ಈಗಿನ ಕಾಲದಲ್ಲಿ ಹಣವನ್ನು ಹೂಡಿಕೆ ಮಾಡಲು ಆಸ್ತಿ ಖರೀದಿ ಮಾಡುವುದರ ಜೊತೆಗೆ ಚಿನ್ನವನ್ನು ಕೂಡ ಖರೀದಿ ಮಾಡುತ್ತಾರೆ. ಅಲಂಕಾರಿಕ ಸಾಧನವಾಗಿ ಬಳಕೆಗೆ ಬರುವುದರ ಜೊತೆಗೆ ಕಷ್ಟ ಕಾಲಕ್ಕೆ ಸುಲಭವಾಗಿ ನೆರವಿಗೆ ಬರುತ್ತದೆ ಎಂದು ಜನರು ಚಿನ್ನದ ಮೇಲು ಕೂಡ ಹೂಡಿಕೆ ಮಾಡುತ್ತಾರೆ.
ಅಲ್ಲದೆ ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲೂ ಕೂಡ ವಿಪರೀತ ಹೆಚ್ಚಳ ಆಗುತ್ತಿರುವುದರಿಂದ ಕಡಿಮೆ ಬೆಲೆ ಇರುವಾಗ ಚಿನ್ನ ಖರೀದಿ ಮಾಡಿದವರಿಗೆ ಕೆಲ ವರ್ಷ ಆದ ಬಳಿಕ ಹೆಚ್ಚಿನ ಲಾಭವೇ ಬರುತ್ತದೆ. ಹಾಗಾಗಿ ಎಲ್ಲರೂ ಈಗ ಚಿನ್ನದತ್ತ ಆಕರ್ಷಿತರಾಗಿದ್ದಾರೆ. ಈ ಚಿನ್ನವನ್ನು ಖರೀದಿಸುವುದು ಸುಲಭ ಆದರೆ ಅದನ್ನು ಖರೀದಿಸಿದ ಮೇಲೆ ಧರಿಸುವುದಕ್ಕೂ ಭಯ, ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೂ ಅಭದ್ರತೆ ಕಾಡುತ್ತಿರುತ್ತದೆ.
ಇಂತಹ ಸಮಯದಲ್ಲಿ ಹೆಚ್ಚಿನ ಜನರು ಬ್ಯಾಂಕ್ ನಲ್ಲಿ ಚಿನ್ನ ಸುರಕ್ಷಿತವಾಗಿರಲಿ ಎಂದು ಇಡುತ್ತಾರೆ. ನೀವು ಬ್ಯಾಂಕ್ ನಲ್ಲಿ ಲಾಕರ್ ಪಡೆದು ಚಿನ್ನ ಇಟ್ಟರು ನೀವೇ ಅದಕ್ಕೆ ಚಾರ್ಜಸ್ ಕಟ್ಟಬೇಕು ಅಥವಾ ಚಿನ್ನದ ಮೇಲೆ ಲೋನ್ ಪಡೆದುಕೊಂಡರು ಕೂಡ ಅದಕ್ಕೆ ಬಡ್ಡಿ ರೂಪದಲ್ಲಿ ನೀವೇ ಹಣ ಕಟ್ಟಬೇಕು.
ಇದರ ಬದಲು ಹಣವನ್ನು ಬ್ಯಾಂಕ್ಗಳಲ್ಲಿ ಠೇವಣಿ ಇಡುವಂತೆ ಇನ್ನು ಮುಂದೆ ಚಿನ್ನವನ್ನು ಕೂಡ ಠೇವಣಿ ಇಡಬಹುದು ಇಂತಹದೊಂದು ಯೋಜನೆಯನ್ನು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ SBI ಜಾರಿಗೆ ತಂದಿದೆ. ಇನ್ನು ಮುಂದೆ ಚಿನ್ನವನ್ನು ಕೂಡ ಠೇವಣಿ ಇಡಬಹುದು SBI ನಿಯಮಗಳು ಏನು ಎನ್ನುವುದರ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
● SBI ಮೊಟ್ಟ ಮೊದಲ ಬಾರಿಗೆ ಚಿನ್ನವನ್ನು ಠೇವಣಿ ಇರಿಸಿಕೊಳ್ಳುತ್ತಿದೆ. ನೀವು ಅಲ್ಪಾವಧಿ, ಮಧ್ಯಮಾವತಿ ಅಥವಾ ದೀರ್ಘಾವಧಿ ಲೆಕ್ಕದಲ್ಲಿ ಚಿನ್ನವನ್ನು ಠೇವಣಿ ಇಡಬಹುದು.
