ಪ್ರತಿಯೊಬ್ಬರಿಗೂ ಕೂಡ ತಾವು ಹೆಚ್ಚು ಹಣ ಹೊಂದಿರಬೇಕು ಎನ್ನುವ ಆಸೆ ಇರುತ್ತದೆ. ಯಾಕೆಂದರೆ ಹಣದ ಬಲ ಇದ್ದರೆ ಯಾವ ಕಷ್ಟಗಳನ್ನು ಬೇಕಾದರೂ ಎದುರಿಸುವ ಧೈರ್ಯ ಬರುತ್ತದೆ. ಆದರೆ ಕೆಲವರ ಅದೃಷ್ಟ ಹೇಗಿರುತ್ತದೆ ಎಂದರೆ ಎಷ್ಟು ದುಡಿದರೂ ಕೈಗೆ ಹಣ ಸೇರುವುದಿಲ್ಲ ಬಂದ ಹಣವೆಲ್ಲ ಸಾಲ ಕಟ್ಟುವುದರಲ್ಲಿ ಮುಗಿದು ಅವರಿಗೆ ಬದುಕು ಬೇಸರವಾಗಿರುತ್ತದೆ.
ಕೈಯಲ್ಲಿ ಹಣ ಓಡಾಡುತ್ತಿದ್ದಾಗ ಮನೆಯಲ್ಲಿ ಹಣ ಉಳಿಯುತ್ತಿದ್ದಾಗ ಮಾತ್ರ ಹೆಚ್ಚು ದುಡಿಯುವ ಚೈತನ್ಯ ಬರುತ್ತದೆ ಇಲ್ಲವಾದಲ್ಲಿ ನೆಮ್ಮದಿ ಕಡಿಮೆ ನಿಮಗೂ ಕೂಡ ಈ ರೀತಿ ಹಣಕಾಸಿನ ತೊಡಕು ಉಂಟಾಗಿದ್ದರೆ ಇವುಗಳನ್ನು ಪರಿಹರಿಸಿಕೊಳ್ಳಲು ನಾವು ಹೇಳುವ ಒಂದು ಸರಳ ಪರಿಹಾರ ಮಾಡಿ ಸಾಕು ನಿಮ್ಮ ಮನೆಯ ನಾಲ್ಕು ಜಾಗಗಳಲ್ಲಿ ನಾವು ಹೇಳುವ ಈ ನಾಲ್ಕು ವಸ್ತುಗಳನ್ನು ಇಟ್ಟು ನಂತರ ನಡೆಯುವ ಚಮತ್ಕಾರವನ್ನು ನೀವೇ ನೋಡಿ.
* ನಿಮ್ಮ ಮನೆಯ ಸಿಂಹದ್ವಾರ ಅಂದರೆ ಮನೆಯ ಮುಖ್ಯ ದ್ವಾರವು ತಾಯಿ ಮಹಾಲಕ್ಷ್ಮಿ ಪ್ರವೇಶಿಸುವ ಜಾಗವಾಗಿದೆ. ಹೊಸ್ತಿಲಿನ ಒಳಗೆ ಮೇಲ್ಬಾಗದಲ್ಲಿ ನೀವು ನವಧಾನ್ಯದ ಗಂಟನ್ನು ಕಟ್ಟಬೇಕು ಹೇಗೆಂದರೆ ಒಂದು ಶುಭ ಶುಕ್ರವಾರದ ದಿನದಂದು ಬೆಳಗ್ಗೆ 6:00 ರಿಂದ 7:30ರ ಒಳಗೆ ದೇವರ ಕೋಣೆಯಲ್ಲಿ ಮನೆ ದೇವರಿಗೆ ಹಾಗೂ ತಾಯಿ ಮಹಾಲಕ್ಷ್ಮಿಗೆ ಪೂಜೆ ಮಾಡಿ.
ಈ ಸುದ್ದಿ ಓದಿ:- 100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!
ನಂತರ ಒಂದು ಹಳದಿ ವಸ್ರ್ತವನ್ನು ತೆಗೆದುಕೊಂಡು ಅದಕ್ಕೆ ನವಧಾನ್ಯಗಳನ್ನು ಹಾಕಿ ಸ್ವಲ್ಪ ಅಕ್ಷತೆ ಹಾಕಿ ಗಂಟನ್ನು ಕಟ್ಟಿ ಇದರ ಮೇಲೆ ಅರಿಶಿನ ಕುಂಕುಮ ಹೂವು ಇಟ್ಟು ಪೂಜೆ ಮಾಡಿ ಭಕ್ತಿಯಿಂದ ನಿಮ್ಮ ಮನೆಯಲ್ಲಿ ಹಣ ಉಳಿಯುವಂತೆ ಧನಧಾನ್ಯ ತುಂಬುವಂತೆ ಆಗಲಿ ಎಂದು ಪ್ರಾರ್ಥಿಸಿ ಮನೆಯ ಒಳಗೆ ಹೊಸ್ತಿಲಿನ ಮೇಲ್ಭಾಗದಲ್ಲಿ ಕಟ್ಟಬೇಕು.
