ಪ್ರತಿಯೊಂದು ಮನೆಯಲ್ಲೂ ಕೂಡ ಅದೃಷ್ಟದ ದೇವತೆಯಾದ ಹಣದ ಒಡತಿಯಾದ ತಾಯಿ ಮಹಾಲಕ್ಷ್ಮಿ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತೇವೆ. ಕೆಲವರ ಮನೆಯಲ್ಲಿ ಮಹಾಲಕ್ಷ್ಮಿ ವಿಗ್ರಹವನ್ನು ಅಥವಾ ಕಳಶವನ್ನು ತಾಯಿ ಮಹಾಲಕ್ಷ್ಮಿ ಸ್ವರೂಪವೆಂದು ಕಂಡು ಪೂಜೆ ಮಾಡುತ್ತಾರೆ.
ಮನೆಗಳನ್ನು ವಾಸ್ತು ಪ್ರಕಾರವಾಗಿ ಕಟ್ಟಿರುವವರು ಆ ಪ್ರಕಾರವಾಗಿ ದೇವರ ಫೋಟೋಗಳನ್ನು ಇಡುತ್ತಾರೆ, ಇನ್ನು ಕೆಲವರು ತಮ್ಮ ಹಿರಿಯರು ಯಾವ ರೀತಿ ಹೇಳಿದ್ದರು ಆ ರೀತಿ ಪಾಲಿಸಿಕೊಂಡು ಬರುತ್ತಿದ್ದಾರೆ, ಇನ್ನು ಕೆಲವರು ಅನುಕೂಲತೆ ಇಲ್ಲದೆ ಇದ್ದಾಗ ಹೇಗೆ ಸಾಧ್ಯ ಹಾಗೆ ಇಟ್ಟು ಪೂಜೆ ಮಾಡುತ್ತಾರೆ. ಒಟ್ಟಾರೆಯಾಗಿ ಪ್ರತಿಯೊಂದು ಮನೆಯಲ್ಲೂ ಕೂಡ ಮಹಾಲಕ್ಷ್ಮಿ ಫೋಟೋ ಅಂತೂ ಇದ್ದೆ ಇರುತ್ತದೆ.
ಆದರೆ ತಾಯಿ ಮಹಾಲಕ್ಷ್ಮಿ ಫೋಟೋವನ್ನ ನಾವು ಮುಖ ಮಾಡಿ ಇಡುವ ದಿಕ್ಕಿನ ಆಧಾರದ ಮೇಲೂ ಕೂಡ ನಮ್ಮ ಅದೃಷ್ಟ, ದುರಾದೃಷ್ಟ ಕಷ್ಟ ನಷ್ಟಗಳು ನಿರ್ಧಾರ ಆಗುತ್ತದೆ ಎನ್ನುವುದು ಬಹುತೇಕರಿಗೆ ತಿಳಿದೇ ಇಲ್ಲ. ಹಾಗಾಗಿ ಇಂದು ನಾವು ಈ ಅಂಕಣದಲ್ಲಿ ಮನೆಯಲ್ಲಿ ಮಹಾಲಕ್ಷ್ಮಿ ಫೋಟೋ ಯಾವ ದಿಕ್ಕಿನ ಕಡೆ ಇಡಬೇಕು ಎಲ್ಲಿ ಇಟ್ಟರೆ ಏನು ಫಲ ಮತ್ತು ಯಾವ ಫಲಕ್ಕಾಗಿ ಯಾವ ದಿಕ್ಕಿನಲ್ಲಿ ಇಟ್ಟು ಹೇಗೆ ಪೂಜಿಸಬೇಕು ಮತ್ತೆ ಯಾವ ಕಡೆ ಇಡುವುದರಿಂದ ದೋಷಗಳು ಉಂಟಾಗಿ ಕ’ಷ್ಟಗಳು ಬರುತ್ತದೆ ಎನ್ನುವುದನ್ನು ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಬೆಳ್ಳಂ ಬೆಳಗ್ಗೆ ಮಪಾಲಿಸುತ್ತಾರೆ.ಡ್ ನ್ಯೂಸ್, ಎಲ್ಲಾ ಮಹಿಳೆಯರಿಗೂ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ಕೊಡುವುದಾಗಿ ಸರ್ಕಾರದ ಭರವಸೆ…
* ಪಶ್ಚಿಮ ದಿಕ್ಕಿಗೆ ಇಟ್ಟು ಲಕ್ಷ್ಮಿ ಫೋಟೋ ಪೂರ್ವ ದಿಕ್ಕಿಗೆ ನೋಡುತ್ತಿದ್ದರೆ ತಾಯಿ ಮಹಾಲಕ್ಷ್ಮಿ ಜೊತೆ ಶಾರದಾ ಅಮ್ಮನವರ ಆಶೀರ್ವಾದ ಕೂಡ ದೊರೆಯುತ್ತದೆ. ಇದರಿಂದ ಮನೆಯವರ ಬುದ್ಧಿಶಕ್ತಿ ಚುರುಕಾಗುತ್ತದೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ, ಮನೆಯಲ್ಲಿ ಕಲಿಕೆಯ ಲವಲವಿಕೆಯ ವಾತಾವರಣ ಇರುತ್ತದೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದುತ್ತಾರೆ. ನೀವು ಲೆಕ್ಕಾಚಾರ ಹಾಕಿಕೊಂಡ ಕಾರ್ಯಗಳು ಅಂತೆಯೇ ಜರುಗುತ್ತವೆ ಇಂತಹ ಫಲಗಳು ಸಿಗುತ್ತವೆ.