● ನೀವು ಎಷ್ಟು ಕಾಲದವರೆಗೆ ಚಿನ್ನವನ್ನು ಠೇವಣಿ ಇಡುತ್ತೀರ ಎನ್ನುವುದರ ಮೇಲೆ ಅದರ ಬಡ್ಡಿದರ ನಿರ್ಧಾರ ಆಗುತ್ತದೆ.
● ಅಲ್ಪಾವಧಿಯಲ್ಲಿ ಒಂದರಿಂದ ಮೂರು ವರ್ಷ, ಮಧ್ಯಮಾವತಿಯಲ್ಲಿ ಮೂರರಿಂದ ಏಳು ವರ್ಷ ಹಾಗೂ ದೀರ್ಘಾವಧಿಯಲ್ಲಿ 12 ರಿಂದ 15 ವರ್ಷದವರೆಗೆ ನೀವು ಚಿನ್ನವನ್ನು ಠೇವಣಿ ಇಡಬಹುದು.
● ಅಲ್ಪಾವಧಿಯ ಸಮಯವನ್ನು ಆರಿಸಿಕೊಳ್ಳುವವರಿಗೆ ವರ್ಷಗಳ ಆಧಾರದ ಮೇಲೆ 0.50% – 0.55%, ಮಧ್ಯಮಾವತಿಯಲ್ಲಿ ಚಿನ್ನವನ್ನು ಠೇವಣಿ ಇಡುವವರಿಗೆ 2.25%, ದೀರ್ಘಾವಧಿಯಲ್ಲಿ ಚಿನ್ನವನ್ನು ಠೇವಣಿ ಇಡುವವರಿಗೆ 2.50% ವರೆಗೂ ಕೂಡ ಆಕರ್ಷಣೀಯವಾದ ಬಡ್ಡಿದರ ಸಿಗುತ್ತದೆ.
● ನೀವು ಈ ರೀತಿ ಚಿನ್ನವನ್ನು ಠೇವಣಿ ಇಡಬೇಕು ಎಂದರೆ ಕನಿಷ್ಠ 30 ಗ್ರಾಂ ಆದರೂ ಇರಬೇಕು, ಯಾವುದೇ ಗರಿಷ್ಠ ಮಿತಿ ಇಲ್ಲ.
● ಮತ್ತೊಂದು ಅತ್ಯಂತ ಮುಖ್ಯವಾದ ವಿಷಯ ಏನು ಎಂದರೆ 995 ಪರಿಶುದ್ಧತೆಯ ಚಿನ್ನವನ್ನು ಮಾತ್ರ SBI ಬ್ಯಾಂಕ್ ಠೇವಣಿಯಾಗಿ ಇರಿಸಿಕೊಳ್ಳುತ್ತದೆ.
● ನೀವು ಚಿನ್ನವನ್ನು ಠೇವಣಿ ಇಡುವ ವೇಳೆ
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಗುರುತಿನ ಚೀಟಿ, ಚಿನ್ನಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳು, SBI ಬ್ಯಾಂಕ್ ಅಲ್ಲಿ ಹೊಂದಿರುವ ಉಳಿತಾಯ ಖಾತೆಯ ವಿವರ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮುಂತಾದ ಅಗತ್ಯ ದಾಖಲೆಗಳನ್ನು ಕೂಡ ಕೊಡಬೇಕಾಗುತ್ತದೆ.
● ಠೇವಣಿ ನೀಡುವ ವೇಳೆಯೇ ನೀವು ಅದರ ಬಡ್ಡಿದರವನ್ನು ಮಾಸಿಕವಾಗಿ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಪಡೆಯಲು ಇಚ್ಚಿಸುತ್ತಿರಾ ಎನ್ನುವುದನ್ನು ನಿರ್ಧಾರ ಮಾಡಬೇಕಾಗುತ್ತದೆ. ಈ ವಿವರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ SBI ಬ್ಯಾಂಕ್ ಶಾಖೆಗೆ ಬೇಟಿ ಕೊಡಿ ಅಥವಾ SBI ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.