ನಮ್ಮ ಹಿಂದೂಗಳ ನಂಬಿಕೆಯ ಪ್ರಕಾರವಾಗಿ ಪ್ರತಿ ಮನೆ ಮುಂದೆ ತುಳಸಿ ಇರಬೇಕು ಇದು ನಮ್ಮ ಸಂಸ್ಕೃತಿ. ಪುರಾಣಗಳಲ್ಲಿ ಕೂಡ ತುಳಸಿಗೆ ಬಹಳ ಮಹತ್ವದ ಸ್ಥಾನವನ್ನು ನೀಡಲಾಗಿದೆ, ತುಳಸಿಯನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗಿದೆ ಮತ್ತು ತಾಯಿ ಮಹಾಲಕ್ಷ್ಮಿ ಹಾಗೂ ಮಹಾ ವಿಷ್ಣುವಿಗೆ ಪ್ರಿಯವಾದ ವಸ್ತುವೂ ಆಗಿದೆ.
ಆಯುರ್ವೇದದಲ್ಲಿ ಕೂಡ ತುಳಸಿ ಮಹತ್ವದ ಬಗ್ಗೆ ತಿಳಿಸಲಾಗಿದೆ ಅನೇಕ ಔಷಧಿಗಳ ಗುಣಗಳನ್ನು ಹೊಂದಿರುವ ತುಳಸಿಯು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೆ ಕೆಮ್ಮು ಶೀತ ನೆಗಡಿ ಜ್ವರ ಈ ರೀತಿ ವಾತಾವರಣ ವ್ಯತ್ಯಾಸವಾಗಿ ಬರುವ ಅನೇಕ ಕಾಯಿಲೆಗಳಿಗೆ ರಾಮ ಬಾಣವಾಗಿದೆ.
ವಾಸ್ತು ಶಾಸ್ತ್ರದಲ್ಲೂ ಕೂಡ ತುಳಸಿಯ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಗಿದೆ ಮನೆ ಮುಂದೆ ತುಳಸಿ ಗಿಡ ಇದ್ದರೆ ಮನೆಗೆ ಬರುವ ಕಷ್ಟವನ್ನು ಅದು ತಡೆಯುತ್ತದೆ ನಕಾರಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುವ ಶಕ್ತಿ ತುಳಸಿಗೆ ಇದೆ ಎಂದು ನಂಬಲಾಗಿದೆ. ಪ್ರತಿ ಮನೆ ಮುಂದೆ ತುಳಸಿ ನೆಟ್ಟು ಅದನ್ನು ಯಾರು ಸ್ವಚ್ಛವಾಗಿ ಇಟ್ಟುಕೊಂಡು ಭಕ್ತಿಯಿಂದ ಆರಾಧನೆ ಮಾಡುತ್ತಾರೆ.
ಈ ಸುದ್ದಿ ಓದಿ:- ಸಿವಿಲ್ ಇಂಜಿನಿಯರ್ ಕೆಲಸ ಬಿಟ್ಟು ಈಗ ಮನೆಯಲ್ಲಿ ತಿಂಗಳಿಗೆ ಒಂದು ಲಕ್ಷ ದುಡಿಯುತ್ತಿರುವ ಮಹಿಳೆ.!
ಆ ಮನೆಯ ವಾತಾವರಣ ಸಕಾರಾತ್ಮಕವಾಗಿರುತ್ತದೆ ಆ ಮನೆಗೆ ಆರ್ಥಿಕ ಸಂಕಷ್ಟಗಳು ಬರುವುದಿಲ್ಲ ಮತ್ತು ಎಲ್ಲಾ ರೀತಿಯ ಸುಖ ಸಂತೋಷ ಸಿಗುತ್ತದೆ ಎಂದು ನಂಬಿಕೆ. ಆದರೆ ತುಳಸಿ ಗಿಡ ಬೆಳೆಸುವಾಗ ಮಾಡುವ ಕೆಲವು ತಪ್ಪುಗಳಿಂದ ಅದು ಬೇಗ ಹಾಳಾಗಿ ಹೋದರೆ ಬಹಳ ದುಃ’ಖವಾಗುತ್ತದೆ ಮತ್ತು ಕೆಲವರು ಇಷ್ಟು ಬೇಗ ಯಾಕೆ ಹೀಗಾಯಿತು ಎಂದು ಗೊಂದಲಕ್ಕೂ ಒಳಗಾಗುತ್ತಾರೆ.