* ಒಂದು ವೇಳೆ ಪೂರ್ವ ದಿಕ್ಕಿನ ಕಡೆ ಲಕ್ಷ್ಮಿ ಫೋಟೋ ಇಟ್ಟು ಅದು ಪಶ್ಚಿಮ ದಿಕ್ಕನ್ನು ನೋಡುವ ರೀತಿ ಇದ್ದರೆ ನಿಮ್ಮ ಮನೆಯ ಎಲ್ಲಾ ರೀತಿಯ ವಾಸ್ತುದೋಷಗಳು ಪರಿಹಾರವಾಗುತ್ತದೆ. ನೀವು ಇರುವ ಮನೆಗೆ ವಾಸ್ತು ಸರಿ ಇಲ್ಲದೆ ಇದ್ದರೆ ಅಥವಾ ವಾಸ್ತು ಬಗ್ಗೆ ನಿಮಗೆ ತಿಳಿಯದೆ ಇದ್ದರೆ ನೀವು ಬಾಡಿಗೆ ಮನೆಗಳಲ್ಲಿ ಇದ್ದು ವಾಸ್ತು ಇಲ್ಲದಿದ್ದರೆ ಈ ರೀತಿಯಾಗಿ ಪೂರ್ವ ದಿಕ್ಕಿನಲ್ಲಿ ಫೋಟೋ ಇಟ್ಟು ಪಶ್ಚಿಮ ದಿಕ್ಕಿನ ಕಡೆ ನೋಡುತ್ತಿರುವಂತೆ ಇಡಬೇಕು.
* ಉತ್ತರಕ್ಕೆ ಇಟ್ಟು ದಕ್ಷಿಣದ ದಿಕ್ಕನ್ನು ನೋಡುತ್ತಿರುವಂತೆ ಮುಖ ಮಾಡಿ ಇಟ್ಟರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ ಮೋಕ್ಷ ಸಾಧನೆಯಲ್ಲೇ ತೊಡಗಿರುವವರು ಮಾತ್ರ ಇದನ್ನು ಪಾಲಿಸುತ್ತಾರೆ.
ಈ ಸುದ್ದಿ ಓದಿ:- ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.
* ನಿಮ್ಮ ಮನೆಯಲ್ಲಿ ಇರುವ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಬೇಕು ಮನೆಯಲ್ಲಿ ಐಶ್ವರ್ಯ ಅಭಿವೃದ್ಧಿ ಆಗಬೇಕು, ಸಾಲಗಳು ಕಡಿಮೆಯಾಗಬೇಕು, ಮನೆಯಲ್ಲಿ ಹಣ ನಿಲ್ಲುವಂತೆ ಲಕ್ಷ್ಮಿ ದೇವಿ ಸ್ಥಿರವಾಗಿ ನಿಲ್ಲುವಂತೆ ಆಗಬೇಕು ಎಂದು ಬಯಸುವವರು ಮನೆಯ ದಕ್ಷಿಣಕ್ಕೆ ಲಕ್ಷ್ಮಿ ದೇವಿ ಫೋಟೋ ಇಟ್ಟು, ಉತ್ತರವನ್ನು ನೋಡುವಂತೆ ಮುಖ ಮಾಡಿ ಇಡಬೇಕು. ಉತ್ತರ ದಿಕ್ಕನ್ನು ಕುಬೇರನ ಸ್ಥಾನ ಎಂದು ಹೇಳುತ್ತಾರೆ ಹೀಗಾಗಿ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಬಹಳ ಉತ್ತಮ ಫಲಗಳು ಸಿಗುತ್ತವೆ.
* ನೈರುತ್ಯ ದಿಕ್ಕನ್ನು ನೋಡುವಂತೆ ಈಶಾನ ದಿಕ್ಕಿನಲ್ಲಿ ಫೋಟೋವನ್ನು ಇಟ್ಟರೆ ಆ ಕುಟುಂಬದಲ್ಲಿ ಹಿರಿಯರ ಮಾತನ್ನು ಎಲ್ಲರೂ ಕೇಳುತ್ತಾರೆ ಮನೆ, ಯಜಮಾನಿ ಮಾತಿನಂತೆ ಮನೆ ನಡೆಯುತ್ತದೆ ಈ ರೀತಿಯ ಫಲಗಳು ಸಿಗುತ್ತವೆ.
* ಲಕ್ಷ್ಮಿ ದೇವಿಯು ಆಗ್ನೇಯ ದಿಕ್ಕನ್ನು ನೋಡುವಂತೆ ಆಗ್ನೇಯದ ಕಡೆ ಮುಖ ಮಾಡಿ ವಾಯುವ್ಯ ದಿಕ್ಕಿನಲ್ಲಿ ಫೋಟೋ ಇಟ್ಟರೆ ಮನೆ ಮಕ್ಕಳ ವಿಚಾರದಲ್ಲಿ ಒಳ್ಳೆಯದಾಗುತ್ತದೆ ವಿದ್ಯಾಭ್ಯಾಸ ವ್ಯಾಪಾರ ವ್ಯವಹಾರ ಮದುವೆ ಎಲ್ಲ ವಿಚಾರದಲ್ಲೂ ಕೂಡ ಮಕ್ಕಳಿಗೆ ಶುಭಫಲಗಳು ಸಿಗುತ್ತವೆ ಎನ್ನುವ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ.