ಮಹಿಳೆಯರ ವ್ಯಾನಿಟಿ ಬ್ಯಾಗ್ ಮತ್ತು ಚಿಕ್ಕ ಪರ್ಸ್ ಗಳ ಜಿಪ್ ಬೇಗ ಹಾಳಾಗುತ್ತಿರುತ್ತದೆ. ಏಕೆಂದರೆ ಪ್ರತಿ ಬಾರಿ ನಾವು ಅದನ್ನು ಉಪಯೋಗಿ ಸುತ್ತಿರುತ್ತೇವೆ ಈ ಸಂದರ್ಭದಲ್ಲಿ ಅದನ್ನು ತೆಗೆಯುವುದು ಹಾಕುವುದು ಹೀಗೆ ಮಾಡುವುದರಿಂದ ಜಿಪ್ ಬೇಗನೆ ಹಾಳಾಗುತ್ತಿರುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಹೀಗೆ ಜಿಪ್ ಹಾಳಾದ ಬ್ಯಾಗ್ ಗಳನ್ನು ತಕ್ಷಣ ಆಚೆ ಬಿಸಾಡುತ್ತಾರೆ.
ಹಾಗೂ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ಉಪಾಯಗಳನ್ನು ಮಾಡುವುದರ ಮೂಲಕ ಅದನ್ನು ಹೇಗೆ ಸರಿಪಡಿಸಬಹುದು ಎಂದು ತಿಳಿದುಕೊಳ್ಳುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಟ್ರಿಕ್ಸ್ ನೀವು ಅನುಸರಿಸಿದರೆ ನೀವೇ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಜಿಪ್ ಅನ್ನು ರಿಪೇರಿ ಮಾಡಿಕೊಳ್ಳ ಬಹುದು. ಯಾವುದೇ ಸಂದರ್ಭದಲ್ಲಿ ಅದನ್ನು ಅಂಗಡಿಗಳಿಗೆ ಕೊಟ್ಟು ರಿಪೇರಿ ಮಾಡಿಸುವ ಸನ್ನಿವೇಶ ಬರುವುದಿಲ್ಲ.
ಹಾಗಾದಈ ಈ ದಿನ ಜಿಪ್ ಅನ್ನು ಹೇಗೆ ಸರಿಪಡಿಸಿಕೊಳ್ಳುವುದು ಹಾಗೂ ಅದನ್ನು ಸರಿಪಡಿಸುವುದಕ್ಕೂ ಮುಂಚೆ ನಾವು ಯಾವುದೆಲ್ಲ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ
* ಮೊದಲನೆಯದಾಗಿ ಜಿಪ್ ಹಾಳಾಗಿದ್ದರೆ ಅಂದರೆ ಕೆಲವೊಂದಷ್ಟು ಜನರ ಜಿಪ್ ಚೆನ್ನಾಗಿರುತ್ತೆ ಆದರೆ ಕೆಲವೊಮ್ಮೆ ಅದು ಸರಿಯಾಗಿ ಕೂರುತ್ತಿರುವುದಿಲ್ಲ ಇಂತಹ ಸಂದರ್ಭದಲ್ಲಿ ಜಿಪ್ ಅನ್ನು ಟೈಟ್ ಮಾಡಿ ಕೊಳ್ಳಬೇಕು.
ಈ ಸುದ್ದಿ ಓದಿ:- ಇಲ್ಲಿ 48 ಬಾರಿ ಆಂಜನೇಯನ ಹೆಸರು ಬರೆದರೆ ನಿಮ್ಮ ಕೆಲಸ ಸ್ಥಳದಲ್ಲೇ ಆಗುತ್ತೆ.!
ಅಂದರೆ ಜಿಪ್ ಪದೇಪದೇ ಹಾಕಿ ತೆಗೆಯುವುದರಿಂದ ಅದು ಲೂಸ್ ಆಗಿರುತ್ತದೆ ಆದ್ದರಿಂದ ಜಿಪ್ ಲೈನರ್ ಅನ್ನು ಒಂದು ಕಟಿಂಗ್ ಪ್ಲೇಯರ್ ಸಹಾಯದಿಂದ ಬಿಗಿ ಮಾಡಬೇಕು. ಹಾಗೂ ಜಿಪ್ ಮಧ್ಯಭಾಗವನ್ನು ಬಿಗಿ ಮಾಡಿಕೊಳ್ಳಬೇಕು. ಆನಂತರ ಒಂದು ಕಡೆಯಿಂದ ನೀವು ಜಿಪ್ ಎಳೆದರೆ ಜಿಪ್ ಸರಿಯಾದ ರೀತಿಯಲ್ಲಿ ಬರುತ್ತದೆ ಹೀಗೆ ಮನೆಯಲ್ಲಿಯೇ ನೀವು ಸುಲಭವಾಗಿ ರೆಡಿ ಮಾಡಿಕೊಳ್ಳುವುದು.
