ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪನ್ನೀರ್ ಅನ್ನು ತಮ್ಮ ಆಹಾರ ಪದ್ಧತಿಯಲ್ಲಿ ಉಪಯೋಗಿಸುವುದು ತುಂಬಾ ಒಳ್ಳೆಯದು. ಪನ್ನೀರ್ ವಿಟಮಿನ್ ಡಿ ಯಂತಹ ಪ್ರಮುಖ ಜೀವಸತ್ವಗಳನ್ನು ಹೊಂದಿರುತ್ತದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಮತ್ತು ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ನರಗಳ ಕಾರ್ಯ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಗತ್ಯವಾದ ವಿಟಮಿನ್ ಬಿ 12 ಅನ್ನು ಹೊಂದಿರುತ್ತದೆ.
ಹಾಗಾಗಿ ಪ್ರತಿಯೊಬ್ಬರೂ ಕೂಡ ಪನ್ನೀರ್ ಅನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುವುದು ತುಂಬಾ ಒಳ್ಳೆಯದು ಅದರಲ್ಲೂ ವಯಸ್ಸಾಗಿರುವಂತಹ ಹಾಗೂ ಕೆಲವೊಂದಷ್ಟು ಜನರಲ್ಲಿ ಮಂಡಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತದೆ ಅಂತವರು ಪನ್ನೀರ್ ಅನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳ ಆರೋಗ್ಯವನ್ನು ಇದು ಕಾಪಾಡುತ್ತದೆ.
ಈ ಸುದ್ದಿ ಓದಿ:- ಈ ರಾಶಿಯಲ್ಲಿ ಹುಟ್ಟಿದವರು ನಿಜಕ್ಕೂ ಅದೃಷ್ಟವಂತರು.!
ಹಾಗಾದಈ ಈ ದಿನ ಅಂಗಡಿಗಳಲ್ಲಿ ಪನ್ನೀರ್ ಅನ್ನು ಖರೀದಿ ಮಾಡುವು ದರ ಬದಲು ನೀವೇ ನಿಮ್ಮ ಮನೆಯಲ್ಲಿ ಹಾಲನ್ನು ಉಪಯೋಗಿಸಿ ಕೊಳ್ಳುವುದರ ಮೂಲಕ ಶುದ್ಧವಾದoತಹ ರುಚಿಯಾದಂತಹ ಪನ್ನೀರ್ ಅನ್ನು ನೀವೇ ಸುಲಭವಾಗಿ ನಿಮ್ಮ ಮನೆಯಲ್ಲಿ ತಯಾರಿಸಿ ಕೊಳ್ಳಬಹುದು. ಹಾಗಾದರೆ ಈ ದಿನ ಪನ್ನೀರನ್ನು ಹೇಗೆ ಮಾಡುವುದು ಹಾಗೂ ಒಡೆದ ಹಾಲಿನಿಂದಲೂ ಕೂಡ ಪನ್ನೀರನ್ನು ಹೇಗೆ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿ ಯೋಣ.
* ಮೊದಲು ನೀವು ಶುದ್ಧವಾದoತಹ ಹಾಲನ್ನು ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ಬಿಸಿ ಮಾಡಲು ಇಡಬೇಕು. ಅದರಲ್ಲಿ ಯಾವುದೇ ರೀತಿಯ ನೀರಿನ ಅಂಶ ಇಲ್ಲದೆ ಇರುವ ಹಾಗೆ ಅದರಲ್ಲಿರುವಂತಹ ನೀರಿನ ಅಂಶ ಹೋಗುವ ತನಕ ಅದನ್ನು ಚೆನ್ನಾಗಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಈ ಸಮಯದಲ್ಲಿ ಕಸ ಗುಡಿಸಿದರೆ 8 ವರ್ಷ ಕಷ್ಟ ತಪ್ಪೋಲ್ಲ.
ಆನಂತರ ಆ ಹಾಲಿಗೆ ಒಂದು ನಿಂಬೆಹಣ್ಣಿನ ರಸವನ್ನು ಚೆನ್ನಾಗಿ ಬೇರ್ಪಡಿಸಿಕೊಂಡು ಅದನ್ನು ಶೋಧಿಸಿಕೊಂಡು ಆ ಒಂದು ಹಾಲಿಗೆ ಹಾಕಿ ಕೈಯಾಡಬೇಕು. ಈ ರೀತಿ ಮಾಡುವುದರಿಂದ ಹಾಲು ಒಡೆದು ಅದು ಪನ್ನೀರ್ ರೂಪಕ್ಕೆ ತಿರುಗುತ್ತದೆ. ನಿಮಗೆ ನಿಂಬೆಹಣ್ಣು ಸಾಕಾಗಲಿಲ್ಲ ಎಂದರೆ ಮತ್ತೆ ಒಂದು ನಿಂಬೆಹಣ್ಣನ್ನು ಕೂದು ರಸವನ್ನು ಹಾಕಿಕೊಳ್ಳುವುದರ ಮೂಲಕ ಇನ್ನು ಹೆಚ್ಚಿನ ಪನ್ನೀರ್ ಅನ್ನು ನೀವು ಪಡೆಯಬಹುದು.
