ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ಮಹತ್ವವಾದ ಬೆಲೆ ಇದೆ. ಮದುವೆ ಎನ್ನುವ ಒಂದು ಸಂಬಂಧ ಶುರು ಆಗುವುದು ಮಂಗಳಸೂತ್ರ ಧಾರಣೆ ಆಗುವ ಶುಭ ಸಂಕೇತದ ಮೂಲಕ. ಪುರೋಹಿತರ ಮಂತ್ರೋಚ್ಛಾರ, ಗುರುಹಿರಿಯರ ಆಶೀರ್ವಾದ ಮಂಗಳವಾದ್ಯಗಳ ಸದ್ದು, ಮುಕ್ಕೋಟಿ ದೇವತೆಗಳ ಆಶೀರ್ವಾದದೊಂದಿಗೆ ಶುಭ ಘಳಿಗೆಯಲ್ಲಿ ವರನು ವಧುವಿನ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುತ್ತಾರೆ.
ಈ ರೀತಿ ಒಂದು ಬಾರಿ ವಧುವಿನ ಕುರಳಿಗೆ ಮಾಂಗಲ್ಯ ಸೂತ್ರ ಬಿದ್ದ ಮೇಲೆ ಆಕೆಯ ಸ್ಥಾನಮಾನಗಳು ಕೂಡ ಬದಲಾಗಿ ಹೋಗುತ್ತದೆ ಮತ್ತು ಆಕೆಯ ಗೌರವ ಕೂಡ ಇಮ್ಮಡಿಯಾಗುತ್ತದೆ ಇತ್ತೀಚಿನ ಕಾಲದಲ್ಲಿ ಪಾಶ್ಚ್ಯಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ನಮ್ಮ ಯುವಜನತೆ ಕ್ರಮೇಣವಾಗಿ ಇದರ ಮಹತ್ವವನ್ನು ಅರಿಯುವುದರಲ್ಲಿ ವಿಫಲರಾಗುತ್ತಿದ್ದಾರೆ ಮತ್ತು ಮಂಗಳಸೂತ್ರದ ಧರಿಸುವುದಕ್ಕೆ ಹಿರಿಯರು ಮಾಡಿರುವ ನಿಯಮಗಳನ್ನು ಪಾಲಿಸದೆ ಸಂಕಷ್ಟಗಳಿಗೆ ಒಳಗಾಗುತ್ತಿದ್ದಾರೆ.
ಮಂಗಳಸೂತ್ರ ಎನ್ನುವುದು ಪತಿಯ ಆರೋಗ್ಯ, ಏಳಿಗೆ ಮತ್ತು ಕುಟುಂಬದ ಶಾಂತಿ ನೆಮ್ಮದಿ ಎಲ್ಲವನ್ನು ಕೂಡ ಕಾಪಾಡುವ ಒಂದು ಮಹಾಶಕ್ತಿ ಇದ್ದಂತೆ. ಹಾಗಾಗಿ ಧಾರಣೆ ಮಾಡುವುದರಿಂದ ಹಿಡಿದು ಅದನ್ನು ಧರಿಸುವವರೆಗೆ ಮಂಗಳಸೂತ್ರದಲ್ಲಿ ಹಾಕಿಕೊಳ್ಳುವ ಕರಿಮಣಿ ಹಾಗೂ ಮಕ್ಕಳ ಸೂತ್ರವನ್ನು ಪೂಜಿಸಿ ಮಾಡುವ ತನಕ ನಮ್ಮ ಸಂಪ್ರದಾಯದ ಪ್ರಕಾರ ಒಂದಷ್ಟು ನಿಯಮಗಳಿವೆ.
ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇತ್ತು, ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಇದು ಒಳ್ಳೆ ರೀತಿಯ ಪರಿಣಾಮ ಬೀರುತ್ತಿತ್ತು ಎನ್ನುವುದು ಸಂಶೋಧನೆಗಳ ಮೂಲಕ ಬಯಲಿಗೆ ಬಂದಿದೆ. ನಿಯಮ ಬದ್ಧವಾಗಿ ಇದನ್ನು ಪಾಲನೆ ಮಾಡುವುದರಿಂದ ಎಲ್ಲ ದೇವತೆಗಳ ಆಶೀರ್ವಾದ ಮುಖ್ಯವಾಗಿ ಪಾರ್ವತಿ ಪರಮೇಶ್ವರನ ಆಶೀರ್ವಾದ ದಂಪತಿಗಳಿಗೆ ಲಭಿಸಿದೆ ಅವರ ದಾಂಪತ್ಯವು ಸುಖಮಯವಾಗಿರುತ್ತದೆ.
