ಬಟ್ಟೆ ಒಗೆದ ಮೇಲೆ ಇದನ್ನು ಉಪಯೋಗಿಸಿ ಐರನ್ ಮಾಡುವ ಅಗತ್ಯನೇ ಇರಲ್ಲ.!

ಬಟ್ಟೆ ಒಗೆಯುವಂತಹ ಸಮಯದಲ್ಲಿ ಬಟ್ಟೆಗಳು ಹಾಳಾಗುತ್ತಿರುತ್ತದೆ ಮುದುರಿ ಹೋಗಿರುತ್ತದೆ. ಈ ರೀತಿ ಆಗುವುದರಿಂದ ಬಟ್ಟೆಗಳು ಬೇಗನೆ ಹಾಳಾಗುತ್ತಿರುತ್ತದೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ನೀವು ಬಟ್ಟೆಯನ್ನು ಓಗೆದರೆ ಮತ್ತೆ ನೀವು ಆ ಬಟ್ಟೆಯನ್ನು ಐರನ್ ಮಾಡದೆ ಉಪಯೋಗಿಸಬಹುದು ಹಾಗೂ ಇದರಿಂದ ಬಟ್ಟೆಗಳು ಹೆಚ್ಚಿನ ಕಾಲ ಬರುತ್ತದೆ ಎಂದು ಹೇಳಬಹುದು.

ಹಾಗಾದರೆ ಬಟ್ಟೆ ಒಗೆದ ನಂತರ ಈ ಒಂದು ಪದಾರ್ಥವನ್ನು ನೀರಿನಲ್ಲಿ ಹಾಕಿ ಬಟ್ಟೆಯನ್ನು ಒಣ ಹಾಕಿದರೆ ಸಾಕು ಬಟ್ಟೆಯನ್ನು ಮತ್ತೆ ಐರನ್ ಮಾಡುವ ಅವಶ್ಯಕತೆ ಇರುವುದಿಲ್ಲ ಹಾಗಾದರೆ ಆ ಒಂದು ಪದಾರ್ಥ ಯಾವುದು ಹಾಗು ಯಾವ ಒಂದು ಸಮಯದಲ್ಲಿ ಇದನ್ನು ಹಾಕಿ ಬಟ್ಟೆಯನ್ನು ಒಣಗಿ ಹಾಕಬೇಕು.

ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಹಾಗೂ ಮನೆಯಲ್ಲಿ ಯಾವ ಕೆಲವು ವಿಧಾನಗಳನ್ನು ಅನುಸರಿಸಿದರೆ ಕೆಲಸಗಳು ಸುಲಭವಾಗಿ ಆಗುತ್ತದೆ ಅಂದರೆ ಹೋಂ ಟಿಪ್ಸ್ ಗಳನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ ಹಾಗೂ ಇಂತಹ ಕೆಲವೊಂದು ಟಿಪ್ಸ್ ಗಳನ್ನು ಮನೆಯಲ್ಲಿ ಇರುವಂತಹ ಮಹಿಳೆಯರು ಹುಡುಕುತ್ತಲೇ ಇರುತ್ತಾರೆ ಹಾಗೂ ಬೇರೆಯವರಿಂದಲೂ ಕೂಡ ಇಂತಹ ಕೆಲವೊಂದು ಮಾಹಿತಿಗಳನ್ನು ಪಡೆದುಕೊಂಡು ಅದನ್ನು ಅನುಸರಿಸುತ್ತಿರುತ್ತಾರೆ ಹಾಗಾದರೆ ನೀವು ಉಪಯೋಗ ಮಾಡಿಕೊಳ್ಳಬಹುದಾದ ಮಾಹಿತಿಗಳನ್ನು ಕೂಡ ಈ ದಿನ ತಿಳಿಯೋಣ.

ಮನೆಯಲ್ಲಿರುವಂತಹ ಮಹಿಳೆಯರು ಯಾವುದೇ ಕೆಲಸವನ್ನು ಮಾಡಿದರು ಅದನ್ನು ಬೇಗ ಕಡಿಮೆ ಸಮಯದಲ್ಲಿ ಮಾಡಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಏಕೆಂದರೆ ಉಳಿದ ಕೆಲಸವನ್ನು ಸಹ ಸಮಯಕ್ಕೆ ಸರಿಯಾಗಿ ಮಾಡಬಹುದು ಹಾಗೂ ಸ್ವಲ್ಪ ಸಮಯ ಸಿಕ್ಕರೆ ಬೇರೆ ಕೆಲಸಗಳನ್ನು ಮಾಡಬಹುದು ಎನ್ನುವ ಉದ್ದೇಶದಿಂದ.

