ಕರ್ನಾಟಕದ ಕಾಂಗ್ರೆಸ್ ಪಕ್ಷವು (Congress party) ಚುನಾವಣೆ ಪೂರ್ವವಾಗಿ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳಂತೆ ತಮ್ಮದೇ ರಾಜ್ಯ ಸರ್ಕಾರ ಸ್ಥಾಪನೆಯಾದ ಮೇಲೆ ಐದು ಗ್ಯಾರಂಟಿ ಯೋಜನೆಗಳನ್ನು (Guarantee Schemes) ಜಾರಿಗೆ ತರಲು ಅಕ್ಷರಶಃ ಶ್ರಮಿಸುತ್ತಿದೆ.
ಆ ಪ್ರಯುಕ್ತವಾಗಿ ರಾಜ್ಯದಲ್ಲಿ ಹಂತ ಹಂತವಾಗಿ ಗ್ಯಾರಂಟಿ ಯೋಜನೆಗಳು ಜಾರಿಯಾಗಿದ್ದು ಮೊದಲಿಗೆ ಶಕ್ತಿ ಯೋಜನೆ (Shakthi yojane) ಮೂಲಕ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ರಾಜ್ಯದ ಗಡಿಯೊಳಗೆ ಉಚಿತ ಪ್ರಯಾಣ, ಗೃಹ ಜ್ಯೋತಿ ಯೋಜನೆ (Gruhajyoti Scheme) ಮೂಲಕ ಕರ್ನಾಟಕದ ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ.
ಅನ್ನಭಾಗ್ಯ ಯೋಜನೆ ಕೂಡ ಜಾರಿಗೆ ಬಂದು ಹಲವು ತಿಂಗಳುಗಳು ಕಳೆದಿದ್ದು ಅನ್ನಭಾಗ್ಯ ಯೋಜನೆ (Annabhagya) ಮೂಲಕ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರತಿ ಸದಸ್ಯನಿಗೆ 10Kg ಪಡಿತರ ನೀಡಬೇಕಿತ್ತು ದಾಸ್ತಾನು ಲಭ್ಯವಾಗದ ಕಾರಣ 5Kg ಅಕ್ಕಿ ಜೊತೆ ಉಳಿದ 5Kg ಅಕ್ಕಿ ಬದಲು ಪ್ರತಿ ಸದಸ್ಯನಿಗೆ 170 ರುಪಾಯಿಯನ್ನು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿರುವ ಮಹಿಳೆಯರ ಖಾತೆಗೆ DBT ಮೂಲಕ ವರ್ಗಾವಣೆ ಮಾಡುತ್ತಿದೆ.
ರೇಷನ್ ಕಾರ್ಡ್ ಹೊಂದಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಗೃಹಲಕ್ಷ್ಮಿ ಯೋಜನೆ (Gruhalakshmi) ರೂ.2,000 ಸಹಾಯಧನವನ್ನು ಕೂಡ ಪಡೆಯುತ್ತಿದ್ದಾರೆ. ಈಗ ಇದರ ಕುರಿತು ಒಂದು ಬಿಗ್ ಅಪ್ಡೇಟ್ ಇದೆ. ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಮಾಡಲು ಕೆಲವು ತಾಂತ್ರಿಕ ಸಮಸ್ಯೆ (Technical Issues) ಎದುರಾಗಿದೆ.
ಇದೇ ಕಾರಣದಿಂದ ಇದುವರೆಗೂ ಯಶಸ್ವಿಯಾಗಿ ಎಲ್ಲ ಮಹಿಳೆಯರು ಕೂಡ ಹಣ ಪಡೆಯಲು ಸಾಧ್ಯವಾಗಿಲ್ಲ ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಆಗದೆ ಇರುವುದು, ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗದೆ ಇರುವುದು ಮತ್ತು ಮಹಿಳೆಯರ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿಗಳಲ್ಲಿರುವ ಮಾಹಿತಿಗಳಲ್ಲಿ ಹೆಸರಿನ ವ್ಯತ್ಯಾಸವಾಗಿರುವುದು, ಮುಖ್ಯಸ್ಥರ ಸ್ಥಾನದಲ್ಲಿ ಮಹಿಳೆಯ ಹೆಸರು ಇಲ್ಲದೆ ಇರುವುದು ಇನ್ನೂ ಇತ್ಯಾದಿ ಅನೇಕ ಕಾರಣಗಳಿಂದ ಕೆಲವು ಮಹಿಳೆಯರಿಗೆ ಹಣ ಜಮೆ ಆಗುತ್ತಿಲ್ಲ.
ಈಗ ಸಮಸ್ಯೆ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲಾಗದ ಮಹಿಳೆಯರು ಅನ್ನ ಭಾಗ್ಯ ಯೋಜನೆ ಹಣವನ್ನು ಕೂಡ ಪಡೆಯಲಾಗುತ್ತಿಲ್ಲ ಇದರಿಂದ ಅನ್ನಭಾಗ್ಯ ಯೋಜನೆಗೆ ಅರ್ಹರಾಗಿರುವ ಆ ರೇಷನ್ ಕಾರ್ಡ್ ನಲ್ಲಿರುವ ಇತರ ಸದಸ್ಯರಿಗೂ ಕೂಡ ವಂಚನೆ ಆಗುತ್ತಿದೆ. ಇದಕ್ಕೆ ಪರಿಹಾರ ಮಾರ್ಗವೊಂದನ್ನು ಸರ್ಕಾರ ಸೂಚಿಸಿದೆ.
ಇತ್ತೀಚಿಷ್ಟೇ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaih) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಅಧಿಕಾರಿಗಳನ್ನೊಗೊಂಡು ಗೃಹಲಕ್ಷ್ಮಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಹಿಳೆಯರಿಗಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಆದಾಲತ್ (Gruhalakshmi Adalath) ಕಾರ್ಯಕ್ರಮ ಆಯೋಜನೆ ಮಾಡಿ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲಾಗದ ಮಹಿಳೆಯರಿಗಾಗಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ವತಃ ಮಹಿಳೆಯರನ್ನು ಬ್ಯಾಂಕ್ ಶಾಖೆಗಳಿಗೆ ಕರೆದುಕೊಂಡು ಹೋಗಿ ಅವರ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಆಜ್ಞಾಪಿಸಿದ್ದಾರೆ. ಇದರೊಂದಿಗೆ ಅನ್ನ ಭಾಗ್ಯ ಯೋಜನೆ ಹಣ ಪಡೆಯಲು ಆಗಿರುವ ತೊಡಕನ್ನು ಪರಿಹರಿಸಲು ಕುಟುಂಬದ ಮುಖ್ಯಸ್ಥೆ ಮಹಿಳೆ ಖಾತೆಗೆ ಹಣ ವರ್ಗಾವಣೆಯಾಗುವಂತೆ ವ್ಯವಸ್ಥೆ ಆಗುವವರೆಗೂ ಕುಟುಂಬದ ಎರಡನೇ ಮುಖ್ಯಸ್ಥರ ಸ್ಥಾನದಲ್ಲಿರುವ ಎರಡನೇ ಮುಖ್ಯಸ್ಥ ಪುರುಷ ಖಾತೆಗೆ ಅನ್ನಭಾಗ್ಯ ಯೋಜನೆ ಹಣವನ್ನು ವರ್ಗಾವಣೆ ಮಾಡಬಹುದು ಎಂದು ಹೇಳಿದ್ದಾರೆ.