ರೈತರಿಗೆ (farmers) ಸರ್ಕಾರದಿಂದ ಸಾಕಷ್ಟು ಯೋಜನೆಗಳ ನೆರವು ಸಿಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Government Schemes for farmers) ಕೃಷಿ ಕ್ಷೇತ್ರಕ್ಕಾಗಿ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿಡುತ್ತವೆ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಹಾಯಧನ, ಬರ ಪರಿಹಾರ, ಬೆಳೆ ಪರಿಹಾರ, ಸಬ್ಸಿಡಿಯಲ್ಲಿ ಬಿತ್ತನೆ ಬೀಜ ರಸಗೊಬ್ಬರ ವಿತರಣೆ, ರೈತನಿಗೆ ಯಂತ್ರೋಪಕರಣಗಳನ್ನು ಕೊಂಡುಕೊಳ್ಳುವುದಕ್ಕೆ ಸಬ್ಸಿಡಿ ರೂಪದ ಸಾಲ, ಕೃಷಿ ಅವಲಂಬಿತ ಕಸುಬುಗಳಾದ ಕುರಿ ಕೋಳಿ ಮೇಕೆ ಸಾಕಾಣಿಕೆ ಪಶುಸಂಗೋಪನೆಗೂ ಕೂಡ ನೆರವು ರೈತರ ಮಕ್ಕಳಿಗೆ ರೈತನಿಧಿ ಸ್ಕಾಲರ್ಶಿಪ್ ಹೀಗೆ ಸಾಕಷ್ಟು ಯೋಜನೆಗಳ ಪ್ರಯೋಜನವನ್ನು ರಾಜ್ಯದ ರೈತರು ಪಡೆಯುತ್ತಿದ್ದಾರೆ.
ಇವು ಸಣ್ಣ ಹಾಗೂ ಅತಿ ಸಣ್ಣ ರೈತರಿಗಾಗಿಯೇ ರೂಪಿಸಿರುವ ಯೋಜನೆಗಳಾದರು ರೈತರಲ್ಲದೆ ಇದ್ದವರು ಅಥವಾ ಶ್ರೀಮಂತರು ಕೂಡ ಈ ಯೋಜನೆಗಳ ಪ್ರಯೋಜನ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಅಸಲಿ ಫಲಾನುಭವಿಗಳಿಗೆ ವಂಚನೆಯಾಗಿ ಸರ್ಕಾರದ ಹಣ ದುರ್ಬಳಕೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿ:- ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!
ಇಂತಹ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರಲು ಹಾಗೂ ಸರ್ಕಾರದಿಂದ ನೇರವಾಗಿ ರೈತನಿಗೆ ಸಿಗಬೇಕಾದ ಯಾವುದೇ ಅನುದಾನವು ಮಧ್ಯವರ್ತಿಗಳ ಕಾಟ ಇಲ್ಲದೆ DBT ಮೂಲಕ ರೈತನ ಖಾತೆಗೆ ಸೇರುವಂತೆ ಮಾಡಲು ಕೆಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅಷ್ಟೇ ಮುಖ್ಯವಾದ ವಿಷಯವಾಗಿದೆ.
ಆದ್ದರಿಂದ ಈಗ ಎಲ್ಲಾ ಕ್ಷೇತ್ರವು ಡಿಜಿಟಲೀಕರಣಗೊಂಡಿದ್ದು ಟೆಕ್ನಾಲಜಿ ಸಹಾಯದಿಂದ ಬಹಳ ಸಲಿಸವಾಗಿ ಇದನ್ನು ಸಾಧಿಸಬಹುದು ಎಂದು ಸರ್ಕಾರ ಒಂದು ಹೊಸ ನಿಯಮ ಜಾರಿಗೆ ತಂದಿದೆ. ಇನ್ನು ಮುಂದೆ ಈ ರೀತಿ ರೈತನಿಗೆ ತನ್ನ ಕೃಷಿ ಭೂಮಿ ಆಧಾರಿತವಾಗಿ ಯಾವುದೇ ಪ್ರಯೋಜನ ಸಿಗಬೇಕಾದರೆ ರೈತನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಎಂದು ಸರ್ಕಾರ ಆಜ್ಞೆ ಹೊರಡಿಸಿದೆ.
