಬರೋದು ತಡರಾತ್ರಿ . ಮದುವೆಯಾಗಿ ಬಂದಾಗ ಇದ್ದ ಅತ್ತೆ ಸೊಸೆಯ ಅನ್ನೋನ್ಯತೆ ಈಗಿಲ್ಲ. ಅತ್ತೆಗೆ ನಾ ಮಾಡೋ ಕೆಲಸದಲ್ಲಿ ಏನಾದರೂ ತಪ್ಪು ಕಂಡು ಹಿಡಿಯದಿದ್ದರೆ ಸಮಾಧಾನ ಇಲ್ಲ ಅಂತ ಸೊಸೆ.

ನಮ್ಮ ಕಾಲದಲ್ಲಿ ಮಾಡ್ತಿದ್ದಂಗೆ ನಯ ನಾಜೂಕು ಇವಳು ಕಲ್ತಿಲ್ಲ ಅಂತ ಅತ್ತೆ ಹೀಗೆ ಇಬ್ಬರೊಳಗೂ ಒಳಗೊಳಗೇ ಅಸಮಾಧಾನದ ಹೊಗೆ ಇದ್ದೇ ಇತ್ತು ಸೊಸೆ ಕಾಫಿ ತಂದುಕೊಟ್ಟರೆ ಅರ್ಧ ಕುಡಿದು ಆಮೇಲೆ ಸಕ್ಕರೆ ಸಾಲದು ಪುಡಿ ಹೆಚ್ಚು ಅಂತ ಹೇಳಿ ಚೆಲ್ಲೋದು ಸೊಸೆ ಟಿವಿ ಹಾಕಿದ್ರೆ ಒಳಗೆ ಎದ್ದು ಹೊರಟು ಹೋಗೋದು ಹೀಗೆ ಏನು ಮಾಡಿದ್ದು ತಪು ಅನ್ನೋ ಹಾಗೆ ಮಾಡ್ತಿದ್ರು.

ಸುಸ್ತಾಗಿ ಬರೋ ಗಂಡನಿಗೆ ಹೇಳಿದರೆ ಎಲ್ಲಿ ಕೋಪ ಮಾಡ್ಕೊತಾರೆ ಅಂತ ತಾಳ್ಮೆಯನ್ನು ಬೆಟ್ಟ ಮಾಡಿ ತನ್ನಲ್ಲೇ ಇಟ್ಟಿಕೊಂಡಿದ್ದಳು. ಒಂದು ದಿನ ಹಾಲು ಬೇಕು ಅಂದಾಗ ಇಲ್ಲ ಅಂತ ಅಂದರೆ ಕೋಪ ಮಾಡ್ಕೊತಾರೆ ಅಂತ ತಾನೇ ಅಂಗಡಿಗೆ ಹೋಗಿ ತಂದು ಕಾಫಿ ಬೂಸ್ಟ್ ಹಾಕಿ ಕೊಟ್ಟು ಒಳಗೆ ಹೋದಾಗ ಲೋಟಾ ಕೆಳಗೆ ಬಿದ್ದ ಶಬ್ದ ಕೇಳಿ ಓಡಿ ಬಂದರೆ ಹಾಲೆಲ್ಲಾ ಚೆಲ್ಲಿ ಹೋಗಿದೆ.

ಅತ್ತೆಗೆ ಮಾತಾಡಕ್ಕೆ ಆಗ್ತಾ ಇಲ್ಲ ಬಲಗೈ ಮೇಲಕ್ಕೆ ಎತ್ತಲೂ ಆಗ್ತಾಯಿಲ್ಲ, ಬಾಯಿ ಪಕ್ಕಕೆ ಹೋಗಿದೆ. ತಕ್ಷಣ ಗಂಡನಿಗೆ ಕಾಲ್ ಮಾಡಿದಳು. ಅವನು ಬಂದ ತಕ್ಷಣ ಆಸ್ಪತ್ರೆಗೆ ಹೋದರು. ಬಲಗಡೆ ಪ್ಯಾರಾಲಿಸಿಸ್ ಆಗಿದೆ ಹಾಗಾಗಿ ಚೇತರಿಸಿಕೊಳ್ಳು ವುದು ಬಹಳ ನಿಧಾನ ಮನೆಯಲ್ಲೇ ನೋಡಿಕೊಳ್ಳಿ ಅಂತ ಮಾತ್ರೆ ಕೊಟ್ಟು ಕಳಿಸಿದರು ಮೊದ ಲಿಗಿಂತ ಈಗ ಸೊಸೆಗೆ ಜವಾಬ್ದಾರಿ ಜೊತೆ ಕೆಲಸಾನು ಹೆಚ್ಚಾಯ್ತು.