* ಕೆಲವೊಮ್ಮೆ ನಾವು ಯಾವುದಾದರೂ ವ್ಯಾನಿಟಿ ಬ್ಯಾಗ್ ಅಥವಾ ಪರ್ಸ್ ಅನ್ನು ಉಪಯೋಗಿಸದೆ ಹಾಗೆ ಇಟ್ಟರೆ ಅದು ತುಂಬಾ ಬಿಗಿ ಯಾಗಿರುತ್ತದೆ ಅಂತಹ ಸಂದರ್ಭದಲ್ಲಿ ಅದನ್ನು ಹೋಗಲಾಡಿಸುವುದಕ್ಕೆ ಜಿಪ್ ಅನ್ನು ಹಾಕಿ ತೆಗೆದು ಮಾಡಬೇಕು. ಇದರ ಜೊತೆಗೆ ಜಿಪ್ ಹಾಕುವಂತಹ ಜಾಗಕ್ಕೆ ಲಿಪ್ ಬಾಮ್ ಅಥವಾ ವ್ಯಾಸ್ಲಿನ್ ಎಣ್ಣೆಯನ್ನು ಹಚ್ಚಿ ಜಿಪ್ ಅನ್ನು ಹಾಕಿ ತೆಗೆದು ಮಾಡಬೇಕು ಈ ರೀತಿ ಮಾಡುವುದ ರಿಂದ ಸುಲಭವಾಗಿ ಸರಿ ಹೋಗುತ್ತದೆ.
* ಮಿಷಿನ್ ಸಹಾಯದಿಂದ ಹೊಸ ಬ್ಯಾಗ್ ಗಳಿಗೆ ಜಿಪ್ ಹಾಕುವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ಜನ ತುಂಬಾ ಕಷ್ಟ ಪಡುತ್ತಿರುತ್ತಾರೆ ಅಂತಹ ಸಂದರ್ಭದಲ್ಲಿ ಒಂದು ಫೋರ್ಕ್ ಸ್ಪೂನ್ ಸಹಾಯದಿಂದ ನೀವು ಸುಲಭವಾಗಿ ಜಿಪ್ ಅನ್ನು ನೀವು ಸುಲಭವಾಗಿ ತೂರಿಸಬಹುದು ಹಾಗಾದರೆ ಅದನ್ನು ಹೇಗೆ ಮಾಡುವುದು ಎಂದು ನೋಡುವುದಾದರೆ.
ಈ ಸುದ್ದಿ ಓದಿ:-ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!
ಮೊದಲು ಒಂದು ಫೋರ್ಕ್ ಸ್ಪೂನ್ ತೆಗೆದು ಕೊಳ್ಳಬೇಕು ಅದರ ಮಧ್ಯ ಭಾಗಕ್ಕೆ ಜಿಪ್ ಅನ್ನು ಹಾಕಿ ಅದರ ಅಕ್ಕ ಪಕ್ಕದ ಸ್ಥಳಗಳಿಗೆ ಜಿಪ್ ಬಟ್ಟೆಗಳನ್ನು ಹಾಕಿ ಮುಂದಕ್ಕೆ ಎಳೆಯಬೇಕು ಈ ರೀತಿ ಮಾಡುವುದ ರಿಂದ ಸುಲಭವಾಗಿ ನೀವು ಜಿಪ್ ಅನ್ನು ತೂರಿಸಬಹುದು. ಇದನ್ನು ಮಾಡುವಾಗ ಒಬ್ಬರ ಸಹಾಯ ಪಡೆದುಕೊಳ್ಳುವುದು ಉತ್ತಮ.
ಹೀಗೆ ಮೇಲೆ ಹೇಳಿದ ಎಷ್ಟು ಮಾಹಿತಿಗಳು ಕೂಡ ಪ್ರತಿಯೊಬ್ಬರಿಗೂ ತುಂಬಾ ಅನುಕೂಲವಾಗುತ್ತದೆ ಕೆಲವೊಂದಷ್ಟು ಜನ ಸಣ್ಣಪುಟ್ಟ ಕೆಲಸಗಳಿಗೂ ಸಹ ಬೇರೆ ಕಡೆ ಹೋಗಿ ಹಣ ಕೊಟ್ಟು ಅದನ್ನು ಸರಿಪಡಿಸಿಕೊಂಡು ಬರುತ್ತಿರುತ್ತಾರೆ. ಆದರೆ ಇವುಗಳನ್ನು ಪ್ರತಿಯೊಬ್ಬರು ತಿಳಿದುಕೊಂಡಿದ್ದರೆ ಸುಲಭವಾಗಿ ನೀವು ನಿಮ್ಮ ಮನೆಯಲ್ಲಿ ಇಂತಹ ಚಿಕ್ಕಪುಟ್ಟ ಕೆಲಸಗಳನ್ನು ಸರಿಪಡಿಸಿ ಕೊಳ್ಳಬಹುದು ಹಾಗೂ ಯಾವುದೇ ರೀತಿಯ ಹಣಕಾಸಿನ ಖರ್ಚು ಸಹ ಬೀಳುವುದಿಲ್ಲ.