ಬೇರೆ ಕೆಲಸಗಳು ಮುಗಿಯುವಂತಹ ವಿಧಾನಗಳನ್ನು ಅನುಸರಿಸುತ್ತಿರು ತ್ತಾರೆ. ಆದರೆ ಕೆಲವೊಂದುಷ್ಟು ಮಹಿಳೆಯರಿಗೆ ಇಂತಹ ಕೆಲವೊಂದಷ್ಟು ವಿಧಾನಗಳು ತಿಳಿದಿರುವುದಿಲ್ಲ ಅಂತವರಿಗೆ ಈ ದಿನ ನಾವು ಹೇಳುವ ಟಿಪ್ಸ್ ಗಳು ತುಂಬಾ ಅನುಕೂಲವಾಗುತ್ತದೆ. ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಈ ಟಿಪ್ಸ್ ಗಳು ತುಂಬಾ ಉಪಯೋಗ ವಾಗುತ್ತದೆ ಎಂದು ಹೇಳಬಹುದು.

* ಮೊದಲನೆಯದಾಗಿ ಯಾರಿಗೆಲ್ಲ ಸಕ್ಕರೆ ಕಾಯಿಲೆ ಅಧಿಕವಾಗಿ ಇರುತ್ತದೆಯೋ ಅಂತವರು ರಾತ್ರಿ ಸಮಯ ಎರಡು ಬೆಂಡೆಕಾಯಿ ಯನ್ನು ಕತ್ತರಿಸಿ ಅದನ್ನು ನೀರಿನ ಒಳಗಡೆ ಇಡೀ ರಾತ್ರಿ ಹಾಗೆ ಬಿಡಬೇಕು ಆನಂತರ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಅದನ್ನು ಶೋಧಿಸಿ ಕೊಂಡು ಕುಡಿಯುವುದರಿಂದ ಸಕ್ಕರೆಯ ಮಟ್ಟವನ್ನು ಅದು ಕಡಿಮೆ ಮಾಡುತ್ತದೆ ಹೌದು ಅದರಲ್ಲಿ ಕ್ಯಾಲ್ಸಿಯಂ ವಿಟಮಿನ್ಸ್ ಗಳು ಹೇರಳವಾಗಿ ಇರುತ್ತದೆ.

* ಹಾಗೂ ಇದು ನಮ್ಮ ದೇಹದಲ್ಲಿರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ನಮ್ಮ ಕರುಳಿಗೆ ಬೇಕಾದಂತಹ ಒಳ್ಳೆಯ ಪೋಷಕಾಂಶಗಳನ್ನು ಇದು ಒದಗಿಸಿಕೊಡುತ್ತದೆ ಒಟ್ಟಾರೆಯಾಗಿ ಇದು ನಮ್ಮ ದೇಹದ ಆರೋಗ್ಯಕ್ಕೆ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

* ಹಳೆಯ ಬಾಚಣಿಗೆ ಇದ್ದರೆ ಅದನ್ನು ಯಾವುದಾದರೂ ಉಪಯೋಗಕ್ಕೆ ಬಾರದೆ ಇರುವಂತಹ ಸಾಕ್ಸ್ ಒಳಗಡೆ ಹಾಕಿ ಅದನ್ನು ನಿಮ್ಮ ಮನೆಯ ಮೂಲೆ ಮೂಲೆಗಳನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು ಹೌದು ಮನೆಯಲ್ಲಿ ಇರುವಂತಹ ಮೂಲೆಗಳಿಗೆ ಪೇಸ್ಟ್ ಹಾಕಿ ಆನಂತರ ಬಾಚಣಿಗೆ ಹಾಕಿರುವಂತಹ ಸಾಕ್ಸ್ ಅನ್ನು ಮೂಲೆಗೆ ಹಾಕಿ ಉಜ್ಜುವುದ ರಿಂದ ಮೂಲೆಯಲ್ಲಿರುವಂತಹ ಕಸಗಳೆಲ್ಲ ಸಂಪೂರ್ಣವಾಗಿ ಬರುತ್ತದೆ.