ಮನೆಗೆ ಬಂದು ನೋಡುವ ನೆಂಟರಿಷ್ಟರು ಸ್ನೇಹಿತರು ದಿನವೂ ಯಾರಾ ದರು ಇದ್ದೇ ಇರುತ್ತಿದ್ದರು ಬರೋರೆಲ್ಲಾ ಅಡ್ವೈಸ್ ಮಾಡೋರೇ ಅತ್ತೆ ಯನ್ನ ಚೆನ್ನಾಗಿ ನೋಡಿಕೋ ಅಂತ. ಆಯ್ತು ಅಂತ ತಲೆ ಅಲ್ಲಾಡಿಸುತ್ತಿ ದ್ದಳು. ಒಂದು ದಿನ ಬೆಳಗ್ಗೆ ಕಾಫಿ ತಂದು ಕುಡಿಸೋಣ ಅಂತ ಸ್ಪೂನ್ ತರಕ್ಕೆ ಒಳಗೆ ಹೋದಾಗ ಅಕಸ್ಮಾತ್ ಹಿಂದೆ ತಿರುಗಿ ನೋಡಿದರೆ ಎಡಗೈಯಿಂದ ಬೇಕೆಂದೆ ಲೋಟ ಕೆಳಗೆ ತೆಗೆದು ಹಾಕಿದ್ದು ಕಂಡಾಗ ಬಹಳ ಕೋಪ ಬಂತು.

ಇನ್ನೊಂದು ದಿನ ಹೀಗೆ ಮಾಡಿದ್ರೆ ಕತ್ತು ಹಿಸುಕಿ ಸಾಯಿಸ್ತಿನಿ ಅಂತ ಸುಮ್ಮನೆ ಕತ್ತಿನ ಬಳಿ ಕೈ ಇಟ್ಟು ಹೆದರಿಸಿ ಬೇರೆ ಕಾಫಿ ತಂದು ಕುಡಿಸಿದಳು. ಅದೇ ಸಮಯಕ್ಕೆ ಗಂಡ ಬಂದು ಸೀದಾ ಅಮ್ಮನ ಹತ್ತಿರ ಬಂದು ಕುಳಿತ ಅಮ್ಮ ಕೈಸನ್ನೆಯಲ್ಲೆ ತೋರಿಸಿದರು. ಸೊಸೆ ಕತ್ತು ಹಿಸುಕಿ ಸಾಯಿಸಿ ಬಿಡ್ತಾಳೆ ಅಂತ ಮಗನಿಗೆ ಅರ್ಥವಾಗದೆ ಹೆಂಡತಿಯನ್ನ ಕೇಳಿದ ಅದಕ್ಕೆ ಅವಳು ಹೇಳಿದ್ದು ಏನ್ರಿ ಅಷ್ಟೂ ಗೊತ್ತಾಗ್ಲಿಲ್ವಾ ಅವರು ಹೇಳಿದ್ದಾರೆ.