ಈ ರೀತಿ ಹೊಡೆದಂತಹ ಹಾಲನ್ನು ಒಂದು ಕಾಟನ್ ಬಟ್ಟೆಯಲ್ಲಿ ಹಾಕಿ ಶೋಧಿಸಿಕೊಳ್ಳಬೇಕು ನಂತರ ಅದರ ಮೇಲೆ ನೀರನ್ನು ಎರಡರಿಂದ ಮೂರು ಬಾರಿ ಹಾಕಿ ಚೆನ್ನಾಗಿ ತೊಳೆಯಬೇಕು ಏಕೆಂದರೆ ಅದರಲ್ಲಿ ನಿಂಬೆಹಣ್ಣನ್ನು ಹಾಕಿರುವುದರಿಂದ ಅದರಲ್ಲಿ ಹುಳಿ ಅಂಶ ಇರುತ್ತದೆ ಎನ್ನುವ ಕಾರಣದಿಂದ.
ಈ ಸುದ್ದಿ ಓದಿ:- ಪ್ಲಾಸ್ಟಿಕ್ ಮುರಿದ ಮಗ್ ಬಕೆಟ್ ಗಳನ್ನು ಜೋಡಿಸುವ ಸುಲಭ ವಿಧಾನ.!
ಈ ರೀತಿ ತೊಳೆದುಕೊಂಡಂತಹ ಪನ್ನೀರ್ ಅನ್ನು ನಿಮಗೆ ಯಾವ ಶೇಪ್ ಬೇಕೋ ಆ ಒಂದು ಶೇಪ್ ಗೆ ಬಟ್ಟೆಯಲ್ಲಿ ಮಡಚಿಟ್ಟು ಅದರ ಮೇಲೆ ಒಂದು ತಟ್ಟೆ ಇಟ್ಟು ಅದರ ಮೇಲೆ ಭಾರವಾದಂತಹ ಯಾವುದಾದರೂ ವಸ್ತುವನ್ನು ಎರಡರಿಂದ ಮೂರು ಗಂಟೆಗಳ ಕಾಲ ಹಾಗೆ ಬಿಡಬೇಕು. ಅದರಲ್ಲಿ ಇರುವಂತಹ ನೀರಿನ ಅಂಶ ಸಂಪೂರ್ಣವಾಗಿ ಹೋಗುವ ತನಕ ಹಾಗೆ ಬಿಟ್ಟು ಆನಂತರ ಅದನ್ನು ನಿಮಗೆ ಯಾವ ಶೇಪ್ ಬೇಕೋ ಆ ಒಂದು ಶೇಪ್ ಗೆ ನೀವು ಪನ್ನೀರ್ ಅನ್ನು ಕತ್ತರಿಸಿಕೊಳ್ಳಬಹುದು.
ಈ ರೀತಿ ತಯಾರಿಸಿದಂತಹ ಪನ್ನೀರ್ ಅನ್ನು ನೀವು ಫ್ರಿಜ್ ನಲ್ಲಿ ಇಟ್ಟು ಕೊಂಡು ಸಹ ಬಳಸಬಹುದು ಈ ಒಂದು ವಿಧಾನ ಬಹಳ ಸುಲಭ ವಾಗಿದ್ದು ಅಂಗಡಿಗಳಲ್ಲಿ ಖರೀದಿ ಮಾಡುವುದರ ಬದಲು ಈ ಒಂದು ವಿಧಾನವನ್ನು ಅನುಸರಿಸುವುದು ಉತ್ತಮ. ಮೇಲೆ ಹೇಳಿದಂತೆ ಹೊಡೆದಿರುವಂತಹ ಹಾಲನ್ನು ಸಹ ಇದೇ ವಿಧಾನ ಅನುಸರಿಸಿ ಪನ್ನೀರ್ ತಯಾರಿಸಿಕೊಳ್ಳಬಹುದು.