* ಎರಡರಿಂದ ಮೂರು ನಿಂಬೆ ಹಣ್ಣಿನ ಸಿಪ್ಪೆಗಳನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕತ್ತರಿಸಿ ಒಂದು ಬಾಟಲ್ ಒಳಗಡೆ ಹಾಕಬೇಕು ಅದರ ಜೊತೆ ಕಾಲು ಚಮಚ ಉಪ್ಪು, ಬೇಕಿಂಗ್ ಸೋಡಾ, ಸೋಪ್ ಪೌಡರ್ ಇಷ್ಟನ್ನು ಹಾಕಿ ನಂತರ ಆ ಬಾಟೆಲ್ ಪೂರ್ತಿ ನೀರನ್ನು ತುಂಬಿಸಿ ಅದನ್ನ ಒಂದು ದಿನ ಬಿಟ್ಟು ಆನಂತರ ನೀರನ್ನು ನಿಮ್ಮ ಮೇಲಿನ ಸ್ಟವ್ ಮೇಲ್ಭಾಗದಲ್ಲಿ ಹಾಗೂ ಸ್ಟವ್ ಇಡುವಂತಹ ಜಾಗದಲ್ಲಿ ಹಾಕಿ ಕೊಳೆಯನ್ನು ತೆಗೆಯಬಹುದು ಇದರಿಂದ ಅಲ್ಲಿರುವಂತಹ ಎಲ್ಲಾ ಎಣ್ಣೆ ಅಂಶ ಎಲ್ಲವೂ ಸಹ ಸಂಪೂರ್ಣವಾಗಿ ಶುದ್ಧವಾಗುತ್ತದೆ.

* ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಹಾಲನ್ನು ಒಂದು ಪಾತ್ರೆಯಲ್ಲಿ ಹಾಕಿ ಕಾಯಿಸುತ್ತಾರೆ ಆದರೆ ಆ ಪಾತ್ರೆಯ ಕೆಳಭಾಗದಲ್ಲಿ ಸ್ವಲ್ಪ ಹಾಲಿನ ಅಂಶ ಇರುತ್ತದೆ ಆದರೆ ಅದನ್ನು ವೇಸ್ಟ್ ಮಾಡುವುದರ ಬದಲು ಅದಕ್ಕೆ ಸ್ವಲ್ಪ ನೀರು ಉಪ್ಪು ಎಣ್ಣೆಯನ್ನು ಹಾಕಿ ಗೋಧಿ ಹಿಟ್ಟನ್ನು ಕಲಸಿಕೊಳ್ಳ ಬಹುದು ಇದರಿಂದ ಚಪಾತಿ ಮೃದುವಾಗಿ ಬರುತ್ತದೆ.

* ಒಂದು ಪಾತ್ರೆಯಲ್ಲಿ ಎರಡರಿಂದ ಮೂರು ಚಮಚ ಸಬ್ಬಕ್ಕಿಯನ್ನು ಹಾಕಿ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು ಅದು ಸಂಪೂರ್ಣವಾಗಿ ಬೇಯುವ ತನಕ ಬೇಯಿಸಿ ಆನಂತರ ಅದನ್ನು ಶೋಧಿಸಿ ಕೊಳ್ಳಬೇಕು ಆ ನೀರನ್ನು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಈ ಒಂದು ಸಬ್ಬಕ್ಕಿ ನೀರನ್ನು ಹಾಕಿ ಒಂದು ಚಮಚ ಕಂಫರ್ಟ್ ಹಾಕಿ ಚೆನ್ನಾಗಿ ಕಲಸಿಕೊಂಡು ಆನಂತರ ಬಟ್ಟೆಯನ್ನು ಅದರಲ್ಲಿ ಅಜ್ಜಿ ಒಣ ಹಾಕುವುದರಿಂದ ಬಟ್ಟೆಯನ್ನು ಐರನ್ ಮಾಡುವ ಅವಶ್ಯಕತೆ ಇರುವುದಿಲ್ಲ ಬಟ್ಟೆ ಸಂಪೂರ್ಣವಾಗಿ ಸ್ವಚ್ಛವಾಗಿ ಶುದ್ಧವಾಗಿ ಕಾಣುತ್ತದೆ.

Leave a Comment