ಅವರ ಕತ್ತಿನಲ್ಲಿರೋ ಸರಾನ ಸೊಸೆಗೆ ಬಿಚ್ಚಿ ಕೊಡು ಅಂತ. ಅಯ್ಯೋ ಆಯ್ತು ಅಂತ ತೆಗೆದು ಹೆಂಡತಿಯ ಕತ್ತಿಗೆ ಹಾಕಿಬಿಟ್ಟ. ಅದಕ್ಕೆಲ್ಲ ಏನು ಅವಸರ ಅಮ್ಮ ಮಲಗು, ನಾನು ಹೋಗ್ತಿನಿ ಅಂತ ರೂಮಿಗೆ ಹೋದ. ಕತ್ತಿನಲ್ಲಿದ್ದ ಸರಾ ತೋರಿಸಿ ಕೊಂಡು ನಗುತ್ತಾ ನಿಂತಿದ್ದಳು ಸೊಸೆ ಆದರೆ ಅಂದಿನಿಂದ ಸೊಸೆ ಏನು ಹೇಳಿದ್ರು ಸುಮ್ಮನೆ ಒಪ್ಪಿಕೊಳ್ತಿದ್ರು ಭಯಕ್ಕೆ.

ಅವಳಿಗೂ ಸಮಾಧಾನ ಬೇಗ ಹುಷಾರಾಗಿ ಅಂತ ಆಗಾಗ ಹೇಳೋದು ಕೇಳಿ ಅತ್ತೆಗೂ ಸಮಾಧಾನ ಒಂದು ಸಂಸಾರದಲ್ಲಿ ಗಂಡ ಹೆಂಡತಿಗಿಂತ ಅತ್ತೆ ಸೊಸೆ ಜೋಡಿ ಚೆನ್ನಾಗಿ ರಬೇಕು ಆಗಲೇ ಗಂಡ ಅನ್ನುವ ಬಡಪಾಯಿ ಕೊಂಚ ನೆಮ್ಮದಿಯಿಂದ ಬದುಕಲು ಸಾಧ್ಯ. ಸೊಸೆ ಹೇಗಿದ್ದರೇನು ಮಗಳ ಸಮಾನ ಅನ್ನುವ ಚಿಕ್ಕ ಗುಣ ಇದ್ದರೆ ಸಾಕು, ಅತ್ತೆ ಹೇಗಿದ್ದರೇನು ತಾಯಿಯ ಸಮಾನ ಎನ್ನುವ ಗುಣ ಇದ್ದರೆ ಸಾಕು. ಹೀಗೆ ಸಿಕ್ಕರೆ ನಿಮ್ಮ ಪುಣ್ಯ ಸಿಗದೇ ಹೋದರೆ ದಿನಾ ಕುರುಕ್ಷೇತ್ರ ಯುದ್ಧ ಪಕ್ಕಾ.

ಎಲ್ಲರೂ ಸರ್ವಗುಣ ಸಂಪನ್ನರಲ್ಲ ಎಲ್ಲರ ವ್ಯಕ್ತಿತ್ವದಲ್ಲೂ ಪಾಸಿಟಿವ್ ಗುಣಗಳ ಜತೆ ನೆಗೆಟಿವ್ ಗುಣಗಳೂ ಇರುತ್ತವೆ. ಎಲ್ಲಾ ಸರಿ-ತಪ್ಪುಗಳನ್ನು ಒಪ್ಪಿಕೊಂಡು ನಮ್ಮವರಾಗಿಸಿ ಕೊಳ್ಳುವುದೇ ಪರಿಪೂರ್ಣತೆ. ನಿಮ್ಮ ಸೊಸೆಯ ಬಗ್ಗೆ ನೆರೆಹೊರೆಯವರ ಹತ್ತಿರ ಕೆಟ್ಟದಾಗಿ ಹೇಳಬೇಡಿ. ಏಕೆಂದರೆ ನಾಳೆ ನೀವು ಕಾಯಿಲೆ ಬಿದ್ದು ಹಾಸಿಗೆ ಹಿಡಿದಾಗ, ನಿಮ್ಮ ಸೊಸೆಯೆ ಸೇವೆ ಮಾಡುತ್ತಾಳೆ ಹೊರತು ಅಕ್ಕ ಪಕ್ಕದವರು ಯಾರು ಮಾಡುವುದಿಲ್ಲ.

LEAVE A REPLY

Please enter your comment!
Please enter your name here