ಹಿರಿಯರು ಋಷಿಮುನಿಗಳು ನಮಗೆ ಯಾವುದೇ ವಿಚಾರವನ್ನು ಭೋದಿಸಿದ್ದರು ಅದರಲ್ಲಿ ಒಂದು ಅರ್ಥ ಇರುತ್ತದೆ ಹಾಗೂ ಉದ್ದೇಶವಿರುತ್ತದೆ, ಇದೇ ರೀತಿ ಪುರಾಣಗಳಲ್ಲಿ ಕೂಡ. ಅಷ್ಟ ವಿಧ ಪುರಾಣಗಳಲ್ಲಿ ಜೀವನಕ್ಕೆ ಬಹಳ ಮುಖ್ಯವಾದ ಸಂಗತಿಗಳನ್ನು ತಿಳಿಸಲಾಗಿದೆ ಇದರಲ್ಲಿ ಸಾಕ್ಷಾತ್ ದೇವಾನುದೇವತೆಗಳೇ ಹೇಳಿರುವ ವಿಷಯಗಳೂ ಕೂಡ ಸೇರಿವೆ.
ಇವುಗಳಲ್ಲಿ ಗರುಡ ಪುರಾಣವೂ ಕೂಡ ಒಂದು. ಗರುಡ ಪುರಾಣದಲ್ಲಿ ಮಹಾವಿಷ್ಣು ಗರುಡನಿಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಸತ್ತ ನಂತರದ ಆತ್ಮದ ಪಯಣದ ಮಾತ್ರ ಬಗ್ಗೆ ಮಾತ್ರವಲ್ಲದೆ ಬದುಕುವ ರೀತಿಯ ಬಗ್ಗೆಯೂ ಕೂಡ ಕೆಲ ವಿಚಾರಗಳನ್ನು ಹೇಳಿದ್ದಾರೆ. ಮನುಷ್ಯನ ಆಚಾರ ವಿಚಾರ ನಡೆವಳಿಕೆ ಆತನ ಮತ್ತು ಭಗವಂತನೊಂದಿಗಿನ ಸಂಬಂಧ, ಭಕ್ತಿ, ಶ್ರದ್ಧೆ, ಮುಕ್ತಿ ಇದೆಲ್ಲವನ್ನು ಒಳಗೊಂಡ ವಿಷಯಗಳು ಈ ಪುರಾಣಗಳಲ್ಲಿ ಇವೆ.
ಇದರಲ್ಲಿ ಪೂಜೆಗೆ ಸಂಬಂಧಪಟ್ಟ ಹಾಗೆ ಮಹಾವಿಷ್ಣು ಹೇಳಿದ ಬಹುಮುಖ್ಯ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ. ಅದೇನೆಂದರೆ ಮಹಾ ವಿಷ್ಣು ಗರುಡನಿಗೆ ಹೇಳಿರುವ ಪ್ರಕರಣವಾಗಿ ಪವಿತ್ರವಾದ ಈ ಆರು ವಸ್ತುಗಳನ್ನು ಯಾರ ಮನೆಯಲ್ಲಿ ನೆಲದ ಮೇಲೆ ಇಟ್ಟಿರುತ್ತಾರೆ ಅಂತಹ ಮನೆಗಳಲ್ಲಿ ತಾಯಿ ಮಹಾಲಕ್ಷ್ಮಿ ನೆಲೆಸುವುದಿಲ್ಲ.
ಈ ಸುದ್ದಿ ಓದಿ:- 33 ಕೋಟಿ ದೇವತೆಗಳು ನೆಲೆಸಿರುವ ಗೋ ಪೂಜೆ ಮಾಡುವ ವಿಧಾನ ಹೇಗೆ.? ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ನೋಡಿ.!
ಹಾಗೂ ಆ ಮನೆಗಳಲ್ಲಿ ಮಾಡುವ ಪೂಜೆಗಳು ಯಾವುದೇ ದೇವತೆಗಳಿಗೆ ಸಲ್ಲುವುದಿಲ್ಲ ಯಾವ ವಸ್ತುಗಳು ಕಾರಣಗಳು ಏನು ಮತ್ತು ಯಾವ ರೀತಿ ಇಡಬೇಕು ಎನ್ನುವ ವಿಚಾರವನ್ನು ಹೀಗಿದೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೇ ನಿಮ್ಮ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
1. ಶಂಖ:- ಶಂಖವನ್ನು ಮಹಾವಿಷ್ಣು ಮಾತ್ರವಲ್ಲದೆ ಮಹಾಲಕ್ಷ್ಮಿಯು ಕೂಡ ಒಂದು ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ಹಾಗಾಗಿ ಶಂಕ ಚಕ್ರ ಗದಾ ಹಸ್ತೆ ಎಂದು ನಾರಾಯಣಿ ಸ್ತೋತ್ರ ಮಾಡುತ್ತೇವೆ. ಶಂಖ ನಾದ ಒಂದು ಪವಿತ್ರವಾದ ಶಬ್ದವಾಗಿದೆ, ಇದು ಮೊಳಗದೆ ವಿಷ್ಣುವಿನ ಪೂಜೆ ಆಗುವುದಿಲ್ಲ.
