ನಮ್ಮ ಶಾಸ್ತ್ರಗಳಲ್ಲಿ ಶಕುನಗಳ ಬಗ್ಗೆ ಕೂಡ ತಿಳಿಸಲಾಗಿದೆ ಮತ್ತು ಸಂಖ್ಯೆಗಳ ವಿಚಾರವಾಗಿ ಕೂಡ ನವಗ್ರಹಗಳನ್ನು ಹೋಲಿಸಿ ಸಂಖ್ಯಾಶಾಸ್ತ್ರದಲ್ಲಿ ಮಾತನಾಡಲಾಗುತ್ತದೆ. ಆದರೆ ಕೆಲವರು ಮಾತ್ರ ಒಂದಕ್ಕೊಂದು ಸಂಬಂಧ ಇಲ್ಲದಂತೆ ತಮಗೆ ಗೊತ್ತಿರುವ ಬುದ್ಧಿ ಮಟ್ಟಕ್ಕೆ ತಿಳಿದಿದ್ದನ್ನು ಕುಲಂಕುಶವಾಗಿ ತಿಳಿಯದೆ ಬಾಯಿಗೆ ಬಂದದ್ದನ್ನು ಹೇಳುತ್ತಿರುತ್ತಾರೆ.
ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಾಗಲಿ ಅಥವಾ ವಿಮರ್ಶೆಗಳಾಗಲಿ ಸರಿಯಾಗಿ ಸಿಗುವುದಿಲ್ಲ. ಇಂತಹವುಗಳನ್ನು ನಂಬಿ ನಾವು ವಿಷಯ ಸರಿಯಾಗಿದ್ದರೂ ಅನೇಕರು ಅನುಮಾನ ಮನಸ್ಸಿನಲ್ಲಿ ಇಟ್ಟುಕೊಂಡು ಬದುಕುತ್ತಾ ಏನೇ ಆದರೂ ಇದೇ ಕಾರಣ ಎಂದುಕೊಂಡು ತಪ್ಪು ತಿಳಿದುಕೊಳ್ಳುತ್ತೇವೆ.
ಇಂತಹ ತಪ್ಪುಗಳಲ್ಲಿ ಸಂಖ್ಯೆ ಮೂರನ್ನು ದುರಾದೃಷ್ಟದ ಸಂಖ್ಯೆ ಎಂದು ಸೂಚಿಸುವುದು ಕೂಡ ಸೇರಿದೆ. ಮೂರು ಬರ್ನರ್ ಇರುವ ಸ್ಟೌವ್ ತರಬಾರದು ಮೂರು ಸಂಖ್ಯೆಯ ಮನೆ ಅಥವಾ ಸೈಟ್ ಕೊಂಡುಕೊಂಡರೆ ಕಷ್ಟ ಇಂತಹ ಮೂಢನಂಬಿಕೆಗಳು ಇವೆ. ಇದಕ್ಕೆಲ್ಲ ಸ್ಪಷ್ಟತೆಯನ್ನು ಅಥವಾ ಇದು ನಿಜವೇ ಎನ್ನುವ ವಿಷಯವನ್ನು ಈ ಲೇಖನದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.
ಈ ಸುದ್ದಿ ಓದಿ:- ನಿಮ್ಮ ಮನೆಯ ಈ 4 ಜಾಗದಲ್ಲಿ ಯಾರಿಗೂ ಹೇಳದೆ ರಹಸ್ಯವಾಗಿ ಈ 4 ವಸ್ತುಗಳನ್ನು ಇಡಿ, ಧನಾಕರ್ಷಣೆಯಾಗುತ್ತದೆ. ದೈವಬಲದಿಂದ ಸಾಲ ಕಳೆದು ಶ್ರೀಮಂತರಾಗುವುದು ಗ್ಯಾರೆಂಟಿ…
ಖಂಡಿತವಾಗಿಯೂ ಶಕುನ ಮತ್ತು ಮೂರು ಎನ್ನುವ ಸಂಖ್ಯೆಗೆ ಯಾವುದೇ ಸಂಬಂಧ ಇಲ್ಲ. ಯಾಕೆಂದರೆ ಮೂರು ಎನ್ನುವುದು ಗುರು ಗ್ರಹಕ್ಕೆ ಸಂಬಂಧ ಪಟ್ಟ ಸಂಖ್ಯೆ ಆಗಿದೆ ಮತ್ತು ಗುರುಬಲ ಇಲ್ಲದೆ ಇದ್ದರೆ ಜೀವನದಲ್ಲಿ ಮನೆ ಕಟ್ಟಿಸುವ ಯೋಗವಾಗಲಿ, ಆಸ್ತಿ ಮಾಡುವ ಯೋಗವಾಗಲಿ, ಮದುವೆಯಾಗಲಿ, ಮಕ್ಕಳಾಗಲಿ ಎಲ್ಲವದಕ್ಕೂ ತೊಂದರೆ ಆಗುತ್ತದೆ.
ಇಂತಹ ಸಂಖ್ಯೆಯನ್ನು ಅಪಶಕುನ ಎಂದು ಭಾವಿಸುವುದೇ ಬಹಳ ದೊಡ್ಡ ತಪ್ಪು. ಅಲ್ಲದೆ ನಮ್ಮ ಸಂಸ್ಕೃತಿಯಲ್ಲಿ ಸಂಖ್ಯೆ ಮೂರಕ್ಕೆ ಬಹಳ ಶ್ರೇಷ್ಠ ಸ್ಥಾನವನ್ನು ನೀಡಿದ್ದೇವೆ ನಮ್ಮ ಅನೇಕ ಆಚರಣೆಗಳಲ್ಲಿ ಸಂಖ್ಯೆ ಮೂರು ನಮ್ಮ ಒಳಗೆ ಹಾಸು ಹೊಕ್ಕಾಗಿ ಹೋಗಿದೆ.
ನಾವು ತ್ರಿಮೂರ್ತಿಗಳು ಎಂದು ಮೂರು ಜನರನ್ನು ಸೇರಿಸಿ ಕರೆಯುತ್ತೇವೆ ಮತ್ತು ಬೆಳಗ್ಗೆ ಎದ್ದು ಹೇಳುವ ಕರಾಗ್ರೇ ವಸತೇ ಲಕ್ಷ್ಮಿ ಮಂತ್ರದಲ್ಲೂ ಕೂಡ ಲಕ್ಷ್ಮಿ ಗೌರಿ ಶಾರದೆ ಮೂರು ದೇವಿಯರನ್ನು ನೆನೆಯುತ್ತೇವೆ. ಗಾಯತ್ರಿ ಮಂತ್ರವನ್ನು ಮೂರು ಬಾರ ಬೋಧಿಸಲಾಗುತ್ತದೆ.
ಈ ಸುದ್ದಿ ಓದಿ:- ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!
ಶಾಂತಿ ಮಂತ್ರವನ್ನು ಓಂ ಶಾಂತಿ ಶಾಂತಿ ಶಾಂತಿಃ ಎಂದು ಮೂರು ಬಾರಿ ಹೇಳಲಾಗುತ್ತದೆ, ಮೂರು ಗಂಟಿನಿಂದ ಮದುವೆ ಎನ್ನುವ ಪವಿತ್ರ ಸಂಬಂಧ ಏರ್ಪಡುತ್ತದೆ, ಕನ್ಯಾ ದಾನ ಮಾಡುವಾಗ ಮೂರು ಬಾರಿ ಹಾಲು ಹಾಕಿ ಧಾರೆ ಎರೆಲಾಗುತ್ತದೆ, ಮಗುವಿಗೆ ನಾಮಕರಣ ಮಾಡುವಾಗ ಕಿವಿಯಲ್ಲಿ ಮೂರು ಬಾರಿ ಹೆಸರು ಹೇಳುತ್ತಾರೆ.
ನಮ್ಮ ನಂಬಿಕೆಗಳ ಪ್ರಕಾರ ಮೂರು ಲೋಕವಿದೆ ಶಿವನಿಗೆ ಮೂರು ಕಣ್ಣುಗಳಿವೆ ಮತ್ತು ಶಿವನನ್ನು ಆರಾಧನೆ ಮಾಡುವ ಶಿವ ಭಕ್ತರು ಹಣೆಯಲ್ಲಿ ಧರಿಸುವ ವಿಭೂತಿಯಲ್ಲಿ 3 ರೇಖೆಗಳು ಇರುತ್ತವೆ, ಗುಣಗಳನ್ನು ಕೂಡ ಸಾತ್ವಿಕ ರಜಸ್ ಮತ್ತು ತಮಸ್ಸು ಎಂಬ ಮೂರು ಸ್ವರೂಪದಲ್ಲಿ ಅಳೆಯಲಾಗುತ್ತದೆ ಮತ್ತು ಗಣಗಳನ್ನು ಕೂಡ ರಾಕ್ಷಸ ದೇವ ಮತ್ತು ಮನುಷ್ಯ ಗಣ ಎಂದು ಮೂರು ಬಗೆಯಲ್ಲಿ ಹೇಳಲಾಗುತ್ತದೆ.
ಹೀಗೆ ಮೂರು ಎನ್ನುವ ಸಂಖ್ಯೆಗೆ ಇರುವ ಪ್ರಾಮುಖ್ಯತೆಯನ್ನು ಹೇಳುತ್ತಾ ಹೋದರೆ ದೊಡ್ಡಪಟ್ಟಿಯೇ ಬೆಳೆಯುತ್ತದೆ. ಹಾಗಾಗಿ ಇಷ್ಟೆಲ್ಲ ಒಳ್ಳೆಯ ಸಂಖ್ಯೆ ಆಗಿರುವ ಮತ್ತು ಇಷ್ಟೆಲ್ಲ ಪ್ರಾಮುಖ್ಯತೆ ನೀಡಲಾಗಿರುವ ಮೂರು ಸಂಖ್ಯೆಯು ಮನೆ ಅಥವಾ ಸೈಟ್ ಅಲ್ಲಿ ಬಂದರೆ ಅದನ್ನು ಖರೀದಿಸುವುದರಲ್ಲಿ ಯಾವುದೇ ದೋಷ ಇಲ್ಲ ಎಂದು ಬಲವಾಗಿ ನಂಬಬಹುದು.
ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!
ಹಾಗೆ ಮನೆಯಲ್ಲೂ ಕೂಡ ಮೂರು ಒಲೆಗಳು ಇರುವ ಗ್ಯಾಸ್ ಬರ್ನರ್ ಬಳಸಿದರೆ ಯಾವುದೇ ತೊಂದರೆಯೂ ಆಗುವುದಿಲ್ಲ, ತಪ್ಪು ಕೂಡ ಅಲ್ಲ. ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬದುಕಿ ಮತ್ತು ಧರ್ಮ ಮಾರ್ಗದಲ್ಲಿ ನಡೆಯಿರಿ, ಅದೇ ದೊಡ್ಡ ಸಮಾಧಾನ ಹಾಗೂ ಯಾವುದನ್ನೇ ವಿಷಯ ಕೇಳಿದಾಗ ನಿಧಾನಕ್ಕೆ ವಿಚಾರಣೆ ಮಾಡಿ ನಿರ್ಧಾರಕ್ಕೆ ಬನ್ನಿ.