ಕರ್ನಾಟಕ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳ (Gyarantee Scheme) ಪೈಕಿ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಗೆ ಬರುತ್ತಿದೆ. ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ತಿಂಗಳಿಗೆ 2000 ಸಹಾಯಧನ ಆರ್ಥಿಕ ಭದ್ರತೆಯನ್ನು ಒದಗಿಸುವ ಮತ್ತು ಲಿಂಗ ಸಮಾನತೆಯನ್ನು ಕಾಪಾಡುವ ಉದ್ದೇಶವನ್ನು ಗೃಹಲಕ್ಷ್ಮಿ ಯೋಜನೆಯ ಹೊಂದಿದೆ.
ಜುಲೈ 19 ಈ ಯೋಜನೆಗೆ ಕರ್ನಾಟಕ ರಾಜ್ಯದ ಮಹಿಳೆಯರು ಅರ್ಜಿ ಸಲ್ಲಿಸಿ ಸಹಾಯಧನಕ್ಕಾಗಿ ಕಾಯುತ್ತಿದ್ದಾರೆ, ಈವರೆಗೂ ಸರ್ಕಾರದ ಅಂಕಿ ಅಂಶಗಳ ಪ್ರಕಾರ 1.10 ಕೋಟಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಮಾಹಿತಿ ಕೊರತೆಯಾದ ಕಾರಣಕ್ಕಾಗಿ ಇನ್ನು ಅನೇಕರು ಅರ್ಜಿ ಸಲ್ಲಿಸುವುದು ಬಾಕಿ ಇದೆ. ಆದರೆ ಇವರಿಗೆಲ್ಲ ಒಂದು ಸಮಾಧಾನಕರ ಸಂಗತಿ ಇದೆ ಇದನ್ನು ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ತಿಳಿಸಿದ್ದಾರೆ. ಅದೇನೆಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇಲ್ಲ.
ಕೂದಲು ಕಸಿ ಮಾಡುವುದು ಎಷ್ಟು ನಿಜ.? ಕೂದಲು ಉದುರಿ ಹೋಗದಿರಲು, ಬೊಕ್ಕ ತಲೆ ಆಗದಂತೆ ತಡೆಯಲು ಇಷ್ಟು ಮಾಡಿ ಸಾಕು.!
ರೇಷನ್ ಕಾರ್ಡ್ ಇಲ್ಲದವರು ಅಥವಾ ರೇಷನ್ ಕಾರ್ಡಲ್ಲಿ ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿ ಇಲ್ಲದವರು ಇದನ್ನು ಸರಿಪಡಿಸಿಕೊಂಡ ನಂತರ ಅಥವಾ ಹೊಸ ರೇಷನ್ ಕಾರ್ಡ್ ಪಡೆದ ನಂತರ ಆಧಾರ್ ಮತ್ತು ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆಯಾಗಿದ್ದರೆ ಅದನ್ನು ಸರಿಪಡಿಸಿಕೊಂಡ ನಂತರ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಿದ ಮುಂದಿನ ತಿಂಗಳಿನಿಂದ ಸಹಾಯಧನವನ್ನು ಪಡೆಯಬಹುದು ಎಂದು ಹೇಳಿದ್ದಾರೆ.
ಆಶಾ ಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ (Anganavadi workers and Asha worker ) ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು ಆದರೆ ಸೋಮವಾರ ಚಾಮರಾಜನಗರ ಜಿಲ್ಲೆಗೆ ಯೋಜನೆ ಜಾರಿ ಪೂರ್ವಭಾವಿ ಕಾರ್ಯಕ್ರಮದ ವಿಚಾರಣೆ ಸಲುವಾಗಿ ಭೇಟಿ ಕೊಟ್ಟಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಈ ರೀತಿ ಗೊಂದಲ ಬೇಡ ಅವರು ಸಹ ಕುಟುಂಬದ ಮುಖ್ಯಸ್ಥೆ ಆಗಿದ್ದರೆ ಅರ್ಜಿ ಸಲ್ಲಿಸಿ ಈ ಸಹಾಯಧನವನ್ನು ಪಡೆಯಬಹುದು ಎಂದು ಸ್ಪಷ್ಟತೆ ಕೊಟ್ಟಿದ್ದಾರೆ.
ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ, ಆಸಕ್ತರು ಅರ್ಜಿ ಅರ್ಜಿ ಸಲ್ಲಿಸಿ ವೇತನ 56,900
ಗೃಹಲಕ್ಷ್ಮೀ ಯೋಜನೆ ಜಾರಿ ದಿನಾಂಕ ಹಲವು ಬಾರಿ ಮುಂದೂಡಲ್ಪಟ್ಟ ನಂತರ ಅಂತಿಮವಾಗಿ ಆಗಸ್ಟ್ 30ರಂದು ಮೈಸೂರಿನಲ್ಲಿ (Mysore) ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿ ಈ ಗೃಹಲಕ್ಷ್ಮಿ ಯೋಜನೆ ಲಾಂಚ್ ಮಾಡಲು (Gruhalakshmi launch) ಸರ್ಕಾರ ನಿರ್ಧಾರ ಮಾಡಿದೆ. ಆಗಸ್ಟ್ 30ನೇ ತಾರೀಕು ಮಾನ್ಯ ಮುಖ್ಯಮಂತ್ರಿಗಳ್ದ ಸಿದ್ದರಾಮಯ್ಯನವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಅಂದು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡ ರಾಜ್ಯದ ಮಹಿಳೆಯರ ಖಾತೆಗೂ DBT ಮೂಲಕ ಹಣ ವರ್ಗಾವಣೆ ಆಗಲಿದೆ. ಆದರೆ ಮೊದಲಿಗೆ ರಾಜ್ಯದ 10 ಜಿಲ್ಲೆಯ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ ಆಗಲಿದೆ ನಂತರ ಉಳಿದ ಜಿಲ್ಲೆಯವರಿಗೆ ಜಿಲ್ಲಾವಾರು ಹಣ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಮತ್ತೊಂದು ಮೂಲದ ಮಾಹಿತಿ ಪ್ರಕಾರ ಅಲ್ಫಬೆಟ್ ಪ್ರಕಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎನ್ನುವ ಸುದ್ದಿಯು ಇದೆ.
ಈ ಕಾಳಿ ಮಂತ್ರ ಜಪಿಸಿದರೆ ಕೇವಲ ಒಂದು ಗಂಟೆಯಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ.!
ಹಾಗೆಯೇ ಆಗಸ್ಟ್ 25ರ ಒಳಗೆ ಅರ್ಜಿ ಸಲ್ಲಿಸಿದ ಮಹಿಳಾ ಫಲಾನುಭವಿಗಳು ಮಾತ್ರ ಅಗಸ್ ತಿಂಗಳಿನ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ನಂತರ ಅರ್ಜಿ ಸಲ್ಲಿಸಿದವರು ಮುಂದಿನ ತಿಂಗಳಲ್ಲಿ ಸಹಾಯಧನವನ್ನು ಪಡೆಯಲಿದ್ದಾರೆ ಎನ್ನುವ ಸುದ್ದಿಯು ಇದೆ. ಮೊದಲಿಗೆ ಕುಟುಂಬದ ಯಜಮಾನಿ ಆಗಿರುವ ಎಲ್ಲ ಮಹಿಳೆಗೂ ಕೂಡ ಈ ಸಹಾಯಧನ ಸಿಗುತ್ತದೆ ಎಂದು ಹೇಳಲಾಗಿತ್ತಾದರೂ ನಂತರ ಸರ್ಕಾರಕ್ಕೆ ಹೊರೆ ಆಗಬಾರದು ಎನ್ನುವ ಕಾರಣಕ್ಕಾಗಿ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಮಾತಿದೆ. ಈ ಎಲ್ಲಾ ಊಹಾಪೋಹಕ್ಕೂ ಕೂಡ ಆಗಸ್ಟ್ 30ನೇ ತಾರೀಕು ತೆರೆ ಬೀಳಲಿದೆ.