* ಮನೆಯ ಅಡುಗೆ ಕೋಣೆ ಕೂಡ ಬಹಳ ಮುಖ್ಯವಾದ ಜಾಗ ತಾಯಿ ಮಹಾಲಕ್ಷ್ಮಿಗೆ ಪ್ರಿಯವಾದ ಜಾಗವು ಹೌದು. ಶುಕ್ರವಾರದಂದು ಬೆಳಗ್ಗೆ 6:00 – 7:00 ರ ಒಳಗೆ ಒಂದು ಬಾರಿ, ಮಧ್ಯಾಹ್ನ 2:00 ರಿಂದ 3:00 ರ ಒಳಗೆ ಒಂದು ಬಾರಿ ಹಾಗೂ ಸಂಜೆ 7:00 ರಿಂದ 8:00ರ ಸಮಯದಲ್ಲಿ ಒಂದು ಬಾರಿ ಅಡುಗೆ ಕೋಣೆಯಲ್ಲಿ ಒಂದು ಬಟ್ಟಲಿನಲ್ಲಿ ಕಲ್ಲುಪ್ಪು ತುಂಬಿ ಅದರ ಮೇಲೆ ಅರಿಶಿಣದ ಕೊಂಬು ಹಾಕಿ ಇಡಬೇಕು.
ಹೀಗೆ ಒಂದರ ಪಕ್ಕ ಒಂದರಂತೆ ಮೂರು ತಟ್ಟೆಗಳಲ್ಲಿ ಕಲ್ಲುಪ್ಪು ಇಟ್ಟು ಆ ದಿನಪೂರ್ತಿ ಅಲ್ಲೇ ಇಡಲು ಬಿಡಬೇಕು. ಮರುದಿನ ಬೆಳಗ್ಗೆ ಯಾರು ತುಳಿಯದ ಜಾಗದಲ್ಲಿ ಅಥವಾ ಗಿಡದ ಬುಡದಲ್ಲಿ ಇವುಗಳನ್ನು ವಿಸರ್ಜಿಸಬೇಕು ಹೀಗೆ ಮಾಡುವುದರಿಂದ ಕೂಡ ನಿಮ್ಮ ಮನೆಯಲ್ಲಿ ಧನಧಾನ್ಯದ ಅಭಿವೃದ್ಧಿ ಆಗುತ್ತದೆ.
ಈ ಸುದ್ದಿ ಓದಿ:-ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.
* ಶುಕ್ರವಾರದ ಒಂದು ಹಳದಿ ಅಥವಾ ಬಿಳಿ ವಸ್ತ್ರದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಹಾಗೂ 5 ಏಲಕ್ಕಿಯನ್ನು ಗಂಟು ಕಟ್ಟಿ ದೇವರ ಕೋಣೆಯಲ್ಲಿ ತಾಯಿ ಮಹಾಲಕ್ಷ್ಮಿ ಫೋಟೋ ಮುಂದೆ ಇಟ್ಟು ಪ್ರಾರ್ಥನೆ ಮಾಡಿ ನಂತರ ತಂದು ಅದನ್ನು ಬಿರುವಿನಲ್ಲಿ ನೀವು ಹಣ ಇಡುವ ಡಬ್ಬದಲ್ಲಿ ಅಥವಾ ಪರ್ಸ್ ನಲ್ಲಿ ಹಾಕಿಡಬೇಕು.
* ಮನೆಯಲ್ಲಿ ಪ್ರಮುಖವಾದ ಜಾಗಗಳಲ್ಲಿ ದೇವರು ಕೋಣೆಯು ಮೊದಲನೆಯದ್ದು ದೇವರ ಕೋಣೆಯಲ್ಲಿ ಇಡಬೇಕಾದ ವಸ್ತು ಯಾವುದು ಎಂದರೆ ಶುದ್ಧ ಹಾಲು. ಹೇಗೆಂದರೆ ಪ್ರತಿದಿನವೂ ಕೂಡ ನೀವು ದೇವರ ಪೂಜೆ ಮಾಡಿದಾಗ ಹಾಗಷ್ಟೇ ಹಸುವಿನಿಂದ ಕರೆದು ತಂದ ಹಾಲು ಅಥವಾ ಅನುಕೂಲತೆ ಇಲ್ಲದವರು ಅಂಗಡಿಯಿಂದ ತಂದ ಹಾಲನ್ನು ಮೊದಲಿಗೆ ದೇವರ ನೈವೇದ್ಯಕ್ಕಾಗಿ ಎತ್ತಿಹಿಡಬೇಕು.
ಯಾವುದೇ ಕಾರಣಕ್ಕೂ ಇದನ್ನು ಕಾಯಿಸಿರಬಾರದು ಹೀಗೆ ಹಸಿ ಹಾಲನ್ನು ದೇವರ ಕೋಣೆಯಲ್ಲಿ ಇಟ್ಟು ದೇವರಿಗೆ ನೈವೇದ್ಯ ಮಾಡುವುದರಿಂದ ಮುಕ್ಕೋಟಿ ದೇವತೆಗಳು ಪ್ರಸನ್ನರಾಗುತ್ತಾರೆ. ಈಶ್ವರನಿಗೆ, ಗಣೇಶನಿಗೆ, ನಾಗನಿಗೆ, ಗೋಪಾಲನಿಗೆ ಹಾಗೂ ತಾಯಿ ಮಹಾಲಕ್ಷ್ಮಿಗೆ ಹಾಲಿನ ನೈವೇದ್ಯ ಪ್ರಿಯ. ಈ ರೀತಿ ನೀವು ಹಾಲನ್ನು ಇಟ್ಟು ಪೂಜೆ ಮಾಡಿದ್ದೇ ಆದಲ್ಲಿ ನಿಮ್ಮ ಸರ್ವ ದೋಷಗಳು ನಿವಾರಣೆಯಾಗಿ ಮನೆ ಏಳಿಗೆಯಾಗುತ್ತದೆ.