ಎಷ್ಟು ಚೆನ್ನಾಗಿ ನೋಡಿಕೊಂಡರೂ ಹುಳಗಳಾಗಿ ಅಥವಾ ಕಾಯಿಲೆಯಾಗಿ ಗಿಡ ಹಾಳಾಗುತ್ತದೆ ಅಥವಾ ಕೊರತೆ ಹೋಗುತ್ತದೆ. ಪ್ರತಿ ತಿಂಗಳು ತುಳಸಿ ಬದಲಾಯಿಸಬೇಕಾದ ಸಮಸ್ಯೆಯನ್ನು ಅನೇಕರು ಅನುಭವಿಸಿದ್ದಾರೆ ಇದಕ್ಕೆ ಪರಿಹಾರ ಏನೆಂದರೆ ನೀವು ಸರಿಯಾಗಿ ತುಳಸಿ ಗಿಡವನ್ನು ಬೆಳೆಸಃವ ವಿಧಾನ ತಿಳಿದುಕೊಂಡು ತುಳಸಿಯನ್ನು ಬೆಳೆಸಿದರೆ ನಿಮ್ಮ ತುಳಸಿ ಗಿಡವು ಸೋಂಪಾಗಿ ಆರೋಗ್ಯವಾಗಿ ಬೆಳೆಯುತ್ತದೆ.
ಯಾವ ರೀತಿ ತುಳಸಿ ಬೆಳೆಯಬೇಕು ಎನ್ನುವ ವಿಚಾರವನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಪೂರ್ತಿಯಾಗಿ ತಿಳಿದುಕೊಂಡು ಇದನ್ನು ಫಾಲೋ ಮಾಡಿ. * ಸಾಮಾನ್ಯವಾಗಿ ಪಾಟ್ ಗಳಲ್ಲಿ ತುಳಸಿ ಹಾಕುತ್ತಾರೆ. ಮೊದಲು ಕೆಳಗೆ ಒಣಗಿದ ಎಲೆಗಳನ್ನು ಹಾಕಿ ನಿಧಾನವಾಗಿ ಇದು ಗೊಬ್ಬರವಾಗಿ ಪರಿವರ್ತನೆ ತುಳಸಿ ಚೆನ್ನಾಗಿ ಬೆಳೆಯಲು ಸಹಕಾರಿಯಾಗುತ್ತದೆ.
ಈ ಸುದ್ದಿ ಓದಿ:- ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇದ್ದರೆ ಈ ಸರಳ ಪರಿಹಾರ ಮಾಡಿ.!
* ಪಾಟ್ ಗೆ ಮಣ್ಣನು ಮಾತ್ರ ಹಾಕುವುದರಿಂದ ಮಣ್ಣು ಗಟ್ಟಿಯಾಗಿ ಬೆಳವಣಿಗೆಗೆ ಕಷ್ಟವಾಗುತ್ತದೆ, ಬೇರು ಕೊಳೆತು ಎಲೆ ಉದುರಿ ತುಳಸಿ ಗಿಡ ಹೊರಟು ಹೋಗುತ್ತದೆ. ಮರಳು, ಮಣ್ಣು, ಗೊಬ್ಬರ ಈ ಮೂರನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಪಾಟ್ ಗೆ ಹಾಕಬೇಕು
* ಯಾವ ಪಾಟ್ ತೆಗೆದುಕೊಳ್ಳುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ ಬಹಳ ಚಿಕ್ಕ ತುಳಸಿ ಕಟ್ಟೆ ಆದರೆ ಅದರಲ್ಲಿ ಮಣ್ಣು ಫಲವತ್ತತೆ ಇರುವಷ್ಟು ಮಾತ್ರ ಅದು ಬೆಳೆಯುತ್ತದೆ. ಬೇರು ದೊಡ್ಡದಾದಂತೆ ಪೋಷಕಾಂಶ ಸಿಗದೆ ಅದು ಒಣಗಿ ಹೋಗುತ್ತದೆ ಹಾಗಾಗಿ ಆದಷ್ಟು ದೊಡ್ಡ ಪಾಟ್ ಖರೀದಿಸಿ.