ಈ ಹಿಂದೆ ಕರ್ನಾಟಕ ಸರ್ಕಾರದ ಕಡೆಯಿಂದ ಬರ ಪರಿಹಾರದ ಹಣ ವರ್ಗಾವಣೆ ಮಾಡುವ ಸಮಯದಲ್ಲಿಯೇ ಕಡ್ಡಾಯವಾಗಿ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ (FRUITS) ನೋಂದಾಯಿಸಿಕೊಂಡು FID ಸಂಖ್ಯೆ ಪಡೆಯಬೇಕು.
ಈ ಸುದ್ದಿ ಓದಿ:- ಈ 5 ಹೆಸರಿನ ಹೆಣ್ಣು ಮಕ್ಕಳನ್ನು ಕಣ್ಣು ಮುಚ್ಚಿ ನಂಬಬಹುದು, ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!
ಹತ್ತಿರದಲ್ಲಿರುವ ಯಾವುದೇ ಸೇವಾ ಕೇಂದ್ರಗಳು ಅಥವಾ CSC ಸೆಂಟರ್ ಗಳಿಗೆ ಹೋಗಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್,ಮೊಬೈಲ್ ಸಂಖ್ಯೆಯನ್ನು ಕೊಟ್ಟು ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಘೋಷಿಸಲಾಗಿತ್ತು. ಈಗ ಮತ್ತೊಂದು ಅವಕಾಶವನ್ನು ನೀಡಲಾಗುತ್ತಿದೆ ಮತ್ತು ಈ ಬಾರಿ ಗ್ರಾಮ ಆಡಳಿತ ಅಧಿಕಾರಿಗಳಿಗೆ (Village Administration Officer) ಈ ಜವಾಬ್ದಾರಿಯನ್ನು ವಹಿಸಲಾಗಿದೆ.
ಪ್ರತಿಯೊಂದು ಗ್ರಾಮದಲ್ಲೂ ಕೂಡ ಗ್ರಾಮ ಆಡಳಿತ ಅಧಿಕಾರಿ ಜವಾಬ್ದಾರಿ ತೆಗೆದುಕೊಂಡು ಆ ಗ್ರಾಮದ ಎಲ್ಲಾ ರೈತರಿಗೂ ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಮಾಡಲು (RTC – Aadhar link) ಜಾಗೃತಿ ಮೂಡಿಸಿ ಶೀಘ್ರವಾಗಿ ಇದನ್ನು ಪೂರ್ತಿ ಗೊಳಿಸಬೇಕು ಎಂದು ಸರ್ಕಾರ ಸೂಚನೆ ಕೊಟ್ಟಿದೆ.
ಆಫ್ಲೈನ್ನಲ್ಲಿ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಹೋಗಿ ದಾಖಲೆಗಳನ್ನು ನೀಡಿ ಪೂರ್ತಿಗೊಳಿಸಬಹುದು ಅಥವಾ ಆನ್ಲೈನ್ ನಲ್ಲಿಯೂ ಕೂಡ ರೈತರೇ ತಮ್ಮ ದಾಖಲೆಗಳ ಜೊತೆ ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರ ಅಥವಾ CSC ಕೇಂದ್ರಗಳಿಗೆ ಹೋಗಿ ಕೂಡ ಪಹಣಿ ಪತ್ರಿಕೆ ಆಧಾರ್ ಲಿಂಕ್ ಮಾಡಿಸಬಹುದು.
ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!
ಸರ್ಕಾರದ ನಿಯಮ ಪಾಲಿಸದೆ ಇದ್ದಲ್ಲಿ ಇನ್ನು ಮುಂದೆ ಸರ್ಕಾರದಿಂದ ಕೃಷಿ ಭೂಮಿ ಆಧಾರಿತವಾಗಿ ಸಿಗುವ ಸೌಲಭ್ಯಗಳು ರೈತನಿಗೆ ತಲುಪದೆ ಹೋಗಿಬಿಡಬಹುದು ಹಾಗಾಗಿ ತಪ್ಪದೆ ಈ ರೀತಿ ಲಿಂಕ್ ಮಾಡಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರಿಗೆ ತಲುಪುವಂತೆ ಶೇರ್ ಮಾಡಿ.