ಪೂಜೆ ಮಾತ್ರವಲ್ಲದೇ ಸಮರ ಕಾಲದಲ್ಲಿ ಕೂಡ ಶಂಖನಾದಮೇಲೆ ಯುದ್ಧ ಆರಂಭವಾಗುವುದು. ಇಷ್ಟು ಪವಿತ್ರವಾದ ಈ ವಸ್ತುವನ್ನು ನೆಲದ ಮೇಲೆ ಇಡುವುದು ಅದಕ್ಕೆ ಅಪಶಕುನ ಮಾಡಿದಂತೆ ಹಾಗಾಗಿ ಇಂತಹ ಮನೆಗಳಲ್ಲಿ ಮಾಡುವ ಪೂಜೆಗಳು ದೇವರಿಗೆ ಸಲ್ಲುವುದಿಲ್ಲ.
ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!
* ಘಂಟೆ:- ಶಂಖನಾದದಷ್ಟೇ ಘಂಟೆಯ ನಾದಕ್ಕೂ ಪ್ರಾಮುಖ್ಯತೆ ಇದೆ. ಮನೆಯಲ್ಲಿ ದೇವರ ಪೂಜೆಗಳನ್ನು ಮಾಡುವಾಗ ದೇವಸ್ಥಾನಗಳಲ್ಲಿ ಘಂಟೆ ಶಬ್ದ ಬಾರಿಸುತ್ತಾರೆ. ಈ ಶಬ್ದಕ್ಕೆ ವಾತಾವರಣದಲ್ಲಿ ಸಕಾರಾತ್ಮಕ ತರಂಗಗಳನ್ನು ಸೃಷ್ಟಿಸುವ ಶಕ್ತಿ ಇದೆ. ಘಂಟೆಯ ಶಬ್ದವು ಮಾನಸಿಕ ಆರೋಗ್ಯದ ಮೇಲೆ ಬಹಳ ಉತ್ತಮ ಪರಿಣಾಮವನ್ನು ಬೀರುತ್ತದೆ.
ಮತ್ತು ಮನುಷ್ಯ ಹಾಗೂ ಭಗವಂತನ ನಡುವಿನ ಸಂಭಾಷಣೆಗೆ ಇದೊಂದು ಕೊಂಡಿ ಎಂದರೂ ತಪ್ಪಾಗಲಾರದು. ಪ್ರತಿ ಮನೆಯಲ್ಲಿ ಘಂಟೆ ಇರುತ್ತದೆ ಘಂಟೆಯ ತುದಿಯಲ್ಲಿ ನಾಗ ಅಥವಾ ಆಂಜನೇಯನ ರೂಪ ಇರುತ್ತದೆ. ಘಂಟೆಯನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ಒಂದು ಮಣೆಯ ಮೇಲೆ ಇಟ್ಟು ಪೂಜಾ ಸಮಯದಲ್ಲಿ ಬಳಸಬೇಕು ಪೂಜೆಗೂ ಮುನ್ನ ಇದಕ್ಕೂ ಸಹ ಹೂವು ನೀರು ಇಟ್ಟು ಅರಿಶಿನ ಕುಂಕುಮ ಹಚ್ಚಿ ಪೂಜಿಸಿ ನಂತರ ಶಬ್ದ ಮಾಡಲು ತೆಗೆದುಕೊಳ್ಳಬೇಕು.
ಶಿವಲಿಂಗ:- ಪ್ರತಿ ಮನೆಗಳನ್ನು ಕೂಡ ಶಿವಲಿಂಗ ಇರಲೇಬೇಕು ಪ್ರತಿದಿನ ಪೂಜೆ ಮಾಡಲು ಆಗದಿದ್ದರೂ ಸೋಮವಾರದಂದು ಆದರೂ ಹಬ್ಬ ಹುಣ್ಣಿಮೆಗಳಂದಾದರು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಸರಳವಾಗಿ ಊದುಕಡ್ಡಿ ಹಚ್ಚಿ ಪಂಚಾಕ್ಷರಿ ಮಂತ್ರ ಜಪಿಸುತ್ತ ಶಿವನನ್ನು ನೆನೆಯಬೇಕು ಶಿವಲಿಂಗ ಇಲ್ಲದ ಮನೆಯಲ್ಲಿ ನೀರನ್ನು ಕೂಡ ಕುಡಿಯಬಾರದು ಎನ್ನುವ ಗಾದೆಯು ಇದೆ. ಇಂಥಹ ಪವಿತ್ರವಾದ ವಸ್ತುವನ್ನು ನೆಲಕ್ಕೆ ಇಟ್ಟ ತಕ್ಷಣ ಅದರ ಶಕ್ತಿ ಕಳೆಯುತ್ತದೆ ಹಾಗಾಗಿ ಯಾವಾಗಲೂ ಶಿವಲಿಂಗವನ್ನು ನೆಲದ ಮೇಲೆ ಇಡದೆ ಒಂದು ತಟ್ಟೆ ಅಥವಾ ಮಣೆ ಮೇಲೆ ಶುದ್ಧವಾದ ವಸ್ತ್ರದ ಮೇಲೆ ಇಟ್ಟು ಪೂಜಿಸಬೇಕು.