ಮಂಗಳ ಸೂತ್ರದಲ್ಲಿ ಮುಖ್ಯವಾಗಿ ಬರುವುದೇ ಕರಿಮಣಿ. ಹೀಗಾಗಿ ಎಷ್ಟು ಕರಿಮಣಿಗಳನ್ನು ಧರಿಸಬೇಕು ಎನ್ನುವುದರ ಕುರಿತು ತಾಯಿ ಪಾರ್ವತಿಯು ಅನುಸೂಯ ದೇವಿ, ಲೋಪಮುದ್ರಾ ದೇವಿ, ಅರುಂಧತಿ ದೇವಿಗೆ ಹೇಳಿದ್ದರು ಎನ್ನುವುದು ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ. ಆ ಪ್ರಕಾರವಾಗಿ 9 ಎನ್ನುವುದು ಪರಿಪೂರ್ಣ ಸಂಖ್ಯೆ ಆಗಿರುವುದರಿಂದ 9ರ ಸಂಖ್ಯೆಯಲ್ಲಿ ಇರಬೇಕು.
ಇದು ಕೆಲವರಿಗೆ ಕನ್ಫ್ಯೂಸ್ ಆಗಬಹುದು ಇದರ ಅರ್ಥ ಏನು ಎಂದರೆ 9 ಸಂಖ್ಯೆ ಬರುವ 3 ಗುಂಪು 5 ಗುಂಪು ಈ ರೀತಿಯಾಗಿ ಕರಿಮಣಿಗಳನ್ನು ಧರಿಸಬಹುದು. ಇತ್ತೀಚಿನ ದಿನಗಳಲ್ಲಿ ಅನೇಕರು ಬಂಗಾರದ ಸರದಲ್ಲಿ ಮಂಗಳ ಸೂತ್ರವನ್ನು ಧರಿಸುತ್ತಾರೆ. ಈ ರೀತಿ ಧರಿಸಿದರೂ ಕೂಡ ಕನಿಷ್ಠ 9 ಸಂಖ್ಯೆಯಲ್ಲಿ ಆದರೂ ಕರಿಮಣಿಗಳು ಇರಬೇಕು. ಮಂಗಳಸೂತ್ರದ ಅಕ್ಕಪಕ್ಕ ಎರಡು ಮುತ್ತು ಹಾಗೂ ಎರಡು ಹವಳಗಳು ಇದ್ದರೆ ಅದು ಕೂಡ ಶ್ರೇಷ್ಠ ಎಂದು ತಿಳಿಸಲಾಗಿದೆ.
ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾಗಿದ್ದರೆ ಕೆಡುಕಿನ ಸೂಚನೆನಾ.? ಇದಕ್ಕೆ ಪರಿಹಾರ ಏನು ಗೊತ್ತಾ.?
ಇದೇ ರೀತಿಯಾಗಿ ಇರುವ ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಪದೇಪದೇ ಮಂಗಳಸೂತ್ರವನ್ನು ತೆಗೆದು ಇಡುತ್ತಾರೆ. ಸ್ನಾನ ಮಾಡುವಾಗ, ವಾಕಿಂಗ್ ಹೋಗುವಾಗ, ಮಲಗುವಾಗ ಈ ರೀತಿ ಮಂಗಳಸೂತ್ರಗಳನ್ನು ತೆಗೆದಿಟ್ಟು ಮತ್ತೆ ಧರಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿ ಮಾಡಬಾರದು ಎನ್ನುವುದನ್ನು ಶಾಸ್ತ್ರ ಹೇಳುತ್ತದೆ.
ಒಮ್ಮೆ ಶುಭ ಘಳಿಗೆ ನೋಡಿ ಧರಿಸಿದ ಮಂಗಳ ಸೂತ್ರವನ್ನು ಇಚ್ಛೆಗೆ ಅನುಸಾರವಾಗಿ ಪದೇಪದೇ ಬದಲಾಯಿಸುತ್ತಿದ್ದರೆ ಅದರ ಮೌಲ್ಯ ಕುಸಿತಗೊಳ್ಳುತ್ತದೆ. ಹಾಗೆಯೇ ಯಾವುದೇ ಕಾರಣಕ್ಕೂ ಸೇಫ್ಟಿ ಪಿನ್ ಗಳನ್ನು ಮಂಗಳಸೂತ್ರದಲ್ಲಿ ಹಾಕಲೇಬಾರದು. ಪ್ರತಿದಿನವೂ ಅರಿಶಿಣ ಹಾಗೂ ಕುಂಕುಮವನ್ನು ಮಂಗಳಸೂತ್ರಕ್ಕೆ ಧರಿಸಿ ಪತಿ ಆಯಸ್ಸು, ಆರೋಗ್ಯ ವೃದ್ದಿಗಾಗಿ, ಕುಟುಂಬದ ಏಳಿಗೆಗಾಗಿ ಹೆಣ್ಣುಮಕ್ಕಳು ಪ್ರಾರ್ಥಿಸಿದರೆ ಜಗನ್ಮಾತೆಯ ಆಶೀರ್ವಾದವು ಅವರಿಗೆ ದೊರಕುತ್ತದೆ.