* ನೀವು ಪೂಜೆ ಮಾಡಲು ಬೆಳೆಸುವ ತುಳಸಿಯಲ್ಲಿ ಬೀಜಗಳಾಗಲು ಬಿಡಬೇಡಿ ಆಗಾಗ ಇವುಗಳನ್ನು ಕಟ್ ಮಾಡಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ, ಇಲ್ಲವಾದಲ್ಲಿ ಅಲ್ಲಲ್ಲೇ ಸಿಡಿದು ಹೆಚ್ಚಿನ ಗಿಡಗಳು ಹುಟ್ಟುವುದರಿಂದ ಆಗಲು ಸರಿಯಾಗಿ ಬೆಳವಣಿಗೆ ಆಗದೆ ಇರಬಹುದು
* ಸೂರ್ಯನ ಬೆಳಕು ಬೀಳದ ಜಾಗದಲ್ಲಿ ತುಳಸಿ ಗಿಡವನ್ನು ಇಟ್ಟರೆ ಆಗಲು ಕೂಡ ಚೆನ್ನಾಗಿ ಬೆಳೆಯುವುದಿಲ್ಲ.
ಈ ಸುದ್ದಿ ಓದಿ:- ಸ್ನಾನದ ನೀರಿನಲ್ಲಿ ಇದನ್ನು ಬೆರೆಸಿ ಕೋಟಿ ಸಾಲ ಇದ್ದರೂ ತೀರುತ್ತದೆ…
* ಒಂದು ಮನೆಯಲ್ಲಿ ಎಷ್ಟು ಜನ ಇರುತ್ತಾರೆ ಎಲ್ಲರೂ ಕೂಡ ನೀರು ಹಾಕಿರುತ್ತಾರೆ ಈ ರೀತಿ ಮಾಡಬಾರದು ಒಬ್ಬರು ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ನೋಡಿಕೊಂಡರೆ ಸಾಕು ನೀರು ಹೆಚ್ಚಾದರೂ ಕೊಳೆತು ಹೋಗುತ್ತದೆ.
* ತುಳಸಿ ಬೀಜವನ್ನು ಹಾಕಿ ಗಿಡ ಬೆಳೆಸುವಾಗ ಗಿಡವು ಏಳೆಂಟು ಎಲೆ ಬಂದ ನಂತರ ಎರಡು ಮೂರು ಗಿಡವನ್ನು ತೆಗೆದುಕೊಂಡು ಬೇರೆ ಪಾಟ್ ಗೆ ಹಾಕಿಕೊಳ್ಳಬೇಕು. ಆ ಪಾಟ್ ಗೂ ಕೂಡ ಮಣ್ಣು ಗೊಬ್ಬರ ಹಾಕಿ ಮೇಲೆ ಹೇಳಿದ ವಿಧಾನದಲ್ಲಿ ರೆಡಿ ಮಾಡಿಕೊಳ್ಳಬೇಕು ಮತ್ತು ಒಂದು ತುಳಸಿ ಗಿಡ ಹಾಕುವುದಕ್ಕಿಂತ ಎರಡು ಮೂರು ಒಟ್ಟಿಗೆ ಹಾಕಿದರೆ ಸೊಂಪಾಗಿ ಬೆಳೆಯುತ್ತದೆ ಮತ್ತು ಎತ್ತರಕ್ಕೆ ಹೋಗದಂತೆ ಆಗಾಗ ಪಿಂಚಿಂಗ್ ಮಾಡಬೇಕು ಆಗ ತುಳಸಿ ಗಿಡ ಕವಲೊಡೆದು ಚೆನ್ನಾಗಿ ಆರೋಗ್ಯವಾಗಿ ಸೊಂಪಾಗಿ ಪೊದೆಯಂತೆ ಬೆಳೆಯುತ್ತದೆ.