ಈ ಸುದ್ದಿ ಓದಿ:- 100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!
ದೇವರ ದೀಪಗಳು:- ಪ್ರತಿದಿನವೂ ನಾವು ದೇವರ ಮನೆಯಲ್ಲಿ ಬಳಸುವ ದೇವರ ದೀಪಗಳಿಗೆ ದೈವಿಕ ಶಕ್ತಿ ಬಂದಿರುತ್ತದೆ. ಈ ದೀಪಗಳನ್ನು ತಾತ್ಸಾರದಿಂದ ಕಾಣಬಾರದು ದೇವರ ದೀಪಗಳಿಗೆ. ಅರಿಶಿನ ಕುಂಕುಮ ಇಟ್ಟು ಹೂವಿನಿಂದ ಅಲಂಕರಿಸಿ ಹಚ್ಚಬೇಕು ದೀಪವು ಕೂಡ ಮಹಾಲಕ್ಷ್ಮಿ ಸ್ವರೂಪ ಇಂತಹ ದೀಪಗಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ದೀಪದ ಕೆಳಗೆ ಚಿಕ್ಕ ತಟ್ಟೆಯನ್ನಾದರೂ ಇಡಬೇಕು. ಮನೆ ಹೊಸ್ತಿನ ಮೇಲೆ ಅಥವಾ ತುಳಸಿ ಕಟ್ಟೆಯಲ್ಲಿ ಇಟ್ಟರು ಕೆಳಗೆ ವೀಳ್ಯದೆಲೆ ಅಥವಾ ಸೆಗಣಿ ಅಥವಾ ಚಿಕ್ಕ ತಟ್ಟೆ ಇಟ್ಟು ನಂತರ ದೀಪ ಇಡಬೇಕು
* ಹೂವು:- ದೇವರ ಪೂಜೆಗೆ ಬಳಸುವ ಹೂಗಳನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ತಾಗಿಸಬಾರದು. ಒಮ್ಮೆ ನೆಲಕ್ಕೆ ತಾಗಿದರೆ ಭೂದೇವಿಗೆ ಸೇರಿದಂತೆ ನಂತರ ಅವುಗಳನ್ನು ದೇವರ ಪೂಜೆಗೆ ಬಳಸಬಾರದು ಹೀಗೆ ಬಳಸಿದರೆ ಅಂತಹ ಪೂಜೆಗಳು ಸಲ್ಲಿಸುವುದಿಲ್ಲ.
* ಬಂಗಾರ:- ಮನೆಯಲ್ಲಿರುವ ಚಿನ್ನ ಬೆಳ್ಳಿ ಬಂಗಾರ ಮುಂತಾದ ಒಡವೆಗಳಲ್ಲಿ ತಾಯಿ ಮಹಾಲಕ್ಷ್ಮಿ ಇರುತ್ತಾಳೆ ಎಂದು ನಂಬಲಾಗಿದೆ. ಹೀಗಾಗಿ ಹೂಗಳನ್ನು ಎಲ್ಲೆಲ್ಲಿಯೋ ಇಡುವಂತಿಲ್ಲ, ಹಾಸಿಗೆಗಳ ಮೇಲೆ ಇಡುವಂತಿಲ್ಲ ಒಂದು ವೇಳೆ ಹೀಗೆ ಮಾಡಿದರೆ ಮಹಾಲಕ್ಷ್ಮಿ ತನ್ನನ್ನು ತಾತ್ಸಾರ ಮಾಡುತ್ತಾರೆ ಎಂದು ಆ ಮನೆ ಬಿಟ್ಟು ಹೋಗುತ್ತಾರೆ ಎಂದು ಹೇಳಲಾಗುತ್ತದೆ ಹಾಗಾಗಿ ಬಂಗಾರವನ್ನು ಅಷ್ಟೇ ಪೂಜ್ಯನೀಯವಾಗಿ ಕಾಣಬೇಕು. ಒಂದು ವಸ್ತ್ರದಲ್ಲಿ ಅಥವಾ ಡಬ್ಬದಲ್ಲಿ ಹಾಕಿ ಬಚ್ಚಿಡಬೇಕು.